ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಿಡೀರ್ ಬೇಟಿ ನೀಡಿದ ಶಾಸಕ ಅಶೋಕ ಮನಗೂಳಿ
ಸಿಂದಗಿ: ಸಾರ್ವಜನಿಕ ಆಸ್ಪತ್ರೆಗೆ ಬೇಟಿ ನೀಡಿದ ಅವರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಸರಿಯಾಗಿ ಹಾಜರಾಗುತ್ತಿಲ್ಲ. ಗೋಲಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ನಾಗಾವಿ ಕೇಂದ್ರದ ವೈದ್ಯಾಧಿಕಾರಿ ಆಸ್ಪತ್ರೆಗೆ ಮುಖವು ತೋರಿಸಿಲ್ಲ ನೀವೇನು ಮಾಡುತ್ತಿದ್ದಿರಾ ಎಂದು ತಾಲೂಕಾ ಆರೋಗ್ಯ ವೈದ್ಯಾಧಿಕಾರಿ ಡಾ.ಎ.ಎ.ಮಾಗಿ ಅವರಿಗೆ ಶಾಸಕ ಅಶೋಕ ಮನಗೂಳಿ ತರಾಟೆ ತೆಗೆದುಕೊಂಡರು.
ಉತ್ತರಿಸಿದ ವೈದ್ಯಾಧಿಕಾರಿ ಹೋಗುತ್ತಾರೆ ಎನ್ನುತ್ತಿದಂತೆ ದೂರವಾಣಿ ಮುಖಾಂತರ ಮಾತನಾಡಿ ಇದೀಗ ಎಲ್ಲಿದ್ದಾರೆ ಎಂದು ವಿಚಾರಿಸಿ ಎಂದು ಹೇಳಿದಾಗ ವೈದ್ಯರು ಕೆಲಸದ ನಿಮಿತ್ಯ ಆಸ್ಪತ್ರೆಯಲ್ಲಿ ಇಲ್ಲ ಎಂದು ವೈದ್ಯಾಧಿಕಾರಿ ಡಾ.ಎ.ಎ.ಮಾಗಿ ಅವರಿಗೆ ಉತ್ತರಿಸಿದರು. ನೀವೇ ನೋಡಿ ಅವರ ವಿರುದ್ದ ಕ್ರಮ ತೆಗೆದುಕೊಳ್ಳಿ ಇಲ್ಲವೇ ನಿಮ್ಮ ಮೇಲೆ ಕ್ರಮ ಅನಿವಾರ್ಯವಾಗುತ್ತದೆ. ಇದುವರೆಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಯಾವ ಯಾವ ಚಿಕೀತ್ಸೆ ಲಭಿಸುತ್ತವೆ ಎಂಬ ಬಗ್ಗೆ ಜನರಿಗೆ ಗೋತ್ತಿಲ್ಲ. ಕಳೆದ ಒಂದು ವರ್ಷದಿಂದ ಜಾಗೃತಿ ಮೂಡಿಸುವ ಒಂದೇ ಒಂದು ಕಾರ್ಯಕ್ರಮ ನೀವು ಮಾಡಿಲ್ಲ. ಹೀಗಾದರೆ ಬಡ ಜನತೆ ಅದರ ಸದುಪಯೋಗ ಪಡೆದುಕೊಳ್ಳುವುದು ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು.
ನಿಮ್ಮಲ್ಲಿ ಜನರಲ್ ಮೇಡಿಶಿನ್ ಓಪಿಡಿಗೆ ಕೇವಲ ಡಾ.ಬಡಿಗೇರ ಒಬ್ಬರೇ ನೋಡುತ್ತಿದ್ದು, ಬೇರೆ ವ್ಯದ್ಯಾಧಿಕಾರಿಗಳು ಓಪಿಡಿ ನೋಡುತ್ತಿಲ್ಲ ಎಂಬ ದೂರುಗಳಿವೆ. ಏನು ಸಮಸ್ಯೆ ಎಂದಾಗ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಿ.ಕೆ.ಗುಂಡಬಾಡಿ ನಮ್ಮಲ್ಲಿ ಜನರಲ್ ಮೆಡಿಶಿನ್ ವೈದ್ಯರ ಇಲ್ಲ ಎಂದರು. ಹಾಗಾದರೆ ಇಲ್ಲ ಎಂದು ಮೇಲಾಧಿಕಾರಿಗಳಿಗೆ ಪತ್ರ ಬರದಿದ್ದಿರಾ ಪತ್ರ ನೀಡಿ ಎಂದಾಗ ಇಲ್ಲ ಬರೆದಿಲ್ಲ ಎಂದಾಗ ನಾವು ಕೇಳುವವರೆಗೂ ನೀವು ಆಸ್ಪತ್ರೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದರೆ ಹೇಗೆ? ದಯಮಾಡಿ ಸಂಬಳಕ್ಕಾಗಿ ಮಾತ್ರ ಕೆಲಸ ಮಾಡಬೇಡಿ ನನ್ನದು ಕೇವಲ ಐದು ವರ್ಷದ ಅವಧಿ ನೀವು ಮಾಡಿದ ಕಾರ್ಯ ಬಡ ಜನತೆಗೆ ಅಜರಾಮರವಾಗಿ ಉಳಿಯುವಂತೆ ಮಾಡಬೇಕು ಹಾಗೂ ಕೂಡಲೇ ಮೇಲಾಧಿಕಾರಿಗಳಿಗೆ ಪತ್ರ ಬರೆಯಿರಿ ನಾನು ಬೇಟಿಯಾಗಿ ಸಿಬ್ಬಂದಿ ತರಲು ಪ್ರಯತ್ನ ಮಾಡುವೆ ಎಂದರು.
ಈ ಸಂದರ್ಭದಲ್ಲಿ ವೈದ್ಯರಾದ ಡಾ.ರಮೇಶ ರಾಠೋಡ, ಡಾ.ರಾಜಶೇಖರ ಸಿ.ಎಸ್, ಡಾ.ಸಾಯಬಣ್ಣ ಗುಣಕಿ, ಡಾ.ಮಂಜುನಾಥ ಅಂಜುಟಗಿ, ಡಾ.ಮಹಾಂತೇಶ ಹಿರೇಮಠ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.

