ಸಿಂದಗಿ: ಆರೋಗ್ಯಕ್ಕೆ ಯೋಗವೇ ಭಾಗ್ಯ. ಪ್ರಪಂಚದಾದ್ಯಂತ ಜನರು ತಮ್ಮ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಮಾಡುತ್ತಾರೆ ಎಂದು ತಾಪಂ ಇಒ ರಾಮು ಅಗ್ನಿ ಹೇಳಿದರು.
ತಾಲೂಕಿನ ಬಂದಾಳ ಪಂಚಾಯತ್ ವ್ಯಾಪ್ತಿಯ ಓತಿಹಾಳ ಗ್ರಾಮದ ಅಮೃತ ಸರೋವರದ ದಡದಲ್ಲಿ ಹಮ್ಮಿಕೊಂಡ ವಿಶ್ವ ಯೋಗ ದಿನಾಚರಣೆಯ ನೇತೃತ್ವವನ್ನು ವಹಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಶತಮಾನಗಳಿಂದ ಯೋಗಾವನ್ನು ಅನುಸರಿಸುತ್ತಾ ಬಂದಿದ್ದೇವೆ ಹಾಗೂ ವಿಶ್ವಕ್ಕೆ ಯೋಗದ ಮಹತ್ವ, ಅದರಿಂದಾಗುವ ಪ್ರಯೋಜನಗಳ ಕುರಿತು ಇಡೀ ವಿಶ್ವಕ್ಕೆ ತಿಳಿಸಿದ ದೇಶ ಅದು ಯಾವುದಾದರೂ ಇದ್ದರೆ ಅದುವೇ ಭಾರತ. ಹಾಗಾಗಿ ಇಂದು ಜಗತ್ತಿನಾದ್ಯಂತ ಆಚಾರಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಪಿಡಿಒ ಬಸವರಾಜ್ ಶಹಾಪುರ, ಐಇಸಿ ಸಂಯೋಜಕ ಭೀಮರಾಯ ಚೌಧರಿ, ಕಾರ್ಯದರ್ಶಿ ರಜಾಕಸಾಬ್ ಮುಜಾವರ, ರಾಜಶೇಖರ್ ಹಿರೇಕುರುಬರ, ಗ್ರಾಮಸ್ಥರಾದ ಕೇಶುರಾಯ ಮಕಣಾಪುರ, ರಾಜು ವಠಾರ, ಹವಳಪ್ಪ ನಾಟೀಕಾರ ಸೇರಿದಂತೆ ಅನೇಕರಿದ್ದರು. ಯೋಗವನ್ನು ಪ್ರೌಢ ಶಾಲೆ ದೈಹಿಕ ಶಿಕ್ಷಕಿ ಸವಿತಾ ಇಂಗಳಗಿ ಯೋಗಾದ ಆಸನಗಳನ್ನು ಹೇಳಿಕೊಟ್ಟರು.
Subscribe to Updates
Get the latest creative news from FooBar about art, design and business.
Related Posts
Add A Comment

