ಕೊಲ್ಹಾರ: ಸರ್ವ ಸಮಾಜ ಸರ್ವ ಜನರ ಸಮುದಾಯದ ನಾಗರಿಕರ ಪ್ರೀತಿ ವಿಶ್ವಾಸ ನನ್ನ ಮೇಲಿನ ನಂಬಿಕೆಯ ದೃಡ ಸಂಕಲ್ಪ ನನ್ನನ್ನು ರಾಜ್ಯದ ಮತ್ತು ದೇಶದ ಆಡಳಿತ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಮತದಾರರ ಒಲುಮೆ ಒಂದೇ ಕಾರಣವಾಗಿದ್ದು ನನ್ನ ಜೀವಿತಾವಧಿಯ ಕೊನೆಯವರೆಗೂ ಚ್ಯುತಿ ಬರದಂತೆ ಸಾರ್ವಜನಿಕರ ಸೇವೆಯನ್ನು ಮಾಡುತ್ತೇನೆ ಎಂದು ನೂತನ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ವಿಜಯಪೂರ ಜಿಲ್ಲಾ ಆದಿಬಣಜಿಗ ಸಮಾಜದ ಜಿಲ್ಲಾ ಘಟಕದವರು ಏರ್ಪಡಿಸಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಸಮಾಜದ ಮುಖಂಡರೊಂದಿಗೆ ಮಾತನಾಡಿದ ಅವರು ಆದಿ ಬಣಜಿಗ ಸಮಾಜದ ಹಿರಿಯರು ತಮ್ಮ ಸಮಾಜದ ಯಾವುದೇ ಕೆಲಸ ಕಾರ್ಯಗಳನ್ನು ಸಮಾಜಬಾಂಧವರ ಹಿತಕ್ಕಾಗಿ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ನನ್ನ ಬಳಿ ಬಂದಾಗ ಸರ್ವರೀತಿಯಲ್ಲೂ ಸಹಕಾರವನ್ನು ನೀಡುತ್ತೇನೆ ಎಂದರು.
ಈ ಸಂದರ್ರ್ಬದಲ್ಲಿ ಭಾರತೀಯ ಜನತಾಪಕ್ಷದ ರಾಜ್ಯ ನಾಯಕರಾದ ಚಂದ್ರಶೇಖರ ಕವಟಗಿ, ಸುರೇಶ ಪರಗೊಂಡ, ಬಸಲಿಂಗಪ್ಪ ಕಪಾಳಿ, ಸೋಮನಿಂಗ ಕಟಾವಿ, ಆಶೋಕ ಮುಚ್ಚಂಡಿ ಸಂಘದ ಅನೇಕ ಪದಾದಿಕಾರಿಗಳು ಹಾಗೂ ವಿಜಯಪೂರ ಜಿಲ್ಲೆಯ ಸಮಾಜಬಾಂಧವರು ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

