ಬಸವನಬಾಗೇವಾಡಿ: ತಾಲೂಕಿನ ಡೋಣೂರು ಗ್ರಾಮದ ಕಟ್ಟೀಮನಿ ಹಿರೇಮಠದ ಗುರು ಮರುಳಸಿದ್ದೇಶ್ವರ ಜಾತ್ರಾ ರಥೋತ್ಸವ, ಹಜರತ್ ಸುಲೇಮಾನ್ ಉರುಸು ಮತ್ತು ಚೌಡಮ್ಮದೇವಿ ಜಾತ್ರಾ ಮಹೋತ್ಸವ ಜೂ. ೬ ರಿಂದ ೭ ರವರೆಗೆ ಜರುಗಲಿದೆ.
ಜೂ.೬ ರಂದು ಬೆಳಗ್ಗೆ ೭ ಗಂಟೆಗೆ ಷಟ್ಸ್ಥಲ ಧ್ವಜಾರೋಹಣವನ್ನು ಸಿದ್ದನಗೌಡ ಪಾಟೀಲ ನೆರವೇರಿಸುವರು. ಬೆಳಗ್ಗೆ ೮ ಗಂಟೆಗೆ ಕುಂಭಾಭಿಷೇಕ ಹಾಗೂ ಸಂಗಮೇಶವರ ಲಿಂಗದ ಎಣ್ಣೆ ಮಜ್ಜನ ಮತ್ತು ರುದ್ರಾಭಿಷೇಕ, ಸಂಜೆ ೪.೩೦ ಗಂಟೆಗೆ ಚೌಡಮ್ಮದೇವಿ ಜಾತ್ರಾಮಹೋತ್ಸವ ಹಾಗೂ ಹಜರತ್ ಸುಲೇಮಾನ ಗಂಧಲೇಪನ, ರಾತ್ರಿ ೮ ಗಂಟೆಗೆ ಸಂಗಮೇಶ್ವರ ದೀಪ ಸ್ಥಂಭದ ದೀಪ ಬೆಳಗಿಸುವದು, ಮದ್ದುಸುಡುವುದು ಹಾಗೂ ಅಗ್ನಿಪುಟು ಕಾರ್ಯಕ್ರಮ ಜರುಗಲಿದೆ. ನಂತರ ನಡೆಯುವ ಭಾವೈಕ್ಯ ಧರ್ಮ ಸಮಾರಂಭ ಹಾಗೂ ಕಲಬುರಗಿ ಶರಣಬಸವೇಶ್ವರ ಪುರಾಣ ಮಹಾಮಂಗಲ ಕಾರ್ಯಕ್ರಮದ ಸಾನಿಧ್ಯವನ್ನು ಜಾಲಹಳ್ಳಿಯ ಡಾ.ಜಯಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಅಧ್ಯಕ್ಷತೆಯನ್ನು ಚಿಮ್ಮಲಗಿಯ ಸಿದ್ದರೇಣುಕ ಶಿವಾಚಾರ್ಯ ಸ್ವಾಮೀಜಿ ವಹಿಸುವರು.ಕೆರೂರಿನ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಇಂಗಳೇಶ್ವರದ ಬೃಂಗೀಶ್ವರಲಿಂಗ ಶಿವಾಚಾರ್ಯ ಸ್ವಾಮೀಜಿ, ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಕೊಣ್ಣೂರಿನ ಡಾ.ಶಿವಾನಂದ ದೇವರು, ಪ್ರವಚನಕಾರ ಶಿವಾನಂದೀಶ್ವರ ಶಾಸೀಜಿ ಸಮ್ಮುಖ ವಹಿಸುವರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟಿಸುವರು. ಮುಖ್ಯಅತಿಥಿಗಳಾಗಿ ಡೋಣೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನುಗೌಡ ಪಾಟೀಲ, ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಗೊಲ್ಲಾಳಪ್ಪ ಕೆರುಟಗಿ ಆಗಮಿಸುವರು.
ಜೂ.೭ ರಂದು ಬೆಳಗ್ಗೆ ೧೦ ಗಂಟೆಗೆ ಅಭಿನಂದನಾ ಗೌರವ, ಸಾಮೂಹಿಕ ವಿವಾಹ ಹಾಗೂ ಅಗ್ನಿಶಮನ ಕಾರ್ಯಕ್ರಮ ಜರುಗಲಿದೆ. ಸಾನಿಧ್ಯವನ್ನು ಸಿಂದಗಿಯ ಡಾ.ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ, ಅಧ್ಯಕ್ಷತೆಯನ್ನು ಬಂಥನಾಳದ ವೃಷಭಲಿಂಗ ಶಿವಯೋಗಿ ಸ್ವಾಮೀಜಿ ವಹಿಸುವರು. ಬೆಂಗಳೂರಿನ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಗುಳೇದಗುಡ್ಡದ ಡಾ.ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ತಡವಲಗಾದ ರಾಯಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಸಬಿನಾಳದ ಸಿದ್ದರಾಮ ಶಿವಯೋಗಿ ಸ್ವಾಮೀಜಿ, ಶಿರಶ್ಯಾಡದ ಮುರುಘೇಂದ್ರ ಶಿವಾಚಾರ್ಯ ಸ್ವಾಮೀಜಿ, ಕೂಡ್ಲಿಗಿಯ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ಪುರ್ತಗೇರಿಯ ಕೈಲಾಸಲಿಂಗ ಶಿವಾಚಾರ್ಯ ಸ್ವಾಮೀಜಿ, ಕವಲಗಿಯ ಅಭಿನವ ಸಿದ್ದರಾಮೇಶ್ವರ ಸ್ವಾಮೀಜಿ ಸಮ್ಮುಖ ವಹಿಸುವರು. ಅತಿಥಿಗಳಾಗಿ ಸಚಿವ ಶಿವಾನಂದ ಪಾಟೀಲ, ಸಂಸದ ರಮೇಶ ಜಿಗಜಿಣಗಿ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಹಣಮಂತ ನಿರಾಣಿ, ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮುಖಂಡರಾದ ಸೋಮನಗೌಡ ಪಾಟೀಲ, ಅಣ್ಣಾಸಾಹೇಬಗೌಡ ಪಾಟೀಲ, ಬೀರಪ್ಪ ಸಾಸನೂರ, ಶಂಕರಗೌಡ ಪಾಟೀಲ, ಪ್ರಭುಸ್ವಾಮಿ ಹಿರೇಮಠ ಆಗಮಿಸುವರು.
ಮಧ್ಯಾನ್ಹ ೧೨ ಗಂಟೆಗೆ ಶ್ರೀಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರಿಂದ ಅಗ್ನಿಶಮನ ನೆರವೇರಿದ ನಂತರ ಭಕ್ತರಿಗೆ ಮಹಾಪ್ರಸಾದ ಕಾರ್ಯಕ್ರಮ ನೆರವೇರಲಿದೆ. ಸಂಜೆ ೪ ಗಂಟೆಗೆ ಗುರು ಮರುಳಸಿದ್ದೇಶ್ವರ ರಥೋತ್ಸವಕ್ಕೆ ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಬಳ್ಳಾರಿಯ ಕಲ್ಯಾಣ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಸಂಜೆ ೬ ಗಂಟೆಗೆ ಸಾಂಸ್ಕ್ರತಿಕ ರಸಮಂಜರಿ ಹಾಗೂ ಭರತನಾಟ್ಯ ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಜಾತ್ರಾಮಹೋತ್ಸವದಲ್ಲಿ ಸದ್ಭಕ್ತರು ಭಾಗವಹಿಸಿ ಗುರುಕೃಪೆಗೆ ಪಾತ್ರರಾಗಬೇಕೆಂದು ಕಟ್ಟೀಮನಿ ಹಿರೇಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

