ಆಲಮಟ್ಟಿ: ಕೊಲ್ಹಾರ ತಾಲ್ಲೂಕಿನ ಮಸೂತಿ ಗ್ರಾಮದ ವ್ಯಕ್ತಿಯೊಬ್ಬನನ್ನು ಆಕ್ರಮ ಸಂಬಂಧ ಹಿನ್ನಲೆಯಲ್ಲಿ ಕೊಲೆಗೈದು ಇಲ್ಲಿಯ ಪಾರ್ವತಿಕಟ್ಟಾ ಸೇತುವೆ (ಬೇನಾಳ ಬ್ರಿಜ್) ಮೇಲಿಂದ ಕೃಷ್ಣಾ ನದಿಗೆ ಎಸೆದ ಘಟನೆ ಈಚೆಗೆ ನಡೆದಿದೆ.
ಮೃತ ವ್ಯಕ್ತಿ ವಿಜಯಪುರ ತಾಲ್ಲೂಕಿನ ಜುಮನಾಳ ಗ್ರಾಮದ ಹಾಲಿ ವಸ್ತಿ ಮಸೂತಿ ಗ್ರಾಮದ ರಮೇಶ ತಾಯಿ ಮಾಯವ್ವ ಮಾದರ (23).
ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಮಸೂತಿ ಗ್ರಾಮದ ಆರೋಪಿಗಳಾದ ಮಂಜುನಾಥ ಬಾಬು ಮಾದರ, ಭೀಮಪ್ಪ ತಾಯಿ ದಾಳವ್ವ ಮಾದರ, ಸಾರೆಪ್ಪ ಹಣಮಂತ ಮಾದರ, ಮುತ್ತು ನಡುವಿನಮನಿ ಸೇರಿ ಕಾರಿನಲ್ಲಿ ಮೃತ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಬೇನಾಳ ಬ್ರಿಜ್ ಬಳಿ ಹೊಡೆದು, ಈಜು ಬಾರದ ಆತನನ್ನು ಮೂವರು ಸೇರಿ ಸೇತುವೆ ಮೇಲಿಂದ ಕೃಷ್ಣಾ ನದಿಗೆ ಎಸೆದಿದ್ದಾರೆ ಎಂದು ಪಿಎಸ್ಐ ಕೆ.ಎನ್. ಯತೀಶ ತಿಳಿಸಿದ್ದಾರೆ. ನಾಲ್ವರನ್ನು ಬಂಧಿಸಲಾಗಿದೆ. 31/12/2023 ರಂದು ಘಟನೆ ನಡೆದಿದ್ದು, 19/3/2024 ರಂದು ಕಾಣೆಯಾದ ದೂರಿನ ಹಿನ್ನಲೆಯಲ್ಲಿ ತನಿಖೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.
ಶವ ಹುಡುಕಾಟ;
ಶವವನ್ನು ಆಲಮಟ್ಟಿ ಬಳಿಯ ಪಾರ್ವತಿಕಟ್ಟಾ ಸೇತುವೆ ಬಳಿ ಎಸೆದಿದ್ದಾಗಿ ತನಿಖೆಯ ವೇಳೆ ಆರೋಪಿಗಳು ಹೇಳಿದ್ದರಿಂದ, ಕೃಷ್ಣಾ ನದಿ ಹಿನ್ನೀರಿನಲ್ಲಿ ಎರಡು ದಿನಗಳ ಕಾಲ ಕೂಡಗಿ ಪೊಲೀಸರು ಸ್ಥಳೀಯ ಮೀನುಗಾರರು ಹಾಗೂ ಪೊಲೀಸರ ನೆರವಿನೊಂದಿಗೆ ಶವ ಹುಡುಕಾಟ ನಡೆಸಿದರು. ಶವ ಮಾತ್ರ ಇನ್ನೂವರೆಗೂ ಪತ್ತೆಯಾಗಿಲ್ಲ,
ಕೂಡಗಿ ಪಿಎಸ್ಐ ಕೆ.ಎನ್. ಯತೀಶ, ನಿಡಗುಂದಿ ಸಿಪಿಐ ಶರಣಗೌಡ ಗೌಡರ ನೇತೃತ್ವದಲ್ಲಿ ತನಿಖೆ ನಡೆದಿದೆ
Subscribe to Updates
Get the latest creative news from FooBar about art, design and business.
ಮಸೂತಿ ಗ್ರಾಮದ ವ್ಯಕ್ತಿ ಕೊಲೆ: ಆಲಮಟ್ಟಿ ಹಿನ್ನೀರಿನಲ್ಲಿ ಶವ ಹುಡುಕಾಟ
Related Posts
Add A Comment

