Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಅವರನ್ನು ಕರ್ತವ್ಯದ ಲೋಪದಡಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.ನಗರದ ಸ್ವಚ್ಚ ಮತ್ತು ನೈರ್ಮಲ್ಯತೆ ಕುರಿತಾಗಿ ಸಾರ್ವಜನಿಕರು ನೀಡಿದ ದೂರುಗಳನ್ನು ಪುರಸಭೆ ಮುಖ್ಯಾಧಿಕಾರಿ ಕಡೆಗಣಿಸಿದ್ದರು. ಕಳೆದ ನಾಲೈದು ದಿನಗಳ ಹಿಂದೆ ನಗರದಲ್ಲಿ ಸೂರಿದ ಬಾರಿ ಮಳೆಯಿಂದ ಪಟ್ಟಣದ ೨೩ ವಾರ್ಡಗಳಲ್ಲಿ ಚರಂಡಿ ನೀರು ಹೊರ ಬಂದು ಮನೆಗಳಲ್ಲಿ ನುಗ್ಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ಅವರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿಲ್ಲ. ಜೊತೆಗೆ ಕಛೇರಿಯ ಯಾವುದೇ ಸಭೆಗಳಿಗೆ ಹಾಜರಿರುವುದಿಲ್ಲ. ಪುರಸಭೆಯಲ್ಲಿ ನಡೆಯುವ ವ್ಯವಹಾರದ ಕುರಿತಾಗಿ ಜಿಲ್ಲಾಧಿಕಾರಿಗಳು ಮಾಹಿತಿ ಕೇಳಿದಾಗ ಅವರು ಯಾವುದೇ ಉತ್ತರ ನೀಡಿರುವುದಿಲ್ಲ. ಇಂತಹ ಹಲವಾರು ವಿಚಾರಗಳ ಕುರಿತಾಗಿ ಕರ್ತವ್ಯ ವೈಫಲ್ಯಗಳನ್ನು ಉಲ್ಲೇಖಿಸಿ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಅವರನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಮಾನತ್ತು ಮಾಡಿದ್ದಾರೆ.
ಸಿಂದಗಿ: ರಾಜ್ಯ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಿರುವುದು ಜನ ಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ. ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಡಿವೈಎಫ್‌ಐ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಮತ್ತು ಕೂಡಲೇ ಬೆಲೆ ಏರಿಕೆಯನ್ನು ಹಿಂಪಡೆಯಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ ಎಂದು ಕರ್ನಾಟಕ ರಾಜ್ಯ ಸಮಿತಿ ಸದಸ್ಯ ರಮೇಶ ಸಾಸಾಬಾಳ ಹೇಳಿದ್ದಾರೆ. ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕ ಸರಕಾರವು ಪೆಟ್ರೋಲ್ ಮತ್ತು ಡೀಜೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿರುವುದರಿಂದಾಗಿ ಪೆಟ್ರೋಲ್ ಬೆಲೆ ೩ರೂ, ಡೀಸೆಲ್ ಬೆಲೆ೩.೫೦ ಪೈಸೆ ಹೆಚ್ಚಳವಾಗಿದೆ. ೮೫.೯೩ ಪೈಸೆಯಿದ್ದ ಡೀಸೆಲ್ ಬೆಲೆ ೮೯.೨೦ ಪೈಸೆಗೆ ಏರಿಕೆಯಾದರೆ ೧೦೦ ರೂಪಾಯಿ ಇದ್ದ ಪೆಟ್ರೋಲ್ ದರ ೧೦೩ ರೂ.ಗೆ ಹೆಚ್ಚಳವಾಗಿದೆ ಇದರಿಂದ ಸಾರ್ವಜನಿಕರಿಗೆ ಹೊರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್, ಡಿಸೇಲ್ ಬೆಲೆಗಳು ದೈನಂದಿನ ಬದುಕಿಗೆ ಜನಸಾಮಾನ್ಯರು ಬಳಸುವ ಅಗತ್ಯ ಸರಕುಗಳ ಮೇಲೆಯೂ ಪರಿಣಾಮ ಬೀರುತ್ತವೆ. ಕಳೆದ ವರ್ಷ ಬರಗಾಲ ಬಿದ್ದಿರುವುದರಿಂದಾಗಿ ಗ್ರಾಮೀಣ…
ಸಿಂದಗಿ: ಬಿ.ಎನ್.ಬಿ ಫೌಂಡೇಶನ್ ಸಂಸ್ಥೆಯನ್ನು ಹುಟ್ಟು ಹಾಕಿದ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹಾಗೂ ಅವರ ಕುಟುಂಬ ಮುಂದಿನ ಯುವ ಪೀಳಿಗೆಗೆ ಸ್ಫೂರ್ತಿದಾಯಕವಾಗಿದ್ದಾರೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು. ಭಾನುವಾರದಂದು ಪಟ್ಟಣದ ಮಾಂಗಲ್ಯ ಭವನದಲ್ಲಿ ಬಿ.ಎನ್.ಬಿ ಫೌಂಡೇಶನ್ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಕುಟುಂಬದಿಂದ ಬಂದಂತಹ ದಿ.ಭೀಮರಾಯಗೌಡರು ಈ ಸಮಾಜದಲ್ಲಿ ನೆನಪು ಉಳಿಯುವಂತಹ ಸಾಧನೆಗಳನ್ನು ಮಾಡಿ ಹೋಗಿದ್ದಾರೆ. ಸಾಧಕರಾಗಬೇಕಾದರೆ ದೃಢ-ಮನಸ್ಸು ಅಗತ್ಯ,ಜೀವನದ ಉತ್ತಮ ಆಲೋಚನೆಗಳು ಮಾತ್ರ ಉತ್ತಮ ಭವಿಷ್ಯದ ಬದುಕನ್ನು ನಿರ್ಧರಿಸುತ್ತವೆ. ಇಂತಹ ಕಾರ್ಯಕ್ರಮಗಳು ಈ ಸಮಾಜದಲ್ಲಿ ಮೇಲಿಂದ ಮೇಲೆ ಜರುಗಬೇಕು. ವಿದ್ಯಾರ್ಥಿಗಳಲ್ಲಿ ಉತ್ತೇಜನ ನೀಡಬೇಕು. ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಅವರಿಗೆ ಪುರಸ್ಕರಿಸುವ ಬಿ.ಎನ್.ಬಿ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದರು. ಈ ವೇಳೆ ಮಾಜಿ ವಿಪ ಸದಸ್ಯ ಅರುಣ ಶಹಾಪುರ ಮಾತನಾಡಿ, ಈ ಹಿಂದೆ ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಮಾಜಿ ಸಚಿವ,…
ವಿಜಯಪುರ: ಮಂಡ್ಯದ ಡಾ.ಜೀಶಂಪ ಸಾಹಿತ್ಯ ವೇದಿಕೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್ ಮಂಡ್ಯ ಹಾಗೂ ಕನ್ನಂಬಾಡಿ ಮತ್ತು ಕಾವೇರಿ ಪ್ರಭ ದಿನಪತ್ರಿಕೆ ಇವರುಗಳ ಆಶ್ರಯದಲ್ಲಿ ಮಂಡ್ಯದ ಗಾಂಧಿ ಭವನದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಅಂಗವಾಗಿ ಜರುಗಿದ 6 ನೆಯ ಅಕ್ಷರ ಜಾತ್ರೆ ಕಾರ್ಯಕ್ರಮದಲ್ಲಿ ಡಾ.ಜೀಶಂಪ ವೇದಿಕೆಯ ಅಧ್ಯಕ್ಷರಾದ ಕೃಷ್ಣ ಸ್ವರ್ಣಸಂದ್ರ ಇವರು ನಗರದ ಸಾಹಿತಿ, ಸಂಘಟಕರಾದ ಪ್ರಕಾಶ್ ಜಹಾಗೀರದಾರ ಇವರಿಗೆ ರಾಜ್ಯ ಮಟ್ಟದ ಕನ್ನಡರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ಆಲಮಟ್ಟಿ: ಕೊಲ್ಹಾರ ತಾಲ್ಲೂಕಿನ ಮಸೂತಿ ಗ್ರಾಮದ ವ್ಯಕ್ತಿಯೊಬ್ಬನನ್ನು ಆಕ್ರಮ ಸಂಬಂಧ ಹಿನ್ನಲೆಯಲ್ಲಿ ಕೊಲೆಗೈದು ಇಲ್ಲಿಯ ಪಾರ್ವತಿಕಟ್ಟಾ ಸೇತುವೆ (ಬೇನಾಳ ಬ್ರಿಜ್) ಮೇಲಿಂದ ಕೃಷ್ಣಾ ನದಿಗೆ ಎಸೆದ ಘಟನೆ ಈಚೆಗೆ ನಡೆದಿದೆ.ಮೃತ ವ್ಯಕ್ತಿ ವಿಜಯಪುರ ತಾಲ್ಲೂಕಿನ ಜುಮನಾಳ ಗ್ರಾಮದ ಹಾಲಿ ವಸ್ತಿ ಮಸೂತಿ ಗ್ರಾಮದ ರಮೇಶ ತಾಯಿ ಮಾಯವ್ವ ಮಾದರ (23).ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಮಸೂತಿ ಗ್ರಾಮದ ಆರೋಪಿಗಳಾದ ಮಂಜುನಾಥ ಬಾಬು ಮಾದರ, ಭೀಮಪ್ಪ ತಾಯಿ ದಾಳವ್ವ ಮಾದರ, ಸಾರೆಪ್ಪ ಹಣಮಂತ ಮಾದರ, ಮುತ್ತು ನಡುವಿನಮನಿ ಸೇರಿ ಕಾರಿನಲ್ಲಿ ಮೃತ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಬೇನಾಳ ಬ್ರಿಜ್ ಬಳಿ ಹೊಡೆದು, ಈಜು ಬಾರದ ಆತನನ್ನು ಮೂವರು ಸೇರಿ ಸೇತುವೆ ಮೇಲಿಂದ ಕೃಷ್ಣಾ ನದಿಗೆ ಎಸೆದಿದ್ದಾರೆ ಎಂದು ಪಿಎಸ್ಐ ಕೆ.ಎನ್. ಯತೀಶ ತಿಳಿಸಿದ್ದಾರೆ. ನಾಲ್ವರನ್ನು ಬಂಧಿಸಲಾಗಿದೆ. 31/12/2023 ರಂದು ಘಟನೆ ನಡೆದಿದ್ದು, 19/3/2024 ರಂದು ಕಾಣೆಯಾದ ದೂರಿನ ಹಿನ್ನಲೆಯಲ್ಲಿ ತನಿಖೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.ಶವ ಹುಡುಕಾಟ;ಶವವನ್ನು ಆಲಮಟ್ಟಿ ಬಳಿಯ ಪಾರ್ವತಿಕಟ್ಟಾ ಸೇತುವೆ…
ವಿಜರಪುರ: ಕಾಂಗ್ರೆಸ್ ಸರಕಾರದ ನಿಜ ರೂಪ ಚುನಾವಣೆಯ ನಂತರ ಬಯಲಾಗ್ತಿದೆ. ತಮ್ಮ ಬಿಟ್ಟಿ ಭಾಗ್ಯಗಳನ್ನು ಕೊಡಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ಸ್ ಏರಿಸಿ ಮಧ್ಯಮ ವರ್ಗದ ಜನರ ಮೇಲೆ ಚಪ್ಪಡಿ ಕಲ್ಲನ್ನು ಎಳೆದಿದ್ದಾರೆ ಎಂದು ಬಿಜೆಪಿ ಮುಖಂಡ ಡಾ.ಗೌತಮ್ ಚೌಧರಿ ಆರೋಪಿಸಿದ್ದಾರೆ.ಶನಿವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ರಾಜ್ಯದಲ್ಲಿ ಮೊದಲೇ ಎಲ್ಲ ದಿನಬಳಕೆ ವಸ್ತುಗಳ ಬೆಳೆಗಳು ಗಗನಕ್ಕೇರಿದ್ದು ಜನಸಾಮಾನ್ಯರು ಹೇಗಪ್ಪಾ ಬದುಕೋದು ಅನ್ನುವಷ್ಟರಲ್ಲಿ ಮುಖ್ಯಮಂತ್ರಿಗಳು ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಜನರಿಗೆ ಕಾಂಗ್ರೆಸ್ ಸರಕಾರದ ಮೇಲೆ ಸಂಪೂರ್ಣವಾಗಿ ವಿಶ್ವಾಸ ಹೊರಟು ಹೋಗಿದೆ. ಈ ಕೂಡಲೇ ಏರಿಸಿರುವ ಸೆಸ್ಸನ್ನು ಇಳಿಸಬೇಕು, ಇಲ್ಲವಾದರೆ ರಾಜ್ಯಾದ್ಯಂತ ಪ್ರತಿಭಟನೆಯನ್ನು ಎದುರಿಸಿಲು ಸಿದ್ಧವಾಗಿ ಎಂದು ಬಿಜೆಪಿ ಮುಖಂಡ ಡಾ.ಗೌತಮ್ ಆರ್ ಚೌಧರಿ ಎಚ್ಚರಿಸಿದ್ದಾರೆ.
ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಕಟ್ಟುನಿಟ್ಟಿನ ಸೂಚನೆ ವಿಜಯಪುರ: ಜಿಲ್ಲೆಯ ಅಭಿವೃದ್ದಿಗಾಗಿ ಎಲ್ಲ ಅಧಿಕಾರಿಗಳು ಚುರುಕಿನಿಂದ ಕಾರ್ಯನಿರ್ವಹಿಸುವ ಮೂಲಕ ಉತ್ತಮ ಆಡಳಿತ ನೀಡಬೇಕು. ಅಭಿವೃದ್ದಿ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಅಭಿವೃದ್ದಿ ವಿಷಯದಲ್ಲಿ ಅಸಡ್ಡೆ, ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜರುಗಿದ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ತ್ರೆöÊಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಪ್ರತಿಯೊಂದು ಕಾರ್ಯಕ್ಕೆ ನೀತಿ ಸಂಹಿತೆ ನೆಪ ಹೇಳಬೇಡಿ ನೀತಿ ಸಂಹಿತೆ ಯಾವುದೇ ಅಭಿವೃದ್ದಿ ಕಾರ್ಯಗಳಿಗೆ ಅಡ್ಡಿ ಬರುವುದಿಲ್ಲ. ನೀತಿ ಸಂಹಿತೆ ನೆಪ ನೀಡಿ ನುಣುಚಿಕೊಳ್ಳಬೇಡಿ ಪ್ರತಿಯೊಬ್ಬರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಸಚಿವರು ಅಧಿಕಾರಿಗಳಿಗೆ ತರಾಟೆಗೆ ತೆಗದುಕೊಂಡರು.ಕೆಡಿಪಿ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿಗಳ ನಿರ್ದೇಶನವಿರುವ ಹಿನ್ನಲೆಯಲ್ಲಿ ಉತ್ತಮ ಆಡಳಿತ ಒದಗಿಸಲು…
ವಿಜಯಪುರ: ೧೦ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿಯಾಗಿ ಜಿಲ್ಲಾ ಪಂಚಾಯತ್ ಆಯುಷ್ ಇಲಾಖೆ ವತಿಯಿಂದ ಯೋಗೋತ್ಸವ ಕಾರ್ಯಕ್ರಮ ಹಾಗೂ ಐಆರ್‌ಬಿ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳಿಗೆ ದೇಹದ ತೂಕ ನಿರ್ವಹಣೆ ಮತ್ತು ಆಹಾರ ಪದ್ಧತಿ ಕುರಿತು ತರಬೇತಿ ಕಾರ್ಯಾಗಾರವನ್ನು ಐಆರ್‌ಬಿಯಲ್ಲಿ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಡೆಪ್ಯೂಟಿ ಕಮಾಂಡೆಂಟ್ ಪ್ರಸನ್ನಕುಮಾರ ಅವರು ಮಾತನಾಡಿ, ಸದೃಢ ದೇಹದಲ್ಲಿ ಸದೃಢ ಮನಸ್ಸು ನೆಲೆಸಿರುತ್ತದೆ. ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ದಿನನಿತ್ಯ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಇತ್ತೀಚಿನ ದಿನಗಳಲ್ಲಿ ಜಂಕ್‌ಫುಡ್ ಮತ್ತು ಕಲುಷಿತ ವಿಷಕಾರಿ ಆಹಾರದಿಂದ ಮಾನವನ ಮೇಲಾಗುವ ಪರಿಣಾಮಗಳು ಹಾಗೂ ಆಹಾರ ಪದ್ಧತಿ, ಶುದ್ಧ ಆಹಾರ ಸೇವನೆ, ದೈನಂದಿನ ಜೀವನ ಕ್ರಮದ ಬಗ್ಗೆ ಆಯುಷ್ ಇಲಾಖೆಯ ಡಾ.ವಿಜಯಮಹಾಂತೇಶ ದೇಸಾಯಿ ಮಾಹಿತಿ ನೀಡಿದರು.ವಿವಿಧ ವಿಷಯಗಳ ಕುರಿತು ಡಾ. ಬಸವರಾಜ ವಗ್ಗರಗಿ, ಶ್ರೀಮತಿ ಸುನೀತಾ ಬಿರಾದಾರ ಮಾಹಿತಿ ನೀಡಿದರು. ಯೋಗಾಸನ ಮತ್ತು ಪ್ರಾಣಾಮಗಳು, ಧ್ಯಾನದ ಬಗ್ಗೆ ಯೋಗಶಿಕ್ಷಕರಾದ ಚಂದ್ರಶೇಖರ ರಾಮನಗೌಡ ಕಲಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಮಾಂಡೆಂಟ್ ಎನ್.ಬಿ.ಮೆಳ್ಳೆಗಟ್ಟಿ ವಹಿಸಿದ್ದರು.ಕಾರ್ಯಕ್ರಮದಲ್ಲಿ ಸಹಾಯಕ ಕಮಾಂಡೆಮಟ್ ಶರಣಬಸವ ಡಾ.ಮಹೇಶ…
ಮುದ್ದೇಬಿಹಾಳ: ಇತ್ತೀಚೆಗೆ ಹಾವು ಕಚ್ಚಿ ಮೃತಪಟ್ಟಿದ್ದ ತಾಲೂಕಿನ ನಾಲತವಾಡ ಪಟ್ಟಣದ ಪತ್ರಕರ್ತ ಉಮೇಶ ಆಲಕೊಪ್ಪರ ಅವರ ಮನೆಗೆ ಸಾಬೂನ ಮತ್ತು ಮಾರ್ಜಕ ನಿಮಗದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.ನಂತರ ಮಾತನಾಡಿದ ಅವರು ಮೃತ ಪತ್ರಕರ್ತನಿಗೆ ಸರಕಾರದಿಂದ ಸಿ.ಎಂ ಅವರ ವಿಶೇಷ ಅನುದಾನದಲ್ಲಿ ಆರ್ಥಿಕವಾಗಿ ಸಹಾಯ ಕೊಡಿಸುತ್ತೇನೆ. ಮೆಡಿಕಲ್ ರಿಪೋರ್ಟ ಹಚ್ಚಿ ನನಗೆ ಕೊಡಿ ಎಂದರು, ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸಬೇಡಿ, ಅವರು ಎಲ್ಲಿಯವರೆಗೆ ಶಿಕ್ಷಣ ಕಲಿಯಲು ಬಯಸುತ್ತಾರೆ ಶಿಕ್ಷಣ ಕೊಡಿಸಿ ಎಂದರು.ಈ ವೇಳೆ ಮುಖಂಡರಾದ ರಾಯನಗೌಡ ತಾತರೆಡ್ಡಿ, ಎ.ಜಿ.ಗಂಗನಗೌಡರ, ಪ.ಪಂ ಸದಸ್ಯ ಬಸವರಾಜ ಗಂಗನಗೌಡರ, ರಮೇಶ ಆಲಕೊಪ್ಪರ, ಸಿದ್ದಣ್ಣ ಆಲಕೊಪ್ಪರ, ದೌರ್ಜನ್ಯ ಸಮೀತಿ ಸದಸ್ಯ ಮಲ್ಲು ತಳವಾರ, ಹಣಮಂತ ಕುರಿ, ಪರಶು ಕೆಂಭಾವಿ, ಬಸವರಾಜ ಇಲಕಲ್ ಹಾಗೂ ಇನ್ನಿತರರು ಇದ್ದರು.
