ರೇವತಗಾಂವ ಸರ್ಕಾರಿ ಪ್ರೌಢಶಾಲೆಯಲ್ಲಿಸಾಹಿತಿ ದಿ.ಕಮಲಾ ಹಂಪನಾ ಗೆ ಶ್ರದ್ಧಾಂಜಲಿ
ಚಡಚಣ: ಕನ್ನಡ ಸಾಹಿತ್ಯ ಲೋಕದಲ್ಲಿ ಕಮಲಾ ಹಂಪನಾ ಲೇಖಕಿಯಾಗಿ ಹೆಸರು ಮಾಡಿದ್ದಾರೆ. ಪ್ರಾಧ್ಯಪಕರಾಗಿ, ಬಹಳಷ್ಟು ಪ್ರಾಚೀನ ಕೃತಿಗಳ ಅನುಸಂಧಾನಕಾರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ರೇವತಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರಮಾತೆಯವರಾದ ಎಂ.ಎಸ್.ಪಾಟೀಲರವರು ಹೇಳಿದರು.
ರೇವತಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರದಂದು ನಿಧನರಾದ ಸಾಹಿತಿ ಕಮಲಾ ಹಂಪನರವರಿಗೆ ಮೌನಾಚರಣೆಯ ಮೂಲಕ ಶೃದ್ಧಾಂಜಲಿಯನ್ನು ಸಲ್ಲಿಸಿ, ಅವರ ಸವಿ ನೆನಪಿಗಾಗಿ ಸಸಿಯನ್ನು ನೆಡುವುದರ ಮೂಲಕ ಪರಿಸರ ಪ್ರೇಮವನ್ನು ಮೆರೆದರು.
ಈ ವೇಳೆ ವಿದ್ಯಾರ್ಥಿಗಳಿಗೆ ಸಾಹಿತಿಯು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಕುರಿತು ಸ್ಮರಿಸಿಕೊಳ್ಳುತ್ತ ಮಾತನಾಡುತ್ತ. ಕನ್ನಡ ಸಾಹಿತ್ಯ ಲೋಕದ ಎಲ್ಲಾ ಪ್ರಕಾರಗಳಲ್ಲೂ ಆಳವಾದ ಅಧ್ಯಯನ ಮಾಡಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಕಮಲಾ ಹಂಪನಾ ಅವರು ನೀಡಿರುವ ಕೊಡುಗೆ ಬಹಳ ಮಹತ್ವವಾದದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಆರ್.ಎಚ್. ನದಾಫ್‌ರವರು ಮಾತನಾಡುತ್ತ. ಕಮಲಾ ಹಂಪನಾ ತಮ್ಮ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು ಸಂಶೋಧನೆಗಳಿಂದ ೬೦ ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡಿದ್ದಾರೆ ಎಂದು ಹೇಳಿದರು.
ಈ ವೇಳೆಯಲ್ಲಿ ಶಾಲೆಯ ಶಿಕ್ಷಕರುಗಳಾದ ಆರ್.ಎಂ.ಚೋಪಡೆ, ಎಂ.ಎನ್.ಹೋಕಳೆ, ಡಿ.ಜಿ.ಭಂಢರಕೋಟೆ, ಎಂ.ಸಿ.ಮಾಳಾಬಗಿ, ರಮೇಶ ತಳಕೇರಿ, ಪ್ರಶಾಂತ ಐಹೋಳ್ಳಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

