ಸಿಂದಗಿ: ಬಿ.ಎನ್.ಬಿ ಫೌಂಡೇಶನ್ ಸಂಸ್ಥೆಯನ್ನು ಹುಟ್ಟು ಹಾಕಿದ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹಾಗೂ ಅವರ ಕುಟುಂಬ ಮುಂದಿನ ಯುವ ಪೀಳಿಗೆಗೆ ಸ್ಫೂರ್ತಿದಾಯಕವಾಗಿದ್ದಾರೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಭಾನುವಾರದಂದು ಪಟ್ಟಣದ ಮಾಂಗಲ್ಯ ಭವನದಲ್ಲಿ ಬಿ.ಎನ್.ಬಿ ಫೌಂಡೇಶನ್ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಕುಟುಂಬದಿಂದ ಬಂದಂತಹ ದಿ.ಭೀಮರಾಯಗೌಡರು ಈ ಸಮಾಜದಲ್ಲಿ ನೆನಪು ಉಳಿಯುವಂತಹ ಸಾಧನೆಗಳನ್ನು ಮಾಡಿ ಹೋಗಿದ್ದಾರೆ. ಸಾಧಕರಾಗಬೇಕಾದರೆ ದೃಢ-ಮನಸ್ಸು ಅಗತ್ಯ,ಜೀವನದ ಉತ್ತಮ ಆಲೋಚನೆಗಳು ಮಾತ್ರ ಉತ್ತಮ ಭವಿಷ್ಯದ ಬದುಕನ್ನು ನಿರ್ಧರಿಸುತ್ತವೆ. ಇಂತಹ ಕಾರ್ಯಕ್ರಮಗಳು ಈ ಸಮಾಜದಲ್ಲಿ ಮೇಲಿಂದ ಮೇಲೆ ಜರುಗಬೇಕು. ವಿದ್ಯಾರ್ಥಿಗಳಲ್ಲಿ ಉತ್ತೇಜನ ನೀಡಬೇಕು. ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಅವರಿಗೆ ಪುರಸ್ಕರಿಸುವ ಬಿ.ಎನ್.ಬಿ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದರು.
ಈ ವೇಳೆ ಮಾಜಿ ವಿಪ ಸದಸ್ಯ ಅರುಣ ಶಹಾಪುರ ಮಾತನಾಡಿ, ಈ ಹಿಂದೆ ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಮಾಜಿ ಸಚಿವ, ಹಾಲಿ ಸಂಸದ ರಮೇಶ ಜಿಗಜಿಣಗಿ ಅವರು ಕರ್ನಾಟಕ ರಾಜ್ಯದಲ್ಲಿ ಮುರಾರ್ಜಿ ವಸತಿ ಶಾಲೆಯ ಕಲ್ಪನೆಯನ್ನು ತಂದಿದ್ದಕ್ಕೂ ಇಂದು ಸಾರ್ಥಕವಾಗಿದೆ. ಕಾರಣ ಸಾಧನೆ ಮಾಡಿ ಇಂದು ಈ ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನಗೊಳ್ಳಲಿರುವ ಅಂಕಿತಾ ಕೊಣ್ಣೂರ ಅಧ್ಯಯನ ಮಾಡಿದ್ದು ಮುರಾರ್ಜಿ ವಸತಿ ಶಾಲೆ.ಈ ಶಾಲೆ ಸಂಸದ ರಮೇಶ ಜಿಗಜಿಣಗಿ ಅವರ ಕಲ್ಪನೆ ಎಂಬುದು ಹೆಮ್ಮೆಯ ವಿಷಯ. ಬಡವರು, ದಿನ-ದಲಿತರು, ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣವನ್ನು ಪಡೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಮುರಾರ್ಜಿ ವಸತಿ ಶಾಲೆಯ ಕಲ್ಪನೆ ತಂದಿದ್ದು ಇಂದು ಈ ವಿದ್ಯಾರ್ಥಿ ಸಾಧನೆ ಮಾಡುವ ಮೂಲಕ ಸಾರ್ಥಕಗೊಳಿಸಿದ್ದಾಳೆ ಎಂದರು.
ಈ ವೇಳೆ ಯಾದಗಿರಿಯ ಸಾಹಿತಿ ಶಿವಶರಣಪ್ಪ ಶಿರೂರ ಉಪನ್ಯಾಸ ನೀಡಿದರು. ವಿಜಯಪುರ ವನಶ್ರೀ ಮಠದ ಡಾ.ಜಯಬಸವ ಕುಮಾರ ಸ್ವಾಮಿಗಳು, ಯಂಕಂಚಿ ಶ್ರೀಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು, ಕನ್ನೊಳ್ಳಿ ಶ್ರೀಮಠದ ಸಿದ್ದಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಈ ವೇಳೆ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾ ಕೊಣ್ಣೂರ ಹಾಗೂ ೨೫ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸುವುದರ ಜೊತೆಗೆ ಮಾಜಿ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಫೌಂಡೇಶನ್ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಸ್ವಾಗತಿಸಿದರು. ಸಿದ್ದಲಿಂಗ ಚೌದರಿ ನಿರೂಪಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ, ಡಾ.ಚನ್ನವೀರ ಮನಗೂಳಿ, ಗೋಲಗೇರಿಯ ಸಿದ್ದರಾಮ ಸ್ವಾಮೀಜಿ, ಮುಖಂಡ ಗುರಣ್ಣಗೌಡ ಬಿರಾದಾರ, ಸಿಪಿಐ ಪರಶುರಾಮ ಮನಗೂಳಿ, ಅಶೋಕ ವಾರದ, ಸಂತೋಷ ಪಾಟೀಲ್ ಡಂಬಳ, ಸಿದ್ದು ಬಳ್ಳಾ, ಸಿದ್ದನಗೌಡ ಬಿರಾದಾರ, ಬಸವರಾಜ ಬಿರಾದಾರ, ಭಗವಂತರಾಯಗೌಡ ಬಿರಾದಾರ, ಸೇವಾಲಾಲ ಸಿಂಗ್, ಮಡಿವಾಳಪ್ಪಗೌಡ ಬಿರಾದಾರ, ಮಲ್ಲನಗೌಡ ಬಿರಾದಾರ, ಡಾ.ವಿಶ್ವನಾಥ ಬಿರಾದಾರ್ ನಿಂಗನಗೌಡ ಬಿರಾದಾರ್ ಗೊಲ್ಲಾಳಪ್ಪಗೌಡ ಬಿರಾದಾರ ಸುರೇಶ ಮಳಲಿ, ಪೀರು ಕೆರೂರ, ಶ್ರೀಮಂತ ಪಾಟೀಲ ಕಾಶಿರಾಯಗೌಡ ಪಾಟೀಲ ಸೇರಿದಂತೆ, ದಿ.ಭೀಮರಾಯಗೌಡರ ಕುಟುಂಬಸ್ಥರು, ಅಭಿಮಾನಿಗಳು ಸಿಂದಗಿ, ಆಲಮೇಲ, ಮಾಗಣಗೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

