ವಿಜಯಪುರ: ೧೮ ನೇ ಲೋಕಸಭಾ ಚುನಾವಣೆಯಲ್ಲಿ ದಲಿತ ನಾಯಕರಾದ ರಮೇಶ ಜಿಗಜಿಣಗಿಯವರು ಸತತ ೭ನೇ ಬಾರಿ ಲೋಕಸಭಾ ಸಂಸದರಾಗಿ ಆಯ್ಕೆ ಆಗಿದ್ದು, ಅವರಿಗೆ ಸಚಿವ ಸ್ಥಾನ ನೀಡುವಂತೆ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಇಬ್ಬರು ದಲಿತ ಬಿಜೆಪಿ ನಾಯಕರು ಆಯ್ಕೆಯಾಗಿರುವದು ಹೆಮ್ಮೆಯ ವಿಷಯವಾಗಿದೆ. ರಮೇಶ ಜಿಗಜಿಣಗಿಯವರು ವಿಜಯಪುರ ಜಿಲ್ಲೆಯಲ್ಲಿ ಭಾರತಿಯ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸುವಲ್ಲಿ ತಮ್ಮ ಹಗಲಿರುಳು ಶ್ರಮವಿದೆ. ಅದೇ ರೀತಿ ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿಯು ಗಟ್ಟಿಯಾಗಿ ಕೂಡಲು ಹಾಗೂ ಬೆಳೆಯಲು ಜಿಗಜಿಣಗಿಯವರು ಪರಿಶ್ರಮ ಬಹಳಷ್ಟಿದ್ದು, ಜಿಗಜಿಣಗಿಯವರು ತಮ್ಮ ರಾಜಕೀಯ ಜೀವನದಲ್ಲಿ ಎಲ್ಲರೊಂದಿಗೆ ಸ್ನೇಹ ಬಾಂಧವ್ಯ ಇಟ್ಟುಕೊಂಡು ಸೋಲಿಲ್ಲದ ಸರ್ಧಾರರಾಗಿದ್ದು, ಇವರು ರಾಜಕೀಯದಲ್ಲಿ ಅಜಾತಶತೃ ಎನಿಸಿಕೊಂಡವರು. ಇಂತಹ ಮುತ್ಸದ್ದಿ ನಾಯಕರಾದ ರಮೇಶ ಜಿಗಜಿಣಗಿಯವರು ೧೮ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಸುಮಾರು ೨೪೦ ಶೀಟುಗಳನ್ನು ಗೆಲ್ಲುವ ಮೂಲಕ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.
ಇಂತಹ ಮುತ್ಸದ್ದಿ ರಾಜಕಾರಣಿಯು ೧೯೮೩, ೧೯೮೫ ಮತ್ತು ೧೯೯೪ರಲ್ಲಿ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ(ಈಗಿನ ನಾಗಠಾಣ ವಿಧಾನಸಭಾ ಕ್ಷೇತ್ರ)ದಿಂದ ೩ ಬಾರಿ ಶಾಸಕರಾಗಿ ಆಯ್ಕೆಯಾಗಿ ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲಿ ಗೃಹ ಸಚಿವರಾಗಿ, ಅಬಕಾರಿ ಸಚಿವರಾಗಿ, ಹಾಗೂ ಜೆ.ಎಚ್. ಪಟೇಲ್ ಸಂಪುಟದಲ್ಲಿ ಸಮಾಜ ಕಲ್ಯಾಣ ಮತ್ತು ಕಂದಾಯ ಸಚಿವರಾಗಿ ಹಲವಾರು ಜನಪರ ಕೆಲಸಗಳನ್ನು ಮಾಡಿದ ಹೆಮ್ಮೆ ಇವರಿಗೆ ಸಲ್ಲುತ್ತದೆ. ೧೯೯೮ರಲ್ಲಿ ಲೋಕಶಕ್ತಿ ಪಕ್ಷದಿಂದ, ೧೯೯೯ರಲ್ಲಿ ಜನತಾದಳದಿಂದ ಮತ್ತು ೨೦೦೪ರಲ್ಲಿ ಬಿಜೆಪಿಯಿಂದ ಚಿಕ್ಕೋಡಿ (ಲೋಕ ಸಭೆ ಚುನಾವಣಾ ಕ್ಷೇತ್ರ)ದಿಂದ ಸಂಸದರಾಗಿ ಹ್ಯಾಟ್ರಿಕ್ ಸಾಧಿಸಿದ್ದಾರೆ. ೨೦೦೯, ೨೦೧೪ ಮತ್ತು ೨೦೧೯ರಲ್ಲಿ ನಡೆದ ಚುನಾವಣೆಯಲ್ಲಿ ವಿಜಯಪುರ ಲೋಕ ಸಭಾ ಕ್ಷೇತ್ರದಿಂದ ಸಂಸದರಾಗಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
ಇಂತಹ ರಾಜಕೀಯ ಮುತ್ಸದ್ದಿಯಾಗಿರುವ ರಮೇಶ ಜಿಗಜಿಣಗಿಯವರು ರಾಜ್ಯದಲ್ಲಿ ಶಾಸಕರಾದ ಸಮಯದಲ್ಲಿ, ಗೃಹ ಸಚಿವರಾಗಿ, ಕಂದಾಯ ಸಚಿವರಾಗಿ, ಜವಳಿ ಸಚಿವರಾಗಿ, ಅಬಕಾರಿ ಸಚಿವರಾಗಿ, ಸಮಾಜ ಕಲ್ಯಾಣ ಸಚಿವರಾಗಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ನಾಯಕನಿಗೆ ಇಲ್ಲಿಯವರೆಗೆ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ತಮ್ಮ ರಾಜಕೀಯ ಜೀವನವನ್ನು ಸಾಗಿಸಿದ್ದಾರೆ.
ಕಾರಣ ಈ ಬಾರಿಯ ಎನ್.ಡಿ.ಎ ನೇತೃತ್ವದ ಬಿಜೆಪಿ ಸರಕಾರದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ದೇಶದ ಹಾಗೂ ವಿಜಯಪುರ ಜಿಲ್ಲೆಯ ಜನರಿಗಾಗಿ ಅಭಿವೃದ್ದಿ ಕೆಲಸ ಮಾಡಲು ಅವಕಾಶ ನೀಡಬೇಕೆಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ವತಿಯಿಂದ ವಿಜಯಪುರ ಜಿಲ್ಲೆಯ ಅಧ್ಯಕ್ಷರಾದ ಮುತ್ತಣ್ಣ ಬ. ಸಾಸನೂರ (ವಕೀಲರು), ಹಣಮಂತ ಆಹೇರಿ, ಅಶೋಕ ಮದಭಾವಿ, ಪುಂಡಲೀಕ ಮಾದರ, ಸಾಯಬಣ್ಣ ರಾಮರಥ, ಪ್ರಕಟಣೆಯಲ್ಲಿ ಆಗ್ರಹಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

