ಸಿಂದಗಿ: ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಅವರು ಶೋಷಿತ ವರ್ಗಗಳ ಧ್ವನಿಯಾಗಿ ದಿನದಲಿತರ, ಅಲ್ಪ ಸಂಖ್ಯಾತರ ಜೊತೆಗೂಡಿ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದಾರೆ ಎಂದು ದಲಿತ ಸೇನೆ ರಾಜ್ಯ ಉಪಾಧ್ಯಕ್ಷ ಮಹಿಬೂಬ್ ಸಿಂದಗಿಕರ ಹೇಳಿದರು.
ಪಟ್ಟಣದ ದಲಿತ ಸೇನೆ ತಾಲೂಕ ಕಾರ್ಯಾಲಯದಲ್ಲಿ ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಅವರ ಹುಟ್ಟುಹಬ್ಬದ ನಿಮಿತ್ಯವಾಗಿ
ಪೌರ ಕಾರ್ಮಿಕರಿಗೆ ಹಣ್ಣು ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ವೇಳೆ ೨೦ಕ್ಕೂ ಅಧಿಕ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಶೇಖ್, ದಲಿತ ಸೇನೆ ಜಿಲ್ಲಾಧ್ಯಕ್ಷ ಖಾಜು ಹೊಸಮನಿ, ಜಿಲ್ಲಾ ಉಪಾಧ್ಯಕ್ಷ ಸುಭಾಷ್ ತಳವಾರ್, ತಾಲೂಕ ಉಪಾಧ್ಯಕ್ಷ ಶಾಹಾನೂರ ಬುಕ್ಕದ್ದ, ಜಾವಿದ್ ಕರ್ಜಗಿ, ಸಯ್ಯದ್ ಕರ್ಜಗಿವ ಸೇರಿದಂತೆ ದಲಿತ ಸೇನೆ ಕಾರ್ಯಕರ್ತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

