Author: editor.udayarashmi@gmail.com

ಆಲಮಟ್ಟಿ: ವಂದಾಲ ಗ್ರಾಮದ ಬನಶಂಕರಿ ದೇವಿಗೆ ಪ್ರತಿವರ್ಷದಂತೆ ಈ ಬಾರಿಯೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗುರುವಾರ ಬಾದ್ಮಿ ಅಮವಾಸ್ಯೆಯಂದು ವಿಜ್ರಂಭಣೆಯಿಂದ ನೆರವೇರಿದವು.ಗುರುವಾರ ಬೆಳಿಗ್ಗೆ ಗ್ರಾಮದ ಸಂಗಮೇಶ್ವರ ದೇವಸ್ಥಾನದಿಂದ ಕುಂಭಮೇಳದೊಂದಿಗೆ ಕಿರು ರಥೋತ್ಸವ ನೆರವೇರಿತು. 9 ಗಂಟೆಗೆ ಬನಶಂಕರಿ ದೇವಿಯ ಮೂಲ ವಿಗ್ರಹಕ್ಕೆ ಲಘುನ್ಯಾಸ ಮಹಾ ರುದ್ರಾಭಿಷೇಕ, ಪೂಜಾ ಕೈಂಕರ್ಯವನ್ನು ಸುಕ್ಷೇತ್ರ ಬಾದಾಮಿಯ ಮೂಲ ಅರ್ಚಕರಾದ ಚಿದಂಬರ ಭಟ್ಟರು ನೆರವೇರಿಸಿದರು. ನಂತರ ನೆರವೇರಿದ ನಂದಿಕೋಲು, ಕುಂಭಮೇಳ, ಅಂಬಾರಿ ಮೇಳದ ಮೆರವಣಿಗೆಯುದ್ದಕ್ಕೂ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ಜನಮನ ಸೂರೆಗೊಂಡ ವಾಧ್ಯಮೇಳವನ್ನು ಕೆ.ಕೃಷ್ಣಾ ಮೋಹನರಾವ್ ಅವರು ಏರ್ಪಡಿಸಿದ್ದರು.ಮಧ್ಯಾಹ್ನ ಪವಾಡ ಬಸವೇಶ್ವರ ಮಠದಲ್ಲಿ ಅನ್ನ ಸಂತರ್ಪಣೆಯನ್ನು ಪರಮಭಕ್ತರಾದ ಬನಪ್ಪ ಸೋಮಪ್ಪ ಹಳ್ಳದ ಏರ್ಪಡಿಸಿದ್ದರು. ಸಂಜೆ ಪುರವಂತರ ಸೇವೆಯೊಂದಿಗೆ ಬನಶಂಕರಿ ದೇವಿಯ ಪಲ್ಲಕ್ಕಿ ಉತ್ಸವ ನೆರವೇರಿತು.ಅಂಬಾರಿಗಿಲ್ಲ ಈ ಬಾರಿ ಅವಕಾಶ;ವಂದಾಲ ಗ್ರಾಮದಲ್ಲಿ ಪ್ರತಿವರ್ಷ ಬಾದ್ಮಿ ಅಮವಾಸ್ಯೆಯಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಅಂಬಾರಿ ಮಹೋತ್ಸವವೂ ಇಡೀ ಕಾರ್ಯಕ್ರಮಕ್ಕೆ ಕಳೆಗಟ್ಟುವಂತಿರುತ್ತಿತ್ತು. ಆದರೆ ಈ ಬಾರಿ ಸರ್ಕಾರದ ವಿವಿಧ ಕಟ್ಟಳೆಗಳಿಂದಾಗಿ…

Read More

ರಾಷ್ಟ್ರಪತಿ ಮುರ್ಮು ಭೇಟಿಯಾದ ಮೋದಿ | ಸರ್ಕಾರ ರಚನೆಗೆ ಹಕ್ಕು ಮಂಡನೆ | ರಾಷ್ಟ್ರಪತಿಗಳಿಂದ ಮೋದಿಗೆ ಸರ್ಕಾರ ರಚಿಸಲು ಆಹ್ವಾನ ನವದೆಹಲಿ: ಎನ್‌ಡಿಎ ನಾಯಕ ನರೇಂದ್ರ ಮೋದಿ ಅವರು ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, ಕೇಂದ್ರದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.ಇದರ ಬೆನ್ನಲ್ಲೇ ರಾಷ್ಟ್ರಪತಿಗಳು ಎನ್‌ಡಿಎ ನಾಯಕ ಪ್ರಧಾನಿ ಮೋದಿಯವರನ್ನು ಸರ್ಕಾರ ರಚಿಸಲು ಆಹ್ವಾನಿಸಿದರು.ನರೇಂದ್ರ ಮೋದಿ ಅವರು ಭಾನುವಾರ (ಜೂನ್ 9) ಸಂಜೆ ೭ ಗಂಟೆಗೆ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ರಾಷ್ಟ್ರಪತಿಯವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, “ದೇಶಕ್ಕೆ ಸೇವೆ ಸಲ್ಲಿಸಲು ಜನರು ಮೂರನೇ ಬಾರಿಗೆ ಎನ್‌ಡಿಎ ಸರ್ಕಾರಕ್ಕೆ ಅವಕಾಶ ನೀಡಿದ್ದಾರೆ. ಕಳೆದ ಎರಡು ಅವಧಿಗಳಲ್ಲಿ, ದೇಶವು ಮುನ್ನಡೆದ ವೇಗದಲ್ಲಿ, ಪ್ರತಿಯೊಂದು ವಲಯದಲ್ಲಿ ಬದಲಾವಣೆಯು ಗೋಚರಿಸುತ್ತದೆ ಮತ್ತು 25 ಕೋಟಿ ಜನರು ಬಡತನದಿಂದ ಹೊರಬರುವುದು ಪ್ರತಿ ಭಾರತಕ್ಕೂ ಹೆಮ್ಮೆಯ ಕ್ಷಣವಾಗಿದೆ ಎಂದು ನಾನು ದೇಶದ ಜನರಿಗೆ ಭರವಸೆ ನೀಡುತ್ತೇನೆ” ಎಂದರು.“ರಾಷ್ಟ್ರವು…

Read More

ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದ ಆರಾಧ್ಯದೈವ ವರದಾನಿ ಲಕ್ಕಮ್ಮದೇವಿ ಜಾತ್ರಾಮಹೋತ್ಸವದಂಗವಾಗಿ ಶುಕ್ರವಾರ ಭಾರ ಎತ್ತುವ ಸ್ಪರ್ಧೆ ಸೇರಿದಂತೆ ವಿವಿಧ ಕಸರತ್ತಿನ ಸ್ಪರ್ಧೆಗಳು ನೋಡುಗರನ್ನು ರೋಮಾಂಚನಗೊಳಿಸಿದವು.ಜಾತ್ರೆಯಂಗವಾಗಿ ಬೆಳಗ್ಗೆ ಜರುಗಿದ ಭಾರ ಎತ್ತುವ ಸ್ಪರ್ಧೆ ಹಾಗೂ ಗುಂಡು, ಸಂಗ್ರಾಣಿ ಕಲ್ಲು, ಚೀಲ ಎತ್ತುವ ಸ್ಪರ್ಧೆಯಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಜಟ್ಟಿಗಳು ಭಾಗವಹಿಸಿದ್ದರು. ಮಧ್ಯಾನ್ಹ ಜರುಗಿದ ಜಂಗೀ ಕುಸ್ತಿ ಸ್ಪರ್ಧೆಯಲ್ಲಿಯೂ ವಿವಿಧೆಡೆಗಳಿಂದ ಆಗಮಿಸಿದ್ದ ಜಟ್ಟಿಗಳು ಭಾಗವಹಿಸಿದ್ದರು. ಈ ಎರಡು ಸ್ಪರ್ಧೆಗಳನ್ನು ವೀಕ್ಷಿಸಲು ಬಂದಿದ್ದ ಜನರು ಕೇಕೇ, ಚಪ್ಪಾಳೆ ಹಾಕಿ ಜಟ್ಟಿಗಳನ್ನು ಹುರಿದುಂಬಿಸಿದರು. ಕೆಲ ಸ್ಪರ್ಧೆಗಳು ಜನರನ್ನು ರೋಮಾಂಚನಗೊಳಿಸಿದವು. ಎಲ್ಲ ಸ್ಪರ್ಧೆಯಲ್ಲಿ ವಿಜೇತರಿಗೆ ಜಾತ್ರಾಮಹೋತ್ಸವ ಸಮಿತಿಯಿಂದ ಬಹುಮಾನ ನೀಡಿ ಸನ್ಮಾನಿಸಲಾಯಿತು. ಜಾತ್ರೆಯಂಗವಾಗಿ ರಾತ್ರಿ ೯ ಗಂಟೆಗೆ ಇವಣಗಿಯ ಬಸವ ಚೇತನ ಕಲಾ ಬಳಗದಿಂದ ಹಿರಿತನದ ಹೆಣ್ಣು ಸಾಮಾಜಿಕ ನಾಟಕ ಪ್ರದರ್ಶನವಾಯಿತು.

Read More

ಮುದ್ದೇಬಿಹಾಳ: ತಾಲೂಕಿನ ಅಮರಗೋಳ ಗ್ರಾಮದ ಕೃಷ್ಣಾ ನದಿಯ ದಡದಲ್ಲಿ ಮೃತ ದೇಹವೊಂದು ಪತ್ತೆಯಾಗಿದೆ.ಮೃತ ದುರ್ದೈವಿಯನ್ನು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಮುರ್ತುಜಸಾಬ ವಾಲೀಕಾರ(೩೫) ಎಂದು ಗುರುತಿಸಲಾಗಿದೆ.ಕುಡಿದ ಅಮಲಿನಲ್ಲಿ ತನ್ನಷ್ಟಕ್ಕೆ ತಾನೇ ಸಾಯಬೇಕು ಅಂತಾ ನದಿಗೆ ಬಿದ್ದು ಈಜು ಬಾರದೇ ಉಸಿರುಗಟ್ಟಿ ತೀರಿಕೊಂಡಿರಬಹುದು. ಮೃತನ ಸಾವಿನಲ್ಲಿ ನನ್ನದು ಯಾವುದೇ ಸಂಶಯ ಇರುವದಿಲ್ಲ ಎಂದು ಆತನ ಪತ್ನಿ ಬೀಬಿಜಾನ ವಾಲೀಕಾರ ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

Read More

ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗರದ ನಿವಾಸಿ ಕಾಂಚನಾ ಪತ್ತಾರ ಕಾಣೆಯಾದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಾಧಾರಣ ಮೈ, ದುಂಡು ಮುಖ, ಬಿಳಿ ಬಣ್ಣ, ಎತ್ತರಕ್ಕೆ ೪.೧೦ ಫೂಟ್ ಇದ್ದು ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳನ್ನು ಓದಲು ಬರೆಯಲು ಬರುತ್ತದೆ. ಮೇ೨೫ ರಂದು ಸಂಜೆ ೫ಗಂಟೆಗೆ ಹಳದಿ ಬಣ್ಣದ ಚೂಡಿದಾರ ಧರಿಸಿ ಮನೆಯಿಂದ ಕೋಚಿಂಗ್‌ಗೆ ಹೋಗುತ್ತೇನೆ ಅಂತಾ ಹೇಳಿ ಹೋದವಳು ಇಲ್ಲಿಯವರೆಗೆ ಮನೆಗೆ ವಾಪಸ್ ಬರದೇ ತನ್ನ ಮೊಬೈಲ್ ಫೋನ್ ಸ್ವಿಚ್‌ಆಫ್ ಮಾಡಿಕೊಂಡು ಎಲ್ಲಯೋ ಕಾಣೆಯಾಗಿದ್ದು ಹುಡುಕಿ ಕೊಡುವಂತೆ ಆಕೆಯ ತಂದೆ ವಿರುಪಾಕ್ಷಿ ಪತ್ತಾರ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

Read More

ಮುದ್ದೇಬಿಹಾಳ: ಪಟ್ಟಣದ ಸೇರಿದಂತೆ ತಾಲೂಕಿನ ಹಲವೆಡೆ ಗುರುವಾರ ರಾತ್ರಿ ಗುಡುಗು, ಸಿಡಿಲು ಸಮೇತ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದೆ.ತಾಲೂಕಿನ ತಾರನಾಳ ಗ್ರಾಮದ ಮಡಿವಾಳಮ್ಮ ಚಲವಾದಿ, ಹಣಮಂತ ಹಂದ್ರಾಳ ದೆವೂರ ಗ್ರಾಮದ ದುರ್ಗವ್ವ ಮಾದರ, ಶಂಕ್ರವ್ವ ಮಾದರ, ಕುಂಟೋಜಿ ಗ್ರಾಮದ ಮರಲಿಂಗವ್ವ ಕವಡಿಮಟ್ಟಿ ಮತ್ತು ಶರಣಮ್ಮ ಗೊಲ್ಲರ ಇವರ ಮನೆಗಳು ಭಾಗಶಃ ಹಾನಿಯಾದರೆ, ಕುಂಟೋಜಿ ಗ್ರಾಮದ ಯಲ್ಲಪ್ಪ ಯರಝರಿಯವರಿಗೆ ಸೇರಿದ್ದ ಆಕಳು ಸಿಡಿಲು ಬಡೆದು ಸಾವನ್ನಪ್ಪಿದೆ.ನಿಯಮಗಳಂತೆ ಆಕಳು ಮೃತ ಪಟ್ಟರೆ ರೂ. ೩೭೫೦೦, ಪಕ್ಕಾ ಮನೆ ಸಂಪೂರ್ಣ ಹಾನಿಯಾದರೆ ರೂ. ೧೨೦೦೦೦, ಪಕ್ಕಾ ಮನೆ ಶೇ.೧೫ ರಷ್ಟು ಹಾನಿಯಾದರೆ ರೂ.೬೫೦೦ ಗಳನ್ನು ಪರಿಹಾರವಾಗಿ ನೀಡಲಾಗುವದು ಎಂದು ತಹಶೀಲ್ದಾರ ಬಸವರಾಜ ನಾಗರಾಳ ತಿಳಿಸಿದ್ದಾರೆ.

Read More

ಮುದ್ದೇಬಿಹಾಳ: ಚಿಮ್ಮಲಗಿ ಏತ ನೀರಾವರಿ ಹಾಗೂ ನಾಗರಬೆಟ್ಟ ಏತ ನೀರಾವರಿ ಯೋಜನೆಯಡಿ ಭೂಮಿ ಕಳೆದುಕೊಂಡ ರೈತರಿಗೆ ಅವಾರ್ಡ ಪ್ರತಿ ನೀಡಿ, ಅಪೂರ್ಣಗೊಂಡಿರುವ ಕಾಲುವೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಆಗ್ರಹಿಸಿ ತಾಲೂಕಿನ ನಾಲತವಾಡ ಬಳಿಯ ಅಮರೇಶ್ವರ ದೇವಸ್ಥಾನದ ಆವರಣದಲ್ಲಿ ಜೂ೮ ರಿಂದ ಆಮರಣ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವುದಾಗಿ ಹೋರಾಟಗಾರ, ಕಾಂಗ್ರೇಸ್ ಮುಖಂಡ ಶಿವಾನಂದ ವಾಲಿ ಹೇಳಿದರು.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಗ್ಗೆ ಕಳೆದ ಕೆಲವು ದಿನಗಳ ಹಿಂದೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೆ. ನಮ್ಮ ಬೇಡಿಕೆ ಈಡೇರಿಸದಿದ್ದರೆ ಆಮರಣ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವದಾಗಿ ಎಚ್ಚರಿಕೆ ಕೂಡ ನೀಡಿದ್ದೆ. ನಮ್ಮ ಮನವಿಗೆ ಇದುವರೆಗೆ ಯಾವುದೇ ರೀತಿಯಿಂದ ಸ್ಪಂದಿಸದ ಕಾರಣ ಸತ್ಯಾಗ್ರಹ ಪ್ರಾರಂಭಿಸುತ್ತಿದ್ದೇನೆ. ಸತ್ಯಾಗ್ರಹಕ್ಕೆ ವಿವಿಧ ಸಂಘಟನೆಗಳು, ರೈತರು, ಹೋರಾಟಗಾರರು ಬೆಂಬಲಿಸುವದಾಗಿ ತಿಳಿಸಿದ್ದಾರೆ ಎಂದರು.

Read More

ಮಹಿಳಾ ವಿಶ್ವವಿದ್ಯಾಲಯದಿಂದ ಕಲಕೇರಿಯಲ್ಲಿ ಪರಿಸರ ದಿನಾಚರಣೆ ಕಲಕೇರಿ: ವಿದ್ಯಾರ್ಥಿಗಳು ಕೇವಲ ವನಮಹೋತ್ಸವದ ಸಂದರ್ಭದಲ್ಲಿ ಸಸಿ ನೆಡುವುದು ಅಷ್ಟೇ ಅಲ್ಲ, ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ವಿದ್ಯಾರ್ಥಿಗಳು ಪ್ರತಿನಿತ್ಯ ತಪ್ಪದೇ ಮಾಡಬೇಕಾಗಿದೆ ಎಂದು ವಿಜಯಪುರದ ಕ.ರಾ.ಅ.ಮ.ವಿ.ವಿಯ ದೈಹಿಕ ಶಿಕ್ಷಣ ವಿಭಾಗದ ಪ್ರೋ.ಜ್ಯೋತಿ ಉಪಾಧ್ಯೆ ಹೇಳಿದರು.ಕಲಕೇರಿಯ ಶ್ರೀ ಬಸವೇಶ್ವರ ಮಹಿಳಾ ಮಹಾವಿದ್ಯಾಲಯಕ್ಕೆ ಶುಕ್ರವಾರ ಭೇಟಿ ನೀಡಿದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ “ಸ್ಥಾನಿಕ ವಿಚಾರಣಾ ಸಮಿತಿಯ ಪರಿಶೀಲನಾ ನಿಮಿತ್ಯವಾಗಿ ಆಗಮಿಸಿದ ಸಂದರ್ಭದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಲೇಜಿನ ಆವರಣದಲ್ಲಿ ಸಸಿ ನೆಟ್ಟು ನೀರುಣಿಸಿ ಅವರು ಮಾತನಾಡಿದರು.ಶ್ರೀ ಬಸವೇಶ್ವರ ಮಹಿಳಾ ಕಾಲೇಜಿನ ಅಭಿವೃದ್ಧಿ ಪರಿಶೀಲನಾ ತಂಡದ ಸದಸ್ಯರಾಗಿ ಆಗಮಿಸಿ ಮಾತನಾಡಿದ ಅವರು ನಾವೆಲ್ಲರೂ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗೆ ಎಷ್ಟು ಮಹತ್ವ ನೀಡುತ್ತೇವೆಯೋ ಹಾಗೆಯೇ ಸಸ್ಯ ಸಂಪತ್ತು ಮತ್ತು ಮಣ್ಣಿನ ಸಂರಕ್ಷಣೆ ಮಾಡಿ ಪರಿಸರದ ರಕ್ಷಣೆ ಮಾಡಿದಾಗ ಮಾತ್ರ ನಾವು ಸುಂದರ ಪರಿಸರದಲ್ಲಿ ಆರೋಗ್ಯಯುತ ಜೀವನ ನಡೆಸಲು ಸಾಧ್ಯವಾಗುತ್ತದೆ ಆದ್ದರಿಂದ…

Read More

ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಿಡೀರ್ ಬೇಟಿ ನೀಡಿದ ಶಾಸಕ ಅಶೋಕ ಮನಗೂಳಿ ಸಿಂದಗಿ: ಸಾರ್ವಜನಿಕ ಆಸ್ಪತ್ರೆಗೆ ಬೇಟಿ ನೀಡಿದ ಅವರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಸರಿಯಾಗಿ ಹಾಜರಾಗುತ್ತಿಲ್ಲ. ಗೋಲಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ನಾಗಾವಿ ಕೇಂದ್ರದ ವೈದ್ಯಾಧಿಕಾರಿ ಆಸ್ಪತ್ರೆಗೆ ಮುಖವು ತೋರಿಸಿಲ್ಲ ನೀವೇನು ಮಾಡುತ್ತಿದ್ದಿರಾ ಎಂದು ತಾಲೂಕಾ ಆರೋಗ್ಯ ವೈದ್ಯಾಧಿಕಾರಿ ಡಾ.ಎ.ಎ.ಮಾಗಿ ಅವರಿಗೆ ಶಾಸಕ ಅಶೋಕ ಮನಗೂಳಿ ತರಾಟೆ ತೆಗೆದುಕೊಂಡರು.ಉತ್ತರಿಸಿದ ವೈದ್ಯಾಧಿಕಾರಿ ಹೋಗುತ್ತಾರೆ ಎನ್ನುತ್ತಿದಂತೆ ದೂರವಾಣಿ ಮುಖಾಂತರ ಮಾತನಾಡಿ ಇದೀಗ ಎಲ್ಲಿದ್ದಾರೆ ಎಂದು ವಿಚಾರಿಸಿ ಎಂದು ಹೇಳಿದಾಗ ವೈದ್ಯರು ಕೆಲಸದ ನಿಮಿತ್ಯ ಆಸ್ಪತ್ರೆಯಲ್ಲಿ ಇಲ್ಲ ಎಂದು ವೈದ್ಯಾಧಿಕಾರಿ ಡಾ.ಎ.ಎ.ಮಾಗಿ ಅವರಿಗೆ ಉತ್ತರಿಸಿದರು. ನೀವೇ ನೋಡಿ ಅವರ ವಿರುದ್ದ ಕ್ರಮ ತೆಗೆದುಕೊಳ್ಳಿ ಇಲ್ಲವೇ ನಿಮ್ಮ ಮೇಲೆ ಕ್ರಮ ಅನಿವಾರ್ಯವಾಗುತ್ತದೆ. ಇದುವರೆಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಯಾವ ಯಾವ ಚಿಕೀತ್ಸೆ ಲಭಿಸುತ್ತವೆ ಎಂಬ ಬಗ್ಗೆ ಜನರಿಗೆ ಗೋತ್ತಿಲ್ಲ. ಕಳೆದ ಒಂದು ವರ್ಷದಿಂದ ಜಾಗೃತಿ ಮೂಡಿಸುವ ಒಂದೇ ಒಂದು ಕಾರ್ಯಕ್ರಮ ನೀವು ಮಾಡಿಲ್ಲ.…

Read More

ಚಡಚಣ: ಪಟ್ಟಣದ ನಿವರಗಿ ರಸ್ತೆಯ ಸಮೀಪದಲ್ಲಿ ರಾಮ ಬಡಿಗೇರ ಅವರಿಗೆ ಸೇರಿದ ಎಮ್ಮೆಯೊಂದು ಸಿಡಿಲಿಗೆ ಬಲಿಯಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.ಜಮೀನಿನಲ್ಲಿ ಕಟ್ಟಿದ್ದ ಎಮ್ಮೆಯು ಸಿಡಿಲ ಹೊಡೆತಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದು ಪಕ್ಕದಲ್ಲಿರುವ ಮರಕ್ಕೂ ಸಿಡಿಲಿನ ಪ್ರಖರತೆಗೆ ಬೆಂಕಿ ಆವರಿಸಿಕೊಂಡಿದೆ.

Read More