Author: editor.udayarashmi@gmail.com

ಆಲಮಟ್ಟಿ: ಗುತ್ತಿಗೆದಾರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿಯ ಎದುರಿಗೆ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಸೋಮವಾರ ಕೆಬಿಜೆಎನ್ಎಲ್ ವಿವಿಧ ಅಧಿಕಾರಿಗಳು ಭೇಟಿ ನೀಡಿ ಧರಣಿ ಹಿಂಪಡೆಯಲು ಮನವಿ ಮಾಡಿದರು.ಕೆಬಿಜೆಎನ್ಎಲ್ ಆಲಮಟ್ಟಿ ಅಣೆಕಟ್ಟು ವೃತ್ತದ ಪ್ರಭಾರ ಸೂಪರಿಂಟೆಂಡೆಂಟ್ ಎಂಜಿನಿಯರ್ ರಾಮನಗೌಡ ಹಳ್ಳೂರ ಮಾತನಾಡಿ, ಈಗಾಗಾಲೆ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರು ನಿಮ್ಮ ಪ್ರಮುಖ ‌ಬೇಡಿಕೆಗಳಲ್ಲೊಂದಾದ ಗುತ್ತಿಗೆದಾರರ ಇಎಮ್ ಡಿ ಹಣ ಮರಳಿಸಲು ಆದೇಶ ಮಾಡಿದ್ದಾರೆ. ಇನ್ನೀತರ ಬೇಡಿಕೆಗಳ ಕುರಿತು ಚರ್ಚಿಸಲು ಬುಧವಾರ ಇಲ್ಲವೆ ಗುರುವಾರ ಗುತ್ತಿಗೆದಾರರ ಜತೆ ಎಂಡಿಯವರೇ ಸಭೆ ನಡೆಸುವುದಾಗಿ ಹೇಳಿದ್ದಾರೆ, ಹೀಗಾಗಿ ಧರಣಿ ಹಿಂಪಡೆಯಲು ಮನವಿ ಮಾಡಿದರು. ಆದರೆ ಪಟ್ಟುಬಿಡದ ಧರಣಿ ನಿರತ ಗುತ್ತಿಗೆದಾರರು ಕಛೇರಿಗೆ ಬೀಗ ಹಾಕುವ ಹಾಗೂ ಅಹೋರಾತ್ರಿ ಧರಣಿ ಮಾತ್ರ ಹಿಂತೆಗೆದುಕೊಳ್ಳುತ್ತೇವೆ , ಕೃಷ್ಣಾ ಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ಧೇಶಕರು ಧರಣಿ ಸ್ಥಳಕ್ಕೆ ಬಂದು ನಮ್ಮ ಬೇಡಿಕೆಗಳ ಈಡೇರಿಕೆಯ ಸ್ಪಷ್ಟ ಭರವಸೆ ನೀಡುವವರಿಗೂ ಅನಿರ್ದಿಷ್ಟ ಧರಣಿ ಮುಂದುವರೆಸುವುದಾಗಿ ಹೇಳಿದರು ಗುತ್ತಿಗೆದಾರರ 11…

Read More

ವಿಜಯಪುರ: 2024ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಗಳಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಗಳಿಸಿದ ಜಿಲ್ಲಾ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಅರ್ಜಿ ಆಹ್ವಾನಿಸಿದೆ.ಶೇ.80 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು (ಸಂಘದ ಸದಸ್ಯರು ಮಕ್ಕಳು ಮಾತ್ರ) ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ತಂದೆ/ತಾಯಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರಬೇಕು. ಸಂಘವು ನಿಗದಿಪಡಿಸಿರುವ ನಮೂನೆಯಲ್ಲಿ ಆಯಾ ತಾಲೂಕು ಸಂಘದ ದೃಢೀಕರಣದೊಂದಿಗೆ ನಿಗದಿತ ದಿನಾಂಕದೊಳಗೆ ಜಿಲ್ಲಾ ಘಟಕಕ್ಕೆ ಸಲ್ಲಿಸಬೇಕು.ನಿಗದಿತ ದಿನಾಂಕದೊಳಗೆ ಸೂಕ್ತ ದಾಖಲೆಯೊಂದಿಗೆ ತಾಲೂಕು ಸಂಘದ ಮೂಲಕ ಅರ್ಜಿ ಸಲ್ಲಿಸದೇ ಇದ್ದ ಸದಸ್ಯರ ಮಕ್ಕಳನ್ನು ಪ್ರತಿಭಾ ಪುರಸ್ಕಾರಕ್ಕೆ ಪರಿಗಣಿಸುವುದಿಲ್ಲ.ವಿದ್ಯಾರ್ಥಿಯ ಅಂಕ ಪಟ್ಟಿಯ ನಕಲನ್ನು ಶಾಲಾ/ಕಾಲೇಜ್ ಮುಖ್ಯಸ್ಥರಿಂದ ದೃಢೀಕರಿಸಿ ಅರ್ಜಿಯ ಜೊತೆ ಲಗತ್ತಿಸುವುದು ಕಡ್ಡಾಯ.ಜಿಲ್ಲಾ ಸಂಘಕ್ಕೆ ಅರ್ಜಿ ಸಲ್ಲಿಸಲು ಜೂ. 29 ಕೊನೆಯ ದಿನ.ಆಧಾರ್ ಝರಾಕ್ಸ್ ಮತ್ತು ಸಂಘದ ಐಡಿ ಕಾರ್ಡ್ ಝರಾಕ್ಸ್ ಹಾಗೂ ವಿದ್ಯಾರ್ಥಿಯ ಇತ್ತೀಚಿನ…

Read More

ನಿಡಗುಂದಿ: ಮುಂಗಾರು‌ ಮಳೆ ಆರಂಭಗೊಂಡಿದ್ದು ನಾನಾ ಕಡೆ ಮಳೆ ನೀರು ನಿಂತು ಸೊಳ್ಳೆಗಳ ಸಂತತಿ ಹೆಚ್ಚಲಿದೆ, ಹೀಗಾಗಿ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ ಎಂದು ವೈದ್ಯ ಡಾ.ಸತೀಶ ಮಧಬಾವಿ ಹೇಳಿದರು.ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲ್ಲೂಕಿನ ಪ್ರತಿ ಶಾಲೆಯ ಒಬ್ಬೊಬ್ಬ ಶಿಕ್ಷಕರಿಗೆ ಮಲೇರಿಯಾ ಮಾಸಾಚರಣೆ ನಿಮಿತ್ತ ಸೋಮವಾರ ಏರ್ಪಡಿಸಿದ್ದ ತರಬೇತಿಯಲ್ಲಿ ಮಾತನಾಡಿದರು.ಜೂನ್ ತಿಂಗಳಲ್ಲಿ ಮಳೆಆರಂಭವಾಗಿರುವದರಿಂದ ಸೊಳ್ಳೆಗಳಉತ್ಪಾದನೆ ಹೆಚ್ಚಾಗಿ ಡೆಂಗಿ ರೋಗಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.ಸೊಳ್ಳೆಗಳನ್ನು ನಾಶಮಾಡಲುಕೀಟನಾಶಕ ಸಿಂಪಡಿಸಿ ದಿನನಿತ್ಯ ಸೊಳ್ಳೆ ಪರದೆಯನ್ನು ಉಪಯೋಗಿಸುವುದರಿಂದ ಮಾರಕ ರೋಗಗಳಿಂದ ರಕ್ಷಣೆ ಪಡೆಯಬಹುದಾಗಿದೆ. ಈನಿಟ್ಟಿನಲ್ಲಿ ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಜಾಗೃತಿಮೂಡಿಸುವುದು ಅಗತ್ಯವಾಗಿದೆ ಎಂದರು.ನೀರು ಶೇಖರಣೆಯಾಗುವತೊಟ್ಟಿಗಳನ್ನು ವಾರಕ್ಕೊಮ್ಮೆಶುಚಿಗೊಳಿಸಲು ಕ್ರಮವಹಿಸಬೇಕು.ನಿರುಪಯುಕ್ತ ಘನತ್ಯಾಜ್ಯ ವಸ್ತುಗಳಲ್ಲಿನೀರು ಸಂಗ್ರಹವಾಗದಂತೆನೋಡಿಕೊಳ್ಳುವುದರ ಜೊತೆಗೆಶೀಘ್ರ ಹಾಗೂ ಸೂಕ್ತ ವಿಲೇವಾರಿಗೆಕ್ರಮವಹಿಸಲು ತಿಳಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಆರ್.ಬಿ. ಮಾಶೆಟ್ಟಿ ಮಾತನಾಡಿ ಡೆಂಗಿ ಜ್ವರವು ವೈರಸ್‌ನಿಂದ ಉಂಟಾಗುವ ಕಾಯಿಲೆ ಇದು ಸೊಂಕು ಹೊಂದಿದ ಈಡಿಸ್ ಇಜಿಪ್ಟ್ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಈ…

Read More

“ವೀಣಾಂತರಂಗ”- ವೀಣಾ ಹೇಮಂತಗೌಡ ಪಾಟೀಲ ಮುಂಡರಗಿ-ಗದಗ ಮುದ್ದು ಮಗನೇ,ಇಷ್ಟು ವರ್ಷ ಮನೆಯಲ್ಲಿ ಆಡಿ ನಲಿದು ನಮ್ಮೆಲ್ಲರನ್ನು ಸಂತಸ ಪಡಿಸಿದ, ನಿನ್ನ ಬೆಳವಣಿಗೆಯಿಂದ ಖುಷಿಯನ್ನು ಹಂಚಿದ ಕೆಲವೊಮ್ಮೆ ಗಾಬರಿ ಆತಂಕಗಳಿಗೆ ಈಡಾಗಿಸಿದ ನಿನಗೆ ಹೀಗೊಂದು ಪತ್ರ ಬರೆಯುವ ಪ್ರಮೇಯ ಬದುಕಿನಲ್ಲಿ ಬರುತ್ತದೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ತಾಯಿಯಾಗಿ ಬರೀ ಕಾಳಜಿ,ಪ್ರೀತಿಯ ಹೊನಲನ್ನೇ ಹರಿಸಿದ್ದೇನೆ ಎಂದು ನಾನು ಹೇಳುವುದಿಲ್ಲವಾದರೂ ಚಿಕ್ಕಂದಿನಿಂದ ನಿನ್ನಲ್ಲಿ ಕೆಲ ಮೌಲ್ಯಗಳನ್ನು ಬಿತ್ತಿದ್ದೇನೆ.ಇದೀಗ ಆ ಮೌಲ್ಯಗಳು ಬೆಳೆದು ಸಸಿಯಾಗಿ ಫಲ ಕೊಡುವ ಸಮಯ. ಬಹುಷಃ ತಾಯಿಯಾಗಿ ನನಗೆ ಮತ್ತು ಮಗನಾಗಿ ನಿನಗೆ ಇದು ಪರೀಕ್ಷೆಯ ಸಮಯ. ಫಲಹೊತ್ತು ನಿಂತಿರುವ ನಿನ್ನಲ್ಲಿನ ಗಟ್ಟಿ ಮತ್ತು ಜೊಳ್ಳು ಕಾಳುಗಳ ಮೇಲೆ ನನ್ನ ಬಿತ್ತಿ ಬೆಳೆಯುವಿಕೆಯ ಶ್ರಮ ಮತ್ತು ನಿನ್ನ ಉತ್ಪಾದಕತೆ ನಿಂತಿದೆ ಎಂದರೆ ತಪ್ಪಿಲ್ಲ. ” ಅಮ್ಮ, ನಿನ್ನ ಮಗ ನೀ ತಿಳಿದಿರುವಷ್ಟು ಚಿಕ್ಕವನಲ್ಲ” ಎಂದು ನೀನು ನನಗೆ ಹೇಳಬಹುದು. ಆದರೆ ಈ ಪ್ರಪಂಚದ ಎಲ್ಲ ನಿಷ್ಟುರ ಸತ್ಯಗಳನ್ನು ಆರಗಿಸಿಕೊಳ್ಳುವಷ್ಟು ದೊಡ್ಡವನೂ ನೀನಲ್ಲ ಎಂಬುದು…

Read More

ವಿಜಯಪುರ:‌ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವ ವಿದ್ಯಾಲಯದ ಯೋಗ ಮತ್ತು ವ್ಯಾಯಾಮ ವಿಜ್ಞಾನ ಕೇಂದ್ರ, ಶರೀರ ರಚನಾಶಾಸ್ತ್ರ ಮತ್ತು ಐಕ್ಯೂಎಸಿ, ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರ ಹಾಗೂ ನವದೆಹಲಿಯ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಗದರಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು‌ವಿವಿಯ ಗ್ರಂಥಾಲಯ ಕಟ್ಟಡ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕುಲಪತಿ ಡಾ. ಆರ್. ಎಸ್. ಮುಧೋಳ ಉದ್ಘಾಟಿಸಿದರು.ಡಾ. ಶ್ರೀಲಕ್ಷ್ಮಿ ಬಗಲಿ ಮಾತನಾಡಿ, ಯೋಗದ ಇತಿಹಾಸ, ಅದರಲ್ಲಿಯ ಸಂಶೋಧನೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಬ್ಯಾಂಕಾಕ್ ಮತ್ತು ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಪ್ರಥಮ‌ ಸ್ಥಾನ ಪಡೆದ ವಿವಿಯ ಯೋಗ ಶಿಕ್ಷಕ ಎಂ. ಪಿ. ದೊಡ್ಡಮನಿ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ, ಯೋಗ ಸರ್ಟಿಫಿಕೇಟ್ ಕೋರ್ಸುಗಳನ್ನು ಪಾಸಾದ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಿಸಲಾಯಿತು.ಎಂ. ಪಿ. ದೊಡಮನಿ ಮತ್ತು ಅವರ ತಂಡದ ಸದಸ್ಯರಾದ ಡಾ. ಶಿವಲೀಲಾ ದೇವರಮನಿ, ವೈದ್ಯಕೀಯ ವಿದ್ಯಾರ್ಥಿಗಳಾದ ಪ್ರಿಯಾಂಕಾ,…

Read More

ಕೆಂಭಾವಿ: ಪ್ರಾಚೀನ ಕಾಲದಿಂದಲೂ ರೈತರು, ಕೃಷಿ ಕಾರ್ಮಿಕರು, ಸಡಗರ, ಸಂಭ್ರಮದಿಂದ ಕೃಷಿ ಚಟುವಟಿಕೆ ಆರಂಭಿಸಿ, ಖುಷಿ, ಖುಷಿಯಿಂದ ಸುಗ್ಗಿಯನ್ನು ಸ್ವಾಗತಿಸುವ ಮೊದಲ ಹಬ್ಬವೇ ಕಾರ ಹುಣ್ಣಿಮೆ ಎಂದು ಎಂದು ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ಹೇಳಿದರು.ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಶನಿವಾರ ಸಾಯಂಕಾಲ ಜರುಗಿದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯ ಪಾವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ‘ಕಾರ’ ಎಂದರೆ ಚೆಲ್ಲು, ಬೆಳಕು, ಎಂದರ್ಥ. ಮುಂಗಾರು ಮಳೆಯಿಂದ ಧರೆಯಲ ಕಳೆ ಕಟ್ಟಿ, ಎಲ್ಲೆಡೆ ಹಸಿರು ಚೆಲ್ಲಿ, ರೈತರ ಮೊಗದಲ್ಲಿ ಮಂದಹಾಸ ಮೂಡಿಸುವುದೇ, ಬೆಳಕು ಎಂದರು.ಕಾರ ಹುಣ್ಣಿಮೆಯೆಂದು, ರೈತರ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳನ್ನು ಮದು ಮಗನಂತೆ ಸಿಂಗರಿಸಿ ಪೂಜಿಸಿ, ಆರಾಧಿಸಿ, ಅವುಗಳಲ್ಲಿ ದೈವತ್ವವನ್ನು ಕಾಣುವ ಕೃಷಿಕರ ಬಾಳಲಿ ಮುಂಗಾರು ಮಳೆಗಳು ಬೆಳಕು ಚೆಲ್ಲಿ ಸುಗ್ಗಿಯ ಸಂಭ್ರಮಕ್ಕೆ ನಾಂದಿ ಹಾಡಿದಂತೆ, ಮಾಸಿಕ ಶಿವಾನುಭವ ಅಜ್ಞಾನ ಕಳೆದು ಸದ್ಭಕ್ತರ ಬಾಳಲಿ ಸುಜ್ಞಾನದ ಬೆಳಕು ಚೆಲ್ಲಲ್ಲಿ ಎಂದು ಆಶಿಸಿದರು.ಶಿವಾನುಭವ…

Read More

ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ ಜೂನ್ 26 ರಂದು ಬುಧವಾರ ಚಡಚಣದಲ್ಲಿ ಉಚಿತ ಆರೋಗ್ಶ ತಪಾಸಣೆ ಶಿಬಿರ ನಡೆಯಲಿದೆ.ಚಡಚಣ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಈ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ನುರಿತ ತಜ್ಞರಿಂದ ಹೃದಯ ಸಂಬಂಧಿತ ಕಾಯಿಲೆಗಳು, ಮೂತ್ರ ಜನಕಾಂಗ ಮತ್ತು ನರರೋಗ ತಪಾಸಣೆ ಮಾಡಲಾಗುವುದು. ಈ ಉಚಿತ ಶಿಬಿರದಲ್ಲಿ ಸಕ್ಕರೆ ಕಾಯಿಲೆ ಪರೀಕ್ಷೆ, ಇಸಿಜಿ, ರಕ್ತದೊತ್ತಡ ಉಚಿತ ತಪಾಸಣೆ ನಡೆಸಲಾಗುವುದು. ಅಲ್ಲದೇ, ನುರಿತ ವೈದ್ಯರಿಂದ ಆಪ್ತಸಮಾಲೋಚನೆ ಕೂಡ ಇರುತ್ತದೆ.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಪ್ರಯೋಜನವನ್ನು ಪಡೆಯಬೇಕು ಎಂದು ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪಗೋಳ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ- 8951178777 ಮತ್ತು 6366786004 ಸಂಪರ್ಕಿಸಬಹುದಾಗಿದೆ.

Read More

ವಿಜಯಪುರ: ಯಾವುದೇ ಒಂದು ಕಾರ್ಯ ಯಶಸ್ವಿಯಾಗಲು ಯೋಜನೆ ಹಾಗೂ ನಿರ್ವಹಣೆ ಮುಖ್ಯ. ಅದರಂತೆ ರಾಷ್ಟ್ರಮತ್ತು ಸಮುದಾಯವನ್ನು ಉತ್ತಮವಾಗಿ ನಿರ್ವಹಿಸುವಲ್ಲಿ ಶಿಕ್ಷಣ ತಜ್ಞರ ಪಾತ್ರ ಪ್ರಮುಖವಾಗಿದೆ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ವ್ಯವಸ್ಥಾಪಕ ಡಾ.ಪ್ರಶಾಂತ ಪಿ. ಕೆ. ಎಂ ಹೇಳಿದ್ದಾರೆ.ನಗರದ ಎ. ಎಸ್. ಪಾಟೀಲ ಮಹಾವಿದ್ಯಾಲದ ಎಂಬಿಎ ವಿಭಾಗವು ಆಯೋಜಿಸಿದ್ದ ‘ದಿ. ಯುಗ ಆಫ್ ಸಾಮ್ರಾಜ್ಯಯಂ’ (ಸಿದ್ಧತ್ವ) ಎಂಬ ಎರಡು ದಿನಗಳ ರಾಷ್ಟ್ರಮಟ್ಟದ ನಿರ್ವಹಣೆ ಉತ್ಸವವನ್ನು ಉದ್ದೇಶಿಸಿ ಅವರು ಮಾತನಾಡಿದರು.ಬಿ. ಎಲ್. ಡಿ. ಇ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಮಾತನಾಡಿ, ಸಿದ್ದಾಂತ, ತಂತ್ರ, ವಿದ್ಯೆ ಮತ್ತು ಕೌಶಲ್ಯ ತತ್ವಗಳನ್ನು ಬಳಸಿಕೊಳ್ಳಬೇಕು. ಯೋಜನೆಗಳ ಯಶಸ್ಸಿಗೆ ಬೇಕಾದ ಉತ್ತಮ ನಿರ್ವಹಣೆಯ ಅರಿವು ಪ್ರತಿಯೊಬ್ಬರಲ್ಲಿ ಇರಬೇಕು ಎಂದು ಹೇಳಿದರು.ಕಾಲೇಜಿನ ಪ್ರಾಚಾರ್ಯ ಬಿ. ಎಸ್. ಬೆಳಗಲಿ ಮಾತನಾಡಿ, ಇಂಥ ಉತ್ಸವಗಳು ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯ ನಿರ್ಮಾಣ ಮಾಡಲು ಮತ್ತು ಸ್ವಾವಲಂಬನ ಜೀವನ ನಡೆಸಲು ಮಾರ್ಗದರ್ಶಿಯಾಗಬೇಕು ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ…

Read More

ವಿಜಯಪುರ: ಸಮುದಾಯಕ್ಕೆ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮುಖ್ಯವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ ಹೇಳಿದ್ದಾರೆ.ನಗರದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ .ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋದನೆ ಕೇಂದ್ರದ ವತಿಯಿಂದ ಮಂಗಳವಾರ ಆಶಾ ಕಾರ್ಯಕರ್ತೆಯರಿಗೆ ಆಯೋಜಿಸಲಾಗಿದ್ದ ಪ್ರಸೂತಿ ಮತ್ತು ಶಿಶುಗಳ ಆರೈಕೆ ಕುರಿತ ‘ಆಶಾ ದೀಪ’ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಆಶಾ ಕಾರ್ಯಕರ್ತೆಯರು ಸಮಾಜ ಮತ್ತು ಸರಕಾರದ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ. ಸರಕಾರದಿಂದ ಲಭ್ಯವಿರುವ ಸೇವೆಗಳ ಕುರಿತು ಸಮುದಾಯದ ಜನರಿಗೆ ಮಾಹಿತಿ ಒದಗಿಸುತ್ತಾರೆ. ಅಲ್ಲದೇ, ಆಯೋಜನೆಗಳನ್ನು ತಲುಪಿಸುವ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಅವರದೇ ಆದ ಕೊಡುಗೆ ನೀಡುತ್ತಾರೆ ಎಂದು ಅವರು ಹೇಳಿದರು.ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳೆ ಮಾತನಾಡಿದರು ಹೆರಿಗೆ ಸಂದರ್ಭದಲ್ಲಿ ತಾಯಿಯ ಮರಣ ತಡೆಗಟ್ಟುವಲ್ಲಿ ಆಶಾ ಕಾರ್ಯಕರ್ತೆಯರು ಮುಖ್ಯ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು.ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಅವರು ಪ್ರಸವಪೂರ್ವ ಗರ್ಭಿಣಿ ಮಹಿಳೆಯರ…

Read More

“ವಿದ್ಯಾರ್ಥಿ ನಿಧಿ” ಮಕ್ಕಳ ಕಥೆ- ಮಂಡ್ಯ ಮ.ನಾ.ಉಡುಪ ರಾಜ ಮತ್ತು ಮಂತ್ರಿ ಮಾರುವೇಷದಲ್ಲಿ ದೇಶ ಸಂಚಾರಕ್ಕೆ ಹೊರಟಿದ್ದರು. ಹೀಗೆ ನಡೆಯುತ್ತಾ ನಡೆಯುತ್ತಾ ಅವರಿಬ್ಬರು ಗಡಿಭಾಗದ ಒಂದು ಹಳ್ಳಿ ತಲುಪಿದರು. ದಾರಿಯುದ್ದಕ್ಕೂ ರಾಜ ಒಂದು ವಿಚಿತ್ರವನ್ನು ಗಮನಿಸುತ್ತಾ ಬಂದಿದ್ದ. ಅದೇನೆಂದರೆ, ಎಲ್ಲರೂ ಮಂತ್ರಿಯ ಮುಖ ನೋಡಿ ಮುಗುಳ್ನಗುತ್ತಿದ್ದರು. ‘ನಾವಿಬ್ಬರೂ ಮಾರುವೇಷದಲ್ಲಿದ್ದೇವೆ. ಆದರೂ ಜನ ನಿಮ್ಮನ್ನು ಗುರುತಿಸುತ್ತಿದ್ದಾರೆ. ನನ್ನನ್ನೇಕೆ ಗುರುತಿಸುತ್ತಿಲ್ಲ?’. ‘ಇಲ್ಲ ಮಹಾಪ್ರಭು ಇಲ್ಲಿ ಯಾರೂ ನನ್ನನ್ನು ಗುರುತಿಸುತ್ತಿಲ್ಲ. ನೀವು ದೇಶದ ಮಹಾರಾಜರು ಎಂದೂ ಅವರಿಗೆ ತಿಳಿದಿಲ್ಲ. ನಮ್ಮನ್ನು ದಾರಿಹೋಕರೆಂದೇ ಭಾವಿಸಿದ್ದಾರೆ. ಆದರೂ ನಿಮಗೇಕೆ ಈ ಅನುಮಾನ ಕಾಡಿತು?’ ಎಂದು ಕೇಳಿದ ಮಂತ್ರಿ. ‘ಹೌದಾ? ಮತ್ತೆ ಎಲ್ಲರೂ ನಿಮ್ಮನ್ನು ನೋಡಿ ಮುಗುಳ್ನಗುತ್ತಿದ್ದಾರೆ, ನಮಸ್ಕಾರ ಮಾಡುತ್ತಿದ್ದಾರೆ. ನಿಮ್ಮನ್ನು ಅವರಾಗಿಯೇ ಬಂದು ಮಾತನಾಡಿಸುತ್ತಿದ್ದಾರೆ. ಇವೆಲ್ಲ ಹೇಗೆ ಸಾಧ್ಯ?’ ಎಂದ ರಾಜ ಅಚ್ಚರಿಯಿಂದ. ‘ಮಹಾಪ್ರಭು ನೀವು ಜನರನ್ನು ಮಾತ್ರ ಗಮನಿಸುತ್ತಿದ್ದೀರಿ. ನನ್ನನ್ನು ಗಮನಿಸಿದಂತೆ ಕಾಣುತ್ತಿಲ್ಲ. ಅವರು ಮುಗುಳ್ನಗುವುದಕ್ಕೂ ಮುನ್ನ ನಾನು ಅವರನ್ನು ನೋಡಿ ನಗುತ್ತೇನೆ. ನಾನು ಪರಿಚಿತನಂತೆ ನಕ್ಕಿದ್ದನ್ನು…

Read More