Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸೋರುವ ಕೊಠಡಿಗಳು | ಶಾಲಾ ಆವರಣದಲ್ಲಿ ನಿಲ್ಲುವ ನೀರು | ವಾಹನಗಳ ಓಡಾಟದ ಕಿರಿಕಿರಿ | ಶೌಚಾಲಯದ ಸಮಸ್ಯೆ – ಚೇತನ ಶಿವಶಿಂಪಿ ಮುದ್ದೇಬಿಹಾಳ: ಕೇವಲ ಅಂಕಗಳ ಹಿಂದೆ ಬೆನ್ನು ಹತ್ತಿರುವ ಸಾರ್ವಜನಿಕರು ತಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡುವ ಶಾಲೆಯ ಆವರಣ ಅಚ್ಚುಕಟ್ಟಾಗಿರಬೇಕು. ಕೊಠಡಿಗಳ ಕೋಣೆಗಳಲ್ಲಿ ಗಾಳಿ ಬೆಳಕು ಸರಿಯಾಗಿ ಇರಬೇಕು ಎಂದು ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾಗಿರುವ ಸಧ್ಯದ ಪರಿಸ್ಥಿತಿಯಲ್ಲಿ ಶಾಲೆಯ ಆವರಣ ಹೇಗಾದರೂ ಇರಲಿ, ಗಾಳಿ ಬೆಳಕು ಬಂದ್ರೂ ಸರಿ ಬರದಿದ್ರೂ ಸರಿ, ನಮ್ಮ ಮಗು ವಿದ್ಯಾಭ್ಯಾಸ ಮಾತ್ರ ಪಡೆಯಬೇಕು ಎಂದು ಅದೆಷ್ಟೋ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸರ್ಕಾರಿ ಶಾಲೆಗಳೇ ಆಸರೆ.ಬಡ ಮಕ್ಕಳು ವಿದ್ಯಾರ್ಜನೆಯಿಂದ ವಂಚಿತರಾಗಬಾರದು ಮತ್ತು ದೇಶದ ಭವಿಷ್ಯದ ಹಿತದೃಷ್ಠಿಯಿಂದ ಸರ್ಕಾರ, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸಾಕಷ್ಟು ಯೋಜನೆಗಳನ್ನು ರೂಪಿಸಿಕೊಂಡಿದೆ. ಆದರೆ ಆ ಯೋಜನೆಗಳು ಮಾತ್ರ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂಬ ಸಾರ್ವಜನಿಕರ ಮಾತನ್ನು ತಳ್ಳಿಹಾಕುಂತಿಲ್ಲ. ಇದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ ನೋಡಿ.ಮಳೆಯಾದರೆ ಸಾಕು…
ವಿಜಯಪುರ: ಜೂ.೧೨ರಂದ, ಶೆಗುಣಶಿ ಗ್ರಾಮದಲ್ಲಿ ಜಿಲ್ಲಾ ಆರೊಗ್ಯ ಕೆಂದ್ರ, ಜಿಲ್ಲಾ ಆಸ್ಪತ್ರೆ ಮತ್ತು ರೋಟರಿ ಸಂಸ್ಥೆ ವಿಜಯಪುರ ಉತ್ತರ, ಸಂಜೀವಿನಿ ಫಾರ್ಮಸಿ ಕಾಲೆಜ ಹಾಗು ಬಿ. ಎಲ್. ಡಿ. ಇ. ಸಂಸ್ಥೆಯ ಸಹಯೊಗದೊಂದಿಗೆ ಉಚಿತ ನೇತ್ರ ತಪಾಸಣೆ ಹಾಗು ಶಸ್ತ್ರಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.ಶಿಬಿರದ ಉದ್ಘಾಟನೆಯನ್ನು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಶಿವಾನಂದ ಮಾಸ್ತಿಹೊಳಿ, ರೋಟರಿ ಡಿಸ್ಟ್ರಿಕ್ಟ ೩೧೭೦ರ ಪ್ರಾಂತಕಾರದಂಧ ರೋ.ನಾಸಿರ ಬೊರ್ಸಾದವಾಲಾ ಮತ್ತು ರೋಟರಿ ಸಂಸ್ಥೆ ವಿಜಯಪುರ ಉತ್ತರ ಅಧ್ಯಕ್ಷರಾದ ರೋ. ಮಲ್ಲು ಕಲಾದಗಿ, ಕಾರ್ಯದರ್ಶಿರಾದ ರೋ. ರಾಜ ಶಹಾ ರು ಉದ್ಘಾಟನೆ ಮಾಡಿದರು.ಶಿಬಿರದ ಮಹತ್ವ ಕುರಿತು ಡಾ. ಶ್ರೀಮತಿ ಮೀನಾಕ್ಷಿ ಸೊನ್ನದ ಸವಿಸ್ತಾರವಾಗಿ ವಿವರಿಸಿದರು.ಶೆಗುಣಶಿ ಗ್ರಾಮದ ಪ್ರಮುಖರಾದ ಬಾಪುಗೌಡ ಪಾಟಿಲ ಪ್ರಾಸ್ತಾವಿಕ ಮಾತನಾಡಿದರು.ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಶಿವಾನಂದ ಮಾಸ್ತಿಹೊಳಿಯವರು ಶಿಬಿರದ ಮಹತ್ವ ಮತ್ತು ಸದುಪಯೊಗ ಪಡೆಯಬೇಕೆಂದು ಮಾತನಾಡಿದರು. ವಂದನಾರ್ಪಣೆಯನ್ನ ರೋ. ವಿಠ್ಠಲ ತೇಲಿಯವರು ಮಾಡಿದರು. ಕಾರ್ಯಕ್ರಮದ ನಿರುಪಣೆಯನ್ನು ಸುಂದರವಾಗಿ ರೋ. ಸುಧಿರ ಪವಾರ ನಿರೂಪಿಸಿದರು.ಇದೆ ಸಂಧರ್ಭದಲ್ಲಿ ಡಾ. ಸಂಪತ್ ಕುಮಾರ, ಡಾ.…
ವಿಜಯಪುರ: ಶ್ರೀಮದ್ ಯೋಗೀಶ್ವರ ಯಾಜ್ಞವಲ್ಕ್ಯ ಜಯಂತ್ಯೋತ್ಸವ ಹಾಗೂ ೨೫ನೇ ವರ್ಷದ ಪಾದಯಾತ್ರೆಯ ರಜತ ಮಹೋತ್ಸವದ ಅಂಗವಾಗಿ ಸನ್ಮಾನ ಸಮಾರಂಭ ದಿನಾಂಕ : ಜೂನ್ ೧೫,೧೬ ರಂದು ಹಮ್ಮಿಕೊಳ್ಳಲಾಗಿದೆ.ವಿಜಯಪುರದಿಂದ ಶ್ರೀ ಕ್ಷೇತ್ರ ಕೆಂಗೇರಿ ಮುರಗೋಡಕ್ಕ ಸತತ ೨೫ ವರ್ಷಗಳ ಪಾದಯಾತ್ರೆಯು (ದಿಂಡಿ) ಸಂಪನ್ನಗೊಂಡಿರುವ ಪ್ರಯುಕ್ತ ಪಾದಯಾತ್ರಿಕರಿಗೆ ಸೇವೆ ಸಲ್ಲಿಸಿದ ಭಕ್ತಾಧಿಗಳಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ.ಸಕಲ ಸದ್ಭಕ್ತರು ಈ ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು, ಮನ, ಧನದಿಂದ, ಸೇವೆ ಸಲ್ಲಿಸಿ ಶ್ರೀ ಯಾಜ್ಞವಲ್ಕ್ಯ ಗುರುಗಳ ಹಾಗೂ ಶ್ರೀ ಶಿವ ಚಿದಂಬರ ಮಹಸ್ವಾಮಿಗಳ ಕೃಪೆಗೆ ಪಾತ್ರರಾಗಬೇಕೆಂದು ಕಮಿಟಿಯವರು ವಿನಂತಿಸಿಕೊಂಡಿದ್ದಾರೆ.
ವಿಜಯಪುರ: ೧೮ ನೇ ಲೋಕಸಭಾ ಚುನಾವಣೆಯಲ್ಲಿ ದಲಿತ ನಾಯಕರಾದ ರಮೇಶ ಜಿಗಜಿಣಗಿಯವರು ಸತತ ೭ನೇ ಬಾರಿ ಲೋಕಸಭಾ ಸಂಸದರಾಗಿ ಆಯ್ಕೆ ಆಗಿದ್ದು, ಅವರಿಗೆ ಸಚಿವ ಸ್ಥಾನ ನೀಡುವಂತೆ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಇಬ್ಬರು ದಲಿತ ಬಿಜೆಪಿ ನಾಯಕರು ಆಯ್ಕೆಯಾಗಿರುವದು ಹೆಮ್ಮೆಯ ವಿಷಯವಾಗಿದೆ. ರಮೇಶ ಜಿಗಜಿಣಗಿಯವರು ವಿಜಯಪುರ ಜಿಲ್ಲೆಯಲ್ಲಿ ಭಾರತಿಯ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸುವಲ್ಲಿ ತಮ್ಮ ಹಗಲಿರುಳು ಶ್ರಮವಿದೆ. ಅದೇ ರೀತಿ ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿಯು ಗಟ್ಟಿಯಾಗಿ ಕೂಡಲು ಹಾಗೂ ಬೆಳೆಯಲು ಜಿಗಜಿಣಗಿಯವರು ಪರಿಶ್ರಮ ಬಹಳಷ್ಟಿದ್ದು, ಜಿಗಜಿಣಗಿಯವರು ತಮ್ಮ ರಾಜಕೀಯ ಜೀವನದಲ್ಲಿ ಎಲ್ಲರೊಂದಿಗೆ ಸ್ನೇಹ ಬಾಂಧವ್ಯ ಇಟ್ಟುಕೊಂಡು ಸೋಲಿಲ್ಲದ ಸರ್ಧಾರರಾಗಿದ್ದು, ಇವರು ರಾಜಕೀಯದಲ್ಲಿ ಅಜಾತಶತೃ ಎನಿಸಿಕೊಂಡವರು. ಇಂತಹ ಮುತ್ಸದ್ದಿ ನಾಯಕರಾದ ರಮೇಶ ಜಿಗಜಿಣಗಿಯವರು ೧೮ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಸುಮಾರು ೨೪೦ ಶೀಟುಗಳನ್ನು ಗೆಲ್ಲುವ ಮೂಲಕ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.ಇಂತಹ ಮುತ್ಸದ್ದಿ ರಾಜಕಾರಣಿಯು ೧೯೮೩, ೧೯೮೫ ಮತ್ತು ೧೯೯೪ರಲ್ಲಿ…
ಪುರಸಭೆ ಸದಸ್ಯರ ಅವಧಿ ವಿಸ್ತರಣೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಇಂಡಿ: ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿ ನಿಗದಿ ಪಡಿಸದ ಹಿನ್ನೆಲೆಯಲ್ಲಿ ಕಳೆದ 14 ತಿಂಗಳಿನಿಂದ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಹಾಗಾಗಿ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ನಿಗದಿ ಪಡಿಸಿ ಪುರಸಭೆ ಸದಸ್ಯ ಅವಧಿ ವಿಸ್ತರಿಸಬೇಕು ಎಂದು ಪುರಸಭೆ ಸದಸ್ಯರು ತಹಶಿಲ್ದಾರ ಮಂಜುಳಾ ನಾಯಿಕ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಗುರುವಾರ ಪಟ್ಟಣದ ಆಡಳಿತ ಸೌಧಕ್ಕೆ ತೆರಳಿದ ಪುರಸಭೆಯ ಸದಸ್ಯರು, ಪ್ರತಿ ವಾರ್ಡಗಳಲ್ಲಿ ಮೂಲಭೂತ ಸೌಲಭ್ಯ, ಸೌಕರ್ಯ ಹಾಗೂ ಅಭಿವೃದ್ಧಿ ಪಡಿಸಲಿಕೆ ತೊಂದರೆಯಾಗುತ್ತಿದೆ,ವಾರ್ಡಗಳಲ್ಲಿ ಕಾಮಗಾರಿ ಕುಂಠಿತಗೊಂಡಿವೆ. ಎರಡನೆ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿ ನಿಗದಿ ಪಡಿಸಿ ಸದಸ್ಯರ ಅವಧಿ ವಿಸ್ತರಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಭೀಮನಗೌಡ ಪಾಟೀಲ ಮಾತನಾಡಿದ ಅವರು, 2019ನೇ ಸಾಲಿನಲ್ಲಿ ಚುನಾವಣೆ ಮುಕ್ತಾಯವಾಗಿ ಪುರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದೆವೆ. ನಂತರ ಅಧ್ಯಕ್ಷ – ಉಪಾಧ್ಯಕ್ಷರ ಮೀಸಲಾತಿಯನ್ನು…
ದೇವರಹಿಪ್ಪರಗಿ: ವಾಹನಗಳು ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡತಡೆಯಾದ ಗೂಡಂಗಡಿ, ಬೀದಿಬದಿಯ ತಳ್ಳುವ ಗಾಡಿಗಳು, ಅತಿಕ್ರಮಣಗೊಂಡ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದಲ್ಲಿ ಗುರುವಾರ ಮೊಹರೆ ಹಣಮಂತ್ರಾಯ ವೃತ್ತ , ಬಸ್ ನಿಲ್ದಾಣ ಆವರಣ ಸೇರಿದಂತೆ ನಾಡಕಚೇರಿವರೆಗಿನ ರಸ್ತೆಯಲ್ಲಿನ ಗೂಡಂಗಡಿ, ಬೀದಿಬದಿಯ ತಳ್ಳುವ ಗಾಡಿಗಳನ್ನು ತೆರವುಗೊಳಿಸಿ ಮಾತನಾಡಿದರು. ಪಟ್ಟಣ ಪಂಚಾಯಿತಿಯಲ್ಲಿ ಕಳೆದ ೩ ದಿನಗಳ ಹಿಂದೆ ಜರುಗಿದ ಸಾರ್ವಜನಿಕ ಸಭೆಯ ಮೂಲಕ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ಅಗಲೀಕರಣದ ನಿರ್ಧಾರ ಮಾಡಲಾಗಿದೆ. ಅದಕ್ಕಾಗಿ ಗುರುವಾರ ನಾಡಕಚೇರಿವರೆಗೆ, ಶುಕ್ರವಾರ ಅಂಬೇಡ್ಕರ್ ವೃತ್ತ, ಟಿಪ್ಪು ಸುಲ್ತಾನ ವೃತ್ತ, ಮೇನ್ ಬಜಾರಗಳಲ್ಲಿ ಕಾರ್ಯಾಚರಣೆ ಕೈಗೊಂಡು ಅತೀಕ್ರಮಣಗೊಂಡ ಕಟ್ಟಡಗಳು ಸೇರಿದಂತೆ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾದ ಮಳಿಗೆಗಳನ್ನು ತೆರವುಗೊಳಿಸಿ ಜನತೆಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದರು.ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಮಾತನಾಡಿ, ವಿಶಾಲವಾದ ರಸ್ತೆಗಳಿಂದ ಅಪಘಾತಗಳು ನಿಯಂತ್ರಿಸಲ್ಪಡುತ್ತವೆ. ಹಾಗೂ ಪಟ್ಟಣವು ಸುಂದರವಾಗಿ ಕಾಣುತ್ತದೆ. ಆದ್ದರಿಂದ ಈ ಕಾರ್ಯಾಚರಣೆಗೆ ಎಲ್ಲರೂ ಸಹಕರಿಸಬೇಕು ಎಂದರು.ಪಿಎಸ್‌ಐ ಬಸವರಾಜ ತಿಪ್ಪಾರಡ್ಡಿ, ಹೆಸ್ಕಾಂ ಶಾಖಾಧಿಕಾರಿ…
ಉಪನ್ಯಾಸಕರಿಗೆ ಪಪೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ. ಸಿ.ಕೆ. ಹೊಸಮನಿ ಸಲಹೆ ಚಡಚಣ: ಪಿಯುಸಿ ದ್ವಿತೀಯ ವರ್ಷ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು ಈ ವರ್ಷದ ಪರೀಕ್ಷೆಯನ್ನು ವಿದ್ಯಾರ್ಥಿಗಳು ಧೈರ್ಯವಾಗಿ ಎದುರಿಸುವಂತೆ ಉಪನ್ಯಾಸಕರು ಅವರಿಗೆ ಮಾರ್ಗದರ್ಶನ ಮಾಡಬೇಕು ಎಂದು ಪಪೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ. ಸಿ.ಕೆ. ಹೊಸಮನಿ ಹೇಳಿದರು.ಚಡಚಣದ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ(ಪಪೂ ವಿಭಾಗ) ವಿಜಯಪೂರ ಹಾಗೂ ಸಂಗಮೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಚಡಚಣ ಇವರ ಆಶ್ರಯದಲ್ಲಿ ನಡೆದ ಇಂಡಿ ಮತ್ತು ಚಡಚಣ ತಾಲೂಕುಗಳ ಪಪೂ ಕಾಲೇಜುಗಳ ಪ್ರಾಚಾರ್ಯರು ಮತ್ತು ಉಪನ್ಯಾಸಕರಿಗಾಗಿ ಹಮ್ಮಿಕೊಂಡ ಕಾರ್ಯಗಾರವನ್ನು ಉಧ್ಘಾಟಿಸಿ ಅವರು ಮಾತನಾಡಿದರು.೨೪-೨೫ ಸಾಲಿನಲ್ಲಿ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಶಾಲಾ ಶಿಕ್ಷಣ ಇಲಾಖೆ ಅತ್ಯಂತ ಕಟ್ಟುನಿಟ್ಟಾಗಿ ನಡೆಸಲಿರುವದರಿಂದ ವಿದ್ಯಾರ್ಥಿಗಳಿಗೆ ಈಗಿನಿಂದಲೆ ಮಾರ್ಗದರ್ಶನ ಮಾಡಬೇಕು. ಶಾಲಾ ಶಿಕ್ಷಣ ಇಲಾಖೆಯು ಪಿಯುಸಿ ಪರೀಕ್ಷೆಯಲ್ಲಿಯೂ ವೆಬ್ ಕಾಸ್ಟಿಂಗ ತಂತ್ರಜ್ಞಾನವನ್ನು ಉಪಯೋಗಿಸುತ್ತಿರುವದರಿಂದ ಎಲ್ಲ ಪ್ರಾಚಾರ್ಯರು ಮತ್ತು ಉಪನ್ಯಾಸಕರು…
ವಿಜಯಪೂರ: ಗ್ರಾಮೀಣ ವಲಯದ ಶಿವಣಗಿ ಕ್ಲಸ್ಟರ ವ್ಯಾಪ್ತಿಯಲ್ಲಿ ಬರುವ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಗ್ರಾಮದ ಗಣ್ಯರಾದ ರಾಜು ಬಿಜ್ಜರಗಿ ಇವರು ತಮ್ಮ ಅಜ್ಜನವರಾದ ದಿವಂಗತ ಮಲಕಾಜಪ್ಪ ಬಿಜ್ಜರಗಿ ಇವರ ಹೆಸರಿನಲ್ಲಿ 50 ಸಾವಿರ, ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಾಬಾಯಿ ಭರತನೂರ 10 ಸಾವಿರ, ಶಾಲೆಯ ಮಾಜಿ ಎಸ್ಡಿಎಂಸಿ ಅಧ್ಯಕ್ಷ ಶಿವಪ್ಪ ಹಳ್ಳಿ 10 ಸಾವಿರ, ಮತೀನ್ ಮೈದರಗಿ ಸಾಪ್ಟವೇರ್ ಇಂಜನಿಯರ್ 17 ಸಾವಿರ (ಸದರಿ ಶಾಲೆಯ ಮುಖ್ಯಗುರುಮಾತೆ ಎಸ್.ಐ. ಹಕೀಮ್ ಅವರ ಅಳಿಯ) ದೇಣಿಗೆಯಾಗಿ ನೀಡಿರುವರು.ದೇಣಿಗೆ ನೀಡಿದ ರಾಜು ಬಿಜ್ಜರಗಿ, ಶಿವಪ್ಪ ಹಳ್ಳಿ, ಶಾಂತಾಬಾಯಿ ಭರತನೂರ ಇವರು ಶಾಲೆಯ ಹಳೆಯ ವಿದ್ಯಾರ್ಥಿಗಳಾಗಿದ್ದು, ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಶಾಲೆಯ ಅಭಿವೃದ್ಧಿಗೋಸ್ಕರ ಸದಾ ಸಹಕರಿಸುವುದಾಗಿ ಹೇಳಿದರು.ದೇಣಿಗೆಯನ್ನು ಸ್ವೀಕರಿಸಿ ಮಾತನಾಡಿದ ಶಾಲೆಯ ಮುಖ್ಯ ಗುರುಮಾತೆ ಎಸ್.ಐ.ಹಕೀಮ್ ಶಾಲೆಯ ಮಕ್ಕಳ ದಾಖಲಾತಿ ಹೆಚ್ಚು ಮಾಡಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ನಾನು ನನ್ನ ಸಿಬ್ಬಂದಿಯವರ ಜೊತೆಗೂಡಿ ಪ್ರಾಮಾಣಿಕವಾಗಿ ಶಕ್ತಿಮೀರಿ ಪ್ರಯತ್ತಿಸುತ್ತೇನೆ ಎಂದು…
ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿದ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಅಭಿಮತ ಮುದ್ದೇಬಿಹಾಳ: ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ನೀಡಿ ಬಾಲ ಕಾರ್ಮಿಕ ಪದ್ಧತಿಗೆ ಅಳವಡಿಸಿದಲ್ಲಿ ಅಂತವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವದು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಎಚ್ಚರಿಸಿದರು.ಪಟ್ಟಣದ ಮುಖ್ಯ ಬಜಾರನಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಕಾರ್ಮಿಕ ಇಲಾಖೆ ಹಾಗೂ ಇತರ ಎಲ್ಲ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬಾಲ ಕಾರ್ಮಿಕ ಪದ್ಧತಿಯಿಂದ ಮಕ್ಕಳ ಮೇಲೆ ದೈಹಿಕ ಬೆಳವಣಿಗೆ ಮಾತ್ರವಲ್ಲದೇ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರುತ್ತವೆ. ಹಾಗಾಗಿ ಬಾಲ ಕಾರ್ಮಿಕ ನಿಷೇದ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆ ಪ್ರಕಾರ ೧೪ ವರ್ಷದ ಒಳಗಿನ ಮಕ್ಕಳು ದುಡಿಯುವಂತಿಲ್ಲ. ಗ್ಯಾರೇಜ, ಕಾರ್ಖಾನೆ, ಅಂಗಡಿಗಳು ಸೇರಿದಂತೆ ಎಲ್ಲಿಯಾದರೂ ಬಾಲ ಕಾರ್ಮಿಕರನ್ನು…
ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಜೂನ್ ೧೫ ರಂದು ಬೆಳಿಗ್ಗೆ ೧೦:೩೦ ಗಂಟೆಗೆ ಕುಮದಾ ಕಾರ್ಸ ಪ್ರೈ.ಲಿ, ಇಬ್ರಾಹಿಂಪುರ ರಿಂಗ್ ರೋಡ್ ಎನ್ ಎಚ್-೫೦ ಇಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್, ಟೀಮ್ ಲೀಡರ್, ಕ್ಯಾಶಿಯರ್, ಸಿ.ಆರ್.ಇ. ಸರ್ವಿಸ್ ಅಡ್ವಜರ್, ಟೆಕ್ನೀಶಿಯನ್, ಪ್ಲೋರ್ ಇನ್‌ಚಾರ್ಜ, ರಿಸಪ್ಸೇನಿಸ್ಟ್ ಹಾಗೂ ಇನ್ಸುರನ್ಸ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇರ ಸಂದರ್ಶನ ಆಯೋಜಿಸಲಾಗಿದೆ. ಐ.ಟಿ.ಐ, ಡಿಪ್ಲೋಮಾ, ಪಿಯುಸಿ ಹಾಗೂ ಯಾವುದೇ ಪದವಿ ಪಾಸಾದ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಸ್ವ-ವಿವರದೊಂದಿಗೆ ಈ ನೇರ ಭಾಗವಹಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ:೯೭೪೨೨೭೨೬೪೧ ಹಾಗೂ ಮೊ:೯೯೪೫೦೦೦೭೯೩ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
