ಚಡಚಣ: ಬಾದಮಿ ಅಮಾವಾಸ್ಯೆಯ ನಿಮಿತ್ತ ರೇವತಗಾಂವ ಗ್ರಾಮದ ಅದಿದೇವ ಶ್ರೀ ಮಲಕಾರಸಿದ್ಧ ದೇವರ ಜಾತ್ರೆಯ ನಿಮಿತ್ತ ಗುರುವಾರದಂದು ನಸುಕಿನ ಜಾವ ೦೫ ಗಂಟೆಗೆ ರುದ್ರಾಭೀಷೇಕ ಪೂಜೆ ನೆರವೇರಿತು. ನಂತರ ಭಕ್ತರಿಂದ ದೀರ್ಘದಂಡ ನಮಸ್ಕಾರವು ನೆರವೇರಿತು. ೧೦ ಗಂಟೆಯಿಂದ ಸಾಯಂಕಾಲ ೪ ಗಂಟೆಯವರೆಗೆ ಗ್ರಾಮದ ಮಾಳಿಂಗರಾಯ ಡೊಳ್ಳಿನ ಗಾಯನ ಸಂಘದ ಮಾಳಪ್ಪ ಹಕ್ಕೆ ಹಾಗೂ ಮಲಕಾರಸಿದ್ದ ಡೊಳ್ಳಿನ ಗಾಯನ ಸಂಘದ ಮಲ್ಕಪ್ಪ ಪೂಜಾರಿಯವರು ಮತ್ತು ಸಂಗಡಿಗರಿಂದ ಸುಪ್ರಸಿದ್ಧ ಡೊಳ್ಳಿನ ಪದಗಳು ಜರುಗಿದವು.
ಪಲ್ಲಕ್ಕಿಗಳ ಭೇಟಿ ಸಂಭ್ರಮ: ಗ್ರಾಮದ ಶ್ರೀ ರೇವಣಸಿದ್ದೇಶ್ವರ ದೇವಾಸ್ಥಾನದ ಮುಂಭಾಗ ಸಾಯಂಕಾಲ ೫:೩೦ ಗಂಟೆಗೆ ಗಿರಗಾಂವದ ಅಮೋಘಸಿದ್ಧ, ಬಾಲಗಾಂವದ ಅಮೋಘಸಿದ್ಧ, ಗೋವಿಂದಪುರದ ಲಕ್ಕವ್ವದೇ, ರೇವತಗಾಂವದ ಮಲಕಾರಸಿದ್ಧ ಹಾಗೂ ಲಗಮವ್ವದೇವಿ ದೇವರುಗಳ ಪಲ್ಲಕ್ಕಿಗಳ ಭೇಟಿಯು ಅದ್ಧೂರಿಯಾಗಿ ನೆರವೇರಿತು. ಈ ವೇಳೆಯಲ್ಲಿ ಭಕ್ತರು ಪಲ್ಲಕ್ಕಿಗಳ ಮೇಲೆ ಹೂ, ಭಂಡಾರ, ಚುರುಮುರಿ, ಶೇಂಗಾ, ಖಾರೀಕ್, ಬದಾಮಿ ಹಾರಿಸಿ ಭಕ್ತರು ತಮ್ಮ ತಮ್ಮ ಹರಕೆಗಳನ್ನು ತೀರಿಸಿದರು.
ಈ ಭೇಟಿ ಕಾರ್ಯಕ್ರಮವನ್ನು ನೋಡಲು ಮಹಾರಾಷ್ಟ್ರ ಸೇರಿದಂತೆ ಕರ್ನಾಟಕದ ವಿವಿಧ ಗ್ರಾಮಗಳ ಸಹಸ್ರಾರು ಭಕ್ತರು ಸೇರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

