ಮುದ್ದೇಬಿಹಾಳ: ಪಟ್ಟಣದ ಯುವಕರ ಪಾರಿವಾಳ ಸಂಘದ ವತಿಯಿಂದ ನಡೆದ ಪಾರಿವಾಳ ಹಾರಾಟ ಸ್ಪರ್ದೆಯ ಸೀಸನ್-೪ ನಲ್ಲಿ ಪಟ್ಟಣದ ಕೆರೆ ಹತ್ತಿರದ ಶಿರೋಳ ರಸ್ತೆಯ ಸಂತೋಷ ತಾಳಿಕೋಟೆ ಸಾಕಿರುವ ಪಾರಿವಾಳ ಪ್ರಥಮ ಬಹುಮಾನ ಪಡೆದು ಬೀಗಿತು.
ಪಟ್ಟಣದ ಪಾರಿವಾಳ ಯುವಕರ ಸಂಘದ ವತಿಯಿಂದ ಪಾರಿವಾಳ ಹಾರಾಟ ಸ್ಪರ್ದೆಯನ್ನು ಆಯೋಜಿಸಲಾಗಿತ್ತು. ಒಟ್ಟು ೯ಪಾರಿವಾಳಗಳ ಮಾಲಿಕರು ಹೆಸರು ನೊಂದಾಯಿಸಿದ್ದರು. ಈ ಪೈಕಿ ೩ಗಂಟೆಗೂ ಅಧಿಕ ಕಾಲ ಹಾರುವ ಮೂಲಕ ಸಂತೋಷ ಅವರು ಸಾಕಿದ್ದ ಪಾರಿವಾಳ ಪ್ರಥಮ ಬಹುಮಾನವನ್ನು ತನ್ನ ಮುಡಿಗೇರಿಸಿಕೊಂಡರೆ, ೨ಗಂಟೆಗೂ ಅಧಿಕ ಕಾಲ ಹಾರಾಡಿದ ಪಟ್ಟಣದ ಆಶ್ರಯ ಕಾಲೋನಿಯ ನಿವಾಸಿ ಯಾಸೀನ ಮಕಾನದಾರ ಸಾಕಿದ ಪಾರಿವಾಳ ದ್ವಿತೀಯ, ಜಮೀರ ಇನಾಮದಾರ ಅವರು ಸಾಕಿದ್ದ ಪಾರಿವಾಳ ತೃತೀಯ ಬಹುಮಾನವನ್ನು ಪಡೆದುಕೊಂಡವು.
ಪಟ್ಟಣದ ಖಾಸಗಿ ಬೇಕರಿಯೊಂದರಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಕಮೀಟಿಯವರು ರವಿವಾರ ಹಮ್ಮಿಕೊಂಡಿದ್ದರು. ಬಹುಮಾನ ಪಡೆದ ಪಾರಿವಾಳಗಳ ಮಾಲಿಕರಿಗೆ, ಬಹುಮಾನಗಳ ಜೊತೆಗೆ ಟ್ರೂಫಿ ನೀಡಿ ಗೌರವಿಸಿದರೆ, ಸ್ಪರ್ದೆಗೆ ಪ್ರಥಮ ಬಹುಮಾನದ ಮೊತ್ತ ೫೦೦೧ ರೂಗಳನ್ನು ನೀಡಿ ಪ್ರೋತ್ಸಾಹಿಸಿದ ಗುರುರಾಜ ಮದರಿ, ದ್ವಿತೀಯ ಬಹುಮಾನದ ಮೊತ್ತ ೩೦೦೧ರೂ ಗಳನ್ನು ನೀಡಿದ ಆಫ್ರಿದಿ ಭಾಯಾಗತ್ ರನ್ನ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಪ್ರಮುಖರಾದ ಯಾಸೀನ ಅತ್ತಾರ, ಪ್ರವೀಣ ಸಂಗಮ, ಕಮೀಟಿಯ ಅಧ್ಯಕ್ಷ ಸೊಹೇಲ ಮುದ್ದೇಬಿಹಾಳ, ಉಪಾಧ್ಯಕ್ಷ ಲಕ್ಷ್ಮಣ ತಾಳಿಕೋಟೆ, ಇಂಮ್ರಾನ ಮುಲ್ಲಾ, ಬಂದು ಮ್ಯಾಗೇರಿ, ಸಚೀನ ನಾಲತವಾಡ, ನವೀದ ಡೋಂಗರಗಾಂ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

