ಮುದ್ದೇಬಿಹಾಳ: ಇತ್ತೀಚೆಗೆ ಹಾವು ಕಚ್ಚಿ ಮೃತಪಟ್ಟಿದ್ದ ತಾಲೂಕಿನ ನಾಲತವಾಡ ಪಟ್ಟಣದ ಪತ್ರಕರ್ತ ಉಮೇಶ ಆಲಕೊಪ್ಪರ ಅವರ ಮನೆಗೆ ಸಾಬೂನ ಮತ್ತು ಮಾರ್ಜಕ ನಿಮಗದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ನಂತರ ಮಾತನಾಡಿದ ಅವರು ಮೃತ ಪತ್ರಕರ್ತನಿಗೆ ಸರಕಾರದಿಂದ ಸಿ.ಎಂ ಅವರ ವಿಶೇಷ ಅನುದಾನದಲ್ಲಿ ಆರ್ಥಿಕವಾಗಿ ಸಹಾಯ ಕೊಡಿಸುತ್ತೇನೆ. ಮೆಡಿಕಲ್ ರಿಪೋರ್ಟ ಹಚ್ಚಿ ನನಗೆ ಕೊಡಿ ಎಂದರು, ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸಬೇಡಿ, ಅವರು ಎಲ್ಲಿಯವರೆಗೆ ಶಿಕ್ಷಣ ಕಲಿಯಲು ಬಯಸುತ್ತಾರೆ ಶಿಕ್ಷಣ ಕೊಡಿಸಿ ಎಂದರು.
ಈ ವೇಳೆ ಮುಖಂಡರಾದ ರಾಯನಗೌಡ ತಾತರೆಡ್ಡಿ, ಎ.ಜಿ.ಗಂಗನಗೌಡರ, ಪ.ಪಂ ಸದಸ್ಯ ಬಸವರಾಜ ಗಂಗನಗೌಡರ, ರಮೇಶ ಆಲಕೊಪ್ಪರ, ಸಿದ್ದಣ್ಣ ಆಲಕೊಪ್ಪರ, ದೌರ್ಜನ್ಯ ಸಮೀತಿ ಸದಸ್ಯ ಮಲ್ಲು ತಳವಾರ, ಹಣಮಂತ ಕುರಿ, ಪರಶು ಕೆಂಭಾವಿ, ಬಸವರಾಜ ಇಲಕಲ್ ಹಾಗೂ ಇನ್ನಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

