ಸಿಂದಗಿ: ಮಕ್ಕಳ ಕಲಿಕೆಯಲ್ಲಿ ಶಿಕ್ಷಕರ ಪಾತ್ರ ಮುಖ್ಯ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅಂತಹ ಮಕ್ಕಳಿಗೆ ಸಮಾಜದಲ್ಲಿ ಶಿಕ್ಷಣವಂತರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರದ್ದು ಎಂದು ನಿವೃತ್ತ ಎಎಸ್‌ಐ ಎಂ.ಎಂ ಹಂಗರಗಿ ಹೇಳಿದರು.
ಪಟ್ಟಣದ ಸದ್ಗುರು ಪತ್ತಿನ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಸಿಂದಗಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಅಂತಹ ಪಾತ್ರ ನಿರ್ವಹಿಸುತ್ತಿರುವ ಈರ್ವರು ಶಿಕ್ಷಕರಿಗೆ ಅಭಿನಂದನೆಗಳು. ಇನ್ನೂ ಎತ್ತರೋತ್ತರವಾಗಿ ಪ್ರಶಸ್ತಿಗೆ ಭಾಜನರಾಗಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಮಾತನಾಡಿ, ಪರಮಪೂಜ್ಯ ಚೆನ್ನವೀರ ಸ್ವಾಮೀಜಿಯರ ಕೃಪಾಶೀರ್ವಾದೊಂದಿಗೆ ಸಂಸ್ಥೆಯ ಚೇರಮನ್ನರಾದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಾದದೊಂದಿಗೆ ಈ ಹುದ್ದೆ ದೊರೆತಿದೆ. ಗೆಳೆಯರ ಸಹಕಾರದಿಂದ ಕಾಲೇಜಿನ ಸರ್ವಾಂಗೀಣ ಬೆಳವಣಿಗೆ ಮಾಡುವೆ ಎಂದರು.
ಬಳಿಕ ಜ್ಯೋತಿ ಬಾಪುಲೆ ಪ್ರಶಸ್ತಿಗೆ ಭಾಜನರಾದ ಬಸವರಾಜ ಕುರನಳ್ಳಿ, ಸಂತೋಷ ಹಿರೇಮಠ ಬಿ.ಎ.ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಶಿವಕುಮಾರ ಸಬರದ, ಚಂದ್ರಶೇಖರ ನಾಗರಬೆಟ್ಟ, ಬಸವರಾಜ ಜಮಾದಾರ, ಪ್ರಶಾಂತ ಬಮ್ಮಣ್ಣಿ, ಎಸ್.ಎಂ.ಬತಗೌಡ, ಪ್ರಕಾಶ ಲೋಣಿ, ಕುಮಾರ ಬಮ್ಮಣ್ಣಿ, ಕಂಟೆಪ್ಪ ಹಡಪದ, ಭಗವಂತ್ರಾಯ ಡೋರನಲ್ಲಿ, ಎಂ.ಎಸ್.ಡಂಬಳ, ಪ್ರಭುಗೌರ ಸಾರವಾಡ, ಮಹಾಂತೇಶ ನೂಲಾನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

