೧೪ ದಿನ ಪೂರೈಸಿದ ಡಾ.ಅಂಬೇಡ್ಕರ್ ಸಂಘದ ಅಹೋರಾತ್ರಿ ಧರಣಿ ಸತ್ಯಾಗ್ರಹ
ವಿಜಯಪುರ: ನಗರದ ಮನಗೂಳಿ ಅಗಸಿ ಹತ್ತಿರದ ಡಾ. ಬಿ.ಆರ್. ಅಂಬೇಡ್ಕರ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘದಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸೋಮವಾರ ೧೪ನೇ ದಿನ ಪೂರೈಸಿದೆ.
೧೪ ದಿನ ಕಳೆದರೂ ವಿಜಯಪುರ ಜಿಲ್ಲಾಡಳಿತ ನೊಂದ ದಲಿತರಿಗೆ ನ್ಯಾಯ ಒದಗಿಸಲು ಮೀನಾಮೀಷ ಎಣಿಸುತ್ತಿರುವ ಕಾರಣ ಹೋರಾಟಗಾರರಾದ ಪ್ರದೀಪ ಚಲವಾದಿ ಅವರು ರಕ್ತದಲ್ಲಿ ಗೌರವಾನ್ವಿತ ರಾಜ್ಯಪಾಲರಿಗೆ ಪತ್ರ ಬರೆಯುವ ಮೂಲಕ ಕೂಡಲೇ ಸರ್ಕಾರ ದಲಿತರ ಬೇಡಿಕೆ ಸ್ಪಂದಿಸಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಮನಗೂಳಿ ಅಗಸಿ ಬಡಾವಣೆಯ ಹತ್ತಿರದ ಸರ್ಕಾರಿ ಜಾಗೆಯಲ್ಲಿ ೧೦೦ * ೧೦೦ ಜಾಗವನ್ನು ಮಂಜೂರು ಮಾಡಿ ನ್ಯಾಯ ಒದಗಿಸಬೇಕೆಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರದೀಪ ಚಲವಾದಿ ಅವರು ಮಾತನಾಡಿ, ಕಳೆದ ೧೪ ದಿನಗಳಿಂದ ನಿರಂತರ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಕೂಡ ವಿಜಯಪುರ ಜಿಲ್ಲಾಡಳಿತ ಸಮಸ್ಯೆಯನ್ನು ಬಗೆಹರಿಸದೆ ಕಾಲ ಹರಣಮಾಡುತ್ತಿರುವ ಕಾರಣ ನಮ್ಮ ಮನಸ್ಸಿಗೆ ತೀವ್ರ ಘಾಸಿಯಾಗಿದೆ. ಕಾರಣ ನಮ್ಮ ಹಕ್ಕನ್ನು ನ್ಯಾಯಯುತವಾಗಿ ಪಡೆದುಕೊಳ್ಳಲು ಶಾಂತರೀತಿಯಿಂದ ಮಾಡುತ್ತಿದ್ದ ಪ್ರತಿಭಟನೆ ಇನ್ನುಮುಂದೆ ಉಗ್ರಸ್ವರೂಪ ಪಡೆದುಕೊಳ್ಳಲಿದೆ ಎಂಬುದರ ಸಂಕೇತವಾಗಿ ಇಂದು ನನ್ನ ರಕ್ತದಲ್ಲಿ ರಾಜ್ಯಪಾಲರಿಗೆ ಪತ್ರ ಬರೆಯುವ ಮೂಲಕ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ಅಂಬೇಡ್ಕರ್ ವಾದದ ಜಿಲ್ಲಾ ಪ್ರಧಾನ ಸಂಚಾಲಕ ಸಂಜು ಕಂಬಾಗಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ವಿಜಯಪುರ ನಗರದಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭವನ ನಿರ್ಮಾಣ ಮಾಡಲು ಜಾಗೆಯನ್ನು ನೀಡಲು ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯವಾದದು ಕೂಡಲೇ ಜಿಲ್ಲಾಡಳಿತ ನ್ಯಾಯ ಒದಗಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಪ್ರತಾಪ ಚಿಕ್ಕಲಕಿ ಅವರು ಮಾತನಾಡಿ, ನ್ಯಾಯಯುತವಾಗಿ ನಮಗೆ ಸಿಗಬೇಕಾದ ಹಕ್ಕಿನ ಕುರಿತು ಹೋರಾಟ ಮಾಡುತ್ತಿದ್ದೇವೆ. ನಾವು ಕೇಳುತ್ತಿರುವುದು ಸರ್ಕಾರಿ ಜಾಗೆ, ಅನಧಿಕೃತ ಖಾಸಗಿ ವ್ಯಕ್ತಿಗಳು ಸರ್ಕಾರಿ ಜಾಗೆಯನ್ನು ನೀಡಲು ತಕರಾರು ತೆಗೆಯುತ್ತಿರುವುದು ಎಷ್ಟು ಸರಿ ಇದು ಅವರ ಸಂವಿಧಾನ ಬಾಹೀರ ನೀತಿಯನ್ನು ಎತ್ತಿ ತೋರಿಸುತ್ತದೆ. ವಿಜಯಪುರ ಜಿಲ್ಲಾಡಳಿತ ಪಾರದರ್ಶಕವಾಗಿ ನಮಗೆ ನ್ಯಾಯ ಒದಗಿಸುವ ಮೂಲಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ನೈಜ ಗೌರವ ಸಲ್ಲಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಶ್ರೀಶೈಲ ಕಾಖಂಡಕಿ, ಕಾರ್ಯದರ್ಶಿ ಸತೀಶ ಕುಬಕಡ್ಡಿ, ಬಸವರಾಜ ಕುಬಕಡ್ಡಿ, ಬಸವಕುಮಾರ ಕಾಂಬಳೆ, ರಾಜು ಕಾಖಂಡಕಿ, ಜಗದೀಶ ಕೂಡಗಿ, ಚೇತನ ಜವಳಿ, ಆಕಾಶ ಕಾಂಬಳೆ, ಕೀರ್ತಿ ಕಾಖಂಡಕಿ, ಕೀರ್ತಿಕಮಾರ ಕಾಖಂಡಕಿ, ರಾಜು ಕಾಖಂಡಕಿ, ಪರಶುರಾಮ ಕಾಖಂಡಕಿ, ರವಿ ಕಾಖಂಡಕಿ, ಚಿಕ್ಕಯ್ಯ ಕಾಖಂಡಕಿ, ಕಿರಣ ಕಾಖಂಡಕಿ, ರಾಜು ವಾಲೀಕಾರ, ರೋಹಿತ ಮಲಕಣ್ಣವರ, ರಾಜರತನ ಕಾಂಬಳೆ, ಶಿವರಾಜ ಕೂಡಗಿ, ಬಾಬು ಶಿವಶರಣ, ಕೃಷ್ಣಾ ಚಲವಾದಿ, ರಿತೇಶ ಕಾಖಂಡಕಿ, ಶಿವು ಕೂಡಗಿ, ಸಚೀನ ಕಾಖಂಡಕಿ, ಅರವಿಂದ ಕಾಖಂಡಕಿ, ಮುದಕಪ್ಪ ವಾಲೀಕಾರ, ಆಕಾಶ ಚಲವಾದಿ, ಶನ್ನಿ ಕಾಖಂಡಕಿ, ಬಸವರಾಜ ಕಾಖಂಡಕಿ, ಅಜಯ ಕಾಖಂಡಕಿ, ಆಶಾ ಮಾನೆ, ಅಶ್ವಿನಿ ಕುಬಕಡ್ಡಿ, ಮಧು ಕಾಖಂಡಕಿ, ಮೀನಾಕ್ಷಿ ಕಾಖಂಡಕಿ, ಸುನಂದಾ ಕಾಖಂಡಕಿ, ಕಸ್ತೂರಿ ಕಾಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

