ವಿಜಯಪುರ: ಪಟ್ಟಣ ಪಂಚಾಯತ ಕಾರ್ಮಿಕ ಬಂಧುಗಳು ಹಾಗೂ ಸಿಬ್ಬಂದಿ ವರ್ಗ ಜನ ಸಮುದಾಯಕ್ಕೆ ಸ್ಪಂದಿಸಿ ಅವರ ಸಮಸ್ಯೆಗಳನ್ನು ಆಲಿಸಿ ಕಾರ್ಯ ಸೂಕ್ತ ಸಮಯದಲ್ಲಿ ಮಾಡಿಕೊಡಬೇಕೆಂದು ಪಟ್ಟಣ ಪಂಚಾಯತ ಸಮುದಾಯ ಸಂಘಟನಾಧಿಕಾರಿ ರಮೇಶ ನಾಯಕ ಕರೆ ನೀಡಿದರು.
ಅವರು ಪಟ್ಟಣ ಪಂಚಾಯತ ತಮ್ಮ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತ, ಕಾರ್ಮಿಕ ಸಿಬ್ಬಂದಿ ಸಮುದಾಯದ ಜೊತೆ ಕಾರ್ಯಗಳ ಬಗ್ಗೆ ಉತ್ತಮ ರೀತಿಯಲ್ಲಿ ಸ್ಪಂದನೆ ಮಾಡುವಂತೆ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.
ತಮ್ಮ ಅಧಿಕಾರಾವಧಿಯಲ್ಲಿ ಅನೇಕ ಅನುಭವಗಳನ್ನು ಪಡೆದುಕೊಂಡಿದ್ದೇನೆ. ಅದಕ್ಕೆ ತಕ್ಕ ರೀತಿ ಸಮುದಾಯ ಕೂಡ ನಾನು ಮಾಡಿದ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನನಗೆ ತೃಪ್ತಿ ತಂದಿದೆ, ಸಿಬ್ಬಂದಿಗೆ ನನ್ನ ಅವಧಿಯಲ್ಲಿ ಏನಾದರೂ ನನ್ನಿಂದ ತಪ್ಪು ಆಗಿದ್ದರೆ ಕ್ಷಮಿಸಿ ಎಂದರು.
ಮಹಿಳೆಯರೂ ಸೇರಿದಂತೆ ಕಾರ್ಮಿಕ ಸಿಬ್ಬಂದಿಗೆ ಬಟ್ಟೆ ಕೊಡುವ ಮೂಲಕ ಸಿಬ್ಬಂದಿಗೆ ರಮೇಶ ನಾಯಕ ಗೌರವ ಸಲ್ಲಿಸಿದರು.
ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಮಾತನಾಡಿ, ಅವರು ಮಾಡಿದ ಎಲ್ಲಾ ಕಡೆಗಳಲ್ಲಿ ಮತ್ತು ಅವರ ಹುದ್ದೆಗಳಲ್ಲಿ ಉತ್ತಮ ರೀತಿಯಿಂದ ಕಾರ್ಯ ನಿರ್ವಹಿಸಿ ಜನಮನ್ನಣೆ ಗಳಿಸಿದ್ದಾರೆ. ಇಂದು ಅವರು ನಿವೃತ್ತಿ ಹೊಂದುತ್ತಲಿದ್ದು, ಅವರ ಮುಂದಿನ ಜೀವನ ಉತ್ತಮವಾಗಿರಲಿ ಎಂದರು.
ಪಟ್ಟಣ ಪಂಚಾಯತ ಪ್ರಥಮ ದರ್ಜೆ ಸಹಾಯಕ ಅರುಣ ವಿಧಾತೆ ಮಾತನಾಡಿ, ರಮೇಶ ನಾಯಕ ಅವರು ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಉತ್ತಮ ಸೇವೆ ಜನಸಾಮಾನ್ಯರಲ್ಲಿ ಅಜರಾಮರವಾಗಿ ಉಳಿಯುವಂತೆ ಮಾಡಿದೆ. ಅವರು ಹಾಕಿಕೊಟ್ಟ ಕೆಲ ವಿಚಾರಧಾರೆಗಳು ನಾವು ನಮ್ಮ ಜೀವನದಲ್ಲಿ ಪಾಲಿಸುವಂತೆ ಇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಫ್.ಕೆ.ಮುಲ್ಲಾ, ಎಮ್.ಬಿ.ಹಿರೇಮಠ, ಗುರುರಾಜ. ಬಿರಾದಾರ, ಪ್ರವೀಣ ಹಿರೇಮಠ, ಸುವರ್ಣಾ ಹಿರೇಮಠ, ಎ.ವಾಯ್.ಖರಾಬಿ,ಎಸ್.ವಿ.ಭೋವಿ, ಎಸ್.ಕೆ.ಜಂಗಲಗಿ, ಕೆ.ಆರ್.ವಾಲೀಕಾರ, ಎಮ್.ಎಸ್.ಗುಡಿಮನಿ ಹಾಗೂ ಬಿ.ಆರ್. ನಾಟೀಕಾರ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment
