ವಿಜರಪುರ: ಕಾಂಗ್ರೆಸ್ ಸರಕಾರದ ನಿಜ ರೂಪ ಚುನಾವಣೆಯ ನಂತರ ಬಯಲಾಗ್ತಿದೆ. ತಮ್ಮ ಬಿಟ್ಟಿ ಭಾಗ್ಯಗಳನ್ನು ಕೊಡಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ಸ್ ಏರಿಸಿ ಮಧ್ಯಮ ವರ್ಗದ ಜನರ ಮೇಲೆ ಚಪ್ಪಡಿ ಕಲ್ಲನ್ನು ಎಳೆದಿದ್ದಾರೆ ಎಂದು ಬಿಜೆಪಿ ಮುಖಂಡ ಡಾ.ಗೌತಮ್ ಚೌಧರಿ ಆರೋಪಿಸಿದ್ದಾರೆ.
ಶನಿವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ರಾಜ್ಯದಲ್ಲಿ ಮೊದಲೇ ಎಲ್ಲ ದಿನಬಳಕೆ ವಸ್ತುಗಳ ಬೆಳೆಗಳು ಗಗನಕ್ಕೇರಿದ್ದು ಜನಸಾಮಾನ್ಯರು ಹೇಗಪ್ಪಾ ಬದುಕೋದು ಅನ್ನುವಷ್ಟರಲ್ಲಿ ಮುಖ್ಯಮಂತ್ರಿಗಳು ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಜನರಿಗೆ ಕಾಂಗ್ರೆಸ್ ಸರಕಾರದ ಮೇಲೆ ಸಂಪೂರ್ಣವಾಗಿ ವಿಶ್ವಾಸ ಹೊರಟು ಹೋಗಿದೆ. ಈ ಕೂಡಲೇ ಏರಿಸಿರುವ ಸೆಸ್ಸನ್ನು ಇಳಿಸಬೇಕು, ಇಲ್ಲವಾದರೆ ರಾಜ್ಯಾದ್ಯಂತ ಪ್ರತಿಭಟನೆಯನ್ನು ಎದುರಿಸಿಲು ಸಿದ್ಧವಾಗಿ ಎಂದು ಬಿಜೆಪಿ ಮುಖಂಡ ಡಾ.ಗೌತಮ್ ಆರ್ ಚೌಧರಿ ಎಚ್ಚರಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಪೆಟ್ರೋಲ್-ಡೀಸೆಲ್ ಮೇಲಿನ ಸೆಸ್ಸ್ ಏರಿಕೆ ಸಲ್ಲದು :ಡಾ.ಗೌತಮ್ ಚೌಧರಿ
Related Posts
Add A Comment

