ಮುದ್ದೇಬಿಹಾಳ: ಪಟ್ಟಣದ ಹುಡಕೋ ಬಡಾವಣೆಯಲ್ಲಿರುವ ಟಾಪ್-ಇನ್-ಟೌನ್ ಲಾಲ್ ನಲ್ಲಿ ೧೯೮೮-೮೯ ನೇ ಸಾಲಿನ ಸರಕಾರಿ ಪ್ರಾಥಮಿಕ ಹಾಗೂ ವಿಬಿಸಿ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಂದ ಜೂ.೨೩ ರಂದು ಬೆಳಿಗ್ಗೆ ೧೦:೩೦ ಕ್ಕೆ ಗುರುವಂದನಾ ಹಾಗೂ ಸಹಪಾಠಿಗಳ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕುಂಟೋಜಿ ಹಿರೇಮಠ ಸಂಸ್ಥಾನದ ಡಾ.ಚೆನ್ನವೀರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಲಿದ್ದು, ಶಾಸಕ, ಎಂಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ ಅತಿಥಿಗಳಾಗಿ, ಮಾಜಿ ಶಾಸಕ ಎ.ಎಸ್.ಪಾಟೀಲ ಉದ್ಘಾಟಕರಾಘಿ ಭಾಗವಹಿಸುವರು. ಗುಲ್ಬರ್ಗ ವಿಶ್ವವಿದ್ಯಾಲಯದ ಆಂಗ್ಲ ವಿಭಾಗ ಮುಖ್ಯಸ್ಥರಾದ ಡಾ ಬಸವರಾಜ ಡೋಣೂರುಮಠ ಉಪನ್ಯಾಸ ನೀಡಲಿದ್ದಾರೆ.
ತೊಂಬತ್ತರ ದಶಕದಲ್ಲಿ ಸಹಪಾಠಿಗಳಾಗಿ ಕಲಿಕೆ ಹಾಗೂ ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ವಿಶೇಷ ಪಾತ್ರವಹಿಸಿ ಏಳಿಗೆಗೆ ಕಾರಣವಾಗಿರುವ ಗುರುವಂದನ ಕಾರ್ಯಕ್ರಮ ಹಲವು ವೈಶಿಷ್ಟ್ಯತೆಗಳ ಸಮ್ಮೇಳನ ಆಗಲಿದೆ ಎಂದು ಕರ್ನಾಟಕ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಸತೀಶ್ ಓಸ್ವಾಲ್, ಉದ್ಯಮಿ ಶ್ರೀನಿವಾಸ್ ಇಲ್ಲೂರ, ಅರವಿಂದ ಜಮಖಂಡಿ ಕುಮಾರಸ್ವಾಮಿ ಶಿವಯೋಗಿಮಠ ಮೋಹನ್ ಹುಲ್ಲೂರು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
