ಕೆಂಭಾವಿ: ಪ್ರಾಚೀನ ಕಾಲದಿಂದಲೂ ರೈತರು, ಕೃಷಿ ಕಾರ್ಮಿಕರು, ಸಡಗರ, ಸಂಭ್ರಮದಿಂದ ಕೃಷಿ ಚಟುವಟಿಕೆ ಆರಂಭಿಸಿ, ಖುಷಿ, ಖುಷಿಯಿಂದ ಸುಗ್ಗಿಯನ್ನು ಸ್ವಾಗತಿಸುವ ಮೊದಲ ಹಬ್ಬವೇ ಕಾರ ಹುಣ್ಣಿಮೆ ಎಂದು ಎಂದು ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ಹೇಳಿದರು.
ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಶನಿವಾರ ಸಾಯಂಕಾಲ ಜರುಗಿದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯ ಪಾವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ‘ಕಾರ’ ಎಂದರೆ ಚೆಲ್ಲು, ಬೆಳಕು, ಎಂದರ್ಥ. ಮುಂಗಾರು ಮಳೆಯಿಂದ ಧರೆಯಲ ಕಳೆ ಕಟ್ಟಿ, ಎಲ್ಲೆಡೆ ಹಸಿರು ಚೆಲ್ಲಿ, ರೈತರ ಮೊಗದಲ್ಲಿ ಮಂದಹಾಸ ಮೂಡಿಸುವುದೇ, ಬೆಳಕು ಎಂದರು.
ಕಾರ ಹುಣ್ಣಿಮೆಯೆಂದು, ರೈತರ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳನ್ನು ಮದು ಮಗನಂತೆ ಸಿಂಗರಿಸಿ ಪೂಜಿಸಿ, ಆರಾಧಿಸಿ, ಅವುಗಳಲ್ಲಿ ದೈವತ್ವವನ್ನು ಕಾಣುವ ಕೃಷಿಕರ ಬಾಳಲಿ ಮುಂಗಾರು ಮಳೆಗಳು ಬೆಳಕು ಚೆಲ್ಲಿ ಸುಗ್ಗಿಯ ಸಂಭ್ರಮಕ್ಕೆ ನಾಂದಿ ಹಾಡಿದಂತೆ, ಮಾಸಿಕ ಶಿವಾನುಭವ ಅಜ್ಞಾನ ಕಳೆದು ಸದ್ಭಕ್ತರ ಬಾಳಲಿ ಸುಜ್ಞಾನದ ಬೆಳಕು ಚೆಲ್ಲಲ್ಲಿ ಎಂದು ಆಶಿಸಿದರು.
ಶಿವಾನುಭವ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಕನ್ನೆಳ್ಳಿಯ ಬೂದಯ್ಯಸ್ವಾಮಿ, ಸದ್ಭಕ್ತರ ಬಾಳು ಸದಾ ಹುಣ್ಣಿಮೆ ಚಂದ್ರನಂತೆ ಥಳ ಥಳ ಹೊಳೆಯಲಿ, ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲಿ ಎಂಬ ಸದುದ್ದೇಶದಿಂದ ಹುಣ್ಣಿಮೆ ದಿನದಂದು ಅನುಭವದ ಅಮೃತ ಧಾರೆ ಎರಯುತ್ತಿರುವ ಕೆಂಭಾವಿ ಹಿರೇಮಠದ ಶ್ರೀಗಳ ಕಾರ್ಯ ಸ್ತುತ್ಯಾರ್ಹವಾದುದು ಎಂದು ಬಣ್ಣಿಸಿದರು.
ಶರಣಕುಮಾರ ಯಾಳಗಿ, ಯಮನೇಶ ಯಾಳಗಿ ಹಾಗೂ ಪಂಡಿತ್ ಪುಟ್ಟರಾಜ ಸಂಗೀತ ಪಾಠಶಾಲೆ ಮಕ್ಕಳಾದ ಕುಮಾರಿ ಶ್ರೇಯಾ ವಿಶ್ವಕರ್ಮ, ಕುಮಾರ ಶ್ರೀನಿವಾಸ ವಿಶ್ವಕರ್ಮ ಇವರಿಂದ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬಂತು. ಡಾ.ಯಂಕನಗೌಡ ಎಸ್ ಪಾಟೀಲ ನಿರೂಪಿಸಿ ವಂದಿಸಿದರು, ಪ್ರಮುಖರಾದ, ನಿಂಗನಗೌಡ ದೇಸಾಯಿ ಅಭಿಷೇಕ್ ಪಾಟೀಲ, ನಿಜಗುಣ ವಿಶ್ವಕರ್ಮ, ಈರಣ್ಣ ವಿಶ್ವಕರ್ಮ, ಅವ್ವಣ್ಣ ಮಡಿವಾಳಕರ್, ಸೇರಿದಂತೆ ಮಹಿಳೆಯರು, ಮಕ್ಕಳು, ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಸುಗ್ಗಿಯನ್ನು ಹಿಗ್ಗಿನಿಂದ ಸ್ವಾಗತಿಸುವ ಮೊದಲ ಹಬ್ಬ :ಚನ್ನಬಸವ ಶ್ರೀ
Related Posts
Add A Comment

