ಕೊಲ್ಹಾರ: ಇವತ್ತಿನ ಕಾಲ ಘಟ್ಟದಲ್ಲಿ ಮಾನವರೆಲ್ಲರೂ ಹವಾಮಾನ ಬದಲಾವಣೆಯನ್ನು ಎದುರಿಸಿ ಶುದ್ದೀಕರಿಸಿದ ಗಾಳಿಯನ್ನು ಸೇವಿಸಬೇಕಾದರೆ ರೋಗಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಸಸಿಗಳನ್ನು ನೆಟ್ಟು ಪರಿಸರವನ್ನು ಸಂರಕ್ಷಣೆ ಮಾಡುವದು ಅತ್ಯಂತ ಅವಶ್ಯಕವಾಗಿದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ವಿಶ್ವಭಾರತಿ ವಿದ್ಯಾವರ್ದಕ ಸಂಸ್ಥೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ, ಶಾಲಾ ಪ್ರಾರಂಭೊತ್ಸವ, ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕೋರುವ ಶುಭ ಸಮಾರಂಭ ಹಾಗೂ ಎಸ್.ಕೆ.ಬೆಳ್ಳುಬ್ಬಿಯವರ ೭೧ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಒತ್ತಡದ ಸಮಯದಲ್ಲಿ ಮನಸ್ಸುಗಳನ್ನು ಹಗುರಗೊಳಿಸುವ ಹಳ್ಳಿಯ ನಗರಗಳ ಬೀದಿಗಳನ್ನು ತಂಪಾಗಿಸಲು ಪ್ರವಾಹ ಮತ್ತು ಜಲ ಮಾಲಿನ್ಯದಿಂದ ಸಂರಕ್ಷಣೆ ಮಾಡಲು ವೃಕ್ಷಗಳ ಬೆಳವಣಿಗೆ ಆಗಬೇಕಾದರೆ ಪ್ರತಿಯೊಬ್ಬರು ನಮ್ಮ ಭೂಮಿಯನ್ನು ಉಳಿಸಿ ಗಿಡ ಮರವನ್ನು ನೆಟ್ಟು ಮುಂದಿನ ಪೀಳಿಗೆಗೆ ಸುಂದರವಾದ ಪರಿಸರವನ್ನು ನಿರ್ಮಾಣ ಮಾಡಿಕೊಡೋಣ ಎಂದರು.
ನ್ಯಾಯವಾದಿ ಶರಣಬಸವ ಬಿಕೆ ಮಾತನಾಡಿ, ಮಕ್ಕಳ ಶೈಕ್ಷಣಿಕ ಕಲಿಕೆಯು ಸ್ವಚ್ಚಂದವಾದ ನಿಸರ್ಗದ ಮಡಿಲಿನಲ್ಲಿ ಕಲಿಯುವಂತಾದರೆ ಮಕ್ಕಳಲ್ಲಿ ಪರಿಸರದ ಬಗ್ಗೆ ಆಸಕ್ತಿಯನ್ನು ಮೂಡಿಸಿ ವೈಜ್ಞಾನಿಕ ಯುಗದಲ್ಲಿಯೂ ಜ್ಞಾನದ ಬುತ್ತಿಯನ್ನು ಪಡೆಯುವಾಗ ನೀರು, ವಾಯು, ಭೂಮಿಯ ಸಂರಕ್ಷಣೆ ಯಾವ ರೀತಿ ಮಾಡಿಕೊಂಡು ಜೀವನ ಸಾಗಿಸಬೇಕೆನ್ನುವ ಪರಿಕಲ್ಪನೆಯನ್ನು ಶಿಕ್ಷಕರು ಮೂಡಿಸುವಂತಾಗುತ್ತದೆ. ಇಂತಹ ಶಿಕ್ಷಣ ವ್ಯವಸ್ಥೆಯ ಪದ್ದತಿಯನ್ನು ವಿಶ್ವಭಾರತಿ ವಿದ್ಯಾವರ್ಧಕ ಸಂಸ್ಥೆಯ ಆಡಳಿತ ಮಂಡಳಿಯವರು ನಡೆಸಿಕೊಂಡು ಬರುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಬಿ.ಎಸ್.ನಿಂಬಾಳ್ಕರ ಮಾತನಾಡಿ, ಸಂಸ್ಥೆಯ ಅಡಿಯಲ್ಲಿ ಶಿಶುವಿಹಾರದಿಂದ ಪ್ರಾರಂಭವಾಗುವ ಶೈಕ್ಷಣಿಕ ಕಲಿಕೆಯು ನಿಸರ್ಗ ಶಾಲೆಯಾಗಿ ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ವಹಿಸುವ ಬೋಧನೆಯ ಜೊತೆಗೆ ಭರತ ಭೂಮಿಯಲ್ಲಿ ವಿಶ್ವದಲ್ಲಿ ಯಾಬ ವಿದ್ಯೆಯನ್ನು ಕಲಿತರೆ ಅನುಕೂಲವಾಗುತ್ತದೆ ಎನ್ನುವ ಆಧುನಿಕ ಶೈಲಿಯ ಶಿಕ್ಷಣದ ಜೊತೆಗೆ ಗುರುಕುಲ ಮಾದರಿಯ ಶಿಕ್ಷಣವೂ ಕೂಡ ಈ ಶಿಕ್ಷಣ ಸಂಸ್ಥೆಯಲ್ಲಿ ದೊರಕುತ್ತಿದೆ. ಅದರಂತೆ ಔಷಧಿಯ ಗುಣವುಳ್ಳ ಸಸಿಗಳನ್ನು ಬೆಳೆಸಿ ಬರುವ ದಿನಮಾನಗಳಲ್ಲಿ ನೈಸಗಿರ್ಕವಾಗಿ ಸಿಗುವ ಹವಾಮಾನ ದೊರಕಲು ಹಾಗೂ ಮಕ್ಕಳ ಬೆಳವಣಿಗೆಗೆ ಎಲ್ಲ ತರಹದ ಕ್ರೀಡೆಗಳ ಕ್ರೀಡಾಂಗಣಗಳ ನಿರ್ಮಾಣ ಒಂದೇಕಡೆ ಸಿಗುವದರಿಂದ ಈ ಸಂಸ್ಥೆಯಲ್ಲಿ ಸಿಗುವ ಶಿಕ್ಷಣ ಸರ್ವರೀತಿಯಲ್ಲಿ ಅನುಕೂಲಕರವಾಗಿರುತ್ತದೆ ಎಂದು ಪಾಲಕರಿಗೆ ಮನವರಿಕೆ ಮಾಡಿಕೊಟ್ಟರು.
ಕೊಲ್ಹಾರ ಹಿರೇಮಠದ ಚಂದ್ರಶೇಖರಯ್ಯ ಶ್ರೀಗಳು, ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಶೀಲವಂತ ಮಠದ ಕೈಲಾಸನಾಥ ಶ್ರೀಗಳ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಚಿನ್ನಪ್ಪ ಗಿಡ್ಡಪ್ಪಗೋಳ ವಹಿಸಿದ್ದರು. ಅತಿಥಿಗಳಾಗಿ ರಾಮು ಲೇಸಪ್ಪಗೋಳ, ಸಿದ್ರಾಮ ಕಾಖಂಡಕಿ, ಇಸ್ಮಾಯಿಲ್‌ಸಾಬ ತಹಶೀಲ್ದಾರ, ಕಸ್ತೂರಿ ಬೆಳ್ಳುಬ್ಬಿ, ದೀಪಕ ಕುಮಟಾ, ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಬೆಳ್ಳುಬ್ಬಿ, ಪ್ರಾಚಾರ್ಯರಾದ ಅಪ್ಪು ಪತಂಗಿ, ಭುವನೇಶ್ವರಿ ಮರನೂರ, ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಭುವನಾ ಮೇಡಮ್ ಸ್ವಾಗತಿಸಿದರು. ಶಿಕ್ಷಕ ಉಮರ್ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

