Author: editor.udayarashmi@gmail.com

ದೇವರಹಿಪ್ಪರಗಿ: ಪ್ರಧಾನಿ ಮೋದಿಯವರ ದೂರದೃಷ್ಠಿಯ ಫಲವಾಗಿ ಇಂದು ದೇಶದ ಪ್ರತಿಯೊಬ್ಬ ಪ್ರಜೆಯೂ ಕೇಂದ್ರ ಸರ್ಕಾರದ ಒಂದೊಂದು ಯೋಜನೆಯ ಲಾಭ ಪಡೆದುಕೊಳ್ಳುವಂತಾಗಿದೆ. ಎಂದು ಬಿಜೆಪಿ ಅಭ್ಯರ್ಥಿ, ಸಂಸದ ರಮೇಶ ಜಿಗಜಿಣಗಿ ಹೇಳಿದರು.ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಇತ್ತೀಚಿಗೆ ಜರುಗಿದ ಮಹಾಶಕ್ತಿ ಕೇಂದ್ರ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರಸರ್ಕಾರ ರೈತ ಸಮ್ಮಾನ, ಉಜ್ವಲಾ, ಆತ್ಮನಿರ್ಭರ ನಿಧಿ, ಅಗ್ನಿಪಥ, ಗರೀಬ್ ಕಲ್ಯಾಣ ರೋಜಗಾರ್ , ಮತ್ಸö್ಯ ಸಂಪದ, ಜಲಜೀವನ ಮೀಷನ್ , ಆಯುಷ್ಮಾನ್ ಭಾರತ, ಮಾತೃತ್ವ ವಂದನಾ, ಫಸಲಭೀಮಾ, ಕೃಷಿ ಸಿಂಚಾಯಿ, ಆವಾಸ್, ಅಟಲ್ ಪಿಂಚಣಿ, ಸುಕನ್ಯಾ ಸಮೃದ್ಧಿ, ಭಾರತೀಯ ಜನೌಷಧಿ ಸೇರಿದಂತೆ ನೂರಾರು ಯೋಜನೆಗಳನ್ನು ರಾಷ್ಟ್ರದ ಪ್ರತಿ ಪ್ರಜೆಯ ಕಲ್ಯಾಣಕ್ಕಾಗಿ ಆರಂಭಿಸಿದ್ದು ಇಂದು ಇವುಗಳೆಲ್ಲಾ ಮನೆಮಾತಾಗಿವೆ. ಮುಂದಿನ ದಿನಗಳಲ್ಲಿ ಭಾರತೀಯರ ಅಭಿವೃದ್ಧಿಗೆ ಮೋದಿಯವರ ನಾಯಕತ್ವ ಅಗತ್ಯ ಆದ್ದರಿಂದ ನಾವೆಲ್ಲ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸೋಣ ಅದಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದರು.ಮಾಜಿಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಮಾತನಾಡಿ, ಜಿಲ್ಲೆಯ ಕಳಂಕರಹಿತ ರಾಜಕಾರಣಿಯಾಗಿ…

Read More

ಕೊಲ್ಹಾರ: ಗ್ರಾಮದೇವಿ ಜಾತ್ರೋತ್ಸವದ ಸಂಭ್ರಮದ ನಡುವೆಯೇ ದೇವರ ಪಲ್ಲಕ್ಕಿಯೊಂದಿಗೆ ನದಿಗೆ ಸ್ನಾನ ಮಾಡಲು ಹೋದ ಸಂದರ್ಭದಲ್ಲಿ ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ಪಟ್ಟಣದ ಹತ್ತಿರದ ಕೃಷ್ಣಾ ನದಿಯಲ್ಲಿ ನಡೆದಿದೆ.ಮೃತಪಟ್ಟವರನ್ನು ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ಶ್ರೀಧರ ಶಿವಪ್ಪ ಮಾದರ ಉರ್ಫ್ ದೊಡ್ಡಮನಿ (೧೦), ಯಶಸ್ವಿ ರಾಜು ಮಾದರ(೧೩) ಎಂದು ಗುರುತಿಸಲಾಗಿದೆ. ಬಾಲಕರಿಬ್ಬರು ಸಹೋದರ ಸಂಬಂಧಿಗಳು.ಯುಗಾದಿ ಅಮವಾಸೈ ನಿಮಿತ್ತ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ಹುಚ್ಚಮ್ಮ ದೇವಿ ಜಾತ್ರೋತ್ಸವ ಹಿನ್ನಲೆ ಕಾರಜೋಳ ಗ್ರಾಮದಿಂದ ಕೊಲ್ಹಾರದ ಕೃಷ್ಣಾ ನದಿಗೆ ದೇವಿಯ ಪಲ್ಲಕ್ಕಿ ಹೊತ್ತು ದೇವಿಯ ಸ್ನಾನಮಾಡಿಸಿಕೊಂಡು ಹೋಗಲು ಗ್ರಾಮಸ್ಥರೊಂದಿಗೆ ತಮ್ಮ ತಂದೆ ತಾಯಿಗಳೊಂದಿಗೆ ಬಂದಿದ್ದ ವೇಳೆ ಘಟನೆ ನಡೆದಿದೆ.ಕೊಲ್ಹಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

Read More

ಕೊಲ್ಹಾರ: ಅಜ್ಞಾನದ ಕತ್ತಲೆಯಲ್ಲಿ ಮನಸ್ಸನ್ನು ಹುದುಗಿಸಿ ಎಣ್ಣೆ, ತುಪ್ಪದ ದೀಪ ಹಚ್ಚಿ ಡಾಂಭಿಕ ಭಕ್ತಿ ತೋರಿದರೆ ಆ ಭಗವಂತನ ಒಲುಮೆ ಅದೆಂದಿಗೂ ಆಗದು. ಎಣ್ಣೆ, ತುಪ್ಪದ ದೀಪಕ್ಕಿಂತ ಜ್ಞಾನದ ದೀಪ ಹೊತ್ತಿಸಿದಾಗ ಮಾತ್ರ ಮನುಷ್ಯನ ಬದುಕು ಸಾರ್ಥಕಗೊಳ್ಳುವುದೆಂದು ವಿಜಯಪುರ ಜ್ಞಾನ ಯೋಗಾಶ್ರಮದ ಸಂಗಮೇಶ್ವರ ಶ್ರೀಗಳು ಹೇಳಿದರು.ಮಸೂತಿ ಗ್ರಾಮದಲ್ಲಿ ವೀರಭದ್ರೇಶ್ವರ ಮತ್ತು ಗ್ರಾಮದೇವತೆಯ ಜಾತ್ರಾ ನಿಮಿತ್ತವಾಗಿ ಮಾ.೨೮ ರಿಂದ ಆರಂಭಗೊAಡಿದ್ದ ಆಧ್ಯಾತ್ಮಕ ಪ್ರವಚನವನ್ನು ಭಾನುವಾರ ರಾತ್ರಿ ಮಂಗಲಗೊಳಿಸಿ ಅವರು ಮಾತನಾಡಿದರು.ಅಕ್ಷರ ಕಲಿತ ಸುಶಿಕ್ಷಿತರಿಂದಲೇ ಇಂದು ಹೆಚ್ಚಿನ ಕುಕೃತ್ಯಗಳು ಸಮಾಜದಲ್ಲಿ ನಡೆಯುತ್ತಿವೆ. ಕಿಚಡಿ ಮಾಡುವ ಮುಗ್ಧ ಜನರಲ್ಲಿರುವ ಸಂಸ್ಕಾರ ಪಿಎಚ್‌ಡಿ ಕಲಿತ ವ್ಯಕ್ತಿ ಬಳಿ ಕಾಣುತ್ತಿಲ್ಲ. ಪದವಿಯೊಂದೇ ಬದುಕಿನ ಅಳತೆಗೋಲೆಂದು ತಿಳಿಯಬಾರದು. ಮಾನವೀಯ ಮೌಲ್ಯವನ್ನು ಗಾಳಿಗೆ ತೂರಿ, ಹೆತ್ತವರನ್ನು ತಿರುಗಿಯೂ ನೋಡದ ಮಕ್ಕಳು ಯಾವ ಪದವಿ, ಅದೆಷ್ಟು ಹಣ ಗಳಿಸಿದರೇನು ಫಲ.? ಎಲ್ಲವೂ ನಿರರ್ಥಕ ಎಂದರು.ಸಾನಿಧ್ಯ ವಹಿಸಿದ್ದ ಸ್ಥಳೀಯ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ, ಆಧ್ಯಾತ್ಮ ಎಂಬುದು ಮಾರುಕಟ್ಟೆಯ ಸರಕಲ್ಲ.…

Read More

ಮುದ್ದೇಬಿಹಾಳ: ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣವಾಗದೇ ವಿದ್ಯಾರ್ಜನೆ ನೀಡುವ ವಿದ್ಯಾ ದೇವಾಲಯಗಳಾಗಬೇಕು ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು.ಪಟ್ಟಣದ ನಾಗರಬೆಟ್ಟ ಗ್ರಾಮದ ಆಕ್ಸಫರ್ಡ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಎಕ್ಸಪರ್ಟ್ ಪಿಯು ಕಾಲೇಜು ಆವರಣದಲ್ಲಿ ನಡೆದ ಎಕ್ಸ್ಫರ್ಟ ಟ್ಯಾಲೆಂಟ್ ಅವಾರ್ಡ ಸ್ಪರ್ದೆ-೨೦೨೪ ರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ದೇಶದ ಅಭಿವೃದ್ಧಿಗೆ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತೆ. ವಿದ್ಯೆ ದಾನ ಮಾಡುವ ಸಂಸ್ಥೆಗಳು ಎಂದಿಗೂ ವ್ಯಾಪಾರಿಕರಣವಾಗದೇ, ದೇಶದ ಉಜ್ವಲ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಜನೆ ನೀಡಿದಲ್ಲಿ ಜಗತ್ತಿಗೇ ನಂ-೧ ದೇಶ ಭಾರತವಾಗೋದರಲ್ಲಿ ಯಾವುದೇ ಸಂದೇಹವಿಲ್ಲ. ಶಿಕ್ಷಣದಲ್ಲಿ ಒಳ್ಳೆ ಹೆಸರು ಮಾಡಿರುವ ಟಾಪ್ ಲೀಸ್ಟ್ ನಲ್ಲಿ ನಾಗರಬೆಟ್ಟದ ಆಕ್ಸ್ಫರ್ಡ ಮಠ್ಸ್ ಶಿಕ್ಷಣ ಸಂಸ್ಥೆ ಸ್ಥಾನ ಗಿಟ್ಟಿಸಿಕೊಂಡಿರುವದು ಹೆಮ್ಮೆಯ ವಿಷಯ. ಸಂಸ್ಥೆ ಪ್ರಾರಂಭವಾದಾಗಲಿಂದಲೂ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಮೇಲೆ ವಿಶೇಶ ಕಾಳಜಿ ವಹಿಸುತ್ತಿರುವ ಸಂಸ್ಥೆಯ ಮುಖ್ಯಸ್ಥ ಬಿ.ಜಿ.ಮಠ ಅವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ…

Read More

ಸಿಂದಗಿ: ತಾಲೂಕಿನ ಚಾಂದಕವಟೆ ಗ್ರಾಮದ ಬಸವೇಶ್ವರರ ಜಾತ್ರಾ ಮಹೋತ್ಸವ ನಿಮಿತ್ಯ ಏ.೦೯ರಿಂದ ಪ್ರತಿದಿನ ಸಾಯಂಕಾಲ ೦೭ ಗಂಟೆಗೆ ಬಸವಣ್ಣನವರ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಮುಖ್ಯಸ್ಥ ಗುರುರಾಜಗೌಡ ಪಾಟೀಲ ತಿಳಿಸಿದ್ದಾರೆ.ಪ್ರವಚನವನ್ನು ಧಾರವಾಡ ಜಿಲ್ಲೆಯ ಬೆಳ್ಳೇರಿಯ ಶಿವಾನಂದ ಮಠದ ಪೂಜ್ಯ ಶ್ರೀ ಡಾ.ಬಸವಾನಂದ ಸ್ವಾಮಿಗಳು ನಡೆಸಿಕೊಡಲಿದ್ದಾರೆ. ಆದ್ದರಿಂದ ಎಲ್ಲ ಬಸವ ಭಕ್ತರು, ಅಕ್ಕಪಕ್ಕದ ಗ್ರಾಮಸ್ತರು ಪ್ರವಚನಕ್ಕೆ ಆಗಮಿಸಿ ಇದರ ಸದುಪಯೋಗ ಪಡಿಸಿಕೊಳ್ಳಬೇಕು. ೧೬ ವರ್ಷದ ಒಳಗಿನ ಮಕ್ಕಳಿಗೆ ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿದ್ದು, ಅತೀ ಹೆಚ್ಚು ವಚನಗಳನ್ನು ಹೇಳಿದ ಮಕ್ಕಳಿಗೆ ಪ್ರಥಮ ಬಹುಮಾನ ೫೦೦೦, ದ್ವಿತೀಯ ಬಹುಮಾನ ೨೫೦೦, ತೃತೀಯ ಬಹುಮಾನ ೧೫೦೦ ರೂಪಾಯಿ ಬಹುಮಾನ ಜೊತೆಗೆ ಮತ್ತು ಬಾಗವಹಿಸಿದ ಎಲ್ಲ ಮಕ್ಕಳಿಗೂ ವಚನ ಪುಸ್ತಕಗಳನ್ನು ವಚನೋತ್ಸವ ಸಮಿತಿ ವತಿಯಿಂದ ನೀಡಲಾಗುವುದು. ಆಸಕ್ತಿಯುಳ್ಳ ಮಕ್ಕಳು ಶಿವಕುಮಾರ ಕಕ್ಕಳಮೇಲಿ ೯೯೭೨೪೩೫೭೬೪ ಇವರಲ್ಲಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದು. ಸ್ಪರ್ಧೆಯ ದಿನಾಂಕ ಮತ್ತು ಸಮಯ ತಿಳಿಸುತ್ತಾರೆ. ಮತ್ತು ಪ್ರವಚನದ ಸಂದರ್ಭದಲ್ಲಿ ಮಕ್ಕಳಿಗೆ ಬಹುಮಾನವನ್ನು…

Read More

ನಿಡಗುಂದಿ: ಆಲಮಟ್ಟಿಯ ಜಲಾಶಯದ ನಿರ್ಮಾಣಕ್ಕಾಗಿ ಮುಳುಗಡೆಯಾಗಿ ಮತ್ತೊಂದೆಡೆ ಬದುಕು ಕಟ್ಟಿಕೊಂಡಿರುವ ಕಮದಾಳ ಗ್ರಾಮದ ಜನರ ತ್ಯಾಗ ದೊಡ್ಡದು, ಮತ್ತೊಬ್ಬರ ಏಳಿಗೆಗಾಗಿ ನಿಮ್ಮ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅಭಿಪ್ರಾಯಪಟ್ಟರು.ಪಟ್ಟಣದ ಹೊರವಲಯದ ಕಮದಾಳ ಮುದ್ದೇಶಪ್ರಭು ಜಾತ್ರೆಯ ನಿಮಿತ್ತ ಏರ್ಪಡಿಸಿದ್ದ “ಹೊಳಿಸಾಲಿನ ಹುಲಿ’ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಳುಗಡೆಯಾಗಿ ಬೀಳಗಿ ತಾಲ್ಲೂಕಿನಿಂದ ಏಳು ಗ್ರಾಮದ ಜನರು ಒಂದೆಡೆ ನಿಡಗುಂದಿಯಲ್ಲಿ ನೆಲೆ ನಿಂತರೂ, ತಮ್ಮ ಸಂಪ್ರದಾಯವನ್ನು ಮರೆಯದ ಈ ಸಂತ್ರಸ್ತರ ಕಾರ್ಯ ಸ್ಮರಣೀಯ ಎಂದರು. ತಮ್ಮ ಭೂಮಿ, ಮನೆ, ಮನಸ್ಸುಗಳನ್ನು ಕಳೆದುಕೊಂಡಿರುವ ಸಂತ್ರಸ್ತರ ಆರ್ಥಿಕ ಏಳಿಗೆಗೆ ಸರ್ಕಾರ ಪ್ರತ್ಯೇಕ ಯೋಜನೆ ಜಾರಿಗೆ ತರಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.೧೩೬ ಗ್ರಾಮಗಳು ಮುಳುಗಡೆಯಾಗಿ ಹೊಸ ಹೊಸ ಪುನರ್ವಸತಿಗಳು ನಿರ್ಮಾಣಗೊಂಡರೂ ಇಡೀ ಬದುಕನ್ನು ಕಟ್ಟಿಕೊಡಲು ಸಾಧ್ಯವಾಗಿಲ್ಲ. ಮತ್ತೆ ಮೊದಲಿನ ಗ್ರಾಮದ ಸಂಪ್ರದಾಯ ಬೆಳೆಯಲು ಒಂದು ಜನಾಂಗವೇ ಬದಲಾಗಬೇಕು ಎಂದರು. ಸಾಮಾಜಿಕ…

Read More

ಬಸವನಬಾಗೇವಾಡಿ: ರಾಜ್ಯದಲ್ಲಿ ಕೆಲವು ಮಠಾಧೀಶರು ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ರಾಜ್ಯದ ಕೆಲವೇ ಮಠಾಧೀಶರು ಲಿಂಗಾಯತರ ಪರವಾಗಿ ಸಾಮಾಜಿಕ ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿರುವುದನ್ನು ನೋಡಿದ್ದೇವೆ. ಇತ್ತೀಚೆಗೆ ಮಠಾಧೀಶರು ಸಕ್ರಿಯವಾಗಿ ರಾಜಕೀಯ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಬಸವನಬಾಗೇವಾಡಿ ತಾಲೂಕಿನ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಾಧ್ಯಕ್ಷ ವಿವೇಕಾನಂದ ಕಲ್ಯಾಣಶೆಟ್ಟಿ ಹೇಳಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜಕೀಯ ಪಕ್ಷಗಳ ಟಿಕೆಟ್ ಅನ್ನು ಕೊಡಿಸುವುದು ಸೇರಿದಂತೆ ಹಲವಾರು ವಿಷಯದಲ್ಲಿ ಮಠಾಧೀಶರರು ಮೂಗು ತೂರಿಸುವುದು ಸರಿಯಾದ ಕ್ರಮವಲ್ಲ. ಇದರಲ್ಲಿ ಕೆಲವು ಮಠಾಧೀಶರು ಸ್ವತಂತ್ರ ಲಿಂಗಾಯತ ಧರ್ಮವನ್ನು ವಿರೋಧಿಸುತ್ತಿದ್ದಾರೆ. ಕೆಲವು ಲಿಂಗಾಯತ ಧರ್ಮದ ಹೋರಾಟದಿಂದ ಹಿಂದೆ ಸರಿದಿದ್ದಾರೆ ಎನ್ನುವುದು ರಾಜ್ಯದ ಜನತೆ ಗೊತ್ತಿದೆ. ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಮತದಾರರ ಹಕ್ಕು ಆಗಿರುತ್ತದೆ. ಲಿಂಗಾಯತ ಧರ್ಮಕ್ಕೆ ಯಾವುದೇ ಕೊಡುಗೆ ನೀಡದ ಮಠಾಧೀಶರು ಲಿಂಗಾಯತ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ದಿಂಗಾಲೇಶ್ವರ…

Read More

ಬಸವನಬಾಗೇವಾಡಿ: ತಾಲೂಕಿನ ಅವಿಮುಕ್ತ ಸುಕ್ಷೇತ್ರ ಯರನಾಳ ಗ್ರಾಮದ ವಿರಕ್ತಮಠದ ಕರ್ತೃ ಜಗದ್ಗುರು ಪಂಪಾಪತಿ ಶಿವಯೋಗಿಗಳ ಜಾತ್ರಾಮಹೋತ್ಸವ ಹಾಗೂ ಗುರುಸಂಗನಬಸವ ಸ್ವಾಮೀಜಿಯವರ ಜನ್ಮಸುವರ್ಣ ಮಹೋತ್ಸವ ಕಾರ್ಯಕ್ರಮದಂಗವಾಗಿ ಏ.೧೧ ರಿಂದ ೧೩ ರವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.ಏ.೧೧ ರಂದು ಸಂಜೆ ೭ ಗಂಟೆಗೆ ಹಮ್ಮಿಕೊಂಡಿರುವ ಜಾತ್ರಾಮಹೋತ್ಸವ ಉದ್ಘಾಟನೆ, ಧರ್ಮಸಭೆಯನ್ನು ವೀರಗೋಟದ ಸಿದ್ದಿಪುರುಷ ಅಡವಿಲಿಂಗ ಮಹಾರಾಜರು ಉದ್ಘಾಟಿಸುವರು. ಧಾರವಾಡದ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖ, ಜಿಡಗಾದ ಡಾ.ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವ ವಹಿಸುವರು. ಸಾನಿಧ್ಯವನ್ನು ಮಾರತಹಳ್ಳಿಯ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆಯ ಡಾ.ಮಲೇಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಬಸವನಬಾಗೇವಾಡಿಯ ಸಿದ್ದಲಿಂಗ ಸ್ವಾಮೀಜಿ ಮನಗೂಳಿಯ ಡಾ.ಫಿರೋಜ ಇನಾಮದಾರ ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವ ಶಿವಾನಂದ ಪಾಟೀಲ, ಅತಿಥಿಗಳಾಗಿ ಶಾಸಕರಾದ ವಿಠ್ಠಲ ಕಟಕದೊಂಡ, ರಾಜುಗೌಡ ಪಾಟೀಲ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಡಾ.ಶಿವಾನಂದ ಕೆಲ್ಲೂರ, ಉಮೇಶ ಕಾರಜೋಳ, ಡಾ.ಸಿದ್ದಣ್ಣ ಉತ್ನಾಳ, ಶಾಂತಾಬಾಯಿ ಕೋಲಕಾರ, ಸುರೇಶ ಹಾರಿವಾಳ ಆಗಮಿಸುವರು.ಏ.೧೨ ರಂದು ಸಂಜೆ ೭ ಗಂಟೆಗೆ ಗುರುಸಂಗನಬಸವ ಸ್ವಾಮೀಜಿಯವರ ಜನ್ಮ ಸುವರ್ಣ ಮಹೋತ್ಸವ ಕಾರ್ಯಕ್ರಮದ ಸಮ್ಮುಖವನ್ನು…

Read More

ಬಸವನಬಾಗೇವಾಡಿ: ತಾಲೂಕಿನ ನಾಗೂರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರಾಮಹೋತ್ಸವದಂಗವಾಗಿ ಸೋಮವಾರ ಬೆಳಗ್ಗೆ ಮಲ್ಲಿಕಾರ್ಜುನ ದೇವರಿಗೆ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿತು. ಮೆರವಣಿಗೆ ಮೂಲಕ ದೇವಸ್ಥಾನದ ಕಳಸವನ್ನು ತರುವ ಮೂಲಕ ದೇವಸ್ಥಾನಕ್ಕೆ ಕಳಸವನ್ನು ಏರಿಸಲಾಯಿತು.ರಥೋತ್ಸವಃ ಮಂಗಳವಾರ ಮಧ್ಯಾನ್ಹ ನಂದಿ ಕೋಲು ಹಾಗೂ ತೇರಿನ ಹಗ್ಗದ ಮೆರವಣಿಗೆ ನಡೆಯುವದು. ನಂತರ ಸಂಜೆ ೫.೩೦ ಗಂಟೆಗೆ ಮಲ್ಲಿಕಾರ್ಜುನ ದೇವರ ರಥೋತ್ಸವ ಭಕ್ತರ ಸಮ್ಮುಖದಲ್ಲಿ ನೆರವೇರಲಿದೆ. ರಾತ್ರಿ ೧೦.೩೦ ಗಂಟೆಗೆ ಕನ್ನಾಳದ ಸಿದ್ದರಾಮೇಶ್ವರ ನಾಟ್ಯ ಸಂಘದಿಂದ ಸಿದ್ದರಾಮೇಶ್ವರ ಮಹಿಮೆ ಎಂಬ ಪೌರಾಣಿಕ ನಾಟಕ ಪ್ರದರ್ಶನವಾಗಲಿದೆ ಎಂದು ಜಾತ್ರಾ ಕಮೀಟಿಯು ತಿಳಿಸಿದೆ.

Read More

– ಬಸವರಾಜ ನಂದಿಹಾಳಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಮುಸ್ಲಿಂ ಬಾಂಧವರು ರಂಜಾನ ಹಬ್ಬದ ಆಚರಣೆ ಮಾಡುವ ಹಿನ್ನೆಲೆಯಲ್ಲಿ ಸೋಮವಾರ ಮಾರುಕಟ್ಟೆಯಲ್ಲಿ ಮುಸ್ಲಿಂ ಬಾಂಧವರ ಖರೀದಿ ಭರಾಟೆ ಜೋರಾಗಿತ್ತು.ಪಟ್ಟಣದಲ್ಲಿ ಬಹುತೇಕ ಕಿರಾಣಿ ಅಂಗಡಿಗಳ ಮುಂದೆ, ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿರುವ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು. ಪಟ್ಟಣದಲ್ಲಿರುವ ಬಟ್ಟೆ ಅಂಗಡಿ, ಕಿರಾಣಿ ಅಂಗಡಿ-ಮುಂಗಟ್ಟುಗಳಲ್ಲಿ ಹೆಚ್ಚಾಗಿ ಮುಸ್ಲಿಂ ಬಾಂಧವರು ಖರೀದಿಯಲ್ಲಿ ತೊಡಗಿರುವುದು ಕಂಡುಬರುತ್ತಿದೆ. ಮುಸ್ಲಿಂ ಬಾಂಧವರ ಖರೀದಿ ಭರಾಟೆ ಜೋರಾಗಿದೆ. ಸಂಪ್ರದಾಯದಂತೆ ಪವಿತ್ರ ರಂಜಾನ್ ಹಬ್ಬ ಇದಾಗಿರುವದರಿಂದಾಗಿ ಮುಸ್ಲಿಂ ಬಾಂಧವರು ಪ್ರತಿಯೊಬ್ಬರು ದಾನ, ಧರ್ಮ ಮಾಡುವುದರ ಜೊತೆಗೆ ಹೊಸ ಬಟ್ಟೆಗಳ ಖರೀದಿಗೆ ಮುಂದಾಗುವುದು ಸಹಜ. ಪಟ್ಟಣದ ಪ್ರಮುಖ ಅಂಗಡಿಗಳಲ್ಲಿ ಬಟ್ಟೆ ಖರೀದಿ ಹೆಚ್ಚಾಗಿರುವುದು ಕಂಡುಬಂದಿತ್ತು.ಮಹಿಳೆಯರು, ಮಕ್ಕಳು, ಯುವಕರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಯ ಮೊರೆ ಹೋಗುತ್ತಿದ್ದಾರೆ. ಇಂದು ಸಂತೆ ದಿನವಾಗಿರುವದರಿಂದ ತಾಲೂಕಿನ ಕೆಲವೆಡೆಗಳಿಂದ ಜನರು ಬಂದಿದ್ದರಿಂದಾಗಿ ಜನಸಂದಣಿ ಕಂಡುಬಂದಿತ್ತು. ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು. ಮಹಿಳೆಯರು ತಮಗೆ ಬೇಕಾದ ಬಳೆ, ರಿಬ್ಬನ್ ಇತ್ಯಾದಿ…

Read More