ಕೊಲ್ಹಾರ: ತಾಲೂಕಿನ ಕೂಡಗಿ ಎನ್‌ಟಿಪಿಸಿ ಸಿಎಸ್‌ಆರ್ ಅಡಿಯಲ್ಲಿ ಬಾಲಕಿಯರಿಗೆ ಸಬಲೀಕರಣ ಅಭಿಯಾನ-೨೦೨೪ ಕಾರ್ಯಕ್ರಮವನ್ನು ಎನ್‌ಟಿಪಿಸಿಯ ಮಹಾಕ್ತಿನಗರ ಟೌನ್‌ಶಿಪ್‌ನಲ್ಲಿ ಗುರುವಾರದಂದು ಮುಂಜಾನೆ ಪ್ರಾರಂಭವಾಯಿತು.
ಈ ಕಾರ್ಯಕ್ರಮದಲ್ಲಿ ಎನ್‌ಟಿಪಿಸಿ ಕೂಡಗಿಯ ಪಲಾನುಭವಿ ಗ್ರಾಮಗಳಾದ ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ ಮತ್ತು ಮುತ್ತಗಿ ಗ್ರಾಮಗಳ ಸರಕಾರಿ ಹಾಗೂ ಸರಕಾರಿ ಅನುಧಾನಿತ ಪ್ರಾಥಮಿಕ ಶಾಲೆಗಳ ಐದನೇ ತರಗತಿಯಿಂದ ತೇರ್ಗಡೆಯಾದ ೪೦ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮೂಲಭೂತ ಶಿಕ್ಷಣ, ಆರೋಗ್ಯ, ಮತ್ತು ಆತ್ಮ ರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಮೂಲಕ ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಲು ಬಾಲಕಿಯರ ಜೀವನದಲ್ಲಿ ಮಹತ್ವಪೂರ್ಣ ಬದಲಾವಣೆಯಾಗಲು ಕೆವಾ ಕಟ್ಟಡದಲ್ಲಿ ಬಾಲಕಿಯರಿಗೆ ಸಬಲೀರಕರಣ ಕುರಿತು ಅಭಿಯಾನ -೨೦೨೪ ನ್ನು ನಾಲ್ಕು ವಾರಗಳ ಅವಧಿಯ ನಂತರ ಮುಕ್ತಾಯ ಮಾಡಲಾಗುತ್ತದೆ.
ಬಾಲಕಿಯರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ಬಾಲಕಿಯರ ಸಬಲೀಕರಣ ಅಭಿಯಾನ ಕಾರ್ಯಕ್ರಮದಲ್ಲಿ ನಮಗೆ ವಿವಿಧ ಕೌಶಲ್ಯಗಳನ್ನು ಅಂದರೆ ಇಂಗ್ಲಿಷ್, ವಿಜ್ಙಾನ, ಕನ್ನಡ, ಗಣಿತ, ಹಿಂದಿ, ಸಾಮಾನ್ಯ ಜ್ಞಾನ, ಕರಾಟೆ, ಯೋಗ, ನೃತ್ಯ, ಸಂಗೀತ, ಚಿತ್ರಕಲೆ, ಆರೋಗ್ಯ, ಆತ್ಮ ಸುರಕ್ಷಾ ಹಾಗೂ ಜೀವನ ಕೌಶಲ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಇತ್ಯಾದಿ ವಿಷಯಗಳನ್ನು ಕಲಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗಹಿಸಿದ ನಮಗೆ ಉಪಹಾರ, ಊಟ, ವಸತಿ ಹಾಗೂ ಕಲಿಕೆಗೆ ಬೇಕಾಗುವ ಎಲ್ಲ ಸಲಕರಣೆಗಳನ್ನು ಮತ್ತು ಉಡುಗೆಗಳನ್ನು ಎನ್‌ಟಿಪಿಸಿ ವತಿಯಿಂದ ಕಲ್ಪಿಸಲಾಗಿರುತ್ತದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಎನ್‌ಟಿಪಿಸಿ ಕೂಡಗಿಯ ಚೀಪ್ ಜನರಲ್ ಮ್ಯಾನೇಜರ್ ಬಿದ್ಯಾನಂದ ಝಾ ಕಾರ್ಯಕ್ರಮದ ಅದ್ಯಕ್ಷರಾಗಿದ್ದರು, ಮಿತಾಲಿ ಮಹಿಳಾ ಸಮಿತಿಯ ಅದ್ಯಕ್ಷರಾದ ಶ್ರೀಮತಿ ಅಂಜು ಝಾ ಹಾಗೂ ಸದಸ್ಯರು, ಕೆ,ಕೆ ಹೊತಾ ಜಿ ಎಮ್ ಒ ಆಂಡ ಎಮ್, ಅಲೊಕೇಶ್ ಬೆನರ್ಜಿ ಜಿಎಮ್ ಪ್ರೊಜೆಕ್ಟ, ಓ ಶ್ರೀನಿವಾಶ ಜಿಎಮ್ ಮೆಂಟೆನಸ್ನ್ , ಕಲಾಯಾ ಎಸ್ ಮುರ್ತಿ ಎಜಿಎಮ್ ಆಚ್ ಆರ್ ಹಾಗೂ ಎನ್ ಟಿಪಿಸಿ ಕೂಡಗಿಯ ಸೂತ್ತಮುತ್ತಲಿನ ಗ್ರಾಮದ ಹಿರಿಯರಾದ ಎಚ್ ಜಿ ಕಮತಗಿ, ಆಶೊಕ ಗುಡದಿನ್ನಿ, ಸಿ.ಎಮ್ ಹಂಡಗಿ, ಎಸ್ . ಜಿ. ವಾಸ್ತ್ರದ, ರಾಘವೇಂದ್ರ ಕುಲಕರಣಿ, ಎಸ್.ಜಿ.ಗುಡದಿನ್ನಿ, ಲಾಲಸಾಬ ಚುಡಿಪರೊಸ್ ಹಾಗೂ ವಿದ್ಯಾರ್ಥಿನಿಯರ ಪಾಲಕರು ಮತ್ತು ಎನ್‌ಟಿಪಿಸಿ ಕೂಡಗಿಯ ಇತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

