ಆಲಮಟ್ಟಿ: ವಂದಾಲ ಗ್ರಾಮದ ಬನಶಂಕರಿ ದೇವಿಗೆ ಪ್ರತಿವರ್ಷದಂತೆ ಈ ಬಾರಿಯೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗುರುವಾರ ಬಾದ್ಮಿ ಅಮವಾಸ್ಯೆಯಂದು ವಿಜ್ರಂಭಣೆಯಿಂದ ನೆರವೇರಿದವು.
ಗುರುವಾರ ಬೆಳಿಗ್ಗೆ ಗ್ರಾಮದ ಸಂಗಮೇಶ್ವರ ದೇವಸ್ಥಾನದಿಂದ ಕುಂಭಮೇಳದೊಂದಿಗೆ ಕಿರು ರಥೋತ್ಸವ ನೆರವೇರಿತು. 9 ಗಂಟೆಗೆ ಬನಶಂಕರಿ ದೇವಿಯ ಮೂಲ ವಿಗ್ರಹಕ್ಕೆ ಲಘುನ್ಯಾಸ ಮಹಾ ರುದ್ರಾಭಿಷೇಕ, ಪೂಜಾ ಕೈಂಕರ್ಯವನ್ನು ಸುಕ್ಷೇತ್ರ ಬಾದಾಮಿಯ ಮೂಲ ಅರ್ಚಕರಾದ ಚಿದಂಬರ ಭಟ್ಟರು ನೆರವೇರಿಸಿದರು. ನಂತರ ನೆರವೇರಿದ ನಂದಿಕೋಲು, ಕುಂಭಮೇಳ, ಅಂಬಾರಿ ಮೇಳದ ಮೆರವಣಿಗೆಯುದ್ದಕ್ಕೂ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ಜನಮನ ಸೂರೆಗೊಂಡ ವಾಧ್ಯಮೇಳವನ್ನು ಕೆ.ಕೃಷ್ಣಾ ಮೋಹನರಾವ್ ಅವರು ಏರ್ಪಡಿಸಿದ್ದರು.
ಮಧ್ಯಾಹ್ನ ಪವಾಡ ಬಸವೇಶ್ವರ ಮಠದಲ್ಲಿ ಅನ್ನ ಸಂತರ್ಪಣೆಯನ್ನು ಪರಮಭಕ್ತರಾದ ಬನಪ್ಪ ಸೋಮಪ್ಪ ಹಳ್ಳದ ಏರ್ಪಡಿಸಿದ್ದರು. ಸಂಜೆ ಪುರವಂತರ ಸೇವೆಯೊಂದಿಗೆ ಬನಶಂಕರಿ ದೇವಿಯ ಪಲ್ಲಕ್ಕಿ ಉತ್ಸವ ನೆರವೇರಿತು.
ಅಂಬಾರಿಗಿಲ್ಲ ಈ ಬಾರಿ ಅವಕಾಶ;
ವಂದಾಲ ಗ್ರಾಮದಲ್ಲಿ ಪ್ರತಿವರ್ಷ ಬಾದ್ಮಿ ಅಮವಾಸ್ಯೆಯಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಅಂಬಾರಿ ಮಹೋತ್ಸವವೂ ಇಡೀ ಕಾರ್ಯಕ್ರಮಕ್ಕೆ ಕಳೆಗಟ್ಟುವಂತಿರುತ್ತಿತ್ತು. ಆದರೆ ಈ ಬಾರಿ ಸರ್ಕಾರದ ವಿವಿಧ ಕಟ್ಟಳೆಗಳಿಂದಾಗಿ ಅಂಬಾರಿ ಮಹೋತ್ಸವವನ್ನು ಕೈ ಬಿಟ್ಟು ಕೃತಕ ಆನೆ ನಿರ್ಮಿಸಿ ಅಂಬಾರಿ ಮಹೋತ್ಸವ ಮಾಡಲಾಗಿತ್ತು.
Subscribe to Updates
Get the latest creative news from FooBar about art, design and business.
Related Posts
Add A Comment

