ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದ ಆರಾಧ್ಯದೈವ ವರದಾನಿ ಲಕ್ಕಮ್ಮದೇವಿ ಜಾತ್ರಾಮಹೋತ್ಸವದಂಗವಾಗಿ ಶುಕ್ರವಾರ ಭಾರ ಎತ್ತುವ ಸ್ಪರ್ಧೆ ಸೇರಿದಂತೆ ವಿವಿಧ ಕಸರತ್ತಿನ ಸ್ಪರ್ಧೆಗಳು ನೋಡುಗರನ್ನು ರೋಮಾಂಚನಗೊಳಿಸಿದವು.
ಜಾತ್ರೆಯಂಗವಾಗಿ ಬೆಳಗ್ಗೆ ಜರುಗಿದ ಭಾರ ಎತ್ತುವ ಸ್ಪರ್ಧೆ ಹಾಗೂ ಗುಂಡು, ಸಂಗ್ರಾಣಿ ಕಲ್ಲು, ಚೀಲ ಎತ್ತುವ ಸ್ಪರ್ಧೆಯಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಜಟ್ಟಿಗಳು ಭಾಗವಹಿಸಿದ್ದರು. ಮಧ್ಯಾನ್ಹ ಜರುಗಿದ ಜಂಗೀ ಕುಸ್ತಿ ಸ್ಪರ್ಧೆಯಲ್ಲಿಯೂ ವಿವಿಧೆಡೆಗಳಿಂದ ಆಗಮಿಸಿದ್ದ ಜಟ್ಟಿಗಳು ಭಾಗವಹಿಸಿದ್ದರು. ಈ ಎರಡು ಸ್ಪರ್ಧೆಗಳನ್ನು ವೀಕ್ಷಿಸಲು ಬಂದಿದ್ದ ಜನರು ಕೇಕೇ, ಚಪ್ಪಾಳೆ ಹಾಕಿ ಜಟ್ಟಿಗಳನ್ನು ಹುರಿದುಂಬಿಸಿದರು. ಕೆಲ ಸ್ಪರ್ಧೆಗಳು ಜನರನ್ನು ರೋಮಾಂಚನಗೊಳಿಸಿದವು. ಎಲ್ಲ ಸ್ಪರ್ಧೆಯಲ್ಲಿ ವಿಜೇತರಿಗೆ ಜಾತ್ರಾಮಹೋತ್ಸವ ಸಮಿತಿಯಿಂದ ಬಹುಮಾನ ನೀಡಿ ಸನ್ಮಾನಿಸಲಾಯಿತು. ಜಾತ್ರೆಯಂಗವಾಗಿ ರಾತ್ರಿ ೯ ಗಂಟೆಗೆ ಇವಣಗಿಯ ಬಸವ ಚೇತನ ಕಲಾ ಬಳಗದಿಂದ ಹಿರಿತನದ ಹೆಣ್ಣು ಸಾಮಾಜಿಕ ನಾಟಕ ಪ್ರದರ್ಶನವಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

