ಕೊಲ್ಹಾರ: ರಾಜ್ಯ ಸರಕಾರ ಜನರ ಮೇಲೆ ಬೆಲೆ ಏರಿಕೆ ಮೂಲಕ ಹೊರೆ ಮಾಡುತ್ತಿರುವುದನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮತ್ತು ವಿವಿಧ ಸಂಘಟಣೆಗಳ ಮುಖಂಡರು ಕೊಲ್ಹಾರ ಪಟ್ಟಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ದೇವರಮನಿ ಮಾತನಾಡಿ, ಬ್ರಷ್ಟ ವ್ಯವಸ್ಥೆಯ ಆರ್ಥಿಕವಾಗಿ ರಾಜ್ಯವನ್ನು ಅಧೋಗತಿಗೆ ತರುತ್ತಿರುವ ಸರಕಾರಿ ನೌಕರರಿಗೆ ಅಭಿವೃದ್ದಿ ಕಾಮಗಾರಿಗಳಿಗೆ ಹಣಕಾಸು ವ್ಯವಸ್ಥೆಯನ್ನು ಕ್ರೂಢಿಕರಣಮಾಡಿ ಆಡಳಿತ ಯಂತ್ರ ಚುರುಕುಗೊಳಿಸಿ ಜನರಿಗೆ ಸಾರ್ವಜನಿಕರಿಗೆ ನಿತ್ಯ ನರಕ ಯಾತನೆಯ ಅನುಭವ ತೋರಿಸುತ್ತಿರುವ ಕಾಂಗ್ರೆಸ್ ಸರಕಾರದ ದುರಾಡಳಿತ ವ್ಯವಸ್ಥೆಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.
ಜಿಲ್ಲಾ ಮುಖಂಡರಾದ ಟಿ.ಟಿ.ಹಗೇದಾಳ ಅವರು ಮಾತನಾಡಿ, ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎನ್ನುವ ಸ್ವಾರ್ಥ ಮನೋಭಾವದಿಂದ ಜನರಿಗೆ ದಾರಿ ತಪ್ಪಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷದ ಆಡಳಿತ ವ್ಯವಸ್ಥೆಯ ಎಲ್ಲ ಆಯಾಮಗಳ ವಿರುದ್ದ ಮುಂದಿನ ದಿನಮಾನಗಳಲ್ಲಿ ಭಾರತೀಯ ಜನತಾ ಪಕ್ಷವು ಉಗ್ರವಾದ ಪ್ರತಿಭಟಣೆ ಹಮ್ಮಿಕೊಳ್ಳಲಾಗುವದು. ಕಳೆದ ಒಂದು ಅವಧಿಯ ಇವರ ಅಧಿಕಾರದಲ್ಲಿ ರೈತರಿಗೆ ಜನರಿಗೆ ಯಾವುದೇ ತೆರನಾದ ಉಪಯೋಗವಾಗುತ್ತಿಲ್ಲ ಆದ್ದರಿಂದ ತಕ್ಷಣವೇ ಬೆಲೆ ಏರಿಕೆಯ ಕ್ರಮವನ್ನು ಹಿಂತೆಗುಕೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಾಯಿಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಸಿದ್ದರಾಮ ಕಾಖಂಡಕಿ, ಸಂಗಪ್ಪ ಚಿತ್ತಾಪೂರ, ವಿನೀತ ತಮ್ಮಾರಾವ ದೇಸಾಯಿ, ಇಸ್ಮಾಯಿಲ್‌ಸಾಬ ತಹಶೀಲ್ದಾರ, ಚಂದ್ರಶೇಖರ ಬೆಳ್ಳುಬ್ಬಿ, ಪಟ್ಟಣ ಪಂಚಾಯತ ಸದಸ್ಯರಾದ ಅಪ್ಪಸಿ ಮಟ್ಯಾಳ, ಬಾಬು ಭಜಂತ್ರಿ, ಶ್ರೀಮತಿ ಶಾಂತಾ ಬೀಳಗಿ, ಸವಿತಾ ಚಂದ್ರಶೇಖರ ಬೆಳ್ಳುಬ್ಬಿ, ಬಸಪ್ಪ ಕಟಬರ, ರಾಜು ದಾನಪ್ಪಗೋಳ ಅನೇಕರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

