ಕೊಲ್ಹಾರ: ಸಮಾಜದಲ್ಲಿ ಬದುಕುವ ಪ್ರತಿಯೊಬ್ಬನ ಜೀವನದ ಆದಿಯಿಂದ ಅಂತ್ಯದ ತನಕ ಸದ್ವಿಚಾರ ಸದ್ಗುಣಗಳು ನ್ಯಾಯಮಾರ್ಗ ಸತ್ಯದ ದಾರಿಯಲ್ಲಿ ಜೀವನ ಸಾಗಿಸಬೇಕಾದರೆ ಹೆತ್ತ ತಾಯಿಯ ಸಂಸ್ಕಾರ ಗುರುವಿನ ಮಾರ್ಗದರ್ಶನ ಬಹು ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಬೇಲೂರು ಹಾಗೂ ಕೊಲ್ಹಾರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ಹೇಳಿದರು.
ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನದ ಆವರಣದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಹಮ್ಮಿಕೊಂಡಿದ್ದ ಧರ್ಮ ಸಭೆಯ ಸಾನಿಧ್ಯವಹಿಸಿ ಮಾತನಾಡುತ್ತಿದ್ದರು.
ಇಂದಿನ ದಿನಮಾನಗಳಲ್ಲಿ ಯುವ ಸಮೂಹ ಚಿಕ್ಕ ವಯಸ್ಸಿನಲ್ಲಿಯೇ ದುಶ್ಚಟಗಳಿಗೆ ಬಲಿಯಾಗಿ ಬೇಡದ ವಿಷಯಗಳಿಗೆ ತಲೆಹಾಕಿ ಬೆಟ್ಟಿಂಗದಂತಹ ಕ್ರೂರ ಚಟದ ವ್ಯಾಮೋಹಕ್ಕೆ ಒಳಗಾಗಿ ಸಾಲ ಸೂಲ ಮಾಡಿ ಪಾಲಕರಿಗೆ ಹೊರೆಯಾಗಿ ಕೊನೆಗೊಮ್ಮೆ ತಮ್ಮ ಶರೀರವನ್ನು ಕಳೆದುಕೊಳ್ಳುವಂತಹ ಹೀನ ಮನಸ್ಥಿತಿಯತ್ತ ಸಾಗುತ್ತಿರುವದು ಅತ್ಯಂತ ಖೇದಕರ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.
ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ ಮಾನವನ ಜೀವಿತಾವಧಿಯಲ್ಲಿ ಕಲೆ ಸಾಹಿತ್ಯ ಕ್ರೀಡೆ ವ್ಯಾಯಾಮ ಹಾಡುಗಾರಿಕೆ ಯಾವುದಾದರೊಂದು ಮನಸ್ಸಿಗೆ ಆನಂದ ಕೊಡುವ ಸಾರ್ವಜನಿಕ ಜೀವನದಲ್ಲಿ ಹೆಸರು ತರುವ ಉತ್ತಮ ಹವ್ಯಾಸದಲ್ಲಿ ನಾವುಗಳು ಬದುಕನ್ನು ಸಾಗಿಸಿದಾಗ ಜೀವನ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ ಹಲವಾರು ವಾಹಿಣಿಗಳಲ್ಲಿ ಇಂದು ಹೊಸ ಹೊಸತನದ ಕಲಾವಿದರನ್ನು ನಾಡಿಗೆ ಪರಿಚಯಿಸುತ್ತಿರುವದು ಉತ್ತಮ ಬೆಳವಣಿಗೆ ಅದರಂತೆ ವಿಜಯ ವ್ಹಾಯ್ಸ್ ತಂಡದವರು ಗಾಯನ ಲೋಕದ ಹೊಸ ಪ್ರತಿಭೆಗಳಿಗಾಗಿ ವಿಜಯಪೂರ ಜಿಲ್ಲಾ ಆಡಿಷನ್ ಕೊಲ್ಹಾರ ಪಟ್ಟಣದಲ್ಲಿ ಹಮ್ಮಿಕೊಂಡಿರುವದು ಮೆಚ್ಚುವಂತಹ ವಿಷಯವಾಗಿದೆ ಎಂದರು.
ದ್ಯಾಮವ್ವದೇವಿ ದೇವಸ್ಥಾನ ಸೇವಾ ಸಮೀತಿ ಹಾಗೂ ವಿಜಯ ವ್ಹಾಯ್ಸ್ ಆಪ್ ಕರ್ನಾಟಕ ತಂಡದವರು ಹಮ್ಮಿಕೊಂಡಿದ್ದ ಸಿಂಗಿಂಗ್ ಕಾಂಪಿಟೇಷನ್ ಮೆಘಾ ಆಡಷನ್‌ನಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಹಲವಾರು ಎಲೆ ಮರೆಯ ಗಾಯನ ಪ್ರತಿಭೆಗಳು ತಮ್ಮ ಹಾಡುಗಾರಿಕೆಯ ಮೂಲಕ ಮನರಂಜನೆಯನ್ನು ಒದಗಿಸಿರುವದು ಪ್ರೇಕ್ಷಕರ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಸುಮಾರು ೪೦೦ ಜನ ಮುತೈದೆಯರು ಉಡಿ ತುಂಬಿಸಿಕೊಂಡರು.
ಈ ಸಂದರ್ಬದಲ್ಲಿ ಚಿನ್ನಪ್ಪ ಗಿಡ್ಡಪ್ಪಗೋಳ, ಶರಣಬಸವ ಬಿಕೆ, ಮಲ್ಲಪ್ಪ ಈ ಗಣಿ, ಮಲ್ಲಿಕಾರ್ಜುನ ಬೆಳ್ಳುಬ್ಬಿ, ಬಸವರಾಜ ಹರಪನಹಳ್ಳಿ, ಹರ್ಷದ ಅಲಿ, ಕಸ್ತೂರಿ ಬೆಳ್ಳುಬ್ಬಿ, ಸುಮಿತ್ರಾ ಶೀಲವಂತ, ರೇಣುಕಾ ಹುಚ್ಚಪ್ಪಗೋಳ, ರೂಪಾ ನಾಮದೇವ ಪವಾರ, ಬಸವ್ವ ಗೋಕಾಂವಿ, ರೇಣುಕಾ ಹೂಗಾರ, ಭಾರತಿ ರಮೇಶ ಗಣಿ, ಸಾವಿತ್ರಿ ಈರಯ್ಯ ಮಠಪತಿ, ಅನೇಕರು ಅತಿಥಿಗಳಾಗಿ ಆಗಮಿಸಿದ್ದರು.
ಬಿಕೆ ಶರಣಬಸವ ಪ್ರಾಸ್ತಾವಿಕವಾಗಿ ಮಾತನಾಡಿದರು, ಜ್ಯೋತಿ ಕೊಟ್ಟಗಿ, ಕವಿತಾ ಮುದಕವಿ ಉಡಿ ತುಂಬುವ ಹಾಗೂ ಗಾಯನ ಸ್ಪರ್ದೆಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಪರಶುರಾಮ.ಬ.ಗಣಿ ಸ್ವಾಗತಿಸಿ, ನಿರೂಪಿಸಿದರು.
Subscribe to Updates
Get the latest creative news from FooBar about art, design and business.
ಸತ್ಯದ ದಾರಿಯಲ್ಲಿ ಜೀವನ ಸಾಗಿಸಲು ಗುರುವಿನ ಮಾರ್ಗದರ್ಶನ ಮುಖ್ಯ
Related Posts
Add A Comment
