ಆಲಮಟ್ಟಿ: ಗುತ್ತಿಗೆದಾರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿಯ ಎದುರಿಗೆ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಸೋಮವಾರ ಕೆಬಿಜೆಎನ್ಎಲ್ ವಿವಿಧ ಅಧಿಕಾರಿಗಳು ಭೇಟಿ ನೀಡಿ ಧರಣಿ ಹಿಂಪಡೆಯಲು ಮನವಿ ಮಾಡಿದರು.
ಕೆಬಿಜೆಎನ್ಎಲ್ ಆಲಮಟ್ಟಿ ಅಣೆಕಟ್ಟು ವೃತ್ತದ ಪ್ರಭಾರ ಸೂಪರಿಂಟೆಂಡೆಂಟ್ ಎಂಜಿನಿಯರ್ ರಾಮನಗೌಡ ಹಳ್ಳೂರ ಮಾತನಾಡಿ, ಈಗಾಗಾಲೆ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರು ನಿಮ್ಮ ಪ್ರಮುಖ ಬೇಡಿಕೆಗಳಲ್ಲೊಂದಾದ ಗುತ್ತಿಗೆದಾರರ ಇಎಮ್ ಡಿ ಹಣ ಮರಳಿಸಲು ಆದೇಶ ಮಾಡಿದ್ದಾರೆ. ಇನ್ನೀತರ ಬೇಡಿಕೆಗಳ ಕುರಿತು ಚರ್ಚಿಸಲು ಬುಧವಾರ ಇಲ್ಲವೆ ಗುರುವಾರ ಗುತ್ತಿಗೆದಾರರ ಜತೆ ಎಂಡಿಯವರೇ ಸಭೆ ನಡೆಸುವುದಾಗಿ ಹೇಳಿದ್ದಾರೆ, ಹೀಗಾಗಿ ಧರಣಿ ಹಿಂಪಡೆಯಲು ಮನವಿ ಮಾಡಿದರು. ಆದರೆ ಪಟ್ಟುಬಿಡದ ಧರಣಿ ನಿರತ ಗುತ್ತಿಗೆದಾರರು ಕಛೇರಿಗೆ ಬೀಗ ಹಾಕುವ ಹಾಗೂ ಅಹೋರಾತ್ರಿ ಧರಣಿ ಮಾತ್ರ ಹಿಂತೆಗೆದುಕೊಳ್ಳುತ್ತೇವೆ , ಕೃಷ್ಣಾ ಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ಧೇಶಕರು ಧರಣಿ ಸ್ಥಳಕ್ಕೆ ಬಂದು ನಮ್ಮ ಬೇಡಿಕೆಗಳ ಈಡೇರಿಕೆಯ ಸ್ಪಷ್ಟ ಭರವಸೆ ನೀಡುವವರಿಗೂ ಅನಿರ್ದಿಷ್ಟ ಧರಣಿ ಮುಂದುವರೆಸುವುದಾಗಿ ಹೇಳಿದರು ಗುತ್ತಿಗೆದಾರರ 11 ಬೇಡಿಕೆಗಳ ಮನವಿ ಪತ್ರವನ್ನು ಅಧಿಕಾರಿಗಳಿಗೆ ಸಂಘದ ಅಧ್ಯಕ್ಷ ಎಂ.ಎ.ಮೇಟಿ ನೀಡಿದರು. ಅಧಿಕಾರಿಗಳಾದ ಗೋವಿಂದ ರಾಠೋಡ ಇದ್ದರು.
ಇಂದಿನ ಧರಣಿಯಲ್ಲಿ ಅಂದಾನೆಯ್ಯ ಹಿರೇಮಠ, ವಿ.ಎಮ್ ಹಿರೇಮಠ. ಗೋಪಾಲ ವಡ್ಡರ ಸುರೇಶ್ ಕೋಟೆಕಲ್, ಹನುಮಂತ ಪೂಜಾರಿ, ಸುನೀಲ್ ಲಮಾಣಿ, ಮಕ್ಸೂದ ಮಕಾನದಾರ ಎಂ.ಆರ್.ಕಮತಗಿ, ಚನ್ನಬಸು ಅಂಗಡಿ, ವಿನೋದ ಉಳ್ಳಾಗಡ್ಡಿ, ಸಂತೋಷ ಪಾಟೀಲ, ಬಸವರಾಜ ದಂಡಿನ, ಬಿ.ಪಿ.ರಾಠೋಡ, ಚನ್ನಪ್ಪ ತಳವಾರ, ಸುರೇಶ ವಡ್ಡರ, ರವಿ ಇಟಗಿ, ಸುನಿಲ ಲಮಾಣಿ, ಟಿ.ಎಸ್. ಅಫಜಲಪುರ, ಲಚ್ಚಪ್ಪ ಮೆಳ್ಳಿಗೇರಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

