ವಿಜಯಪುರ: ಜೂ.೧೨ರಂದ, ಶೆಗುಣಶಿ ಗ್ರಾಮದಲ್ಲಿ ಜಿಲ್ಲಾ ಆರೊಗ್ಯ ಕೆಂದ್ರ, ಜಿಲ್ಲಾ ಆಸ್ಪತ್ರೆ ಮತ್ತು ರೋಟರಿ ಸಂಸ್ಥೆ ವಿಜಯಪುರ ಉತ್ತರ, ಸಂಜೀವಿನಿ ಫಾರ್ಮಸಿ ಕಾಲೆಜ ಹಾಗು ಬಿ. ಎಲ್. ಡಿ. ಇ. ಸಂಸ್ಥೆಯ ಸಹಯೊಗದೊಂದಿಗೆ ಉಚಿತ ನೇತ್ರ ತಪಾಸಣೆ ಹಾಗು ಶಸ್ತ್ರಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಶಿಬಿರದ ಉದ್ಘಾಟನೆಯನ್ನು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಶಿವಾನಂದ ಮಾಸ್ತಿಹೊಳಿ, ರೋಟರಿ ಡಿಸ್ಟ್ರಿಕ್ಟ ೩೧೭೦ರ ಪ್ರಾಂತಕಾರದಂಧ ರೋ.ನಾಸಿರ ಬೊರ್ಸಾದವಾಲಾ ಮತ್ತು ರೋಟರಿ ಸಂಸ್ಥೆ ವಿಜಯಪುರ ಉತ್ತರ ಅಧ್ಯಕ್ಷರಾದ ರೋ. ಮಲ್ಲು ಕಲಾದಗಿ, ಕಾರ್ಯದರ್ಶಿರಾದ ರೋ. ರಾಜ ಶಹಾ ರು ಉದ್ಘಾಟನೆ ಮಾಡಿದರು.
ಶಿಬಿರದ ಮಹತ್ವ ಕುರಿತು ಡಾ. ಶ್ರೀಮತಿ ಮೀನಾಕ್ಷಿ ಸೊನ್ನದ ಸವಿಸ್ತಾರವಾಗಿ ವಿವರಿಸಿದರು.
ಶೆಗುಣಶಿ ಗ್ರಾಮದ ಪ್ರಮುಖರಾದ ಬಾಪುಗೌಡ ಪಾಟಿಲ ಪ್ರಾಸ್ತಾವಿಕ ಮಾತನಾಡಿದರು.
ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಶಿವಾನಂದ ಮಾಸ್ತಿಹೊಳಿಯವರು ಶಿಬಿರದ ಮಹತ್ವ ಮತ್ತು ಸದುಪಯೊಗ ಪಡೆಯಬೇಕೆಂದು ಮಾತನಾಡಿದರು. ವಂದನಾರ್ಪಣೆಯನ್ನ ರೋ. ವಿಠ್ಠಲ ತೇಲಿಯವರು ಮಾಡಿದರು. ಕಾರ್ಯಕ್ರಮದ ನಿರುಪಣೆಯನ್ನು ಸುಂದರವಾಗಿ ರೋ. ಸುಧಿರ ಪವಾರ ನಿರೂಪಿಸಿದರು.
ಇದೆ ಸಂಧರ್ಭದಲ್ಲಿ ಡಾ. ಸಂಪತ್ ಕುಮಾರ, ಡಾ. ಕವಿತಾ, ಡಾ. ಪ್ರಿಯಂಕಾ ಪಾಟಿಲ, ಡಾ. ಸಂಜಿತ ಗಾಂಧಿ, ಡಾ. ಸ್ನೆಹಲತಾ. ರೋ. ಡಾ. ಅಶೊಕ ವಾಲಿ, ರೋ. ಪ್ರಸಾದ ನಾಯ್ಡು, ರೋ. ಉದಯಕುಮಾರ ಯಾಳವಾರ, ರೋ. ಸಹರ್ಷ ಶಹಾ, ರೋ. ಸಂತೊಶ ಔರಸಂಗ, ರೋ. ಶಿವು ಮುಕರ್ತಿಹಾಳ, ರೋ. ಬಸವರಾಜ ಸೊನ್ನದ, ರೋ. ದಿಲಿಪ ಪುಜಾರಿ, ರೋ. ಗುರುಶಾಂತ ನಿಡೊಣಿ, ರೋ. ಅವಿನಾಶ ಬಾಹೆತಿ, ರೋ. ಸುರೆಶ ಜೊಗುರ ಮತ್ತು ಸಂಜೀವಿನಿ ಫಾರ್ಮಸಿ ಕಾಲೆಜ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಸುಮಾರು ೨೫೦ ರೋಗಿಗಳನ್ನ ತಪಾಸಿಸಿ ಹಾಗು ೨೦ ಜನರನ್ನ ಶಸ್ತ್ರಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಬರಲು ತಿಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

