Author: editor.udayarashmi@gmail.com

ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ಅವ್ಯವಹಾರ ನಡೆದ ಆರೋಪ | ಇಚ್ಚೆಯಿಂದ ರಾಜೀನಾಮೆ ಹೇಳಿಕೆ ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ಅವ್ಯವಹಾರ ನಡೆದ ಆರೋಪ ಕೇಳಿ ಬಂದಿರುವ ಹಿನ್ನೆಲೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.ಗುರುವಾರ ಸಂಜೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನನ್ನ ಮೇಲೆ ಯಾರೂ ಒತ್ತಡ ಹಾಕಿಲ್ಲ. ನನ್ನ ಆತ್ಮ ಸಾಕ್ಷಿಯಾಗಿ, ಸ್ವ ಇಚ್ಚೆಯಿಂದ ರಾಜೀನಾಮೆ ನೀಡಲು ಮುಂದಾಗಿದ್ದೇನೆ. ಸಂಜೆ 7:30ಕ್ಕೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.ಪಕ್ಷ, ಸರ್ಕಾರಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಎಸ್‌ಐಟಿ ನಿಷ್ಪಕ್ಷಪಾತವಾಗಿ ಪ್ರಕರಣದ ತನಿಖೆ ನಡೆಸುತ್ತಿದೆ. ನಾನು ಮಂತ್ರಿ ಸ್ಥಾನದಲ್ಲಿದ್ದರೆ ತನಿಖೆಗೆ ತೊಂದರೆಯಾಗಬಹುದು. ಹಾಗಾಗಿ, ಈಗ ರಾಜೀನಾಮೆ ನೀಡಿ ಆರೋಪ ಮುಕ್ತನಾದ ಬಳಿಕ ಸಚಿವ ಸ್ಥಾನಕ್ಕೆ ಮರಳುತ್ತೇನೆ ಎಂದಿದ್ದಾರೆ.“ಆತ್ಮಹತ್ಯೆ ಮಾಡಿಕೊಂಡಿರುವ ನಿಗಮದ ಅಧೀಕ್ಷರಾಗಿದ್ದ ಚಂದ್ರಶೇಖರನ್ ಅವರ ಡೆತ್ ನೋಟ್‌ನಲ್ಲಿ ನಿಮ್ಮ ಹೆಸರಿದೆ ಎಂದು…

Read More

ಕೊಲ್ಹಾರ: ಇವತ್ತಿನ ಕಾಲ ಘಟ್ಟದಲ್ಲಿ ಮಾನವರೆಲ್ಲರೂ ಹವಾಮಾನ ಬದಲಾವಣೆಯನ್ನು ಎದುರಿಸಿ ಶುದ್ದೀಕರಿಸಿದ ಗಾಳಿಯನ್ನು ಸೇವಿಸಬೇಕಾದರೆ ರೋಗಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಸಸಿಗಳನ್ನು ನೆಟ್ಟು ಪರಿಸರವನ್ನು ಸಂರಕ್ಷಣೆ ಮಾಡುವದು ಅತ್ಯಂತ ಅವಶ್ಯಕವಾಗಿದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.ಪಟ್ಟಣದ ವಿಶ್ವಭಾರತಿ ವಿದ್ಯಾವರ್ದಕ ಸಂಸ್ಥೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ, ಶಾಲಾ ಪ್ರಾರಂಭೊತ್ಸವ, ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕೋರುವ ಶುಭ ಸಮಾರಂಭ ಹಾಗೂ ಎಸ್.ಕೆ.ಬೆಳ್ಳುಬ್ಬಿಯವರ ೭೧ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಒತ್ತಡದ ಸಮಯದಲ್ಲಿ ಮನಸ್ಸುಗಳನ್ನು ಹಗುರಗೊಳಿಸುವ ಹಳ್ಳಿಯ ನಗರಗಳ ಬೀದಿಗಳನ್ನು ತಂಪಾಗಿಸಲು ಪ್ರವಾಹ ಮತ್ತು ಜಲ ಮಾಲಿನ್ಯದಿಂದ ಸಂರಕ್ಷಣೆ ಮಾಡಲು ವೃಕ್ಷಗಳ ಬೆಳವಣಿಗೆ ಆಗಬೇಕಾದರೆ ಪ್ರತಿಯೊಬ್ಬರು ನಮ್ಮ ಭೂಮಿಯನ್ನು ಉಳಿಸಿ ಗಿಡ ಮರವನ್ನು ನೆಟ್ಟು ಮುಂದಿನ ಪೀಳಿಗೆಗೆ ಸುಂದರವಾದ ಪರಿಸರವನ್ನು ನಿರ್ಮಾಣ ಮಾಡಿಕೊಡೋಣ ಎಂದರು.ನ್ಯಾಯವಾದಿ ಶರಣಬಸವ ಬಿಕೆ ಮಾತನಾಡಿ, ಮಕ್ಕಳ ಶೈಕ್ಷಣಿಕ ಕಲಿಕೆಯು ಸ್ವಚ್ಚಂದವಾದ ನಿಸರ್ಗದ ಮಡಿಲಿನಲ್ಲಿ ಕಲಿಯುವಂತಾದರೆ ಮಕ್ಕಳಲ್ಲಿ ಪರಿಸರದ ಬಗ್ಗೆ ಆಸಕ್ತಿಯನ್ನು ಮೂಡಿಸಿ ವೈಜ್ಞಾನಿಕ ಯುಗದಲ್ಲಿಯೂ ಜ್ಞಾನದ ಬುತ್ತಿಯನ್ನು ಪಡೆಯುವಾಗ ನೀರು,…

Read More

ಚಡಚಣ: ಬಾದಮಿ ಅಮಾವಾಸ್ಯೆಯ ನಿಮಿತ್ತ ರೇವತಗಾಂವ ಗ್ರಾಮದ ಅದಿದೇವ ಶ್ರೀ ಮಲಕಾರಸಿದ್ಧ ದೇವರ ಜಾತ್ರೆಯ ನಿಮಿತ್ತ ಗುರುವಾರದಂದು ನಸುಕಿನ ಜಾವ ೦೫ ಗಂಟೆಗೆ ರುದ್ರಾಭೀಷೇಕ ಪೂಜೆ ನೆರವೇರಿತು. ನಂತರ ಭಕ್ತರಿಂದ ದೀರ್ಘದಂಡ ನಮಸ್ಕಾರವು ನೆರವೇರಿತು. ೧೦ ಗಂಟೆಯಿಂದ ಸಾಯಂಕಾಲ ೪ ಗಂಟೆಯವರೆಗೆ ಗ್ರಾಮದ ಮಾಳಿಂಗರಾಯ ಡೊಳ್ಳಿನ ಗಾಯನ ಸಂಘದ ಮಾಳಪ್ಪ ಹಕ್ಕೆ ಹಾಗೂ ಮಲಕಾರಸಿದ್ದ ಡೊಳ್ಳಿನ ಗಾಯನ ಸಂಘದ ಮಲ್ಕಪ್ಪ ಪೂಜಾರಿಯವರು ಮತ್ತು ಸಂಗಡಿಗರಿಂದ ಸುಪ್ರಸಿದ್ಧ ಡೊಳ್ಳಿನ ಪದಗಳು ಜರುಗಿದವು.ಪಲ್ಲಕ್ಕಿಗಳ ಭೇಟಿ ಸಂಭ್ರಮ: ಗ್ರಾಮದ ಶ್ರೀ ರೇವಣಸಿದ್ದೇಶ್ವರ ದೇವಾಸ್ಥಾನದ ಮುಂಭಾಗ ಸಾಯಂಕಾಲ ೫:೩೦ ಗಂಟೆಗೆ ಗಿರಗಾಂವದ ಅಮೋಘಸಿದ್ಧ, ಬಾಲಗಾಂವದ ಅಮೋಘಸಿದ್ಧ, ಗೋವಿಂದಪುರದ ಲಕ್ಕವ್ವದೇ, ರೇವತಗಾಂವದ ಮಲಕಾರಸಿದ್ಧ ಹಾಗೂ ಲಗಮವ್ವದೇವಿ ದೇವರುಗಳ ಪಲ್ಲಕ್ಕಿಗಳ ಭೇಟಿಯು ಅದ್ಧೂರಿಯಾಗಿ ನೆರವೇರಿತು. ಈ ವೇಳೆಯಲ್ಲಿ ಭಕ್ತರು ಪಲ್ಲಕ್ಕಿಗಳ ಮೇಲೆ ಹೂ, ಭಂಡಾರ, ಚುರುಮುರಿ, ಶೇಂಗಾ, ಖಾರೀಕ್, ಬದಾಮಿ ಹಾರಿಸಿ ಭಕ್ತರು ತಮ್ಮ ತಮ್ಮ ಹರಕೆಗಳನ್ನು ತೀರಿಸಿದರು.ಈ ಭೇಟಿ ಕಾರ್ಯಕ್ರಮವನ್ನು ನೋಡಲು ಮಹಾರಾಷ್ಟ್ರ ಸೇರಿದಂತೆ ಕರ್ನಾಟಕದ ವಿವಿಧ ಗ್ರಾಮಗಳ…

Read More

ಮುದ್ದೇಬಿಹಾಳ: ಆಸ್ತಿ ವಿಚಾರವಾಗಿ ವ್ಯಕ್ತಿಯ ಹತ್ಯೆ ನಡೆದಿರುವ ಘಟನೆ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ವರದಿಯಾಗಿದೆ.ಬಾಲಪ್ಪ ಅಮರಪ್ಪ ಕ್ಷತ್ರಿ (೪೫) ಕೊಲೆಗೀಡಾದ ದುರ್ದೈವಿ. ಜಮೀನಿನ ಬದುವಿಗೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆ ಎನ್ನಲಾಗಿದೆ.ಮೊದಲಿನಿಂದಲೂ ಜಮೀನಿನ ವಿಷಯದಲ್ಲಿ ಕಲಹಗಳಿದ್ದು ಗುರುವಾರವೂ ಜಮೀನಿನ ಬದುವಿಗೆ ಸಂಬಂಧಿಸಿದಂತೆ ಪುನಃ ಗಲಾಟೆಗಳಾಗಿವೆ. ಮಾತಿಗೆ ಮಾತು ಬೆಳೆದು ಅತಿರೇಕಕ್ಕೇರಿ ಮಾರಕಾಸ್ತçಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಮೃತ ದೇಹದ ತಲೆಯ ಭಾಗ ಸೊಂಟದ ಭಾಗದಲ್ಲಿ ಹೆಚ್ಚು ಪೆಟ್ಟು ಬಿದ್ದಿದ್ದು ಅತೀಯಾದ ರಕ್ತಸ್ರಾವವಾಗಿದೆ. ಮೃತ ದೇಹದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.ಪಿಎಸ್‌ಐ ಸಂಜೀವ ತಿಪರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Read More

ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದ ಆರಾಧ್ಯದೈವ ವರದಾನಿ ಲಕ್ಕಮ್ಮದೇವಿ ಜಾತ್ರಾಮಹೋತ್ಸವ ಬುಧವಾರ ಆರಂಭಗೊಂಡಿದ್ದು. ಜಾತ್ರಾ ಆರಂಭದ ದಿನ ಬುಧವಾರ ಬೆಳಗ್ಗೆ ಸಕಲ ವಾದ್ಯ ವೈಭವದೊಂದಿಗೆ ಏಳು ಪಾಂಡವರ ಗಿಡಕ್ಕೆ ಹೋಗಿ ಲಕ್ಕಮ್ಮದೇವಿಯನ್ನು ಬರಮಾಡಿಕೊಳ್ಳಲಾಯಿತು. ನಂತರ ವಿವಿಧ ಗ್ರಾಮಗಳಿಂದ ಬರುವ ಒಂಭತ್ತು ಪಲ್ಲಕ್ಕಿಗಳನ್ನು ಗ್ರಾಮಕ್ಕೆ ಬರಮಾಡಿಕೊಳ್ಳಲಾಯಿತು. ಜಾತ್ರೆಯಂಗವಾಗಿ ಬೆಳಗ್ಗೆ ಪಗಡಿ ಪಂದ್ಯಾವಳಿ ಜರುಗಿತು. ರಾತ್ರಿ ಬ್ಯಾಲ್ಯಾಳ ಕೃಷ್ಣ ಪಾರಿಜಾತ ಮಂಡಳಿಯಿಂದ ಶ್ರೀಕೃಷ್ಣ ಪಾರಿಜಾತ ಬಯಲಾಟ ಪ್ರದರ್ಶನಗೊಂಡಿತು.ಜಾತ್ರೆಯ ಎರಡನೇ ದಿನ ಗುರುವಾರದಂದು ಬೆಳಗ್ಗೆ ಶ್ರೀದೇವಿಯ ಗಂಗಸ್ಥಲ ಪೂಜೆ ಮುಗಿಸಿದ ನಂತರ ಸಕಲ ವಾದ್ಯವೈಭವ, ಡೊಳ್ಳಿನ ವಾಲಗದೊಂದಿಗೆ ಹನ್ನೊಂದು ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಲಕ್ಕಮ್ಮದೇವಿ ದೇವಸ್ಥಾನಕ್ಕೆ ಶ್ರೀದೇವಿಯನ್ನು ಕರೆತರಲಾಯಿತು. ನಂತರ ಗ್ರಾಮದೇವತೆ ಉಡಿ ತುಂಬಲಾಯಿತು. ಪಲ್ಲಕ್ಕಿ ಉತ್ಸವದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಹನ್ನೊಂದು ಪೂಜಾರಿಗಳಿಂದ ಹೇಳಿಕೆಗಳು (ಶಿವವಾಣಿ) ಜರುಗಿದವು. ಪೂಜಾರಿಗಳಿಂದ ಹಿಂಗಾರು ಮುಂಗಾರು ಮಳೆ ಉತ್ತಮ. ಹತ್ತಿ,ತೊಗರಿ ಬೆಳೆ ಉತ್ತಮವಾಗಿ ಬೆಳೆಯುತ್ತದೆ. ಹಿಂಗಾರಿನಲ್ಲಿ ಜೋಳ ಮುಂದಾಗುತ್ತದೆ ಸೇರಿದಂತೆ ಅನೇಕ ಹೇಳಿಕೆಗಳು ಕೇಳಿಬಂದವು. ಪಲ್ಲಕ್ಕಿ…

Read More

ಬಸವನಬಾಗೇವಾಡಿ: ಗ್ರಾಮೀಣ ಪ್ರದೇಶದಲ್ಲಿ ಮಕ್ಕಳನ್ನು ಉನ್ನತ ವಿದ್ಯಾಭ್ಯಾಸ ಮಾಡಿಸಲು ಮುಂದಾಗುತ್ತಿರುವುದು ಅತ್ಯುತ್ತಮ ಬೆಳವಣಿಗೆ. ಇದರಿಂದಾಗಿ ದೇಶದಲ್ಲಿ ಅನಕ್ಷರಸ್ಥರ ಸಂಖ್ಯೆ ಕಡಿಮೆಯಾಗಿ ದೇಶದ ಪ್ರಗತಿಗೆ ಪೂರಕವಾಗುತ್ತದೆ ಎಂದು ಡೋಣೂರ ಕಟ್ಟೀಮನಿ ಹಿರೇಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಡೋಣೂರ ಗ್ರಾಮದ ಕಟ್ಟೀಮನಿ ಹಿರೇಮಠದ ಗುರು ಮರುಳಸಿದ್ದೇಶ್ವರ,ಚೌಡಮ್ಮದೇವಿ ಜಾತ್ರಾಮಹೋತ್ಸವ ಹಾಗೂ ಹಜರತ್ ಸುಲೇಮಾನ ಉರುಸು ಅಂಗವಾಗಿ ಹಮ್ಮಿಕೊಂಡಿರುವ ಕಲಬರುಗಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಬುಧವಾರ ಸಂಜೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು, ಇಂದು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಪ್ರತಿಭಾವಂತರಾಗಿ ನಾಡಿಗೆ ಉತ್ತಮ ಸೇವೆ ಸಲ್ಲಿಸುವಂತಾಗಬೇಕು. ವಿದ್ಯಾರ್ಥಿಗಳು ತಮ್ಮ ಅಧ್ಯಯನದೊಂದಿಗೆ ಉತ್ತಮ ಸಂಸ್ಕಾರ, ಸಂಸ್ಕ್ರತಿಯನ್ನು ಮೈಗೂಡಿಸಿಕೊಳ್ಳಬೇಕು. ಗುರು-ಹಿರಿಯರಿಗೆ ಗೌರವ ನೀಡಬೇಕು. ಸದಾಚಾರ ವ್ಯಕ್ತಿತ್ವ ಮೈಗೂಡಿಸಿಕೊಳ್ಳಬೇಕೆಂದರು.ಕಾರ್ಯಕ್ರಮದಲ್ಲಿ ಎಸ್ಎಸ್ಎಸ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. ೮೫ ಕ್ಕಿಂತ ಹೆಚ್ಚು ಅಂಕ ಪಡೆದ ೩೦ ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು , ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಯೋಗ ಪ್ರದರ್ಶನದ…

Read More

ಕೊಲ್ಹಾರ: ತಾಲೂಕಿನ ಕೂಡಗಿ ಎನ್‌ಟಿಪಿಸಿ ಸಿಎಸ್‌ಆರ್ ಅಡಿಯಲ್ಲಿ ಬಾಲಕಿಯರಿಗೆ ಸಬಲೀಕರಣ ಅಭಿಯಾನ-೨೦೨೪ ಕಾರ್ಯಕ್ರಮವನ್ನು ಎನ್‌ಟಿಪಿಸಿಯ ಮಹಾಕ್ತಿನಗರ ಟೌನ್‌ಶಿಪ್‌ನಲ್ಲಿ ಗುರುವಾರದಂದು ಮುಂಜಾನೆ ಪ್ರಾರಂಭವಾಯಿತು.ಈ ಕಾರ್ಯಕ್ರಮದಲ್ಲಿ ಎನ್‌ಟಿಪಿಸಿ ಕೂಡಗಿಯ ಪಲಾನುಭವಿ ಗ್ರಾಮಗಳಾದ ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ ಮತ್ತು ಮುತ್ತಗಿ ಗ್ರಾಮಗಳ ಸರಕಾರಿ ಹಾಗೂ ಸರಕಾರಿ ಅನುಧಾನಿತ ಪ್ರಾಥಮಿಕ ಶಾಲೆಗಳ ಐದನೇ ತರಗತಿಯಿಂದ ತೇರ್ಗಡೆಯಾದ ೪೦ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಮೂಲಭೂತ ಶಿಕ್ಷಣ, ಆರೋಗ್ಯ, ಮತ್ತು ಆತ್ಮ ರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಮೂಲಕ ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಲು ಬಾಲಕಿಯರ ಜೀವನದಲ್ಲಿ ಮಹತ್ವಪೂರ್ಣ ಬದಲಾವಣೆಯಾಗಲು ಕೆವಾ ಕಟ್ಟಡದಲ್ಲಿ ಬಾಲಕಿಯರಿಗೆ ಸಬಲೀರಕರಣ ಕುರಿತು ಅಭಿಯಾನ -೨೦೨೪ ನ್ನು ನಾಲ್ಕು ವಾರಗಳ ಅವಧಿಯ ನಂತರ ಮುಕ್ತಾಯ ಮಾಡಲಾಗುತ್ತದೆ.ಬಾಲಕಿಯರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ಬಾಲಕಿಯರ ಸಬಲೀಕರಣ ಅಭಿಯಾನ ಕಾರ್ಯಕ್ರಮದಲ್ಲಿ ನಮಗೆ ವಿವಿಧ ಕೌಶಲ್ಯಗಳನ್ನು ಅಂದರೆ ಇಂಗ್ಲಿಷ್, ವಿಜ್ಙಾನ, ಕನ್ನಡ, ಗಣಿತ, ಹಿಂದಿ, ಸಾಮಾನ್ಯ ಜ್ಞಾನ, ಕರಾಟೆ, ಯೋಗ, ನೃತ್ಯ, ಸಂಗೀತ, ಚಿತ್ರಕಲೆ, ಆರೋಗ್ಯ, ಆತ್ಮ ಸುರಕ್ಷಾ ಹಾಗೂ ಜೀವನ…

Read More

ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದ ಎಲ್ಲಾ ಬಸ್ ಘಟಕಗಳಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿರವರು ಸಸಿಗಳನ್ನು ನೆಟ್ಟು ಚಾಲನೆ ಮಾಡಿದರು.ಅಪರ ಜಿಲ್ಲಾಧಿಕಾರಿ (ಪ್ರಭಾರಿ) ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎ.ಬಿರಾದಾರ, ವಿಭಾಗೀಯ ಲೆಕ್ಕಪತ್ರಾಧಿಕಾರಿ ಮಹಾಂತೇಶ ಕರಾಳೆ ಹಾಗೂ ತಾಂತ್ರಿಕ ಶಿಲ್ಪಿಗಳಾದ ಅಯಾಜ, ಘಟಕ ವ್ಯವಸ್ಥಾಪಕರು ಎ.ಬಿ.ಹೊಗಾರ, ಕೇಂದ್ರ ಬಸ್ ನಿಲ್ದಾಣದ ಸಹಾಯಕ ಸಂಚಾರ ವ್ದಯವಸ್ಥಾಕ ಜೆ.ಕೆ.ಹುಗ್ಗೆನ್ನವರ, ಜಯವಂತ ಅಂಗಡಿ ಹಾಗೂ ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ವಿಜಯಪುರ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವಿಜಯಪುರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿಜಯಪುರ, ಜಿಲ್ಲಾ ಪೋಲಿಸ್ ಇಲಾಖೆ ಮತ್ತು ಬಿ.ಎಲ್.ಡಿ.ಇ. ಸಂಸ್ಥೆ ವಿಜಯಪುರ ಇವರ ಸಂಯುಕ್ತಾ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ಯವಾಗಿ ಸಸಿ ನೇಡುವ ಕಾರ್ಯಕ್ರಮದಲ್ಲಿ ರಮೇಶ ಎಸ್. ಕಡಪಟ್ಟಿ, ಪರಿವೀಕ್ಷಣಾಧಿಕಾರಿಗಳು, ಸರಕಾರಿ ವೀಕ್ಷಣಾಲಯ ವಿಜಯಪುರ ರವರು ಮಾತನಾಡಿ, ಜೂನ ತಿಂಗಳಿನಲ್ಲಿ ನೆಟ್ಟಿರುವ ಸಸಿಗಳು ಮರವಾಗಿವೆ. ಅದೇ ರೀತಿ ನಮ್ಮ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗದವರು ನೆಟ್ಟಿರುವ ಸಸಿಗಳನ್ನು ಮಗುವಿನಂತೆ ಗಾಳಿ ಮಳೆ ರಭಸದಲ್ಲಿ ಬೀಳದಂತೆ ಮುನ್ನೆಚ್ಚರಿಕೆ ವಹಿಸಿರುವ ಕಾರಣಕ್ಕಾಗಿ ಇಂದು ಕಾನೂನಿನ ಸೌರಕ್ಷಣೆಗೆ ಒಳಗಾದ ಮಕ್ಕಳಿಗೆ ಹಾಗೂ ಪಾಲಕರಿಗೆ ನೆರಳಾಗಿವೆ. ಇದು ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೆಮ್ಮೆ ತರುವ ಸಂಗತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕಾರ್ಯಕ್ರಮದ ಉದ್ಘಾಟಕರಾಗಿ ಮಲ್ಲಿಕಾರ್ಜುನ ಅಪ್ಪಾಸಾಹೆಬ ಅಂಬಲಿ ಗೌರವಾನ್ವಿತ ಪ್ರಿನ್ಸಿಪಲ್ ಸೀನೀಯರ್ ಸಿವಿಲ್ ಜಡ್ಜ್, ಸಿ.ಜೆ.ಎಮ್. ಮತ್ತು ಸದಸ್ಯ ಕಾರ್ಯದರ್ಶಿಗಳು ಕಾನೂನು ಸೇವಾ ಪ್ರಾಧಿಕಾರ ವಿಜಯಪುರ ರವರು ಮಾತನಾಡಿ, ಬಸವಾದಿ…

Read More

ವಿಜಯಪುರ: ನಗರದ ಹೊರ ವಲಯದಲ್ಲಿರುವ ಅರಕೇರಿ ಗ್ರಾಮದಲ್ಲಿರುವ ಇಂಡಿಯಾ ರಿಸರ್ವ ಬಟಾಲಿಯನಲ್ಲಿ ಪ್ರತಿವರ್ಷದಂತೆ ಈ ವರ್ಷವು ೨೦೨೪ರ ವಿಶ್ವ ಪರಿಸರ ದಿನವನ್ನು “ಭೂಮಿ ಮರುಸ್ಥಾಪನೆ, ಮರುಭೂಮಿ ಮತ್ತು ಬರ ಸ್ಥಿತಿಸ್ಥಾಪಕತ್ವ” ಎಂಬ ಘೋಷವಾಕ್ಯ ಪ್ರಮುಖ ಆಧಾರ ಸ್ಥಂಭವಾಗಿಟ್ಟುಕೊಡು,ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಎನ್.ಬಿ.ಮೆಳ್ಳೆಗಟ್ಟಿ ಕೆ.ಎಸ್.ಪಿ.ಎಸ್ ಕಮಾಂಡೆಂಟ್ ಐ.ಆರ್.ಬಿ ವಿಜಯಪುರ ರವರು ವಿಶ್ವ ಪರಿಸರ ದಿನ ಕಾರ್ಯಕ್ರಮ ಉಧ್ಘಾಟನೆ ಮಾಡಿ, ಜೈವಿಕ ವೈವಿಧ್ಯತೆ ಹಾಗೂ ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸಲು ಮತ್ತು ಕ್ಷೀಣಿಸಿದ ಪರಿಸರ ವ್ಯವಸ್ಥೆಗಳನ್ನು ಪುನಃ ಸ್ಥಾಪಿಸಲು ಸಾಮೂಹಿಕ ಪ್ರಯತ್ನಗಳಿಗೆ ಕರೆ ನೀಡಿದರು.ಪರಿಸರ ವ್ಯವಸ್ಥೆಯ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸುವ ಮೂಲಕ, ಹವಾಮಾನ ಬದಲಾವಣೆಯಿಂದ ನಾವು ವ್ಯಾಪಕವಾದ ಪರಿಸರ ಸವಾಲುಗಳನ್ನು ಎದುರಿಸಬಹುದು, ಅದ್ದರಿಂದ ಎಲ್ಲರೂ ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಸುಸ್ಥಿರ ಭವಿಷ್ಯವನ್ನು ನಿರ್ಮಿಸುವಲ್ಲಿ ನಾವೆಲ್ಲರೂ ಪಾತ್ರವಹಿಸಬೇಕಾಗಿದೆ. ನಮ್ಮ ಉಸಿರಿಗಾಗಿ ಹಸಿರನ್ನು ಬೆಳೆಸೋಣ, ಪ್ರತಿಯೊಬ್ಬರು ಸಸಿನೆಟ್ಟು ಮರಗಳನ್ನು ಬೆಳೆಸೋಣ ಈ ಭೂಮಿಯನ್ನು ಹಸಿರುಮಯಗೊಳಿಸೋಣ ಎಂದು ತಿಳಿಸಿ ಅಧ್ಯಕ್ಷೀಯ ಭಾಷಣವನ್ನು ಮಾಡಿದರು.ಈ ಕಾರ್ಯಕ್ರದಲ್ಲಿ ಮುಖ್ಯ ಅತಿಥಿಗಳಾಗಿ…

Read More