ವಿಜಯಪೂರ: ಗ್ರಾಮೀಣ ವಲಯದ ಶಿವಣಗಿ ಕ್ಲಸ್ಟರ ವ್ಯಾಪ್ತಿಯಲ್ಲಿ ಬರುವ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಗ್ರಾಮದ ಗಣ್ಯರಾದ ರಾಜು ಬಿಜ್ಜರಗಿ ಇವರು ತಮ್ಮ ಅಜ್ಜನವರಾದ ದಿವಂಗತ ಮಲಕಾಜಪ್ಪ ಬಿಜ್ಜರಗಿ ಇವರ ಹೆಸರಿನಲ್ಲಿ 50 ಸಾವಿರ, ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಾಬಾಯಿ ಭರತನೂರ 10 ಸಾವಿರ, ಶಾಲೆಯ ಮಾಜಿ ಎಸ್ಡಿಎಂಸಿ ಅಧ್ಯಕ್ಷ ಶಿವಪ್ಪ ಹಳ್ಳಿ 10 ಸಾವಿರ, ಮತೀನ್ ಮೈದರಗಿ ಸಾಪ್ಟವೇರ್ ಇಂಜನಿಯರ್ 17 ಸಾವಿರ (ಸದರಿ ಶಾಲೆಯ ಮುಖ್ಯಗುರುಮಾತೆ ಎಸ್.ಐ. ಹಕೀಮ್ ಅವರ ಅಳಿಯ) ದೇಣಿಗೆಯಾಗಿ ನೀಡಿರುವರು.
ದೇಣಿಗೆ ನೀಡಿದ ರಾಜು ಬಿಜ್ಜರಗಿ, ಶಿವಪ್ಪ ಹಳ್ಳಿ, ಶಾಂತಾಬಾಯಿ ಭರತನೂರ ಇವರು ಶಾಲೆಯ ಹಳೆಯ ವಿದ್ಯಾರ್ಥಿಗಳಾಗಿದ್ದು, ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಶಾಲೆಯ ಅಭಿವೃದ್ಧಿಗೋಸ್ಕರ ಸದಾ ಸಹಕರಿಸುವುದಾಗಿ ಹೇಳಿದರು.
ದೇಣಿಗೆಯನ್ನು ಸ್ವೀಕರಿಸಿ ಮಾತನಾಡಿದ ಶಾಲೆಯ ಮುಖ್ಯ ಗುರುಮಾತೆ ಎಸ್.ಐ.ಹಕೀಮ್ ಶಾಲೆಯ ಮಕ್ಕಳ ದಾಖಲಾತಿ ಹೆಚ್ಚು ಮಾಡಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ನಾನು ನನ್ನ ಸಿಬ್ಬಂದಿಯವರ ಜೊತೆಗೂಡಿ ಪ್ರಾಮಾಣಿಕವಾಗಿ ಶಕ್ತಿಮೀರಿ ಪ್ರಯತ್ತಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಎಸ್. ಡಿ.ಎಮ್ ಸಿ ಅಧ್ಯಕ್ಷ ಚಿದಾನಂದ ಹಳ್ಳಿ,ಉಪಾಧ್ಯಕ್ಷ ಜಯಪ್ರಕಾಶ ಅವಜಿ.ಸ ಸಿಆರ್ಪಿ ಎಂ.ಎಸ್. ಗುಬಚಿ ಊರಿನ ಯುವ ಮುಖಂಡ ಜಾನರಡ್ಡಿ ಭರತನೂರ, ಗ್ರಾಮ ಪಂಚಾಯತಿ ಸದಸ್ಯ ರಮೇಶ ಮಂಗಾನವರ, ಗೂಳಪ್ಪ ಹಡಗಲಿ, ಶಿಕ್ಷಣ ಪ್ರೇಮಿ ಸಿದ್ದು ಪಡಗಾನೂರ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

