ತಿಕೋಟಾ: ತಾಲೂಕು ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಒಟ್ಟು ೦೭ ಅಮೃತ ಸರೋವರಗಳನ್ನು ನಿರ್ಮಾಣ ಮಾಡಲಾಗಿದ್ದು, ಎಲ್ಲ ಅಮೃತ ಸರೋವರಗಳ ದಡದಲ್ಲಿ ಸರಕಾರದ ನಿರ್ದೇಶನದಂತೆ ಜೂ.೨೧ ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಐನಾಪುರ ತಿಳಿಸಿರುತ್ತಾರೆ.
ಯೋಗ ದಿನವು ಎಲ್ಲರ ಆರೋಗ್ಯ, ಯೋಗಕ್ಷೇಮ ಮತ್ತು ಪ್ರಕೃತ್ತಿಯೊಂದಿಗಿನ ಸ್ವಾಮರಸ್ಯವನ್ನು ಉತ್ತೇಜಿಸಲು ಉತ್ತಮ ಅವಕಾಶವಾಗಿದೆ. ಆ ನಿಟ್ಟಿನಲ್ಲಿ ಎಲ್ಲ ಅಮೃತ ಸರೋವರದಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಈ ದಿನದಂದು ಗ್ರಾಮದ ಎಲ್ಲಾ ಸ್ಥಳೀಯ ಸಮುದಾಯಗಳು, ಸರ್ಕಾರಿ ಅಧಿಕಾರಿಗಳು ಮತ್ತು ಪಾಲುದಾರರು ಒಳಗೊಂಡಂತೆ ಎಲ್ಲರೂ ಈ ಆಚರಣೆಯಲ್ಲಿ ತೊಡಗಿಸಿಕೊಂಡು ಆಸನಗಳು (ಭಂಗಿಗಳು), ಪ್ರಾಣಾಯಾಮ (ಉಸಿರಾಟದ ವ್ಯಾಯಾಮಗಳು) ಧ್ಯಾನಗಳು ಮತ್ತು ಯೋಗದ ಪ್ರಯೋಜನಗಳು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಮಹತ್ವದ ಕುರಿತು ಮಾತುಕತೆಗಳನ್ನು ಅಮೃತ ಸರೋವರ ಸ್ಥಳಗಳಲ್ಲಿ ಆಯೋಜಿಸಲು ಸರಕಾರದಂತೆ ಆದೇಶದಂತೆ ವ್ಯವಸ್ಥೆ ಮಾಡಿಕೊಳ್ಳಲು ಸಂಬಂಧಿಸಿದ ಎಲ್ಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಈ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವದರ ಜೊತೆಗೆ ಆರೋಗ್ಯ ಸುಧಾರಣೆಯ ಕ್ರಮಗಳನ್ನು ಮೈಗೊಡಸಿಕೊಳ್ಳಲು ಈ ಪತ್ರಿಕಾ ಪ್ರಕಟಣೆಯ ಮೂಲಕ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಅವರು ವಿನಂತಿ ಮಾಡಿಕೊಂಡಿದ್ದಾರೆ.
“ನಮ್ಮ ತಿಕೋಟಾ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಎಲ್ಲ ಅಮೃತ ಸರೋವರಗಳಲ್ಲಿ ಯೋಗ ದಿನಾಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಲಾಭ ಪಡೆಯಬೇಕು. ಜೊತೆಗೆ ಏಕಾಗ್ರತೆ, ಮನಸ್ಸಿನ ನೆಮ್ಮದಿಗಾಗಿ, ರೋಗ ನಿರೋಧಕ ಶಕ್ತಿ ವೃದ್ಧಿ, ಸಲುವಾಗಿ ಎಲ್ಲರೂ ಪ್ರತಿದಿನ ಯೋಗ ಮಾಡಬೇಕು.”
– ಕಲ್ಲಪ್ಪ ನಂದರಗಿ
ತಾಲೂಕು ಐಇಸಿ ಸಂಯೋಜಕ, ತಾಪಂ ತಿಕೋಟಾ

