ಸಿಂದಗಿ: ಮಕ್ಕಳು ತರಗತಿಗಳನ್ನು ಆಸಕ್ತಿಯಿಂದ ಆಲಿಸಿ ತಂದೆ-ತಾಯಿಗಳ ಕನಸನ್ನು ಸಾಕಾರಗೊಳಿಸಬೇಕು ಎಂದು ಗಬಸಾವಳಗಿ ಗ್ರಾಮದ ಹಿರಿಯ ಶಿವನಗೌಡ ಬಿರಾದಾರ ಹೇಳಿದರು.
ಪಟ್ಟಣದ ಶ್ರೀ ಸಮರ್ಥ ವಿದ್ಯಾವಿಕಾಸ ವಿವಿದೊದ್ದೇಶಗಳ ಸಂಸ್ಥೆಯ ಪ್ರೇರಣಾ ಶಿಶು ನಿಕೇತನ, ವಿದ್ಯಾ ನಿಕೇತನ ಪ್ರಾಥಮಿಕ ಶಾಲೆ ಹಾಗೂ ಪ್ರೇರಣಾ ಪ್ರಾಥಮಿಕ ಶಾಲೆಗಳ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳು ಶಿಸ್ತು ಸಂಯಮದಿಂದ ಶಾಲೆಗೆ ಆಗಮಿಸಿ ನಿಮ್ಮ ಶೈಕ್ಷಣಿಕ ಅಭ್ಯಾಸದೆಡೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಈ ವೇಳೆ ಮಕ್ಕಳಿಗೆ ಪುಷ್ಪ, ಪಠ್ಯ ಪುಸ್ತಕ, ಸಿಹಿ ವಿತರಣೆ ಮಾಡಿ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ನಿರ್ದೇಶಕ ಪಿ.ಡಿ. ಕುಲಕರ್ಣಿ, ಮುಖ್ಯಗುರುಮಾತೆ ಎಮ್.ಪಿ.ಬುಕ್ಕಾ ಸೇರಿದಂತೆ ಶಾಲೆಯ ಬೊಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

