Author: editor.udayarashmi@gmail.com

ವಿಜಯಪುರ: ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ಬಾಳನ್ನು ರೂಪಿಸಿಕೊಳ್ಳಲು ನೈತಿಕ ಮೌಲ್ಯಗಳ ಅರಿವು-ಪಾಲನೆ ಅಗತ್ಯ. ಇಂದಿನ ಯುವವಿದ್ಯಾರ್ಥಿ ಸಮೂಹಕ್ಕೆ ಅಹಿಂಸೆ, ಪ್ರೀತಿ, ಏಕತೆಯಂತಹ ಮೌಲ್ಯಗಳು ಜೀವನ ಮಂತ್ರಗಳಾಗಬೇಕು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಅವರು ಸೋಮವಾರ ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 2024-25 ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಸಂಸ್ಕಾರ, ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳ ತಳಹದಿಯ ಮೇಲೆಯೇ ಭವ್ಯ ಭಾರತದ ಭವಿಷ್ಯ ನೆಲೆನಿಂತಿದೆ. ಹೀಗಾಗಿ, ಯುವ ಪೀಳಿಗೆಗೆ ಸಂಸ್ಕಾರದ ಶಿಕ್ಷಣ ನೀಡಬೇಕಾದದ್ದು ಅನಿವಾರ್ಯ. ಇಂದಿನ ಸ್ಪರ್ಧಾತ್ಮಕ ಮತ್ತು ಆಧುನಿಕ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಜೀವನ ನಿರ್ವಹಣಾ ಕೌಶಲ್ಯ ಜ್ಞಾನ ಹೊಂದಬೇಕು ಎಂದು ಹೇಳಿದರು.ಯಾಂತ್ರಿಕ ವಿಭಾಗದ ಹಿರಿಯ ಶ್ರೇಣಿಯ ಉಪನ್ಯಾಸಕ ಜಯರಾಮ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯೆ ವಿನಯ ಕಲಿಸುತ್ತದೆ, ವಿನಯ ಯೋಗ್ಯತೆಯನ್ನು ಹೆಚ್ಚಿಸುತ್ತದೆ. ಒಂದು ಉತ್ತಮ ಕನಸನ್ನು ನನಸು ಮಾಡಲು ನಿರಂತರ ಪರಿಶ್ರಮ ಅತಿ ಮುಖ್ಯ. ಉತ್ತಮ ಸ್ನೇಹಿತರ ಜೊತೆಗೂಡಿ, ಉತ್ತಮ ಪುಸ್ತಕಗಳನ್ನು ಓದುವ…

Read More

ಮೋರಟಗಿ: ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಜೂ. ೨೩ ರವಿವಾರ ಬೆಳಿಗ್ಗೆ ೧೧ ಗಂಟೆಗೆ ಜರುಗಲಿದ್ದು ಜವಳಿ ಕಬ್ಬು ಅಭಿವೃದ್ಧಿ ಸಕ್ಕರೆ ಸಚಿವರು ಹಾಗೂ ವ್ಹಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿವ ಶಿವಾನಂದ ಪಾಟೀಲ್ ಉದ್ಘಾಟನಾ ಸಮಾರಂಭವನ್ನು ನೆರವೇರಿಸಲಿದ್ದಾರೆ.ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮದಲ್ಲಿ ಸಿದ್ದಲಿಂಗ ಮಹಾಸ್ವಾಮಿಗಳು ವಿರಾಕ್ತಮಠ ನೆಲೋಗಿ ಪಾವನ ಸಾನಿಧ್ಯ ವಹಿಸಲಿದ್ದಾರೆ, ಸಿಂದಗಿ ಶಾಸಕ ಅಶೋಕ್ ಮನಗೂಳಿ, ಆಫಜಲಪುರ ಶಾಸಕ ಎಂ ವಾಯ್ ಪಾಟೀಲ್, ಜೇವರ್ಗಿ ಶಾಸಕ ಡಾ, ಅಜಯಸಿಂಗ, ಕಲಬುರ್ಗಿ ಶಾಸಕ ಅಲ್ಲಮಪ್ರಭು ಪಾಟೀಲ್, ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದು, ಕಾರಣ ಮೋರಟಗಿ ಸೇರಿದಂತೆ ಸುತ್ತಲಿನ ಗ್ರಾಮದ ರೈತರು ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಪಿಕೆಪಿಎಸ್ ಅಧ್ಯಕ್ಷ ವೀರನಗೌಡ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ನಗರಕ್ಕೆ ಶನಿವಾರ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಬಿ.ಝಡ್.ಜಮೀರ ಅಹ್ಮದಖಾನ್ ರವರಿಗೆ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಇವರು ತಮ್ಮ ಅಪಾರ ಬೆಂಬಲಿಗರೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕನ್ನಾನ ಮುಶ್ರೀಫ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹ್ಮದ್ ರಫೀಕ್ ಟಪಾಲ್, ಚಾಂದಸಾಬ ಗಡಗಲಾವ,ಮಹಾನಗರ ಪಾಲಿಕೆ ಉಪಮಹಾಪೌರ ದಿನೇಶ್ ಹಳ್ಳಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಅಬ್ದುಲ್ ರಜಾಕ್ ಹೋರ್ತಿ, ಆರತಿ ಶಹಾಪುರ,ಆಸೀಫ್ ಶಾನವಾಲೆ,ಅಪ್ಪು ಪುಜಾರಿ, ಶಫಿ ಮನಗೂಳಿ,ವಿದ್ಯಾರಾಣಿ ತುಂಗಳ, ವಸಂತ ಹೊನಮೊಡೆ, ಅಶ್ಫಾಕ್ ಮನಗೂಳಿ, ಶಫೀಕ್ ಬಗದಾದಿ, ಇಲಿಯಾಸ್ ಸಿದ್ದಿಕಿ,ಗಂಗುಬಾಯಿ ದುಮಾಳೆ, ಭಾರತಿ ಹೊಸಮನಿ, ಶಮೀಮಾ ಅಕ್ಕಲಕೋಟ, ಅಕ್ರಮ ಮಶಾಳಕರ, ಶಫೀಕ್ ಶೇಖ,ದಸ್ತಗಿರ್ ಸಾಲೋಟಗಿ, ಫೀರೋಜ ಶೇಖ್, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.

Read More

ಜೊತೆಗಿದ್ದ ಮೂವರಿಗೂ ನ್ಯಾಯಾಂಗ ಬಂಧನ | ಈಗಾಗಲೇ ಕಾರಾಗ್ರಹದಲ್ಲಿರುವ ಪವಿತ್ರಾ ಗೌಡ ಸೇರಿ 12 ಆರೋಪಿಗಳು ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಹಾಗೂ ಇತರ ಮೂವರನ್ನು 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆ, ಇಂದು (ಜೂನ್ 22) ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.ವಿಚಾರಣೆ ವೇಳೆ ಪ್ರಕರಣ ತನಿಖಾಧಿಕಾರಿ ಎಸಿಪಿ ಎಲ್‌. ಚಂದನ್‌ ಕುಮಾರ್ ಪ್ರಕರಣದ ಸಿಡಿಯನ್ನು (ಕೇಸ್‌ ಡೈರಿ) ಮುಚ್ಚಿದ ಲಕೋಟೆಯಲ್ಲಿ ಹಾಗೂ ಮುಕ್ತ ರಿಮ್ಯಾಂಡ್ ಅರ್ಜಿಯ ದಸ್ತಾವೇಜನ್ನು ನ್ಯಾಯಾಧೀಶರಿಗೆ ಸಲ್ಲಿಸಿದರು.ಅದನ್ನು ದಾಖಲಿಸಿಕೊಂಡ ನ್ಯಾಯಾಧೀಶರಾದ ವಿಜಯಕುಮಾರ್ ಎಸ್‌. ಜಾಟ್ಲಾ, 30 ನಿಮಿಷಗಳ ಕಾಲ ವಿಚಾರಣೆ ನಡಸಿ ಎಲ್ಲಾ ಆರೋಪಿಗಳನ್ನು ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಪ್ರಕರಣ ಎರಡನೇ ಆರೋಪಿಯಾದ ನಟ ದರ್ಶನ್, 9 ಆರೋಪಿ ಡಿ. ಧನರಾಜ್, 10ನೇ ಆರೋಪಿ ವಿ.ವಿನಯ್ ಮತ್ತು 14ನೇ ಆರೋಪಿ ಪ್ರದೋಷ್ ಅನ್ನು ನ್ಯಾಯಾಂಗ ಬಂಧನಕ್ಕೆ…

Read More

ರೇವತಗಾಂವ ಸರ್ಕಾರಿ ಪ್ರೌಢಶಾಲೆಯಲ್ಲಿಸಾಹಿತಿ ದಿ.ಕಮಲಾ ಹಂಪನಾ ಗೆ ಶ್ರದ್ಧಾಂಜಲಿ ಚಡಚಣ: ಕನ್ನಡ ಸಾಹಿತ್ಯ ಲೋಕದಲ್ಲಿ ಕಮಲಾ ಹಂಪನಾ ಲೇಖಕಿಯಾಗಿ ಹೆಸರು ಮಾಡಿದ್ದಾರೆ. ಪ್ರಾಧ್ಯಪಕರಾಗಿ, ಬಹಳಷ್ಟು ಪ್ರಾಚೀನ ಕೃತಿಗಳ ಅನುಸಂಧಾನಕಾರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ರೇವತಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರಮಾತೆಯವರಾದ ಎಂ.ಎಸ್.ಪಾಟೀಲರವರು ಹೇಳಿದರು.ರೇವತಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರದಂದು ನಿಧನರಾದ ಸಾಹಿತಿ ಕಮಲಾ ಹಂಪನರವರಿಗೆ ಮೌನಾಚರಣೆಯ ಮೂಲಕ ಶೃದ್ಧಾಂಜಲಿಯನ್ನು ಸಲ್ಲಿಸಿ, ಅವರ ಸವಿ ನೆನಪಿಗಾಗಿ ಸಸಿಯನ್ನು ನೆಡುವುದರ ಮೂಲಕ ಪರಿಸರ ಪ್ರೇಮವನ್ನು ಮೆರೆದರು.ಈ ವೇಳೆ ವಿದ್ಯಾರ್ಥಿಗಳಿಗೆ ಸಾಹಿತಿಯು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಕುರಿತು ಸ್ಮರಿಸಿಕೊಳ್ಳುತ್ತ ಮಾತನಾಡುತ್ತ. ಕನ್ನಡ ಸಾಹಿತ್ಯ ಲೋಕದ ಎಲ್ಲಾ ಪ್ರಕಾರಗಳಲ್ಲೂ ಆಳವಾದ ಅಧ್ಯಯನ ಮಾಡಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಕಮಲಾ ಹಂಪನಾ ಅವರು ನೀಡಿರುವ ಕೊಡುಗೆ ಬಹಳ ಮಹತ್ವವಾದದ್ದು ಎಂದು ಹೇಳಿದರು.ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಆರ್.ಎಚ್. ನದಾಫ್‌ರವರು ಮಾತನಾಡುತ್ತ. ಕಮಲಾ ಹಂಪನಾ ತಮ್ಮ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು…

Read More

ಬಸವನಬಾಗೇವಾಡಿ: ಪಟ್ಟಣದ ಕೆಲವೆಡೆ ಶನಿವಾರ ಸಂಜೆ ಕಾರಹುಣ್ಣಿಮೆಯಂಗವಾಗಿ ರೈತ ಬಾಂಧವರು ಎತ್ತುಗಳನ್ನು ಓಡಿಸಿ ಕರಿ ಕರಿಯುವ ಮೂಲಕ ಸಂಭ್ರಮದಿಂದ ಕಾರಹುಣ್ಣಿಮೆ ಆಚರಿಸಿದರು. ಕಾರಹುಣ್ಣಿಮೆಯಂಗವಾಗಿ ರೈತ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿರುವ ಎತ್ತು, ಕರು, ಆಕಳುಗಳ ಮೈಯನ್ನು ತೊಳೆದು ಬಣ್ಣ ಹಚ್ಚಿ ಪೂಜೆ ಮಾಡಿ ನೈವೇದ್ಯ ಅರ್ಪಿಸಿ ಉತ್ತಮ ಮಳೆ-ಬೆಳೆ ಬರಲೆಂದು ಭೂತಾಯಿ, ಭಗವಂತನಲ್ಲಿ ಪ್ರಾರ್ಥಿಸಿದರು. ಎಮ್ಮೆಗಳ ಕೊಡುಗಳಿಗೂ ಬಣ್ಣ ಹಚ್ಚಿರುವುದು ಕಂಡುಬಂದಿತ್ತು. ರೈತ ಬಾಂಧವರು ತಮ್ಮ ಜಾನುವಾರಗಳಿಗೆ ಬಣ್ಣ ಹಚ್ಚಿ ಅಲಂಕಾರ ಮಾಡಿ ಸಂಭ್ರಮಿಸುವದು ಈ ಹುಣ್ಣಿಮೆಯ ವಿಶೇಷ.ಕರಿ ಹರಿಯಲು ಎತ್ತುಗಳ ಕೊರತೆ ಎದ್ದು ಕಾಣುತ್ತಿತ್ತು.ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಗುರ್ಜಿ ಕಟ್ಟಿ ಹತ್ತಿರ ಕಾರಹುಣ್ಣಿಮೆಯಂಗವಾಗಿ ಮೊದಲು ಎತ್ತುಗಳನ್ನು ಓಡಿಸುವ ಮೂಲಕ ಕರಿ ಹರಿದು ರೈತ ಬಾಂಧವರು ಸಂಭ್ರಮಿಸಿದರು.ಈ ಸಂದರ್ಭದಲ್ಲಿ ವೀರಗಂಗಾಧರಯ್ಯ ಕಾಳಹಸ್ತೇಶ್ವರಮಠ, ಸತ್ಯಪ್ಪ ಖ್ಯಾಡ, ಬಸವರಾಜ ಶೆಂಡೆ, ಬಸವರಾಜ ಬಾಡಗಿ, ಈಶಪ್ಪ ಬಿದರಕುಂದಿ, ಅರವಿಂದ ಗೊಳಸಂಗಿ, ಬೀರಪ್ಪ ಪೂಜಾರಿ, ಸಿದ್ದು ಶೆಂಡೆ ಸೇರಿದಂತೆ ಇತರರು ಇದ್ದರು.ನಂತರ ಗಣಪತಿ ವೃತ್ತದಲ್ಲಿಯೂ ಕರಿ ಹರಿ…

Read More

ಮುದ್ದೇಬಿಹಾಳ: ಪಟ್ಟಣದ ಹುಡಕೋ ಬಡಾವಣೆಯಲ್ಲಿರುವ ಟಾಪ್-ಇನ್-ಟೌನ್ ಲಾಲ್ ನಲ್ಲಿ ೧೯೮೮-೮೯ ನೇ ಸಾಲಿನ ಸರಕಾರಿ ಪ್ರಾಥಮಿಕ ಹಾಗೂ ವಿಬಿಸಿ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಂದ ಜೂ.೨೩ ರಂದು ಬೆಳಿಗ್ಗೆ ೧೦:೩೦ ಕ್ಕೆ ಗುರುವಂದನಾ ಹಾಗೂ ಸಹಪಾಠಿಗಳ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಕುಂಟೋಜಿ ಹಿರೇಮಠ ಸಂಸ್ಥಾನದ ಡಾ.ಚೆನ್ನವೀರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಲಿದ್ದು, ಶಾಸಕ, ಎಂಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ ಅತಿಥಿಗಳಾಗಿ, ಮಾಜಿ ಶಾಸಕ ಎ.ಎಸ್.ಪಾಟೀಲ ಉದ್ಘಾಟಕರಾಘಿ ಭಾಗವಹಿಸುವರು. ಗುಲ್ಬರ್ಗ ವಿಶ್ವವಿದ್ಯಾಲಯದ ಆಂಗ್ಲ ವಿಭಾಗ ಮುಖ್ಯಸ್ಥರಾದ ಡಾ ಬಸವರಾಜ ಡೋಣೂರುಮಠ ಉಪನ್ಯಾಸ ನೀಡಲಿದ್ದಾರೆ.ತೊಂಬತ್ತರ ದಶಕದಲ್ಲಿ ಸಹಪಾಠಿಗಳಾಗಿ ಕಲಿಕೆ ಹಾಗೂ ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ವಿಶೇಷ ಪಾತ್ರವಹಿಸಿ ಏಳಿಗೆಗೆ ಕಾರಣವಾಗಿರುವ ಗುರುವಂದನ ಕಾರ್ಯಕ್ರಮ ಹಲವು ವೈಶಿಷ್ಟ್ಯತೆಗಳ ಸಮ್ಮೇಳನ ಆಗಲಿದೆ ಎಂದು ಕರ್ನಾಟಕ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಸತೀಶ್ ಓಸ್ವಾಲ್, ಉದ್ಯಮಿ ಶ್ರೀನಿವಾಸ್ ಇಲ್ಲೂರ, ಅರವಿಂದ ಜಮಖಂಡಿ ಕುಮಾರಸ್ವಾಮಿ ಶಿವಯೋಗಿಮಠ ಮೋಹನ್ ಹುಲ್ಲೂರು ತಿಳಿಸಿದ್ದಾರೆ.

Read More

ಸಿಂದಗಿ: ಆರೋಗ್ಯಕ್ಕೆ ಯೋಗವೇ ಭಾಗ್ಯ. ಪ್ರಪಂಚದಾದ್ಯಂತ ಜನರು ತಮ್ಮ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಮಾಡುತ್ತಾರೆ ಎಂದು ತಾಪಂ ಇಒ ರಾಮು ಅಗ್ನಿ ಹೇಳಿದರು.ತಾಲೂಕಿನ ಬಂದಾಳ ಪಂಚಾಯತ್ ವ್ಯಾಪ್ತಿಯ ಓತಿಹಾಳ ಗ್ರಾಮದ ಅಮೃತ ಸರೋವರದ ದಡದಲ್ಲಿ ಹಮ್ಮಿಕೊಂಡ ವಿಶ್ವ ಯೋಗ ದಿನಾಚರಣೆಯ ನೇತೃತ್ವವನ್ನು ವಹಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಶತಮಾನಗಳಿಂದ ಯೋಗಾವನ್ನು ಅನುಸರಿಸುತ್ತಾ ಬಂದಿದ್ದೇವೆ ಹಾಗೂ ವಿಶ್ವಕ್ಕೆ ಯೋಗದ ಮಹತ್ವ, ಅದರಿಂದಾಗುವ ಪ್ರಯೋಜನಗಳ ಕುರಿತು ಇಡೀ ವಿಶ್ವಕ್ಕೆ ತಿಳಿಸಿದ ದೇಶ ಅದು ಯಾವುದಾದರೂ ಇದ್ದರೆ ಅದುವೇ ಭಾರತ. ಹಾಗಾಗಿ ಇಂದು ಜಗತ್ತಿನಾದ್ಯಂತ ಆಚಾರಿಸಲಾಗುತ್ತಿದೆ ಎಂದರು.ಇದೇ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಪಿಡಿಒ ಬಸವರಾಜ್ ಶಹಾಪುರ, ಐಇಸಿ ಸಂಯೋಜಕ ಭೀಮರಾಯ ಚೌಧರಿ, ಕಾರ್ಯದರ್ಶಿ ರಜಾಕಸಾಬ್ ಮುಜಾವರ, ರಾಜಶೇಖರ್ ಹಿರೇಕುರುಬರ, ಗ್ರಾಮಸ್ಥರಾದ ಕೇಶುರಾಯ ಮಕಣಾಪುರ, ರಾಜು ವಠಾರ, ಹವಳಪ್ಪ ನಾಟೀಕಾರ ಸೇರಿದಂತೆ ಅನೇಕರಿದ್ದರು. ಯೋಗವನ್ನು ಪ್ರೌಢ ಶಾಲೆ ದೈಹಿಕ ಶಿಕ್ಷಕಿ ಸವಿತಾ ಇಂಗಳಗಿ ಯೋಗಾದ ಆಸನಗಳನ್ನು ಹೇಳಿಕೊಟ್ಟರು.

Read More

ಜೂ.27 ರಿಂದ ಮೂರು ದಿನಗಳ ಕಾಲ ಹಾಜಿಮಸ್ತಾನ ಜಾತ್ರೆ ತನ್ನಿಮಿತ್ತ ಈ ಸಾಂದರ್ಭಿಕ ಲೇಖನ -ಸೋಮಶೇಖರ ಜತ್ತಿ, ತಿಕೋಟ ರಾಜ್ಯದ ಮುಖ್ಯ ಭಾವೈಕ್ಯದ ಕೇಂದ್ರಗಳಲ್ಲಿ ಒಂದಾದ ವಿಜಯಪುರ ಜಿಲ್ಲೆಯ ತಿಕೋಟಾದ ಹಾಜಿ ಮಸ್ತಾನ ದರ್ಗಾ ಮಾನವನ ಹಾಗೂ ದೈವಿ ಪ್ರೇಮದ ತಾಣವಾಗಿದೆ.ಇಲ್ಲಿ ಬ್ರಾಹ್ಮಣರು, ಲಿಂಗಾಯತರು ಸೇರಿದಂತೆ ಎಲ್ಲ ಜಾತಿ, ಜನಾಂಗದವರು ಹಾಗೂ ಮುಸ್ಲಿಮರು ಒಂದಾಗಿ ಸೂಫಿ-ಸಂತ ಹಾಜಿಮಸ್ತಾನರ ಉರುಸ್‌ ಆಚರಣೆ ಮಾಡುತ್ತಾರೆ.ವಿಜಯಪುರದಿಂದ 20 ಕಿ.ಮೀ. ಪಶ್ಚಿಮಕ್ಕೆ ಬಂದರೆ ವಿದೇಶಕ್ಕೆ ರಫ್ತಾಗುವ ಬೀಜ ರಹಿತ ದಾಕ್ಷಿ ಹಣ್ಣುಗಳನ್ನು ಬೆಳೆಯುವ ಖ್ಯಾತಿಯ ತಿಕೋಟಾ ಸಿಗುತ್ತದೆ.ಕಪ್ಪು ಕಲ್ಲಿನ ತಾಜಮಹಲ ಎಂದು ಕರೆಯಿಸಿಕೊಳ್ಳುವ ವಿಜಯಪುರ ಇಬ್ರಾಹಿಂರೋಜಾದ ಶಿಲ್ಪಿ (ಇಂಜನೀಯರ) ಸಂದರ ಮಲೀಕನ ಸಮಾಧಿ ಹೊಂದಿದ ಈ ನಗರ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಭಾರತದಲ್ಲೇ ಪ್ರಪ್ರಥಮ ಸರ್ಕಸ್ ಕಂಪನಿ ತೆರೆದ ಗಣಪತರಾವ ಛತ್ರ, ಚೌಡಕಿ ಪದದ ಗೌರವ ಮಾದರ, ಖ್ಯಾತ ಪ್ರವಚನಕಾರ ದಾನಪ್ಪ ಜತ್ತಿ (ಶಾಸ್ತ್ರೀ)ತಿಕೋಟಾದ ಹೆಮ್ಮೆಯ ಮಕ್ಕಳು.ಹಿಂದೆ ಮಹಾರಾಷ್ಟ್ರದ ಕುರುಂದವಾಡ ಸಂಸ್ಥಾನದಲ್ಲಿ ತಾಲೂಕಾ ಕೇಂದ್ರವಾಗಿದ್ದ ತಿಕೋಟಾಈಗ ತಾಲೂಕಾ…

Read More