ವಿಜಯಪುರ: ಸರಕಾರ ಇಂದು ಕಡ್ಡಾಯ ಶಿಕ್ಷಣ ಯೋಜನೆ ಜಾರಿಗೆ ತಂದಿದ್ದು.ಯಾವುದೇ ಮಗು ಶಾಲೆ ತೊರೆದು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ನ್ಯಾಯವಾದಿ ದಾನೇಶ ಅವಟಿ ನುಡಿದರು.
ನಗರದ ಬಸವ ನಗರದ ಫ್ಯಾಂಟಸಿ ಕಿಡ್ಸ್ ಝೋನ್ ಸ್ಕೂಲ್ ನಲ್ಲಿ ಸ್ಪಂದನ ಸ್ವಯಂ ಸೇವಾ ಸಂಸ್ಥೆ ಹಾಗೂ ಸಮಪ್ರಭ ಏಜುಕೇಶನ್ ಆಂಡ್ ಯೂಥ್ ವಾಲೆಂಟಿಯರ್ ಆಶೋಷಿಯೇಷನ್ ಸಹಯೋಗದಲ್ಲಿ ವಜ್ರಹನುಮನಗುಡಿ ಹತ್ತಿರಬಯಲಿನಲ್ಲಿ ಇರುವ ನಿರಾಶ್ರಿತ ಕುಟುಂಬಗಳ ಮಕ್ಕಳಿಗೆ ಕಲಿಕಾ ಕೇಂದ್ರದ ಮೂಲಕ 21ದಿನಗಳ ಶೈಕ್ಷಣಿಕ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಣ ಎಲ್ಲರ ಬಾಳಿಗೆ ಬೆಳಕಾಗಿದ್ದು, ಅದರಲ್ಲೂ ಸಮಾಜದ ಮುಖ್ಯ ವಾಹಿನಿಯಿಂದ ದೂರವಿರುವ, ಕಡು ಬಡತನದ, ಪ್ಲಾಸ್ಟಿಕ್ ಕೊಡ, ಬ್ಯಾಗುಗಳಿಗೆ ಜಿಪ್ ಹಾಕುವುದು, ಗ್ಯಾಸ್ ರಿಪೇರಿ ಮುಂತಾದ ಕಾರ್ಯಗಳಲ್ಲಿ ತೊಡಗಿರುವ ಬೇರೆ ಕಡೆಯಿಂದ ಬಂದು ಬಿಜಾಪುರದಲ್ಲಿ ನೆಲೆಸಿರುವ ನಿರಾಶ್ರಿತರ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಇದೆ. ಅಂತಹ ಕುಟುಂಬಗಳನ್ನು ಗುರುತಿಸಿ, ಮಕ್ಕಳನ್ನುಕಲಿಕಾ ಕೇಂದ್ರಕ್ಕೆ ಕರೆತಂದು ಉಚಿತವಾಗಿ ಮಕ್ಕಳಿಗೆ ವಿದ್ಯೆ, ವಿನಯ, ಸಂಸ್ಕಾರ ತುಂಬುವದರೊಂದಿಗೆ ಊಟ, ತಿಂಡಿ, ಬಟ್ಟೆ, ಕಲಿಕಾ ಸಾಮಗ್ರಿ ನೀಡುವದರ ಮೂಲಕ ಸ್ಪಂದನ ಹಾಗೂ ಸಮಪ್ರಭ ಸಂಸ್ಥೆಗಳು ಫಲಾಪೇಕ್ಷೆ ಇಲ್ಲದೇ ಮಕ್ಕಳ ಶೈಕ್ಷಣಿಕ ಸೇವೆ ಮಾಡುತ್ತಿವೆ. ಇವರಿಗೆ ಸರ್ಕಾರ ಸಂಘ ಸಂಸ್ಥೆ ಹಾಗೂ ಸಾರ್ವಜನಿಕರು ಕೈ ಜೋಡಿಸಿ ಪ್ರೋತ್ಸಾಹಿಸಬೇಕು ಎಂದರು.
ಸಮಪ್ರಭ ಸಂಸ್ಥೆಯ ಅಧ್ಯಕ್ಷ ನ್ಯಾಯವಾದಿ ಪ್ರಶಾಂತ ದೇಶಪಾಂಡೆ ಅವರು ಮಾತನಾಡಿ, ವಜ್ರ ಹನುಮಾನ ದೇವಸ್ಥಾನ ಹತ್ತಿರ ಇರುವ ಬಯಲು ಪ್ರದೇಶದಲ್ಲಿ ಹೊಟ್ಟೆ ಹೊರೆಯಲು ಬೇರೆ ಬೇರೆ ರಾಜ್ಯ, ಜಿಲ್ಲೆಗಳಿಂದ ವಲಸೆ ಬಂದ ನಿರಾಶ್ರಿತರ ಅಲೆಮಾರಿ ಕುಟುಂಬಗಳ ಮಕ್ಕಳು ಇಲ್ಲಿ ಓದುತ್ತಿದ್ದಾರೆ. ಬೆಳಿಗ್ಗೆ ಎದ್ದ ತಕ್ಷಣ ಉಪಜೀವನಕ್ಕಾಗಿ ವಿವಿಧ ವ್ಯಾಪಾರ-ಉದ್ಯೋಗ ಮಾಡಿಕೊಂಡು ಹೋಗುವ ತಂದೆ ತಾಯಿಗಳು ಚೂರು ಪಾರು ತಿನ್ನಲು ನೀಡಿ, ಕೈಗೆ ಚಿಲ್ಲರೆ ಕಾಸು ಕೊಟ್ಟು ದುಡಿಮೆಗೆ ಹೋಗುವ ಅವರ ಮಕ್ಕಳನ್ನು ನಮ್ಮ ತಂಡದ ಸದಸ್ಯರು ಮಾತನಾಡಿ, ಮನ ಒಲಿಸಿ, ಶಾಲೆಯ ಕೋಣೆಯೊಂದರಲ್ಲಿ ಮಕ್ಕಳನ್ನು ವಾಹನಗಳ ಮೂಲಕ ಕರೆ ತಂದು ಬೆಳಿಗ್ಗೆಯಿಂದ ಸಾಯಂಕಾಲವರೆಗೆ ನುರಿತ ಶಿಕ್ಷಕಿಯರ ಮೂಲಕ ಅನ್ನ ಉಣಿಸಿ, ಬಟ್ಟೆ ಬರೆ ನೀಡಿ, ಅಕ್ಷರಾಭ್ಯಾಸ ಮಾಡಿಸಿದ ತೃಪ್ತಿ ತಮಗಿದ್ದು, ಇನ್ನೂ ಈ ಮಕ್ಕಳ ನಿರಂತರ ಕಲಿಕೆಗೆ ಅವಕಾಶ ಕಲ್ಪಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ಪಂದನ ಸ್ವಯಂ ಸೇವಾ ಸಂಸ್ಥೆ ಹಾಗೂ ನಿಕಟಪೂರ್ವ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮಹದೇವಪ್ಪ ದೇವರ ಅವರು ಮಾತನಾಡಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಶಾಲೆಯಿಂದ ಹೊರಗುಳಿಯಬಾರದು ಎಂದು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಆದರೆ ಅವು ಪರಿಣಾಮಕಾರಿಯಾಗಿ ಜಾರಿಗೆ ಬಾರದ ಕಾರಣ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದರಲ್ಲಿ ಪಾಲಕರ-ಪೋಷಕರ
ನಿರ್ಲಕ್ಷತೆಯಿಂದಲೂ ಶಾಲೆಯಿಂದ ಹೊರಗುಳಿಯುತ್ತಾರೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಹಾಗು ಮಕ್ಕಳ ಹಕ್ಕುಗಳು ಅವರಿಗೆ ದೊರೆಯಬೇಕು ಎಂಬ ಸದುದ್ದೇಶದಿಂದ ಈ ಕಲಿಕಾ ಕೇಂದ್ರ ಸ್ಥಾಪಿಸಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಕೂಡ ನಮ್ಮ ಸಂಸ್ಥೆ ಆಹಾರ, ಬಟ್ಟೆ, ಔಷಧಿ, ಹಾಲು ಹಣ್ಣು ವಿತರಿಸಿದ್ದೇವೆ. ಮುಂದೆಯೂ ಇನ್ನೂ ಅನೇಕ ವಿದಾಯಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದರು.
ವೇದಿಕೆಯಲ್ಲಿ ಸಮಪ್ರಭ ಸಂಸ್ಥೆ ಕಾರ್ಯದರ್ಶಿ ಬಸವರಾಜ ಚೌಧರಿ, ಆಡಳಿತ ಅಧಿಕಾರಿ ಸುಮಾ ಚೌಧರಿ, ವಿಶೇಷ ತರಬೇತುದಾರರಾಗಿ ಶ್ರೀಮತಿ ದ್ರಾಕ್ಷಾಯಣಿ ಹಿರಾಪುರ, ಜಾನ್ವಿ ಪಂಡಿತ್ ನೀಡಿದರು. ಸ್ಪಂದನ ಸಂಸ್ಥೆ ಜಿಲ್ಲಾ ಸಂಯೋಜಕ ಸಂಗಮೇಶ ರಾಮಗೊಂಡ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಪ್ರತಿಭಾ ದಿವಟರ ನಿರೂಪಿಸಿದರು. ಸರಳಾ ಇಂಡಿ ವಂದಿಸಿದರು.
ಮಕ್ಕಳಿಗೆ ಪೆನ್ನು ಪುಸ್ತಕ. ಸ್ಕೂಲ್ ಬ್ಯಾಗ್,ಬಟ್ಟೆ ವಿತರಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಕೊನೆಗೊಂಡಿತು.
Subscribe to Updates
Get the latest creative news from FooBar about art, design and business.
Related Posts
Add A Comment

