ವಿಜಯಪುರ: ಅತ್ಯಂತ ಕ್ರೀಯಾಶೀಲತೆಯ ಮೂಲಕ ಸಮಾಜಮುಖಿ ಚಿಂತನೆಯನ್ನಿಟ್ಟುಕೊಂಡು ನಗರ ಜನರ ಸೇವೆ ಮಾಡುತ್ತಿರುವ ಸಮಾಜ ಸೇವಕ ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ ಮುಶ್ರೀಫ ಅವರ ಸೇವೆ ಶ್ಲಾಘನೀಯವಾಗಿದೆ ಎಂದು ಖ್ಯಾತ ನ್ಯಾಯವಾದಿ ಎ.ಎಂ ತಾಂಬೋಳಿ ಹೇಳಿದರು.
ನಗರದ ಮನಗೂಳಿ ಅಗಸಿ ಹತ್ತಿರದ ಫತೆದರವಾಜಾ ಮಸೀದಿ ಹತ್ತಿರ ಗೆಳೆಯರ ಬಳಗ ಹಾಗೂ ಅಭಿಮಾನಿಗಳ ವತಿಯಿಂದ ಹಮ್ಮಿಕೊಂಡ ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ ಮುಶ್ರೀಫ ಅವರ ಜನ್ಮದಿನಾಚರಣೆ ಸಂಭ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ಹತ್ತಾರು ವರ್ಷಗಳಿಂದ ನೊಂದು ಬಂದವರಿಗೆ ದ್ವನಿಯಾಗಿ ಜಿಲ್ಲೆಯಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಮ್ಮು ಬಿಮ್ಮು ಇಲ್ಲದೆ ಚಿಕ್ಕಮಗುವಿನಿಂದ ಹಿಡಿದು ವೃದ್ಧರವರೆಗೂ ಸಮಾನ ದೃಷ್ಠಿಯಿಂದ ನೋಡುತ್ತ ಕಾಯಕನಿಷ್ಠೆಯಲ್ಲಿ ತೊಡಗಿದ್ದಾರೆ. ಇವರ ಸಮಾಜಮುಖಿ ಜೀವನ ಪ್ರೇರಣಾದಾಯಕವಾಗಿದೆ ಎಂದರು.
Subscribe to Updates
Get the latest creative news from FooBar about art, design and business.
Related Posts
Add A Comment

