ವಿಜಯಪುರ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವಿಜಯಪುರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿಜಯಪುರ, ಜಿಲ್ಲಾ ಪೋಲಿಸ್ ಇಲಾಖೆ ಮತ್ತು ಬಿ.ಎಲ್.ಡಿ.ಇ. ಸಂಸ್ಥೆ ವಿಜಯಪುರ ಇವರ ಸಂಯುಕ್ತಾ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ಯವಾಗಿ ಸಸಿ ನೇಡುವ ಕಾರ್ಯಕ್ರಮದಲ್ಲಿ ರಮೇಶ ಎಸ್. ಕಡಪಟ್ಟಿ, ಪರಿವೀಕ್ಷಣಾಧಿಕಾರಿಗಳು, ಸರಕಾರಿ ವೀಕ್ಷಣಾಲಯ ವಿಜಯಪುರ ರವರು ಮಾತನಾಡಿ, ಜೂನ ತಿಂಗಳಿನಲ್ಲಿ ನೆಟ್ಟಿರುವ ಸಸಿಗಳು ಮರವಾಗಿವೆ. ಅದೇ ರೀತಿ ನಮ್ಮ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗದವರು ನೆಟ್ಟಿರುವ ಸಸಿಗಳನ್ನು ಮಗುವಿನಂತೆ ಗಾಳಿ ಮಳೆ ರಭಸದಲ್ಲಿ ಬೀಳದಂತೆ ಮುನ್ನೆಚ್ಚರಿಕೆ ವಹಿಸಿರುವ ಕಾರಣಕ್ಕಾಗಿ ಇಂದು ಕಾನೂನಿನ ಸೌರಕ್ಷಣೆಗೆ ಒಳಗಾದ ಮಕ್ಕಳಿಗೆ ಹಾಗೂ ಪಾಲಕರಿಗೆ ನೆರಳಾಗಿವೆ. ಇದು ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೆಮ್ಮೆ ತರುವ ಸಂಗತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಮಲ್ಲಿಕಾರ್ಜುನ ಅಪ್ಪಾಸಾಹೆಬ ಅಂಬಲಿ ಗೌರವಾನ್ವಿತ ಪ್ರಿನ್ಸಿಪಲ್ ಸೀನೀಯರ್ ಸಿವಿಲ್ ಜಡ್ಜ್, ಸಿ.ಜೆ.ಎಮ್. ಮತ್ತು ಸದಸ್ಯ ಕಾರ್ಯದರ್ಶಿಗಳು ಕಾನೂನು ಸೇವಾ ಪ್ರಾಧಿಕಾರ ವಿಜಯಪುರ ರವರು ಮಾತನಾಡಿ, ಬಸವಾದಿ ಶರಣರು ಪೂಜ್ಯ ಸಿದ್ದೇಶ್ವರ ಸ್ವಾಮಿಜಿಯವರು ಹುಟ್ಟಿದ ನಾಡು ವಿಜಯಪುರ ಇತಿಹಾಸವನ್ನು ನಿರ್ಮಿಸಿದ ಗೋಲಗುಂಬಜ ಹೊಂದಿದ ಅಂತಹ ಹೆಸರುಳ್ಳ ನಾಡಿನಲ್ಲಿ ಇಂದು ನಾವು ಈ ವಿಶ್ವ ಪರಿಸರದ ದಿನದಂದು ಸಸಿ ನೇಡುವುದರ ಜೊತೆಗೆ ಪರಿಸರ ಉಳಿಸಿ ಬೆಳೆಸುವುದು ಮಹತ್ತರ ಜವಾಬ್ದಾರಿ ನಮ್ಮದಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಬಸವರಾಜ ಯಲಿಗಾರ, ಡಿ.ವಾಯ್.ಎಸ್.ಪಿ,
ಶ್ರೀಕಾಂತ್ ಬಿರಾದಾರ್ ಆಪ್ತ ಸಮಾಲೋಚಕರು ಸರ್ಕಾರಿ ವೀಕ್ಷಣಾಲಯ ವಿಜಯಪುರ, ದೀಪಾಕ್ಷಿ ಜಾನಕಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಿಜಯಪುರ ರವರು ಮಾತನಾಡಿದರು.
ಶ್ರೀಕಾಂತ್ ಬಿರಾದಾರ್ ಆಪ್ತ ಸಮಾಲೋಚಕರು ಸರ್ಕಾರಿ ವೀಕ್ಷಣಾಲಯ ವಿಜಯಪುರ ಇವರು ನಿರೂಪಿಸಿದರು. ಸುನೀಲ ಕಳಸನ್ನವರ. ಗೃಹಪಾಲಕರು, ಸರ್ಕಾರಿ ವೀಕ್ಷಣಾಲಯ ವಿಜಯಪುರ, ರಾಜೇಶ ಉಕ್ಕಲಿ ವಂದನಾರ್ಪಣೆ ನೆರವೇರಿಸಿದರು.
ರಮೇಶ ಕಡಪಟ್ಟಿ, ಪರಿವೀಕ್ಷಣಾಧಿಕಾರಿಗಳು ಸರಕಾರಿ ವೀಕ್ಷಣಾಲಯ, ರಮೇಶ ಜಿ. ಕುಲಕರ್ಣಿ ಸದಸ್ಯರು ಬಾಲ ನ್ಯಾಯ ಮಂಡಳಿ, ಪರಮೇಶ್ವರ ಕವಟಗಿ, ಸಿ.ಪಿ.ಐ. ಎಸ್.ಪಿ. ಆಫೀಸ್ ವಿಜಯಪುರ, ಶಿವಾನಂದ ಕಟ್ಟಿಮನಿ, ಎ.ಎಸ್.ಐ. ಸಂಚಾರಿ ಪೋಲಿಸ್ ಠಾಣೆ ವಿಜಯಪುರ, ಶ್ರೀಮತಿ ವಾಣಿಶ್ರೀ ನಿಂಬಾಳ, ವಿಜಯಕುಮಾರ ತಳವಾರ, ಎನ್.ಎಸ್.ಎಸ್. ಪ್ರೋಗ್ರಾಮ್ ಆಫೀಸರ್, ಎನ್.ಎಸ್.ಎಸ್ ಶಿಬಿರಾರ‍್ಥಿಗಳು ಬಿ.ಎಲ್.ಡಿ.ಈ. ಎ.ಎಸ್. ಪಾಟಿಲ್ ಕಾಲೆಜ್ ವಿಜಯಪುರ, ಕುಮಾರಿ ಶೋಭಾ ಕಾಂಬಳೆ, ಶ್ರೀಮತಿ ಸಾವಿತ್ರಿ ಹಿಟ್ನಳ್ಳಿ, ಶ್ರೀಮತಿ ಸರಸ್ವತಿ ನುಚ್ಚನ್ನವರ, ಕುಮಾರ ದೇವರಗುಡಿ, ಲಕ್ಷ್ಮಣ್ ಭಜಂತ್ರಿ, ಚಂದ್ರಕಾಂತ ವಾಂಡಕರ ಹಾಗೂ ಶ್ರೀಶೈಲ ಕಾಂಬಳೆ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

