ಅಬಕಾರಿ ಇಲಾಖೆ ಅಧಿಕಾರಿ ಪೋಳ ಅಮಾನತಿಗೆ ಕೆಆರೆಸ್ ಆಗ್ರಹ
ವಿಜಯಪುರ: ಎಂ.ಎಸ್.ಆಯ್.ಎಲ್. ಅಬಕಾರಿ ಇಲಾಖೆಯ ಪೋಳ ಇವರನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಗುರುವಾರ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಷ್ಟ್ರ ಸಮಿತಿ(ಕೆ.ಆರ್.ಎಸ್.) ಪಕ್ಷದ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಅಬಕಾರಿ ಇಲಾಖೆಯ ಎಂ.ಎಸ್.ಆಯ್.ಎಲ್. ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಪೋಳ ಎಂಬ ಅಧಿಕಾರಿಯು ಎಂ.ಎಸ್.ಆಯ್.ಎಲ್. ಸೆಲ್ ಶಾಪಗಳಲ್ಲಿ ಗುತ್ತಿಗೆ ಮೇಲೆ ಕೆಲಸಗಾರರನ್ನು ನೇಮಕ ಮಾಡಿಕೊಳ್ಳಲು ಪ್ರತಿ ಒಬ್ಬ ನೌಕರರಿಂದ ೧.೪ಲಕ್ಷ ರೂಪಾಯಿ ಲಂಚದ ರೂಪದಲ್ಲಿ (ಸುಮಾರು ೧.೫ಕೋಟಿ )ಹಣವನ್ನು ಪಡೆದು ಕೆಲಸವನ್ನು ಕೊಟ್ಟಿರುತ್ತಾರೆ. ನಂತರ ಪ್ರತಿ ವರ್ಷ ೬೦%ರಷ್ಟು ನೌಕರರಿಗೆ ವರ್ಗಾವಣೆ ಮಾನಸಿಕ ವೇತನ ಕೊಡದೆ ಕಿರುಕುಳ ನೀಡಿ ಕೆಲಸ ಬಿಡುವಂತೆ ಮಾಡಿ ಆ ಸ್ಥಳಕ್ಕೆ ಬೇರೆ ಹೊಸ ವ್ಯಕ್ತಿಗಳನ್ನು ಹಣ ಪಡೆದು ನೇಮಕ ಮಾಡಿಕೊಳ್ಳುತ್ತಾರೆ. ಹೀಗೆ ಪ್ರತಿ ವರ್ಷವು ೩೦ರಿಂದ ೪೦ಜನರನ್ನು ಕೆಲಸದಿಂದ ತೆಗೆಯೋದು ಮತ್ತೆ ಲಂಚ ಪಡೆದು ಕೆಲಸ ಕೊಡುವುದು ಮಾಡುತ್ತಾರೆ. ಇದು ಒಂದು ತಂಡರೂಪದಲ್ಲಿ ಕೆಲಸ ಮಾಡುತ್ತದೆ ಆದ್ದರಿಂದ್ದಾಗಿ ತಾವುಗಳು ಒಂದು ತನಿಖಾ ತಂಡವನ್ನು ರಚಿಸಿ ತನಿಖೆ ಮಾಡಿ ಹಣ ಕಳೆದುಕೊಂಡಿರುವ ಅಮಾಯಕ ಬಡ ನಿರುದ್ಯೋಗಿಗಳಿಗೆ ನ್ಯಾಯ ಕೊಡಿಸಬೇಕಾಗಿ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಶಿವಾನಂದ ಯಡಹಳ್ಳಿ, ದೀಪಾ ಮನೂರ, ರಾಕೇಶ ಇಂಗಳಗಿ, ವಿಕ್ರಮ ವಾಘಮೋರೆ, ಲಕ್ಷ್ಮಣ ಚಡಚಣ, ಚಂದ್ರಕಾಂತ ನಗರೇ, ಹಮಿದ ಇನಾಮದಾರ, ಪ್ರವೀಣ ಕನಸೇ, ದುರ್ಗಪ್ಪ ಬೂದಿಹಾಳ ಇನ್ನಿತರರು ಉಪಸ್ಥಿತರಿದ್ದರು.

