Author: editor.udayarashmi@gmail.com

ಮುದ್ದೇಬಿಹಾಳ: ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಮ್ ಅವರ ೧೧೭ ನೇ ಜಯಂತ್ಯುತ್ಸವವನ್ನು, ಪಟ್ಟಣ ಆಲಮಟ್ಟಿ ರಸ್ತೆಯಲ್ಲಿರುವ ಡಾ.ಬಾಬು ಜಗಜೀವರಾಮ್ ಅವರ ವೃತ್ತಕ್ಕೆ ಹೂಮಾಲೆಗಳಿಂದ ಅಲಂಕರಿಸುವ ಮೂಲಕ, ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮತ್ತು ತಾಲೂಕು ಆಡಳಿತದ ವತಿಯಿಂದ ತಹಶೀಲ್ದಾರ ಕಚೇರಿಯಲ್ಲಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಳ ಹಾಗೂ ಸುಂದರವಾಗಿ ಆಚರಿಸಲಾಯಿತು.ಈ ವೇಳೆ ತಹಶೀಲ್ದಾರ ಬಸವರಾಜ ನಾಗರಾಳ, ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎಸ್.ಕಲ್ಮನಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜೀವ ತಿಪರೆಡ್ಡಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ಸತೀಶ ತಿವಾರಿ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಿವಾನಂದ ಮೇಟಿ, ಮುಖಂಡರಾದ ಡಿ.ಬಿ.ಮುದೂರ, ವಾಯ್.ಎಚ್.ವಿಜಯಕರ, ಸಿ.ಜಿ.ವಿಜಯಕರ, ಶಿವು ಶಿವಪೂರ, ಯಲ್ಲಪ್ಪ ಚಲವಾದಿ, ಅಂಗವಿಕಲರ ಒಕ್ಕೂಟದ ಅಧ್ಯಕ್ಷ ಎಸ್.ಕೆ.ಘಾಟಿ ಸೇರಿದಂತೆ ಮತ್ತೀತರರು ಇದ್ದರು.

Read More

ವಿಜಯಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ವಿಜಯಪುರ: ತೆರೆದ ಕೊಳವೆಬಾವಿಗಳನ್ನು ಮುಚ್ಚುವಲ್ಲಿ ನಾಗರಿಕರ ಜವಾಬ್ದಾರಿಯೂ ಇರುತ್ತದೆ ಎಂದು ಜಿಲ್ಲಾಧಿಕಾರಿ ಟಿ ಭೂಬಾಲನ್ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು, ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ತೋಟದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಮಗುವನ್ನು ಸುರಕ್ಷಿತವಾಗಿ ಸಂರಕ್ಷಣೆ ಮಾಡಿರುವ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾತ್ವಿಕ ಸತೀಶ ಮುಜಗೊಂಡ ಮಗುವಿನ ರಕ್ಷಣಾ ಕಾರ್ಯಾಚರಣೆಯಂತೆ ಎಲ್ಲಾ ಕಾರ್ಯಚರಣೆಗಳು ಯಶಸ್ವಿಗೊಳ್ಳುವುದಿಲ್ಲ, ಕೆಲವೇ ಕೆಲವು ಯಶಸ್ವಿಗೋಳ್ಳುತ್ತವೆ. ಈ ಹಿನ್ನಲೆಯಲ್ಲಿ ರೈತರು ಸಾರ್ವಜನಿಕರು ತಾವು ಕೊರಿಸುವ ಕೊಳವೆ ಬಾವಿಗಳ ಸುರಕ್ಷತೆಯನ್ನು ಕಾಯ್ದುಕೊಳ್ಳುವಲ್ಲಿ ಅವರ ಜವಾಬ್ದಾರಿಯೂ ಇದೆ. ಇದಕ್ಕೆ ಸಂಬಂದಿಸಿದಂತೆ ಸರ್ಕಾರದ ಸುತ್ತೋಲೆ ಇದ್ದು, ಇನ್ನು ಮುಂದೆ ಸುತ್ತೋಲೆಯ ಮಾನದಂಡಗಳನ್ನು ಕಡ್ಡಾಯವಾಗಿ ಅನುಷ್ಟಾನಗೊಳಿಸಲಾಗುವುದು. ಲಚ್ಯಾಣ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಳವೆಬಾವಿ ತೆಗೆದ ಏಜನ್ಸಿಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.ಏ. ೩ರಂದು ಸಂಜೆ ೫:೩೦ರ ಸುಮಾರಿಗೆ ಕೋಳವೆ ಬಾವಿಗೆ ಸಿಲುಕಿದ ಮಗುವನ್ನು ಗಮನಿಸಿದ ಪಾಲಕರು ತಕ್ಷಣವೇ ಸ್ಥಳೀಯ ಆಡಳಿತ…

Read More

ಡಾ.ಬಾಬು ಜಗಜೀವನ ರಾಮ್ ೧೧೭ನೇ ಜಯಂತಿ ಆಚರಣೆಯಲ್ಲಿ ಡಿಸಿ ಟಿ ಭೂ ಬಾಲನ್ ಅಭಿಮತ ವಿಜಯಪುರ: ಭಾರತ ದೇಶದ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಪ್ರಮಖ ಪಾತ್ರ ವಹಿಸಿದ ಡಾ.ಬಾಬು ಜಗಜೀವನರಾಮ್ ರವರು ಅನನ್ಯ ಕೊಡುಗೆಗಳನ್ನು ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಡಾ. ಬಾಬು ಜನಜೀವನರಾಮ್ ಅವರ ೧೧೭ ನೇ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಅವರು ಮಾತನಾಡಿ, ಭಾತದ ಪ್ರಥಮ ಕೃಷಿ ಸಚಿವರಾಗಿ ರೈತರ ಅಭಿವೃದ್ಧಿಗಾಗಿ ಮಹತ್ತರ ಬದಲಾವಣೆಗಳನ್ನು ತಂದು ದೇಶದಲ್ಲಿ ಹಸಿರು ಕ್ರಾಂತಿಯನ್ನೆ ಮಾಡಿದ ಮಹಾನ್ ನಾಯಕರಾಗಿ ಬೆಳೆದು ಬರುವುದರೊಂದಿಗೆ ರಕ್ಷಣಾ ಸಚಿವರಾಗಿ ಭಾರತ ಹಾಗೂ ಪಾಕಿಸ್ತಾನ ಯುದ್ಧ ಸಂದರ್ಭದಲ್ಲಿ ಯುದ್ಧದ ನೇತ್ರೃತ್ವವನ್ನು ವಹಿಸಿ ಯುದ್ಧದಲ್ಲಿ ಜಯಶಾಲಿಯಾಗಲು ಪ್ರಮುಖ ಪಾತ್ರ ವಹಿಸಿದ್ದರು ಅವರು ಸ್ವಾತಂತ್ರ ಹೋರಾಟಗಾರರಾಗಿ ಸಾಮಾಜಿಕ ನ್ಯಾಯದ ಹೋರಾಟಗಾರರಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಿದ ಅವರ ಆದರ್ಶ ನಮಗೆ ಮಾದರಿಯಾಗಿವೆ ಎಂದು…

Read More

ವಿಜಯಪುರ: ಪ್ರತಿವರ್ಷ ಏಪ್ರಿಲ್ 5 ರಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಆತ್ಮಸಾಕ್ಷಿ ದಿನವನ್ನು ಆಚರಿಸಲಾಗುತ್ತದೆ. ‘ಪ್ರೀತಿ ಮತ್ತು ಆತ್ಮಸಾಕ್ಷಿಯೊಂದಿಗೆ ಶಾಂತಿಯನ್ನು ಉತ್ತೇಜಿಸುವ’ ವಿಷಯದೊಂದಿಗೆ ಈ ಆತ್ಮಸಾಕ್ಷಿ ದಿನವನ್ನು ಆಚರಣೆ ಮಾಡಲಾಗುತ್ತಿದೆ.ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2019 ಜುಲೈ 25ರಂದು ಪ್ರೀತಿ ಮತ್ತು ಆತ್ಮಸಾಕ್ಷಿಯೊಂದಿಗೆ ಶಾಂತಿಯ ಸಂಸ್ಕೃತಿ ಉತ್ತೇಜಿಸುವ ನಿರ್ಣಯವನ್ನು ಅಂಗೀಕರಿಸುವುದರೊಂದಿಗೆ ಈ ದಿನವನ್ನು ಘೋಷಿಸಿತು.ಸ್ಥಳೀಯ, ರಾಷ್ಟ್ರೀಯ ಮತ್ತು ಪ್ರಾದೇಶಿಕ ಸಮುದಾಯಗಳ ಪದ್ಧತಿಗಳಿಗೆ ಅನುಗುಣವಾಗಿ ಪ್ರೀತಿ ಮತ್ತು ಜಾಗೃತಿಯೊಂದಿಗೆ ಶಾಂತಿಯನ್ನು ನಿರ್ಮಿಸುವ ಮಹತ್ವದ ಬಗ್ಗೆ ಈ ದಿನವು ಜಾಗೃತಿ ಮೂಡಿಸುತ್ತದೆ. ಅಲ್ಲದೇ ಪ್ರೀತಿ ಮತ್ತು ಶಾಂತಿ, ಜಾಗೃತಿ ಮತ್ತು ಸುಸ್ಥಿರ ಅಭಿವೃದ್ಧಿ ನಡುವಿನ ಸಂಬಂಧವನ್ನೂ ಈ ದಿನ ಎತ್ತಿ ತೋರಿಸುತ್ತದೆ.ಮಾನವರು ಪರಸ್ಪರ ಸಹಾನುಭೂತಿಯಿಂದ ನಡೆದುಕೊಳ್ಳಬೇಕು ಮತ್ತು ಕ್ರೌರ್ಯ ತಡೆಯಲು ಸಹೋದರತ್ವ ಭಾವನೆ ಬೆಳೆಸಿಕೊಳ್ಳಬೇಕು. ಧರ್ಮ, ಭಾಷೆ, ಜನಾಂಗ ಅಥವಾ ಲಿಂಗವನ್ನು ಲೆಕ್ಕಿಸದೇ ಶಾಂತಿಯುತ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಮತ್ತು ಭವಿಷ್ಯವನ್ನು ಹಿಂಸಾಚಾರದಿಂದ ರಕ್ಷಿಸುವ ಅಗತ್ಯವನ್ನು ಇದು ತಿಳಿಸಿದೆ.ಇದು ಮಾನವ ಹಕ್ಕುಗಳು ಮತ್ತು ಗೌರವವನ್ನು ಆಧರಿಸಿದ ಆತ್ಮಸಾಕ್ಷಿಯ ಬಗ್ಗೆ…

Read More

ಮಂಗಲ ಮಂಟಪ ಲೋಕಾರ್ಪಣೆ | ಅಮೃತಶಿಲಾಮೂರ್ತಿ ಪ್ರತಿಷ್ಠಾಪನೆ | ಶ್ರೀ ಗುರುಮರುಳಾರಾಧ್ಯ ಸಿರಿ ಪ್ರಶಸ್ತಿ ಪ್ರದಾನ ಕಲಕೇರಿ: ಭಾರತೀಯ ಸನಾತನ ಧರ್ಮದಲ್ಲಿ ಪುರಾತನವಾದದ್ದು ವೀರಶೈವ ಪರಂಪರೆಯಾಗಿದ್ದು, ಹಿಂದಿನ ಅನೇಕ ನಾಗರೀಕತೆಗಳನ್ನು ಅಧ್ಯಯನ ಮಾಡಿದಾಗ ವೀರಶೈವ ಧರ್ಮ ಅಸ್ಥಿತ್ವದಲ್ಲಿರುವುದು ಕಂಡು ಬರುತ್ತದೆ ಈ ಹಿನ್ನೆಲೆಯಲ್ಲಿ ಜಾನ್ ಮಾರ್ಷಲ್ ಅಧ್ಯಯನದ ಪ್ರಕಾರ ಹರಪ್ಪ ಮತ್ತು ಮೆಹೆಂಜೋದಾರೋ ನಾಗರೀಕತೆಯ ಉತ್ಖನನದ ವೇಳೆ ಲಿಂಗಾಯತರು ಧರಿಸುವ ಲಿಂಗಗಳು ಸಿಕ್ಕಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.ಗ್ರಾಮದ ಗುರುಮರುಳಾರಾಧ್ಯರ ಹಿರೇಮಠದಲ್ಲಿ ಗುರುವಾರ ಸಂಜೆ ನಡೆದ ಮಹಾಶಿವಶರಣೆ ಸಜ್ಜಲಗುಡ್ಡದ ಶರಣಮ್ಮ ತಾಯಿಯ ಪುರಾಣ ಮುಕ್ತಾಯ ಮತ್ತು ಧರ್ಮಸಭೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.ವೀರಶೈವ ಪರಂಪರೆಯಲ್ಲಿ ಪಂಚಪೀಠಗಳ ಮೂಲಕ ಶತಶತಮಾನಗಳಿಂದಲೂ ನಾಡಿನಾದ್ಯಂತ ಶಾಖಾ ಮಠಗಳನ್ನು ಸ್ಥಾಪಿಸಿ, ಅಲ್ಲಿ ಮಠಾಧೀಶರನ್ನು ನೇಮಿಸಿ ಅವರ ಮೂಲಕ ಭಕ್ತರಿಗೆ ಅನ್ನ, ಅರಿವೆ, ಶಿಕ್ಷಣ ಸಂಸ್ಕಾರ ನೀಡಿ ಸಮಾಜದಲ್ಲಿ ಪ್ರಬುದ್ಧ ನಾಗರೀಕರಾಗುವಂತೆ ಮಾಡಿದ ಕೀರ್ತಿ ವೀರಶೈವ ಧರ್ಮಕ್ಕೆ…

Read More

ವಿಜಯಪುರ: ಇದೇ ಏ.೮ ರಿಂದ ೧೨ ರವರೆಗೆ ಕತಕನಹಳ್ಳಿ ಶ್ರೀ ಗುರುಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವ ನಡೆಯಲಿದ್ದು, ದೇಶ ವಿದೇಶದಲ್ಲಿರುವ ಹಾಗೂ ಜಿಲ್ಲೆಯ ಸಮಸ್ತ ಭಕ್ತಾದಿಗಳು ಬಂದು ಯಾತ್ರೆಯಲ್ಲಿ ಸೇವೆ ಸಲ್ಲಿಸಿ ಸದಾಶಿವ ಆರ್ಶೀವಾದಕ್ಕೆ ಪಾತ್ರರಾಗಬೇಕು ಎಂದು ಕತಕನಹಳ್ಳಿ ಸದಾಶಿವ ಮಠದ ಪೀಠಾಧಿಪತಿ ಶಿವಯ್ಯ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಕತಕನಹಳ್ಳಿ ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶ್ರೀ ಸದಾಶಿವನ ಭಕ್ತರು ಪ್ರತಿ ವರ್ಷ ಜಾತ್ರೆ ಮಾಡಿಕೊಂಡು ಬಂದಿದ್ದಾರೆ. ಆದರೆ ಈ ವರ್ಷ ದಿ.ಮಠದ ಪರಂಪರೆಯನ್ನು ಸಾರುವ `ಶ್ರೀ ಗುರುಚಕ್ರವರ್ತಿ ಸದಾಶಿವ ಶಿವಯೋಗಿ ಸಿದ್ಧರಾಮೇಶ್ವರ ಲೀಲಾಮೃತ’ ಗ್ರಂಥ ಲೋಕಾರ್ಪಣೆಯಾಗಲಿದೆ. ಹಾಗಾಗಿ ಇದೊಂದು ಅತ್ಯಂತ ವಿಶೇಷವಾದ ಜಾತ್ರೆಯಾಗಿ ಭಕ್ತರ ಮನದಲ್ಲಿ ಉಳಿಯಲಿದೆ ಎಂದು ಹೇಳಿದರು.ಬಬಲಾದಿ ಪರಂಪರೆಯಲ್ಲಿ ಹಿಂದಿನ ಮಠಾದೀಶರು ಯಾರೂ ಹಸಿರು ಪಟಕಾ ಸುತ್ತಿರಲಿಲ್ಲ. ಅದನ್ನು ಸುತ್ತಿದ ಮೊದಲ ವ್ಯಕ್ತಿಯೇ ನಾನು. ಎಲ್ಲ ಬಣ್ಣದ ಪಟಕಾ ಸುತ್ತುತ್ತೇನೆ, ವಿಷಯ ಅದಲ್ಲ, ಕೇವಲ ಪಟಕಾ ಸುತ್ತಿ ಮಠಾದೀಶನಾಗುವುದಕ್ಕಿಂತ ಸತ್ಯ ಹಾಗೂ ಶುದ್ಧ ನಡೆಯಿಂದ ಮಠಾದೀಶನಾಗಬೇಕು. ಸಮಾಜಕ್ಕೆ…

Read More

“ವೀಣಾಂತರಂಗ- ವೀಣಾ ಹೇಮಂತಗೌಡ ಪಾಟೀಲ್, ಮುಂಡರಗಿ-ಗದಗ 1948ರಲ್ಲಿ ಖ್ಯಾತ ಪಾಶ್ಚಾತ್ಯ ಸಾಹಿತಿ ಡೇಲ್ ಕಾರ್ನೆಗಿ ಬರೆದ ಪುಸ್ತಕ ಹೌ ಟು ಸ್ಟಾಪ್ ವರಿಯಿಂಗ್ ಅಂಡ್ ಸ್ಟಾರ್ಟ್ ಲಿವಿಂಗ್ ಜಗತ್ತಿನ ಸುಮಾರು 30 ಭಾಷೆಗಳಿಗೆ ತರ್ಜುಮೆಗೊಂಡಿದೆ ಮತ್ತು ಸುಮಾರು ಹದಿನೈದು ಮಿಲಿಯನ್ ಪ್ರತಿಗಳು ಮಾರಾಟವಾಗಿವೆ ಎಂದರೆ ಈ ಪುಸ್ತಕದ ಜನಪ್ರಿಯತೆ ಅದೆಷ್ಟು ಎಂಬುದನ್ನು ಊಹಿಸಬಹುದು. ಚಿಕ್ಕಂದಿನಲ್ಲಿ ಕೇವಲ ಈ ಪುಸ್ತಕದ ಹೆಡ್ಡಿಂಗ್ ಓದಿ ಅಪ್ಪ ಕೆಲವು ವಿಷಯಗಳನ್ನು ನಮಗೆ ಚಿಕ್ಕದಾಗಿ ತಿಳಿಸಿ ಹೇಳುತ್ತಿದ್ದರು. ಹಾಗೆ ಮನದಲ್ಲಿ ಉಳಿದುಕೊಂಡ ಚಿಂತೆಯ ಮತ್ತು ಜೀವನೋತ್ಸಾಹದ ಕುರಿತಾದ ಈ ಪುಸ್ತಕ ಹಲವು ವರ್ಷಗಳ ನಂತರ ಮತ್ತೆ ಸಂಕ್ಷಿಪ್ತವಾಗಿ ಓದಿಗೆ ದಕ್ಕಿದಾಗ ಆದ ಆನಂದ ಅಷ್ಟಿಷ್ಟಲ್ಲ. ಈ ಪುಸ್ತಕದ ಕೆಲ ಮಹತ್ವದ ಅಂಶಗಳ ಭಾವಾನುವಾದವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಶಯ ನನ್ನದು. ಈ ಪುಸ್ತಕದಲ್ಲಿ ಕಾರ್ನೆಗಿ ಚಿಂತೆ ಎನ್ನುವುದು ಒಂದು ಚಟದಂತೆ ಮತ್ತು ಅದನ್ನು ತೊರೆಯುವ ಮೂಲಕ ಹೇಗೆ ಸಂತೋಷ ಮತ್ತು ತೃಪ್ತಿಕರ ಜೀವನವನ್ನು ನಮ್ಮದಾಗಿಸಿಕೊಳ್ಳಬಹುದು ಎಂಬುದರ ಕುರಿತು ವಿವರಿಸಿದ್ದಾನೆ.…

Read More

ವಿಜಯಪುರ: ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಬೀದಿಬದಿ ವ್ಯಾಪಾರಿಗಳ ವಿಭಾಗದ ಸಭೆಯನ್ನು ಆಯೋಜಿಸಲಾಗಿತ್ತು.ಸಭೆಯ ಅಧ್ಯಕ್ಷತೆಯನ್ನು ಕೆಪಿಸಿಸಿ ಬೀದಿಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷ ಡಾ.ಸಿ.ಇ. ರಂಗಸ್ವಾಮಿ ವಹಿಸಿ ಮಾತನಾಡಿ, ಕೇಂದ್ರದಲ್ಲಿ ಡಾ.ಮನಮೋಹನ ಸಿಂಗ್‌ರವರು ಪ್ರಧಾನಿಯಾಗಿದ್ದಾಗ ಬೀದಿಬದಿ ವ್ಯಾಪಾರಿಗಳ ಭದ್ರತೆಗೆ ಕಾನೂನನ್ನು ರೂಪಿಸಿರುವರು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೀದಿಬದಿ ವ್ಯಾಪಾರಿಗಳಿಗೆ ಅವರು ವ್ಯಾಪಾರ ಮಾಡುವ ಸ್ಥಳದಲ್ಲಿ ಚಿಕ್ಕಮಳಿಗೆಗಳನ್ನು, ತಳ್ಳು ಗಾಡಿಗಳನ್ನು ನೀಡಲು ರೂ.೨೦ ಕೋಟಿ ಅನುದಾನವನ್ನು ಕಾಯ್ದಿರಿಸಿದ್ದಾರೆ. ಅದರಂತೆ ವಿಜಯಪುರ ಮಹಾನಗರಪಾಲಿಕೆಯಲ್ಲಿ ರೂ.೧.೦೦ ಕೋಟಿ ಅನುದಾನ ಮೀಸಲಿಡಲಾಗಿದೆ. ಇದರ ಸದುಪಯೋಗವನ್ನು ಬೀದಿಬದಿ ವ್ಯಾಪಾರಿಗಳು ಪಡೆದುಕೊಳ್ಳಬೇಕು. ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ರಾಜು ಆಲಗೂರರವರ ಗೆಲುವಿಗೆ ತಮ್ಮ ಬಳಿ ಬರುವ ಗ್ರಾಹಕರ ಮನವೊಲಿಸಿ ಪ್ರಯತ್ನಿಸಬೇಕೆಂದು ಕರೆ ನೀಡಿದರು.ರಾಜ್ಯ ಉಪಾಧ್ಯಕ್ಷ ಮಣಿಗೌಡ, ಜಿಲ್ಲಾ ಅಧ್ಯಕ್ಷ ಲಾಲಸಾಬ ಕೊರಬು, ಓಬಿಸಿ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಬಾಷ ಕಾಲೇಬಾಗ ಸಭೆಯಲ್ಲಿ ಮಾತನಾಡಿದರು.ಸಭೆಯಲ್ಲಿ ಅಬ್ದುಲ್ ಸತ್ತಾರ ಬಾಗವಾನ, ಮೈಬೂಬ ವಾಟಿ, ರಮಜಾನ ಶೇಖ,…

Read More

ವಿಜಯಪುರ: ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ಲೋಕಸಭಾ ಚುನಾವಣೆ ಕುರಿತು ಸಭೆಯನ್ನು ಶುಕ್ರವಾರ ಕರೆಯಲಾಗಿತ್ತು.ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷ ಸಾಹೇಬಗೌಡ ಬಿರಾದಾರ ವಹಿಸಿ ಮಾತನಾಡುತ್ತಾ, ಪ್ರಸ್ತುತ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ಎಲ್ಲ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ರಾಜ್ಯ ಸರಕಾರ ಕೊಟ್ಟ ೫ ಗ್ಯಾರಂಟಿ ಯೋಜನೆಗಳ ಕುರಿತು ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪಂಚ ನ್ಯಾಯಗಳನ್ನು ಜಾರಿಗೆ ತರುವ ಬಗ್ಗೆ ಗ್ರಾಮೀಣ ಪ್ರದೇಶದ ಎಲ್ಲ ಮಹಿಳೆಯರಿಗೆ, ಯುವಕರಲ್ಲಿ, ರೈತರಲ್ಲಿ ಜಾಗೃತಿಯನ್ನು ಮೂಡಿಸಿ ಕೇಂದ್ರ ಬಿಜೆಪಿ ಸರಕಾರದ ವೈಪಲ್ಯಗಳನ್ನು ಮನವರಿಕೆ ಮಾಡಿಕೊಟ್ಟು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಪ್ರೊ.ಎಚ್.ಆರ್. (ರಾಜು) ಆಲಗೂರ ರವರ ಗೆಲುವಿಗೆ ಹಿಂದುಳಿದ ವರ್ಗಗಳ ವತಿಯಿಂದ ಶ್ರಮಿಸಬೇಕೆಂದು ಕರೆ ನೀಡಿದರು.ಸದರಿ ಸಭೆಯಲ್ಲಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಲಿಂಗ ಉಪ್ಪಾರ, ಸತೀಶ ಅಡವಿ, ಕಾರ್ಯದರ್ಶಿ ಶ್ರೀಶೈಲ ವಾಲಿಕಾರ, ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ಅಶೋಕ ಜೈನಾಪೂರ,…

Read More

ವಿಜಯಪುರ: ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಭಾರತದ ಮಾಜಿ ಉಪಪ್ರಧಾನಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ ಅವರ ೧೧೭ನೇ ಜನ್ಮದಿನ ಆಚರಿಸಲಾಯಿತು.ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನರಾಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಬಾಷ ಕಾಲೇಬಾಗ ರವರು ಡಾ.ಬಾಬು ಜಗಜೀವನರಾಮ ಅವರು ಈ ದೇಶಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ, ದಲಿತ ಕುಟುಂಬದಲ್ಲಿ ಜನಿಸಿ ಛಲದಿಂದ ಉನ್ನತ ವ್ಯಾಸಂಗ ಪೂರೈಸಿದರು. ಸ್ವಾತಂತ್ರ ಸಂಗ್ರಾಮದಲ್ಲಿ ಗಾಂಧೀಜಿ ಮತ್ತು ನೆಹರೂ ಅವರ ನಿಕಟವರ್ತಿಗಳಾಗಿ ದೇಶಕ್ಕೆ ಸ್ವಾತಂತ್ರ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅತ್ಯಂತ ಮೇಧಾವಿಯಾಗಿದ್ದ ಡಾ.ಬಾಬು ಜಗಜೀವನರಾಮ ರವರು ದೀನ, ದಲಿತರು ಹಾಗೂ ಕಾರ್ಮಿಕ ವರ್ಗದವರ ಒಳಿತಿಗಾಗಿ ಹೋರಾಡಿದರು. ಸ್ವಾತಂತ್ರ್ಯಾನಂತರದ ಸರ್ಕಾರಗಳಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸಿ ದೇಶದ ಮೊಟ್ಟಮೊದಲ ಉಪಪ್ರಧಾನಿ ಹುದ್ದೆಗೇರಿದ ಖ್ಯಾತಿ ಡಾ.ಬಾಬು ಜಗಜೀವನರಾಮ ಅವರದು. ದೇಶವು ತೀವ್ರ ಬರಗಾಲಕ್ಕೆ ತುತ್ತಾಗಿ ತುತ್ತು ಅನ್ನಕ್ಕೂ ಕೂಡ ಪರದಾಡುತ್ತಿದ ಸಂದರ್ಭದಲ್ಲಿ ಆಹಾರ…

Read More