ಮುದ್ದೇಬಿಹಾಳ: ಪಟ್ಟಣದ ಸೇರಿದಂತೆ ತಾಲೂಕಿನ ಹಲವೆಡೆ ಗುರುವಾರ ರಾತ್ರಿ ಗುಡುಗು, ಸಿಡಿಲು ಸಮೇತ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದೆ.
ತಾಲೂಕಿನ ತಾರನಾಳ ಗ್ರಾಮದ ಮಡಿವಾಳಮ್ಮ ಚಲವಾದಿ, ಹಣಮಂತ ಹಂದ್ರಾಳ ದೆವೂರ ಗ್ರಾಮದ ದುರ್ಗವ್ವ ಮಾದರ, ಶಂಕ್ರವ್ವ ಮಾದರ, ಕುಂಟೋಜಿ ಗ್ರಾಮದ ಮರಲಿಂಗವ್ವ ಕವಡಿಮಟ್ಟಿ ಮತ್ತು ಶರಣಮ್ಮ ಗೊಲ್ಲರ ಇವರ ಮನೆಗಳು ಭಾಗಶಃ ಹಾನಿಯಾದರೆ, ಕುಂಟೋಜಿ ಗ್ರಾಮದ ಯಲ್ಲಪ್ಪ ಯರಝರಿಯವರಿಗೆ ಸೇರಿದ್ದ ಆಕಳು ಸಿಡಿಲು ಬಡೆದು ಸಾವನ್ನಪ್ಪಿದೆ.
ನಿಯಮಗಳಂತೆ ಆಕಳು ಮೃತ ಪಟ್ಟರೆ ರೂ. ೩೭೫೦೦, ಪಕ್ಕಾ ಮನೆ ಸಂಪೂರ್ಣ ಹಾನಿಯಾದರೆ ರೂ. ೧೨೦೦೦೦, ಪಕ್ಕಾ ಮನೆ ಶೇ.೧೫ ರಷ್ಟು ಹಾನಿಯಾದರೆ ರೂ.೬೫೦೦ ಗಳನ್ನು ಪರಿಹಾರವಾಗಿ ನೀಡಲಾಗುವದು ಎಂದು ತಹಶೀಲ್ದಾರ ಬಸವರಾಜ ನಾಗರಾಳ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

