Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕೊಲ್ಹಾರ: ಸಮಾಜದಲ್ಲಿ ಬದುಕುವ ಪ್ರತಿಯೊಬ್ಬನ ಜೀವನದ ಆದಿಯಿಂದ ಅಂತ್ಯದ ತನಕ ಸದ್ವಿಚಾರ ಸದ್ಗುಣಗಳು ನ್ಯಾಯಮಾರ್ಗ ಸತ್ಯದ ದಾರಿಯಲ್ಲಿ ಜೀವನ ಸಾಗಿಸಬೇಕಾದರೆ ಹೆತ್ತ ತಾಯಿಯ ಸಂಸ್ಕಾರ ಗುರುವಿನ ಮಾರ್ಗದರ್ಶನ ಬಹು ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಬೇಲೂರು ಹಾಗೂ ಕೊಲ್ಹಾರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ಹೇಳಿದರು.ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನದ ಆವರಣದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಹಮ್ಮಿಕೊಂಡಿದ್ದ ಧರ್ಮ ಸಭೆಯ ಸಾನಿಧ್ಯವಹಿಸಿ ಮಾತನಾಡುತ್ತಿದ್ದರು.ಇಂದಿನ ದಿನಮಾನಗಳಲ್ಲಿ ಯುವ ಸಮೂಹ ಚಿಕ್ಕ ವಯಸ್ಸಿನಲ್ಲಿಯೇ ದುಶ್ಚಟಗಳಿಗೆ ಬಲಿಯಾಗಿ ಬೇಡದ ವಿಷಯಗಳಿಗೆ ತಲೆಹಾಕಿ ಬೆಟ್ಟಿಂಗದಂತಹ ಕ್ರೂರ ಚಟದ ವ್ಯಾಮೋಹಕ್ಕೆ ಒಳಗಾಗಿ ಸಾಲ ಸೂಲ ಮಾಡಿ ಪಾಲಕರಿಗೆ ಹೊರೆಯಾಗಿ ಕೊನೆಗೊಮ್ಮೆ ತಮ್ಮ ಶರೀರವನ್ನು ಕಳೆದುಕೊಳ್ಳುವಂತಹ ಹೀನ ಮನಸ್ಥಿತಿಯತ್ತ ಸಾಗುತ್ತಿರುವದು ಅತ್ಯಂತ ಖೇದಕರ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ ಮಾನವನ ಜೀವಿತಾವಧಿಯಲ್ಲಿ ಕಲೆ ಸಾಹಿತ್ಯ ಕ್ರೀಡೆ ವ್ಯಾಯಾಮ ಹಾಡುಗಾರಿಕೆ ಯಾವುದಾದರೊಂದು ಮನಸ್ಸಿಗೆ ಆನಂದ ಕೊಡುವ ಸಾರ್ವಜನಿಕ ಜೀವನದಲ್ಲಿ ಹೆಸರು ತರುವ ಉತ್ತಮ ಹವ್ಯಾಸದಲ್ಲಿ ನಾವುಗಳು ಬದುಕನ್ನು ಸಾಗಿಸಿದಾಗ ಜೀವನ…
ವಿಜಯಪುರ: ಸರಕಾರ ಇಂದು ಕಡ್ಡಾಯ ಶಿಕ್ಷಣ ಯೋಜನೆ ಜಾರಿಗೆ ತಂದಿದ್ದು.ಯಾವುದೇ ಮಗು ಶಾಲೆ ತೊರೆದು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ನ್ಯಾಯವಾದಿ ದಾನೇಶ ಅವಟಿ ನುಡಿದರು.ನಗರದ ಬಸವ ನಗರದ ಫ್ಯಾಂಟಸಿ ಕಿಡ್ಸ್ ಝೋನ್ ಸ್ಕೂಲ್ ನಲ್ಲಿ ಸ್ಪಂದನ ಸ್ವಯಂ ಸೇವಾ ಸಂಸ್ಥೆ ಹಾಗೂ ಸಮಪ್ರಭ ಏಜುಕೇಶನ್ ಆಂಡ್ ಯೂಥ್ ವಾಲೆಂಟಿಯರ್ ಆಶೋಷಿಯೇಷನ್ ಸಹಯೋಗದಲ್ಲಿ ವಜ್ರಹನುಮನಗುಡಿ ಹತ್ತಿರಬಯಲಿನಲ್ಲಿ ಇರುವ ನಿರಾಶ್ರಿತ ಕುಟುಂಬಗಳ ಮಕ್ಕಳಿಗೆ ಕಲಿಕಾ ಕೇಂದ್ರದ ಮೂಲಕ 21ದಿನಗಳ ಶೈಕ್ಷಣಿಕ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಣ ಎಲ್ಲರ ಬಾಳಿಗೆ ಬೆಳಕಾಗಿದ್ದು, ಅದರಲ್ಲೂ ಸಮಾಜದ ಮುಖ್ಯ ವಾಹಿನಿಯಿಂದ ದೂರವಿರುವ, ಕಡು ಬಡತನದ, ಪ್ಲಾಸ್ಟಿಕ್ ಕೊಡ, ಬ್ಯಾಗುಗಳಿಗೆ ಜಿಪ್ ಹಾಕುವುದು, ಗ್ಯಾಸ್ ರಿಪೇರಿ ಮುಂತಾದ ಕಾರ್ಯಗಳಲ್ಲಿ ತೊಡಗಿರುವ ಬೇರೆ ಕಡೆಯಿಂದ ಬಂದು ಬಿಜಾಪುರದಲ್ಲಿ ನೆಲೆಸಿರುವ ನಿರಾಶ್ರಿತರ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಇದೆ. ಅಂತಹ ಕುಟುಂಬಗಳನ್ನು ಗುರುತಿಸಿ, ಮಕ್ಕಳನ್ನುಕಲಿಕಾ ಕೇಂದ್ರಕ್ಕೆ ಕರೆತಂದು ಉಚಿತವಾಗಿ ಮಕ್ಕಳಿಗೆ ವಿದ್ಯೆ,…
ವಿಜಯಪುರ: ಪಟ್ಟಣ ಪಂಚಾಯತ ಕಾರ್ಮಿಕ ಬಂಧುಗಳು ಹಾಗೂ ಸಿಬ್ಬಂದಿ ವರ್ಗ ಜನ ಸಮುದಾಯಕ್ಕೆ ಸ್ಪಂದಿಸಿ ಅವರ ಸಮಸ್ಯೆಗಳನ್ನು ಆಲಿಸಿ ಕಾರ್ಯ ಸೂಕ್ತ ಸಮಯದಲ್ಲಿ ಮಾಡಿಕೊಡಬೇಕೆಂದು ಪಟ್ಟಣ ಪಂಚಾಯತ ಸಮುದಾಯ ಸಂಘಟನಾಧಿಕಾರಿ ರಮೇಶ ನಾಯಕ ಕರೆ ನೀಡಿದರು.ಅವರು ಪಟ್ಟಣ ಪಂಚಾಯತ ತಮ್ಮ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತ, ಕಾರ್ಮಿಕ ಸಿಬ್ಬಂದಿ ಸಮುದಾಯದ ಜೊತೆ ಕಾರ್ಯಗಳ ಬಗ್ಗೆ ಉತ್ತಮ ರೀತಿಯಲ್ಲಿ ಸ್ಪಂದನೆ ಮಾಡುವಂತೆ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.ತಮ್ಮ ಅಧಿಕಾರಾವಧಿಯಲ್ಲಿ ಅನೇಕ ಅನುಭವಗಳನ್ನು ಪಡೆದುಕೊಂಡಿದ್ದೇನೆ. ಅದಕ್ಕೆ ತಕ್ಕ ರೀತಿ ಸಮುದಾಯ ಕೂಡ ನಾನು ಮಾಡಿದ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನನಗೆ ತೃಪ್ತಿ ತಂದಿದೆ, ಸಿಬ್ಬಂದಿಗೆ ನನ್ನ ಅವಧಿಯಲ್ಲಿ ಏನಾದರೂ ನನ್ನಿಂದ ತಪ್ಪು ಆಗಿದ್ದರೆ ಕ್ಷಮಿಸಿ ಎಂದರು.ಮಹಿಳೆಯರೂ ಸೇರಿದಂತೆ ಕಾರ್ಮಿಕ ಸಿಬ್ಬಂದಿಗೆ ಬಟ್ಟೆ ಕೊಡುವ ಮೂಲಕ ಸಿಬ್ಬಂದಿಗೆ ರಮೇಶ ನಾಯಕ ಗೌರವ ಸಲ್ಲಿಸಿದರು.ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಮಾತನಾಡಿ, ಅವರು ಮಾಡಿದ ಎಲ್ಲಾ ಕಡೆಗಳಲ್ಲಿ ಮತ್ತು ಅವರ ಹುದ್ದೆಗಳಲ್ಲಿ ಉತ್ತಮ ರೀತಿಯಿಂದ ಕಾರ್ಯ ನಿರ್ವಹಿಸಿ ಜನಮನ್ನಣೆ…
೧೪ ದಿನ ಪೂರೈಸಿದ ಡಾ.ಅಂಬೇಡ್ಕರ್ ಸಂಘದ ಅಹೋರಾತ್ರಿ ಧರಣಿ ಸತ್ಯಾಗ್ರಹ ವಿಜಯಪುರ: ನಗರದ ಮನಗೂಳಿ ಅಗಸಿ ಹತ್ತಿರದ ಡಾ. ಬಿ.ಆರ್. ಅಂಬೇಡ್ಕರ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘದಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸೋಮವಾರ ೧೪ನೇ ದಿನ ಪೂರೈಸಿದೆ.೧೪ ದಿನ ಕಳೆದರೂ ವಿಜಯಪುರ ಜಿಲ್ಲಾಡಳಿತ ನೊಂದ ದಲಿತರಿಗೆ ನ್ಯಾಯ ಒದಗಿಸಲು ಮೀನಾಮೀಷ ಎಣಿಸುತ್ತಿರುವ ಕಾರಣ ಹೋರಾಟಗಾರರಾದ ಪ್ರದೀಪ ಚಲವಾದಿ ಅವರು ರಕ್ತದಲ್ಲಿ ಗೌರವಾನ್ವಿತ ರಾಜ್ಯಪಾಲರಿಗೆ ಪತ್ರ ಬರೆಯುವ ಮೂಲಕ ಕೂಡಲೇ ಸರ್ಕಾರ ದಲಿತರ ಬೇಡಿಕೆ ಸ್ಪಂದಿಸಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಮನಗೂಳಿ ಅಗಸಿ ಬಡಾವಣೆಯ ಹತ್ತಿರದ ಸರ್ಕಾರಿ ಜಾಗೆಯಲ್ಲಿ ೧೦೦ * ೧೦೦ ಜಾಗವನ್ನು ಮಂಜೂರು ಮಾಡಿ ನ್ಯಾಯ ಒದಗಿಸಬೇಕೆಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ಪ್ರದೀಪ ಚಲವಾದಿ ಅವರು ಮಾತನಾಡಿ, ಕಳೆದ ೧೪ ದಿನಗಳಿಂದ ನಿರಂತರ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಕೂಡ ವಿಜಯಪುರ…
ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಗ್ರೇಡ್-೨ ತಹಶಿಲ್ದಾರ ಅವರಿಗೆ ಮನವಿ ತಿಕೋಟಾ: ಎ.ಪಿ.ಎಮ್.ಸಿ ಕಟ್ಟಡದ ಆವರಣದಲ್ಲಿ ತಿಕೋಟಾ ಕೋ.ಆಫ್.ಕ್ರೇಡಿಟ್ ಸೋಸೈಟಿ ಅವರು ಅನಧಿಕೃತವಾಗಿ ಕಟ್ಟಡವನ್ನು ಕಟ್ಟಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ, ಈ ಸ್ಥಳ ಕೋರ್ಟಿನಲ್ಲಿ ಅವರಂತೆ ಆಗಿದೆ ಎಂದು ದಬ್ಬಾಳಿಕೆ ಮೂಲಕ ಕಟ್ಟಡದ ತಯಾರಿ ಮಾಡಿಕೊಳ್ಳುತ್ತಿದ್ದಾರೆ, ಈ ಕಟ್ಟಡ ಕಾಮಗಾರಿಗೆ ತಾಲೂಕಾ ಆಡಳಿತ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲೂಕಾ ಗ್ರೇಡ್ ೨ ತಹಶಿಲ್ದಾರ ಎಸ್.ಹೆಚ್.ಅರಕೇರಿ ಅವರಿಗೆ ಮನವಿ ಸಲ್ಲಿಸಿದರು.ತಾಲೂಕ ಅಧ್ಯಕ್ಷ ಸಾತಲಿಂಗಯ್ಯ ಸಾಲಿಮಠ ಅವರು ಮನವಿ ಸಲ್ಲಿಸಿ ಮಾತನಾಡುತ್ತಾ, ಎ.ಪಿ.ಎಂ.ಸಿ ಇರುವುದು ರೈತರಿಗೆ, ಕೃಷಿ ಉತ್ಪನ್ನವನ್ನು ಮಾರಾಟ ಮಾಡುವುದಕ್ಕೆ ಇರುವುದು, ಅಲ್ಲಿ ಬೇರೆ ಬೇರೆ ಕಟ್ಟಡಗಳಿಗೆ ಅನುಮತಿ ನೀಡಬಾರದು, ಒಂದು ವೇಳೆ ಅನುಮತಿ ನೀಡಿದ್ದೆ ಆದರೆ ರೈತ ಸಂಘ ಹಾಗೂ ಸಾರ್ವಜನಿಕರು, ವ್ಯಾಪಾರಸ್ತರೊಂದಿಗೆ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿದರು.ಮುಖಂಡರಾದ ಸದಾಶಿವಯ್ಯ ಅರಕೇರಿಮಠ ಅವರು ಮಾತನಾಡುತ್ತಾ ಸರಕಾರಿ ಸೌಮ್ಯದ…
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣ ಅಂಚೆಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ಥಳೀಯರಾದ ಯಲ್ಲಪ್ಪ ಗೋಪಾಲ ಭಜಂತ್ರಿ (೫೧) ಇವರು ಸೋಮವಾರ ಎಂದಿನಂತೆ ಕಚೇರಿಗೆ ಕಾರ್ಯನಿರ್ವಹಿಸಲು ಬಂದಾಗ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಜರುಗಿದೆ.ಕಳೆದ ೨೦ ವರ್ಷಗಳಿಂದ ಮನಗೂಳಿ ಅಂಚೆಕಚೇರಿಯಲ್ಲಿ ಜಿಡಿಎಸ್ ಪ್ಯಾಕರ್ಯಾಗಿ ಸೇವೆ ಸಲ್ಲಿಸುತ್ತಿದ್ದರು.ಇವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಇವರ ಅಂತ್ಯಕ್ರಿಯೆ ಮನಗೂಳಿ ಪಟ್ಟಣದಲ್ಲಿ ಸಂಜೆ ನೆರವೇರಿತು.ಹಿಂದೆ ಆರು ತಿಂಗಳ ಹೃದಯಾಘಾತ ಆಗಿತ್ತು. ಚಿಕಿತ್ಸೆ ಪಡೆದುಕೊಂಡು ಮಾತ್ರೆಯನ್ನು ನಿರಂತರವಾಗಿ ತೆಗೆದುಕೊಳ್ಳುತ್ತಿದ್ದರು. ಇವರು ಒಂದೆರಡು ದಿನ ಬಿಟ್ಟು ವೈದ್ಯರ ಹತ್ತಿರ ತಪಾಸಣೆ ಮಾಡಿಸಿಕೊಳ್ಳಲು ಹೋಗುವವರಿದ್ದರು ಎಂದು ಅವರ ಸಂಬಂಧಿ ಶಿವಾನಂದ ಭಜಂತ್ರಿ ಹೇಳಿದರು.
ಬಸವನಬಾಗೇವಾಡಿ: ತಾಲೂಕಿನ ಡೋಣೂರು ಗ್ರಾಮದ ಕಟ್ಟೀಮನಿ ಹಿರೇಮಠದ ಗುರು ಮರುಳಸಿದ್ದೇಶ್ವರ ಜಾತ್ರಾ ರಥೋತ್ಸವ, ಹಜರತ್ ಸುಲೇಮಾನ್ ಉರುಸು ಮತ್ತು ಚೌಡಮ್ಮದೇವಿ ಜಾತ್ರಾ ಮಹೋತ್ಸವ ಜೂ. ೬ ರಿಂದ ೭ ರವರೆಗೆ ಜರುಗಲಿದೆ.ಜೂ.೬ ರಂದು ಬೆಳಗ್ಗೆ ೭ ಗಂಟೆಗೆ ಷಟ್ಸ್ಥಲ ಧ್ವಜಾರೋಹಣವನ್ನು ಸಿದ್ದನಗೌಡ ಪಾಟೀಲ ನೆರವೇರಿಸುವರು. ಬೆಳಗ್ಗೆ ೮ ಗಂಟೆಗೆ ಕುಂಭಾಭಿಷೇಕ ಹಾಗೂ ಸಂಗಮೇಶವರ ಲಿಂಗದ ಎಣ್ಣೆ ಮಜ್ಜನ ಮತ್ತು ರುದ್ರಾಭಿಷೇಕ, ಸಂಜೆ ೪.೩೦ ಗಂಟೆಗೆ ಚೌಡಮ್ಮದೇವಿ ಜಾತ್ರಾಮಹೋತ್ಸವ ಹಾಗೂ ಹಜರತ್ ಸುಲೇಮಾನ ಗಂಧಲೇಪನ, ರಾತ್ರಿ ೮ ಗಂಟೆಗೆ ಸಂಗಮೇಶ್ವರ ದೀಪ ಸ್ಥಂಭದ ದೀಪ ಬೆಳಗಿಸುವದು, ಮದ್ದುಸುಡುವುದು ಹಾಗೂ ಅಗ್ನಿಪುಟು ಕಾರ್ಯಕ್ರಮ ಜರುಗಲಿದೆ. ನಂತರ ನಡೆಯುವ ಭಾವೈಕ್ಯ ಧರ್ಮ ಸಮಾರಂಭ ಹಾಗೂ ಕಲಬುರಗಿ ಶರಣಬಸವೇಶ್ವರ ಪುರಾಣ ಮಹಾಮಂಗಲ ಕಾರ್ಯಕ್ರಮದ ಸಾನಿಧ್ಯವನ್ನು ಜಾಲಹಳ್ಳಿಯ ಡಾ.ಜಯಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಅಧ್ಯಕ್ಷತೆಯನ್ನು ಚಿಮ್ಮಲಗಿಯ ಸಿದ್ದರೇಣುಕ ಶಿವಾಚಾರ್ಯ ಸ್ವಾಮೀಜಿ ವಹಿಸುವರು.ಕೆರೂರಿನ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಇಂಗಳೇಶ್ವರದ ಬೃಂಗೀಶ್ವರಲಿಂಗ ಶಿವಾಚಾರ್ಯ ಸ್ವಾಮೀಜಿ, ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಕೊಣ್ಣೂರಿನ ಡಾ.ಶಿವಾನಂದ…
ಆಲಮಟ್ಟಿ: ಇಲ್ಲಿಯ ಆರ್ ಎಸ್ ಪುನರ್ವಸತಿ ಕೇಂದ್ರದಲ್ಲಿ ಮಳೆಯಿಂದ ನಾನಾ ಕಡೆಯಿಂದ ಮಳೆ ನೀರು ಚರಂಡಿಯಲ್ಲಿ ಹರಿದಿದೆ. ಚರಂಡಿಗೆ ಸಮರ್ಪವಾದ ಟೇಲ್ ಎಂಡ್ ಇಲ್ಲದ್ದರಿಂದ ಚರಂಡಿಯ ಕೊಳಚೆ ಎಲ್ಲವೂ ಆಲಮಟ್ಟಿ ಪೆಟ್ರೋಲ್ ಪಂಪ್ ಆಲಮಟ್ಟಿ ಆರ್ ಎಸ್ ಮುಖ್ಯರಸ್ತೆಯ ಮೇಲೆ ಹರಿದಿದೆ.ಇದೇ ರಸ್ತೆಯ ಮೇಲೆ ಸಂಚರಿಸುವ ಸಹಸ್ರಾರು ಜನ ಮೂಗು ಮುಚ್ಚಿಕೊಂಡೇ ಚರಂಡಿ ನೀರಿನಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಉಂಟಾಯಿತು. ಈಗಿರುವ ಚರಂಡಿಗೆ ಟೇಲ್ ಎಂಡ್ ವರೆಗೆ ನಿರ್ಮಿಸಿ ಹಳ್ಳಕ್ಕೆ ಜೋಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.ರಸ್ತೆ ಮೇಲೆ ನಿಂತ ನೀರು;ಆಲಮಟ್ಟಿ ಪೆಟ್ರೋಲ್ ಪಂಪ್ ನಿದಆಲಮಟ್ಟಿಗೆ ತೆರಳುವ ಪ್ರವೇಶವ ದ್ವಾರ ಬಳಿ ಹರಿದು ಬರುವ ನೀರು ಹೋಗಲು ಯಾವುದೇ ವ್ಯವಸ್ಥೆ ಮಾಡದ್ದರಿಂದ ನೀರು ರಸ್ತೆಯಲ್ಲಿಯೇ ನಿಂತು ವಾಹನಗಳು ನೀರಿನಲ್ಲಿಯೇ ಹೋಗಬೇಕಾಯಿತು. ರಸ್ತೆ ನಿರ್ಮಿಸುವಾಗಲೇ ಮಳೆ ಮತ್ತೀತರ ನೀರು ಹರಿದು ಹೋಗುವ ಯಾವುದೇ ವ್ಯವಸ್ಥೆ ಯನ್ನು ಮಾಡಿಲ್ಲ. ರಸ್ತೆ ನಿರ್ಮಾಣಕ್ಕಾಗಿ ಕೋಟ್ಯಂತರ ರೂ ಖರ್ಚು ಮಾಡುವ ಕೆಬಿಜೆಎನ್ ಎಲ್ ರಸ್ತೆ ಪಕ್ಕ ಚರಂಡಿಯಾಗಲೀ, ಡ್ರೈನೇಜ್ ಆಗಲಿ…
ವಿಜಯಪುರ: ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನ ಭರವಸೆ ಆಟಗಾರ್ತಿ ರಾಜೇಶ್ವರಿ ಗಾಯಕವಾಡ ತಮ್ಮ ಜನ್ಮದಿನವನ್ನು ಸಮಾಜ ಸೇವೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡರು.ಜುಮನಾಳದಲ್ಲಿರುವ ಶ್ರೀ ಸಿದ್ದೇಶ್ವರ ವಿದ್ಯಾಪೀಠ ಹಾಗೂ ಶ್ರೀಮತಿ ಸಿದ್ಧಮ್ಮ ಬ್ಯಾಕೋಡ ವೃದ್ಧಾಶ್ರಮಕ್ಕೆ ತೆರಳಿ ಅಲ್ಲಿರುವ ವೃದ್ಧರೊಂದಿಗೆ ಮಾತು, ಹರಟೆಯ ಮೂಲಕ ಕಾಲಕಳೆದರು. ಅಲ್ಲಿರುವ ವೃದ್ಧರೊಂದಿಗೆ ಆಪ್ತಭಾವದಿಂದ ಬೆರೆತು ಅವರ ಕಷ್ಟ-ಸುಖ ಆಲಿಸಿದರು.ನಂತರ ಹೊದಿಕೆ ಹಾಗೂ ಮೊದಲಾದ ಅವಶ್ಯಕ ಪರಿಕರಗಗಳನ್ನು ವಿತರಿಸಿದರು. ನಂತರ ಅವರಿಗೆ ಪ್ರೀತಿಯಿಂದ ಭೋಜವನ್ನು ಉಣಬಡಿಸಿದರು. ನಂತರ ಅನಾಥ ಮಕ್ಕಳೊಂದಿಗೂ ಬೆರೆತು ಕೇಕ್ ಕತ್ತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕವಾಡ, ಜನತೆಯ ಪ್ರೀತಿ, ಹಾರೈಕೆಯ ಫಲವಾಗಿಯೇ ನಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತಾಗಿದೆ, ಗುರು, ಹಿರಿಯರಲ್ಲಿ, ಬಡವರಲ್ಲಿ, ವೃದ್ಧರಲ್ಲಿ ದೇವರನ್ನು ಕಾಣು ಎಂದು ನನ್ನ ತಂದೆ ನನಗೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿ ಹೋಗಿದ್ದಾರೆ, ಆ ದಾರಿಯಲ್ಲಿ ನಾನು ಸಾಗಿರುವೆ ಎಂದರು. ಸಮಾಜ ನಮಗೆ ಎಲ್ಲವನ್ನೂ ನೀಡಿದೆ, ಸಮಾಜಕ್ಕಾಗಿ ದುಡಿಯುವುದು ನಮ್ಮ ಕರ್ತವ್ಯ ಸಹ ಹೌದು.…
ವಿಜಯಪುರ: ಅತ್ಯಂತ ಕ್ರೀಯಾಶೀಲತೆಯ ಮೂಲಕ ಸಮಾಜಮುಖಿ ಚಿಂತನೆಯನ್ನಿಟ್ಟುಕೊಂಡು ನಗರ ಜನರ ಸೇವೆ ಮಾಡುತ್ತಿರುವ ಸಮಾಜ ಸೇವಕ ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ ಮುಶ್ರೀಫ ಅವರ ಸೇವೆ ಶ್ಲಾಘನೀಯವಾಗಿದೆ ಎಂದು ಖ್ಯಾತ ನ್ಯಾಯವಾದಿ ಎ.ಎಂ ತಾಂಬೋಳಿ ಹೇಳಿದರು.ನಗರದ ಮನಗೂಳಿ ಅಗಸಿ ಹತ್ತಿರದ ಫತೆದರವಾಜಾ ಮಸೀದಿ ಹತ್ತಿರ ಗೆಳೆಯರ ಬಳಗ ಹಾಗೂ ಅಭಿಮಾನಿಗಳ ವತಿಯಿಂದ ಹಮ್ಮಿಕೊಂಡ ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ ಮುಶ್ರೀಫ ಅವರ ಜನ್ಮದಿನಾಚರಣೆ ಸಂಭ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ಹತ್ತಾರು ವರ್ಷಗಳಿಂದ ನೊಂದು ಬಂದವರಿಗೆ ದ್ವನಿಯಾಗಿ ಜಿಲ್ಲೆಯಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಮ್ಮು ಬಿಮ್ಮು ಇಲ್ಲದೆ ಚಿಕ್ಕಮಗುವಿನಿಂದ ಹಿಡಿದು ವೃದ್ಧರವರೆಗೂ ಸಮಾನ ದೃಷ್ಠಿಯಿಂದ ನೋಡುತ್ತ ಕಾಯಕನಿಷ್ಠೆಯಲ್ಲಿ ತೊಡಗಿದ್ದಾರೆ. ಇವರ ಸಮಾಜಮುಖಿ ಜೀವನ ಪ್ರೇರಣಾದಾಯಕವಾಗಿದೆ ಎಂದರು.
