ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಗ್ರೇಡ್-೨ ತಹಶಿಲ್ದಾರ ಅವರಿಗೆ ಮನವಿ
ತಿಕೋಟಾ: ಎ.ಪಿ.ಎಮ್.ಸಿ ಕಟ್ಟಡದ ಆವರಣದಲ್ಲಿ ತಿಕೋಟಾ ಕೋ.ಆಫ್.ಕ್ರೇಡಿಟ್ ಸೋಸೈಟಿ ಅವರು ಅನಧಿಕೃತವಾಗಿ ಕಟ್ಟಡವನ್ನು ಕಟ್ಟಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ, ಈ ಸ್ಥಳ ಕೋರ್ಟಿನಲ್ಲಿ ಅವರಂತೆ ಆಗಿದೆ ಎಂದು ದಬ್ಬಾಳಿಕೆ ಮೂಲಕ ಕಟ್ಟಡದ ತಯಾರಿ ಮಾಡಿಕೊಳ್ಳುತ್ತಿದ್ದಾರೆ, ಈ ಕಟ್ಟಡ ಕಾಮಗಾರಿಗೆ ತಾಲೂಕಾ ಆಡಳಿತ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲೂಕಾ ಗ್ರೇಡ್ ೨ ತಹಶಿಲ್ದಾರ ಎಸ್.ಹೆಚ್.ಅರಕೇರಿ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕ ಅಧ್ಯಕ್ಷ ಸಾತಲಿಂಗಯ್ಯ ಸಾಲಿಮಠ ಅವರು ಮನವಿ ಸಲ್ಲಿಸಿ ಮಾತನಾಡುತ್ತಾ, ಎ.ಪಿ.ಎಂ.ಸಿ ಇರುವುದು ರೈತರಿಗೆ, ಕೃಷಿ ಉತ್ಪನ್ನವನ್ನು ಮಾರಾಟ ಮಾಡುವುದಕ್ಕೆ ಇರುವುದು, ಅಲ್ಲಿ ಬೇರೆ ಬೇರೆ ಕಟ್ಟಡಗಳಿಗೆ ಅನುಮತಿ ನೀಡಬಾರದು, ಒಂದು ವೇಳೆ ಅನುಮತಿ ನೀಡಿದ್ದೆ ಆದರೆ ರೈತ ಸಂಘ ಹಾಗೂ ಸಾರ್ವಜನಿಕರು, ವ್ಯಾಪಾರಸ್ತರೊಂದಿಗೆ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿದರು.
ಮುಖಂಡರಾದ ಸದಾಶಿವಯ್ಯ ಅರಕೇರಿಮಠ ಅವರು ಮಾತನಾಡುತ್ತಾ ಸರಕಾರಿ ಸೌಮ್ಯದ ಎ.ಪಿ.ಎಮ್.ಸಿ ಸ್ಥಳದಲ್ಲಿ ಈ ರೀತಿ ದೊಡ್ಡವರು, ರಾಜಕೀಯ ಕುಮ್ಮಕಿನಿಂದ ಅತಿಕ್ರಮಣದ ಮೂಲಕ ಕಟ್ಟಡ ನಿರ್ಮಿಸುವುದರಿಂದ ನಾಳೆ ದಿನಗಳಲ್ಲಿ ಯಾರಿಗೂ ಸ್ವತಂತ್ರ ಇಲ್ಲದೇ ತಾಪತ್ರೆಯ ಅನುಭವಿಸಬೇಕಾಗುತ್ತದೆ, ಆದ್ದರಿಂದ ಕೂಡಲೇ ಈ ರೀತಿ ಕಟ್ಟಡ ಕಟ್ಟುವುದು ಅಪರಾದವಾದದು ಎಂದರು.
ಈ ವೇಳೆ ನಜೀರ ನಂದರಗಿ, ಹಣಮಂತ ಬ್ಯಾಡಗಿ, ಶಾನುರ ನಂರಗಿ, ಸಂಗೀತ ರಾಠೋಡ, ಧರೆಪ್ಪ ಸೊರಡಿ, ಮಾನಿಂಗ ಮಂಟೂರ, ರಾವೂತ ಕಂಬಾರ, ತಿಪ್ಪಣ್ಣ ಕೊಣ್ಣೂರ, ರಾಜೇಂದ್ರ ಕುಲಕರ್ಣಿ, ವಾಮನರಾವ ಸೊಂಡೂರ, ರೇಶ್ಮಾ ರಾಠೋಡ, ರೇಖಾ ರಾಠೋಡ, ರೇಣುಕಾ ರಾಠೋಡ, ನಂದು ಕುಂಬಾರ, ಮಹಾದೇವ ಕದಮ್, ಅಶೋಕ ಬಾಳಗಾಂವಿ, ಸಿದ್ರಾಮ ಪೂಜಾರಿ, ಚಂದು ತೊರವಿ, ಬಂದದೆನಮಾಜ ನಗಾರ್ತಿ, ಮೂಭಾರಕ ಭಾಗವಾನ, ಸುಮ್ಮವ್ವ ಶಿಂದೆ, ಆಶಿಫ ನಗಾರ್ತಿ, ಜಮೀರ ಭಾಗವಾನ, ಚಾಂದಬೈ ದೇಸಾಯಿ, ಚಂದು ಕನಮಡಿ, ಅಲ್ತಾಫ ಭಾಗವಾನ, ರೈಮಾನಸಾಬ ಹ್ಯಾಳಕರ, ಶಿವಪ್ಪ ಇಂಚಗೇರಿ, ವಿರೂಪಾಕ್ಷಪ್ಪ ಮಂಟೂರ, ಅಪ್ಪಾಸಾಹೇಬ ಬೋಸ್ಲೆ ಸೇರಿದಂತೆ ಇತರರು ಇದ್ದರು.

