ಮುದ್ದೇಬಿಹಾಳ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ರವಿವಾರ ರಾತ್ರಿ ಅಬ್ಬರದ ಗುಡುಗು ಸಿಡಿಲು ಸೇರಿದಂತೆ ಸುರಿದ ಭಾರೀ ಮಳೆ ಕೆಲ ರೈತರಲ್ಲಿ ಮಂದಹಾಸ ಮೂಡಿಸಿದರೆ ಇನ್ನೂ ಕೆಲವರಿಗೆ ಹಾನಿಯಾಗಿ ಬೇಸರವನ್ನುಂಟು ಮಾಡಿದೆ.
ತಾಲೂಕಿನ ಕುಂಟೋಜಿ ಗ್ರಾಮದ ಮಲ್ಲನಗೌಡ ಬಿರದಾರ, ಢವಳಗಿ ಗ್ರಾಮದ ಭೀಮಪ್ಪ ಮಾದರ ಹಾಗೂ ಗುರುಲಿಂಗಪ್ಪ ಮೂಲಿಮನಿ ಮತ್ತು ಚೊಂಡಿ ಗ್ರಾಮದ ಯಂಕವ್ವ ಪಾಟೀಲ ಎಂಬುವವರಿಗೆ ಸೇರಿದ್ದ ಮನೆಗಳು ಕುಸಿದು ಬಿದ್ದು ಭಾಗಶಃ ಹಾನಿಯಾಗಿವೆ.
ಅಡವಿ ಹುಳಗಬಾಲ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದ್ದು ಅಡವಿ ಹುಲಗಬಾಳದಿಂದ ಹುಲಗಬಾಳ ತಾಂಡಾ ಮಧ್ಯೆ ಬರುವ ಸೇತುವೆ ಒಡೆದಿದೆ. ಸಧ್ಯ ತಾಂಡಾಗೆ ತೆರಳಲು ರಸ್ತೆ ಸಂಪರ್ಕ ಕಡಿತಗೊಂಡ ಬಗ್ಗೆ ಮೂಲಗಳಿಂದ ತಿಳಿದು ಬಂದಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

