ಕೊಲ್ಹಾರ: ಬಾಲ್ಯಾವಸ್ಥೆಯಿಂದ ಪ್ರಾರಂಭವಾಗುವ ವಿದ್ಯೆ ಕಲಿಯುವ ಹಂತದಲ್ಲಿ ಶಿಸ್ತು ಸಂಯಮತೆ, ಗುರುಗಳ ಪಾಠ ಬೋಧನೆಯನ್ನು ತದೇಕಚಿತ್ತದಿಂದ ಆಲಿಸಿದರೆ ಎಂಥಹ ಕಠಿಣವಾದ ಪರಿಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ ಈ ದಿಸೆಯಲ್ಲಿ ವಿಧ್ಯಾರ್ಥಿಗಳು ಆಸಕ್ತಿಯನ್ನು ವಹಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ಶ್ರೀ ದ್ಯಾಮವ್ವದೇವಿ ದೇವಸ್ಥಾನದ ಸೇವಾ ಸಮೀತಿಯವರು ಹಮ್ಮಿಕೊಂಡಿದ್ದ ದ್ಯಾಮವ್ವ ಹಾಗೂ ದುರ್ಗಾ ಮಾತೆಯ ಉಡಿತುಂಬುವ ಮಂಗಲೋತ್ಸವ ಜಾತ್ರಾ ಸಮಾರಂಭದಲ್ಲಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿಧ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಶಿಕ್ಷಣ ಎನ್ನುವದನ್ನು ಕಬ್ಬಿಣದ ಕಡಲೆ ಎಂದು ತಿಳಿಯಬಾರದು ದಿನನಿತ್ಯ ಶಾಲೆಗೆ ಹೋಗಿ ಓದು ಬರಹ ರೂಡಿಗತಮಾಡಿಕೊಂಡು ಅಭ್ಯಸಿಸಿದರೆ ಪರೀಕ್ಷೆಗಳಲ್ಲಿ ಸುಲಲಿತವಾಗಿ ಪಾಸಾಗಬಹುದು ಅದೇರೀತಿ ಸಮಾಜದಲ್ಲಿಯೂ ಕೂಡ ಬದುಕುವದು ದುಸ್ತಿರ ಎಂದುಕೊಳ್ಳಬಾರದು ಸಮಸ್ಯೆಗಳಿಗೆ ಎದೆ ಗುಂದದೇ ಡೊಂಕು ಅಣಕದ ಮಾತುಗಳಿಗೆ ಕಿವಿಕೊಡದೇ ನಾವುಗಳು ಇಟ್ಟ ಹೆಜ್ಜೆಯನ್ನು ಗುರಿ ತಲುಪುವವರೆಗೆ ನಿಲ್ಲಿಸದೇ ಸಾಗಬೇಕು ಆವಾಗ ಇದೇ ಸಮಾಜ ನಮ್ಮನ್ನು ಗೌರವಿಸುವಂತಾಗಲು ಕಾರಣೀಕರ್ತರಾಗುತ್ತೇವೆ ಎಂದರು.
೫ ದಿನಗಳ ಕಾಲ ನಿರಂತರವಾಗಿ ಸಾಗಿ ಬಂದ ಉಡಿತುಂಬುವ ಹಾಗೂ ಇನ್ನೀತರ ವಿವಿಧ ಕಾರ್ಯಕ್ರಮಗಳು ದೇವಸ್ಥಾನ ಸಮೀತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಸಂ ಬೆಳ್ಳುಬ್ಬಿ ಇವರ ನೇತೃತ್ವದಲ್ಲಿ ಬಹು ವಿಜ್ರಂಭಣೆಯಿಂದ ನಡೆದುಕೊಂಡು ಬಂದವು ಮುತೈದೆಯರ ಆರತಿಯೊಂದಿಗೆ ದ್ಯಾಮವ್ವ ಹಾಗೂ ದುರ್ಗಾ ಮಾತೆಯ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದಾಗ ಊರ ಮಹಿಳೆಯರು ಎಡೆಯನ್ನು ಸಮರ್ಪಿಸುವದು ಸಾರ್ವಜನಿಕರು ಭಕ್ತಿಯಿಂದ ಶರಣೆಂದು ಪೂಜಿಸುವದರ ಮೂಲಕ ದೇವಿಯ ಆರಾಧನೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.
ಶೀಲವಂತ ಮಠದ ಕೈಲಾಸನಾಥ ಶ್ರೀಗಳು, ದೇವಿಯ ಅರ್ಚಕರಾದ ಹಣಮಂತ ಬಡಿಗೇರ ಸಾನಿಧ್ಯವಹಿಸಿದ್ದರು,ಅತಿಥಿಗಳಾಗಿ ಚಲನಚಿತ್ರ ನಟ ಜನಪದ ಗಾಯಕ ಗುರುರಾಜ ಹೊಸಕೋಟೆ, ಚಿನ್ನಪ್ಪ ಗಿಡ್ಡಪ್ಪಗೋಳ, ಪಟ್ಟಣ ಪಂಚಾಯತ ಹಿಂದಿನ ಅಧ್ಯಕ್ಷರಾದ ಕಲ್ಲಪ್ಪ ಸಿ ಸೊನ್ನದ , ವಿರುಪಾಕ್ಷಿ ಕೋಲಕಾರ, ಸದಸ್ಯರಾದ ಅಪ್ಪಸಿ ಮಟ್ಯಾಳ, ಶ್ರೀಶೈಲ ಅಥಣಿ, ಬಾಬು ಭಜಂತ್ರಿ, ಶಶಿಧರ ದೇಸಾಯಿ, ಶೇಕಪ್ಪ ಗಾಣಿಗೇರ, ಮಳೆಪ್ಪ ಬರಗಿ, ಈರಣ್ಣ ಔರಸಂಗ, ಮಲ್ಲಪ್ಪ ಈ ಗಣಿ, ನಾಮದೇವ ಪವಾರ, ಡೋಂಗ್ರಿ ಕಟಬರ, ದೆವಸ್ಥಾನದ ಆಡಳಿತ ಮಂಡಳಿಯ ಪದಾದಿಕಾರಿಗಳು ಭಾಗವಹಿಸಿದ್ದರು.
ಕೊಲ್ಹಾರ ಪಟ್ಟಣದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ ೮೫ ಪ್ರತಿಶತಕ್ಕಿಂತ ೧೦೦ ಪ್ರತಿಶತದವರೆಗೆ ಅಂಕ ಪಡೆದ ಸುಮಾರು ೯೦ ವಿಧ್ಯಾರ್ಥಿಗಳಿಗೆ ದೇವಸ್ಥಾನದ ಸಮೀತಿ ವತಿಯಿಂದ ಪ್ರಶಸ್ತಿ ಪತ್ರ ಕೊಟ್ಟು ಪ್ರತಿಭೆಗಳನ್ನು ಗೌರವಿಸಲಾಯಿತು. ಪ್ರಾಸ್ತಾವಿಕವಾಗಿ ಈರಯ್ಯ ಹಲಗಯ್ಯ ಮಠಪತಿ ಮಾತನಾಡಿದರು.
ಪುಂಡಲೀಕ ಬಾಟಿ ಸ್ವಾಗತಿಸಿದರು. ಮಂಜುನಾಥ ಮಟ್ಯಾಳ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

