ವಿಜಯಪುರ: 2024ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಗಳಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಗಳಿಸಿದ ಜಿಲ್ಲಾ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಅರ್ಜಿ ಆಹ್ವಾನಿಸಿದೆ.
ಶೇ.80 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು (ಸಂಘದ ಸದಸ್ಯರು ಮಕ್ಕಳು ಮಾತ್ರ) ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ತಂದೆ/ತಾಯಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರಬೇಕು. ಸಂಘವು ನಿಗದಿಪಡಿಸಿರುವ ನಮೂನೆಯಲ್ಲಿ ಆಯಾ ತಾಲೂಕು ಸಂಘದ ದೃಢೀಕರಣದೊಂದಿಗೆ ನಿಗದಿತ ದಿನಾಂಕದೊಳಗೆ ಜಿಲ್ಲಾ ಘಟಕಕ್ಕೆ ಸಲ್ಲಿಸಬೇಕು.
ನಿಗದಿತ ದಿನಾಂಕದೊಳಗೆ ಸೂಕ್ತ ದಾಖಲೆಯೊಂದಿಗೆ ತಾಲೂಕು ಸಂಘದ ಮೂಲಕ ಅರ್ಜಿ ಸಲ್ಲಿಸದೇ ಇದ್ದ ಸದಸ್ಯರ ಮಕ್ಕಳನ್ನು ಪ್ರತಿಭಾ ಪುರಸ್ಕಾರಕ್ಕೆ ಪರಿಗಣಿಸುವುದಿಲ್ಲ.
ವಿದ್ಯಾರ್ಥಿಯ ಅಂಕ ಪಟ್ಟಿಯ ನಕಲನ್ನು ಶಾಲಾ/ಕಾಲೇಜ್ ಮುಖ್ಯಸ್ಥರಿಂದ ದೃಢೀಕರಿಸಿ ಅರ್ಜಿಯ ಜೊತೆ ಲಗತ್ತಿಸುವುದು ಕಡ್ಡಾಯ.
ಜಿಲ್ಲಾ ಸಂಘಕ್ಕೆ ಅರ್ಜಿ ಸಲ್ಲಿಸಲು ಜೂ. 29 ಕೊನೆಯ ದಿನ.
ಆಧಾರ್ ಝರಾಕ್ಸ್ ಮತ್ತು ಸಂಘದ ಐಡಿ ಕಾರ್ಡ್ ಝರಾಕ್ಸ್ ಹಾಗೂ ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರವನ್ನು ಲಗತ್ತಿಬೇಕು.
ಅರ್ಜಿ ಮತ್ತು ಇತರೆ ಮಾಹಿತಿಗಾಗಿ ಜಿಲ್ಲಾ ಸಂಘವನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಪಿ. ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಕಾನಿಪ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
Related Posts
Add A Comment
