Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ವಿಜಯ ಪತಾಕೆ ವಿಜಯಪುರ: ತೀವ್ರ ಕುತೂಹಲ ಕೆರಳಿಸಿದ್ದ ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ರಮೇಶ ಜಿಗಜಿಣಗಿ ಭರ್ಜರಿ ಗೆಲುವಿನ ನಗೆ ಬೀರಿದ್ದು, ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಪ್ರೊ.ರಾಜು ಆಲಗೂರ ಅವರನ್ನು ೭೫೭೭೮ ಮತಗಳ ಅಂತರದಿಂದ ಸೋಲಿಸಿ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ.ರಮೇಶ ಜಿಗಜಿಣಗಿ ಅವರಿಗೆ ೬೬೯೦೫೫ ಮತಗಳನ್ನು ಪಡೆದರೆ, ಕಾಂಗ್ರೆಸ್ ಪಕ್ಷದ ಪ್ರೊ.ರಾಜು ಆಲಗೂರ ಅವರಿಗೆ ೫೯೩೨೭೭ ಮತಗಳನ್ನು ಪಡೆದುಕೊಂಡರು. ಕೆಆರ್‌ಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಗಣಪತಿ ರಾಠೋಡ ಹಂಜಗಿ ಅವರಿಗೆ ೭೬೫೨, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಿಂದ ಸ್ಪರ್ಧೆ ಮಾಡಿದ ಜಿತೇಂದ್ರ ಕಾಂಬಳೆ ಅವರಿಗೆ ೧೬೦೫, ಎಸ್‌ಯುಸಿಐ ಪಕ್ಷದಿಂದ ಸ್ಪರ್ಧೆ ಮಾಡಿದ ನಾಗಜ್ಯೋತಿ ಡಿ.ಎಂ. ಅವರಿಗೆ ೨೩೭೫, ರಾಜಕುಮಾರ ಅಪ್ಪಾಸಾಹೇಬ ಹೊನಕಟ್ಟಿ ಅವರಿಗೆ ೧೭೮೪, ರಾಮಜಿ ಯಮನಪ್ಪ ಬುದ್ಧಪ್ರಿಯಾ ಅವರಿಗೆ ೨೪೦೮, ಭೋವಿ ತಾರಾಬಾಯಿ ಅವರಿಗೆ ೪೩೪೨ ಮತಗಳು ಪಡೆದುಕೊಂಡಿದ್ದಾರೆ.ಒಟ್ಟು ೨೨ ಸುತ್ತುಗಳಲ್ಲಿ ಮತ ಎಣಿಕೆ ನಡೆದಿದ್ದು,…
ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿಜಯಪುರ ಲೋಕಸಭೆ ಮೀಸಲು ಮತಕ್ಷೇತ್ರದಿಂದ ಸಂಸದ ರಮೇಶ ಜಿಗಜಿಣಗಿ ಅವರು ಪುನರಾಯ್ಕೆಯಾಗುತ್ತಿದ್ದಂತೆ ಜೆಡಿಎಸ್ ಪಕ್ಷದಿಂದ ಪಟಾಕ್ಷಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ, ಸಂಭ್ರಮಾಚರಣೆ ಮಾಡಲಾಯಿತು.ಬಸವೇಶ್ವರ ವೃತ್ತದಿಂದ ಬಸ್ ನಿಲ್ದಾಣದವರೆಗೆ ಎತ್ತಿನ ಚಕ್ಕಡಿಯಲ್ಲಿ ಮುಖಂಡರಾದ ಅಪ್ಪುಗೌಡ ಪಾಟೀಲ, ಜಗದೀಶ ಕೊಟ್ರಶೆಟ್ಟಿ , ಬಿ.ಕೆ.ಕಲ್ಲೂರ ಸೇರಿದಂತೆ ಇತರರನ್ನು ನಿಲ್ಲಿಸಿ ಕಾರ್ಯಕರ್ತರು ಜಯಘೋಷ ಹಾಕುತ್ತಾ ಮೆರವಣಿಗೆ ಮೂಲಕ ತೆರಳಿ ಪುನಃ ಬಸವೇಶ್ವರ ವೃತ್ತಕ್ಕೆ ಮೆರವಣಿಗೆ ಬಂದ ನಂತರ ಜರುಗಿದ ವಿಜಯೋತ್ಸವದಲ್ಲಿ ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ ಮನಗೂಳಿ, ಜೆಡಿಎಸ್ ತಾಲೂಕಾಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಮಾತನಾಡಿ, ಈ ಸಲ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದೊಂದಿಗೆ ಪಕ್ಷದ ವರಿಷ್ಠರು ಮೈತ್ರಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ವಿಜಯಪುರ ಲೋಕಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಗೆಲುವಿಗೆ ಬಿಜೆಪಿ ಪಕ್ಷದೊಂದಿಗೆ ನಿರಂತರವಾಗಿ ಶ್ರಮಿಸಿದ್ದಾರೆ. ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದಾಗಿ ಅವರಿಗೆ ಹೆಚ್ಚಿನ…
ಮುದ್ದೇಬಿಹಾಳ: ತಾಲೂಕಿನ ಕುಂಚಗನೂರು ಗ್ರಾಮದ ಕೃಷ್ಣಾ ನದಿಯ ದಡದಲ್ಲಿ ಅಪರಿಚಿತ ಯುವತಿಯ ಶವವೊಂದು ಪತ್ತೆಯಾಗಿದೆ. ಕೆಂಪು ಬಣ್ಣದ ಉಡುಪು ಧರಸಿದ ಅಂದಾಜು ೫೮ ವಯಸ್ಕ ಯುವತಿ ಎಲ್ಲಿಂದಲೋ ತೇಲಿ ಬಂದಿರಬಹುದು ಎಂದು ಶಂಕಿಸಲಾಗಿದೆ.ಘಟನಾ ಸ್ಥಳಕ್ಕೆ ಪಿಎಸ್‌ಐ ಸಂಜೀವ ತಿಪರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುದ್ದೇಬಿಹಾಳ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ರವಿವಾರ ರಾತ್ರಿ ಅಬ್ಬರದ ಗುಡುಗು ಸಿಡಿಲು ಸೇರಿದಂತೆ ಸುರಿದ ಭಾರೀ ಮಳೆ ಕೆಲ ರೈತರಲ್ಲಿ ಮಂದಹಾಸ ಮೂಡಿಸಿದರೆ ಇನ್ನೂ ಕೆಲವರಿಗೆ ಹಾನಿಯಾಗಿ ಬೇಸರವನ್ನುಂಟು ಮಾಡಿದೆ.ತಾಲೂಕಿನ ಕುಂಟೋಜಿ ಗ್ರಾಮದ ಮಲ್ಲನಗೌಡ ಬಿರದಾರ, ಢವಳಗಿ ಗ್ರಾಮದ ಭೀಮಪ್ಪ ಮಾದರ ಹಾಗೂ ಗುರುಲಿಂಗಪ್ಪ ಮೂಲಿಮನಿ ಮತ್ತು ಚೊಂಡಿ ಗ್ರಾಮದ ಯಂಕವ್ವ ಪಾಟೀಲ ಎಂಬುವವರಿಗೆ ಸೇರಿದ್ದ ಮನೆಗಳು ಕುಸಿದು ಬಿದ್ದು ಭಾಗಶಃ ಹಾನಿಯಾಗಿವೆ.ಅಡವಿ ಹುಳಗಬಾಲ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದ್ದು ಅಡವಿ ಹುಲಗಬಾಳದಿಂದ ಹುಲಗಬಾಳ ತಾಂಡಾ ಮಧ್ಯೆ ಬರುವ ಸೇತುವೆ ಒಡೆದಿದೆ. ಸಧ್ಯ ತಾಂಡಾಗೆ ತೆರಳಲು ರಸ್ತೆ ಸಂಪರ್ಕ ಕಡಿತಗೊಂಡ ಬಗ್ಗೆ ಮೂಲಗಳಿಂದ ತಿಳಿದು ಬಂದಿದೆ.
ಸಿಂದಗಿ: ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಸಾಯನಶಾಸ್ತç ವಿಷಯದ ಬೋಧನಾ ಕಾರ್ಯಕ್ಕೆ ಎಂ.ಎಸ್‌ಸಿ, ಬಿ.ಇಡಿ ಪದವಿ ಪೂರ್ಣಗೊಳಿಸಿದ ರಾಸಾಯನಶಾಸ್ತ್ರ ವಿಷಯದ ಅತಿಥಿ ಉಪನ್ಯಾಸಕರ ಅರ್ಜಿ ಅಹ್ವಾನಿಸಲಾಗಿದೆ ಎಂದು ಪ್ರಾಚಾರ್ಯ ಎನ್.ಆರ್.ಗಂಗನಳ್ಳಿ ತಿಳಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ೮೮೬೭೭೦೮೨೬೭/೯೯೦೨೮೧೨೬೩೦/೯೭೩೧೩೨೫೦೦೬ ಗೆ ಸಂಪರ್ಕಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಂದಗಿ: ಮಕ್ಕಳ ಕಲಿಕೆಯಲ್ಲಿ ಶಿಕ್ಷಕರ ಪಾತ್ರ ಮುಖ್ಯ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅಂತಹ ಮಕ್ಕಳಿಗೆ ಸಮಾಜದಲ್ಲಿ ಶಿಕ್ಷಣವಂತರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರದ್ದು ಎಂದು ನಿವೃತ್ತ ಎಎಸ್‌ಐ ಎಂ.ಎಂ ಹಂಗರಗಿ ಹೇಳಿದರು.ಪಟ್ಟಣದ ಸದ್ಗುರು ಪತ್ತಿನ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಸಿಂದಗಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಅಂತಹ ಪಾತ್ರ ನಿರ್ವಹಿಸುತ್ತಿರುವ ಈರ್ವರು ಶಿಕ್ಷಕರಿಗೆ ಅಭಿನಂದನೆಗಳು. ಇನ್ನೂ ಎತ್ತರೋತ್ತರವಾಗಿ ಪ್ರಶಸ್ತಿಗೆ ಭಾಜನರಾಗಲಿ ಎಂದು ಶುಭ ಹಾರೈಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಮಾತನಾಡಿ, ಪರಮಪೂಜ್ಯ ಚೆನ್ನವೀರ ಸ್ವಾಮೀಜಿಯರ ಕೃಪಾಶೀರ್ವಾದೊಂದಿಗೆ ಸಂಸ್ಥೆಯ ಚೇರಮನ್ನರಾದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಾದದೊಂದಿಗೆ ಈ ಹುದ್ದೆ ದೊರೆತಿದೆ. ಗೆಳೆಯರ ಸಹಕಾರದಿಂದ ಕಾಲೇಜಿನ ಸರ್ವಾಂಗೀಣ ಬೆಳವಣಿಗೆ ಮಾಡುವೆ ಎಂದರು.ಬಳಿಕ ಜ್ಯೋತಿ ಬಾಪುಲೆ ಪ್ರಶಸ್ತಿಗೆ ಭಾಜನರಾದ ಬಸವರಾಜ ಕುರನಳ್ಳಿ, ಸಂತೋಷ ಹಿರೇಮಠ ಬಿ.ಎ.ಪಾಟೀಲ ಮಾತನಾಡಿದರು.ಈ ಸಂದರ್ಭದಲ್ಲಿ ಶಿವಕುಮಾರ ಸಬರದ, ಚಂದ್ರಶೇಖರ ನಾಗರಬೆಟ್ಟ, ಬಸವರಾಜ ಜಮಾದಾರ,…
ವಿಜಯಪುರ: ನಗರದಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಬಾಲ ಕಾರ್ಮಿಕ ಮತ್ತು ಕಿಶೋರ ಕಾಯ್ದೆಯಡಿ ಸೋಮವಾರ ಅನಿರೀಕ್ಷಿತ ಹಠಾತ್ ದಾಳಿ ಕೈಗೊಂಡು 4 ಮಕ್ಕಳ ರಕ್ಷಣೆಯನ್ನು ಮಾಡಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಲಾಗಿದೆ.ಅಲ್ಲದೆ ಬಾಲಕಾರ್ಮಿಕ ಪದ್ಧತಿಯ ಕುರಿತು ನಗರದಲ್ಲಿ ಪ್ರತಿಯೊಂದು ಸಂಸ್ಥೆಗಳಿಗೆ ಭೇಟಿ ನೀಡಿ ಅರಿವು ಮೂಡಿಸಲಾಯಿತು.ಕರಪತ್ರ ಹಾಗೂ ಸ್ಟೀಕರ್ ಮೂಲಕ ಸಾರ್ವಜನಿಕರಲ್ಲಿ ಹಾಗೂ ಅಂಗಡಿ, ವಿವಿಧ ಸಂಸ್ಥೆಗಳ ಮಾಲೀಕರಲ್ಲಿ ಜನಜಾಗೃತಿಯನ್ನು ಮೂಡಿಸಲಾಯಿತು.ದಾಳಿಯಲ್ಲಿ ಕಲಂ 17 ರಡಿ ನೇಮಕಗೊಂಡ ವಿವಿಧ ಇಲಾಖೆಯ ಅಧಿಕಾರಿಗಳಾದ S G ಖೈನೂರ, ಜಗದೇವಿ ಸಜ್ಜನ, ನೀಲಮ್ಮ ಖೇಡಗಿ, S S ಅಳ್ಳಗಿ, L S ಬಿರಾದಾರ, C M ಕೋರೆ, V K ಹೊಸಮನಿ, B P ಜಕ್ಕನಗೌಡರ, ಗಿರೀಶ, ಮಹೇಶ ಚವ್ಹಾಣ, ಸರಸ್ವತಿ ಔಟಿ ಹಾಗೂ ಸಚಿನ ಕಟ್ಟಿ ಈ ದಾಳಿಯಲ್ಲಿ ಹಾಜರಿದ್ದರು.
ಸಿಂದಗಿ: ಮಕ್ಕಳು ತರಗತಿಗಳನ್ನು ಆಸಕ್ತಿಯಿಂದ ಆಲಿಸಿ ತಂದೆ-ತಾಯಿಗಳ ಕನಸನ್ನು ಸಾಕಾರಗೊಳಿಸಬೇಕು ಎಂದು ಗಬಸಾವಳಗಿ ಗ್ರಾಮದ ಹಿರಿಯ ಶಿವನಗೌಡ ಬಿರಾದಾರ ಹೇಳಿದರು.ಪಟ್ಟಣದ ಶ್ರೀ ಸಮರ್ಥ ವಿದ್ಯಾವಿಕಾಸ ವಿವಿದೊದ್ದೇಶಗಳ ಸಂಸ್ಥೆಯ ಪ್ರೇರಣಾ ಶಿಶು ನಿಕೇತನ, ವಿದ್ಯಾ ನಿಕೇತನ ಪ್ರಾಥಮಿಕ ಶಾಲೆ ಹಾಗೂ ಪ್ರೇರಣಾ ಪ್ರಾಥಮಿಕ ಶಾಲೆಗಳ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳು ಶಿಸ್ತು ಸಂಯಮದಿಂದ ಶಾಲೆಗೆ ಆಗಮಿಸಿ ನಿಮ್ಮ ಶೈಕ್ಷಣಿಕ ಅಭ್ಯಾಸದೆಡೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕಿವಿ ಮಾತು ಹೇಳಿದರು.ಈ ವೇಳೆ ಮಕ್ಕಳಿಗೆ ಪುಷ್ಪ, ಪಠ್ಯ ಪುಸ್ತಕ, ಸಿಹಿ ವಿತರಣೆ ಮಾಡಿ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ನಿರ್ದೇಶಕ ಪಿ.ಡಿ. ಕುಲಕರ್ಣಿ, ಮುಖ್ಯಗುರುಮಾತೆ ಎಮ್.ಪಿ.ಬುಕ್ಕಾ ಸೇರಿದಂತೆ ಶಾಲೆಯ ಬೊಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಚಡಚಣ: ದಿ. ಎಂ.ಆರ್.ಜಹಾಗೀರದಾರ ಜನ್ಮ ಶತಮಾನೋತ್ಸವ ಸಮಾರಂಭ ಚಡಚಣ: ಸ್ಥಳೀಯ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ, ಸಂಗಮೇಶ್ವರ ಮಾಧ್ಯಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದ ದಿ. ಎಂ.ಆರ್.ಜಹಾಗೀರದಾರ ಇವರ ಜನ್ಮ ಶತಮಾನೋತ್ಸವವನ್ನು ಅತ್ಯಂತ ಸಡಗರದಿಂದ ಸಸಿಗೆ ನೀರುಣಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂ. ಶಿ.ಸಂಸ್ಥೆ ನಿರ್ದೇಶಕ ಬಸವರಾಜ ಯಂಕಂಚಿ ಅವರು, ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಎಂದಿಗೂ ಹುಸಿಯಾಗುವುದಿಲ್ಲ ಎನ್ನುವ ಹಾಗೆ ದಿ.ಜಹಾಗೀರದಾರ ಸರ್ ತಮ್ಮ ಶಿಷ್ಯರಿಗೆ ಕಲಿಸಿದ ಪಾಠ ಎಂದಿಗೂ ಮರೆಯಲಾಗದು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸತತವಾಗಿ ಪ್ರಯತ್ನ ಪಡುತ್ತಿದ್ದರು. ಅಲ್ಲದೆ ತಮ್ಮ ಜೀವನದುದ್ದಕ್ಕೂ ಹತ್ತನೇಯ ವರ್ಗದ ಮಕ್ಕಳಿಗೆ ಪುಕ್ಕಟೆಯಾಗಿ ಕ್ಲಾಸ್ ಹೇಳಿದರು. ಪ್ರತಿಯೊಬ್ಬ ಮಗುವಿನ ಮೇಲೆ ಅತೀ ಸೂಕ್ಷ್ಮವಾಗಿ ಲಕ್ಷ ವಹಿಸುತ್ತಿದ್ದರು ಅಲ್ಲದೆ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಸಹ ಮಾಡುತ್ತಿದ್ದರು. ಅವರು ವರ್ಗ ಕೋಣೆಗೆ ಬಂದರೆ ಮಕ್ಕಳು ಅತ್ಯಂತ ಶಾಂತ ರೀತಿಯಿಂದ ಕುಳಿತುಕೊಳ್ಳುತ್ತಿದ್ದರು. ದಿ. ಜಹಾಗೀರದಾರ ಸರ್ ಮುಂಬೈ ಕರ್ನಾಟಕದ ಸರ್ಕಾರದಲ್ಲಿ ಪಿಎಸ್ಐ…
ಮುದ್ದೇಬಿಹಾಳ: ಪಟ್ಟಣದ ಯುವಕರ ಪಾರಿವಾಳ ಸಂಘದ ವತಿಯಿಂದ ನಡೆದ ಪಾರಿವಾಳ ಹಾರಾಟ ಸ್ಪರ್ದೆಯ ಸೀಸನ್-೪ ನಲ್ಲಿ ಪಟ್ಟಣದ ಕೆರೆ ಹತ್ತಿರದ ಶಿರೋಳ ರಸ್ತೆಯ ಸಂತೋಷ ತಾಳಿಕೋಟೆ ಸಾಕಿರುವ ಪಾರಿವಾಳ ಪ್ರಥಮ ಬಹುಮಾನ ಪಡೆದು ಬೀಗಿತು.ಪಟ್ಟಣದ ಪಾರಿವಾಳ ಯುವಕರ ಸಂಘದ ವತಿಯಿಂದ ಪಾರಿವಾಳ ಹಾರಾಟ ಸ್ಪರ್ದೆಯನ್ನು ಆಯೋಜಿಸಲಾಗಿತ್ತು. ಒಟ್ಟು ೯ಪಾರಿವಾಳಗಳ ಮಾಲಿಕರು ಹೆಸರು ನೊಂದಾಯಿಸಿದ್ದರು. ಈ ಪೈಕಿ ೩ಗಂಟೆಗೂ ಅಧಿಕ ಕಾಲ ಹಾರುವ ಮೂಲಕ ಸಂತೋಷ ಅವರು ಸಾಕಿದ್ದ ಪಾರಿವಾಳ ಪ್ರಥಮ ಬಹುಮಾನವನ್ನು ತನ್ನ ಮುಡಿಗೇರಿಸಿಕೊಂಡರೆ, ೨ಗಂಟೆಗೂ ಅಧಿಕ ಕಾಲ ಹಾರಾಡಿದ ಪಟ್ಟಣದ ಆಶ್ರಯ ಕಾಲೋನಿಯ ನಿವಾಸಿ ಯಾಸೀನ ಮಕಾನದಾರ ಸಾಕಿದ ಪಾರಿವಾಳ ದ್ವಿತೀಯ, ಜಮೀರ ಇನಾಮದಾರ ಅವರು ಸಾಕಿದ್ದ ಪಾರಿವಾಳ ತೃತೀಯ ಬಹುಮಾನವನ್ನು ಪಡೆದುಕೊಂಡವು.ಪಟ್ಟಣದ ಖಾಸಗಿ ಬೇಕರಿಯೊಂದರಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಕಮೀಟಿಯವರು ರವಿವಾರ ಹಮ್ಮಿಕೊಂಡಿದ್ದರು. ಬಹುಮಾನ ಪಡೆದ ಪಾರಿವಾಳಗಳ ಮಾಲಿಕರಿಗೆ, ಬಹುಮಾನಗಳ ಜೊತೆಗೆ ಟ್ರೂಫಿ ನೀಡಿ ಗೌರವಿಸಿದರೆ, ಸ್ಪರ್ದೆಗೆ ಪ್ರಥಮ ಬಹುಮಾನದ ಮೊತ್ತ ೫೦೦೧ ರೂಗಳನ್ನು ನೀಡಿ ಪ್ರೋತ್ಸಾಹಿಸಿದ ಗುರುರಾಜ…
