Author: editor.udayarashmi@gmail.com

ವಿಜಯಪುರ: ಭಾರತ್ ಸ್ಕೌಟ್ಸ್ & ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ವತಿಯಿಂದ ವಿಭಾಗೀಯ ಮಟ್ಟದಲ್ಲಿ ಆಯೋಜಿಸಿರುವ ಕಬ್ ಮಾಸ್ಟರ್, ಪ್ಲಾಕ್ ಲೀಡರ್, ಸ್ಕೌಟ್ಸ್ ಮಾಸ್ಟರ್ ಮತ್ತು ಗೈಡ್ ಕ್ಯಾಪ್ಟನ್ ರವರುಗಳಿಗೆ ಮುಂದುವರೆದ ತರಬೇತಿ ಶಿಬಿರವನ್ನು ಜೂ.೨೪ ರಿಂದ ೩೦ ರ ವರೆಗೆ ವಾಸಂತಬಾಯಿ ಜಿಗಜಿನಗಿ ತರಬೇತಿ ಕೇಂದ್ರ ಭುರಣಾಪೂರದಲ್ಲಿ ಆಯೋಜಿಸಲಾಗಿದೆ.ಈ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಸಂಸ್ಥೆಯ ಸಹಜಾನಂದ ದಂದರಗಿ, ಎಲ್ಲಾ ಶಿಕ್ಷಕರು ತರಬೇತಿ ಪಡೆದು ಮಕ್ಕಳಿಗೆ ತರಬೇತಿ ನೀಡಿ ಅವರಿಗೆ ರಾಜ್ಯ ಪುರಸ್ಕಾರ, ರಾಷ್ಟ್ರ ಪುರಸ್ಕಾರ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.ಜಿಲ್ಲಾ ಜಂಟಿ ಕಾರ್ಯದರ್ಶಿ ಶರಣು ಸಬರದ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಏಕೈಕ ತರಬೇತಿ ಕೇಂದ್ರ ಇದ್ದಾಗಿದ್ದು, ಇಲ್ಲಿ ಇನ್ನೂ ಸಾಕಷ್ಟು ಅಭಿವೃದ್ದಿ ಆಗಬೇಕಿದೆ. ಜಿಲ್ಲೆಯ ಜನಪ್ರತಿನಿಧಿಗಳು ಸಹಾಯ ಸಹಕಾರ ಮಾಡಿದ್ದರೆ ಇನ್ನೂ ಹೆಚ್ಚಿನ ತರಬೇತಿಯ ಶಿಬಿರಗಳನ್ನು ಮಾಡಬಹುದೆಂದರು.ಜಿಲ್ಲಾ ಆಯಕ್ತ ಸಿದ್ದಣ ಸಕ್ರಿ ಮಾತನಾಡಿ, ತರಬೇತಿ ಪಡೆದ ಶಿಕ್ಷಕರು ತಮ್ಮ ತಮ್ಮ ಶಾಲೆಗಳಲ್ಲಿ ದಳಗಳನ್ನು ಪ್ರಾರಂಬಿಸಿದಾಗ ಮಾತ್ರ…

Read More

ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯಕ್ಕೆ ವೈಜ್ಞಾನಿಕ ಮತ್ತು ಕೈಗಾರಿಕೆ ಸಂಶೋಧನೆ ಸಂಸ್ಥೆ (ಸೈರೊ) ಮಾನ್ಯತೆ ಲಭಿಸಿದೆ.ಭಾರತ ಸರಕಾರದ ವೈಜ್ಞಾನಿಕ ಮತ್ತು ಕೈಗಾರಿಕೆ ಸಂಶೋಧನೆ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಈ ಮಾನ್ಯತೆ ನೀಡಿದೆ. ಈ ಮಾನ್ಯತೆಯಿಂದಾಗಿ ವಿವಿಗೆ ಸಂಶೋಧನೆ ಉಪಕರಣಗಳು, ಬಿಡಿ ಭಾಗಗಳು, ಪರಿಕರಗಳು ಮತ್ತು ಇತರೆ ವಸ್ತುಗಳ ಖರೀದಿಯ ಮೇಲೆ ಕಸ್ಟಮ್ಸ್ ಸುಂಕ ವಿನಾಯಿತಿ ದೊರೆಯುತ್ತದೆ. ಇದರಿಂದ ವಿಶ್ವವಿದ್ಯಾಲಯವು ಆಂತರಿಕ ಸಂಶೋಧನೆಯನ್ನು ಕೈಗೊಳ್ಳಲು ಉತ್ತೇಜನ ಸಿಗಲಿದೆ. ಅಲ್ಲದೇ, ವೈಜ್ಞಾನಿಕ ಸಮುದಾಯದಲ್ಲಿ ವಿಶ್ವಾಸಾರ್ಹತೆ ಮತ್ತು ಖ್ಯಾತಿ ಹೆಚ್ಚಲಿದೆ. ಇದರ ಜೊತೆಗೆ ಸರಕಾರ ಮತ್ತು ಹಣಕಾಸು ನೆರವು ಒದಗಿಸುವ ಸಂಸ್ಥೆಗಳಿಂದ ಸಂಶೋಧನೆಗಳಿಗಾಗಿ ಹಣಕಾಸಿನ ನೆರವನ್ನು ಸಹ ಪಡೆಯಬಹುದಾಗಿದೆ.ವಿಶ್ವವಿದ್ಯಾಲಯವು ಕೈಕೊಂಡ ಸಂಶೋಧನೆಗಾಗಿ ಮತ್ತು ಅನುಸರಿಸಿದ ಮಾನದಂಡಗಳಿಗೆ ಅನುಗುಣವಾಗಿ ಈ ಮಾನ್ಯತೆ ದೊರೆತಿದೆ. ಇದರಿಂದ ಸಂಶೋಧನೆಗಳನ್ನು ಕೈಗೊಳ್ಳಲು ಮೂಲ ಸೌಕರ್ಯಗಳನ್ನು ಒದಗಿಸುವುದರ ಮೂಲಕ ಸಂಶೋಧನೆಗೆ ಪ್ರೋತ್ಸಾಹ ನೀಡುತ್ತದೆ.ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯಕ್ಕೆ ಸೈರೊ ಮಾನ್ಯತೆ ದೊರೆತಿರುವುದಕ್ಕೆ ವಿವಿಯ ಕುಲಾಧಿಪತಿ ಎಂ. ಬಿ. ಪಾಟೀಲ…

Read More

ವಿಜಯಪುರ: ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ ಪ್ರಗತಿ ಮತ್ತು ಫೇಕೊ ವಿಷಯ ಕುರಿತ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಶನಿವಾರ ನಡೆಯಿತು.ವಿವಿಯ ನೇತ್ರಶಾಸ್ತ್ರ ವಿಭಾಗದ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ವಿವಿಯ ಸಮುಕುಲಾಧಿಪತಿ ಡಾ. ವೈ. ಎಂ. ಜಯರಾಜ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ವಿವಿಯ ಕುಲಪತಿ ಡಾ. ಆರ್. ಎಸ್. ಮುಧೋಳ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ತಿರಿವನಂತಪುರಂ ನ ಡಾ. ಅರುಪ ಚರ್ಕವರ್ತಿ, ಹುಬ್ಬಳ್ಳಿಯ ನೇತ್ರ ವೈದ್ಯರಾದ ಡಾ. ಆರ್. ಕೃಷ್ಣಪ್ರಸಾದ ಮತ್ತು ಧಾರವಾಡದ ಡಾ.ಸಂಜೀವ ಕುಲಕರ್ಣಿ ಉಪಸ್ಥಿತರಿದ್ದರು.ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದ ನಾನಾ ಭಾಗಗಳಿಂದ ಆಗಮಿಸಿದ ಸುಮಾರು 100ಕ್ಕೂ ಹೆಚ್ಚು ಪ್ರತಿನಿಧಿಗಳು ಸಂಕಿರ್ಣವಾಗಿರುವ ಕಣ್ಣಿನ ಪೊರೆ ಪ್ರಕರಣಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ರೋಗಿಗಳಿಗೆ ಚಿಕಿತ್ಸೆ ನೀಡುವ ಕುರಿತು ವಿಚಾರ ವಿನಿಮಯ ಮಾಡಿದರು.ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ರೇಖಾ…

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ ಬಿಹಾರ ರಾಜ್ಯದ ಗಯಾದ ಬಳಿಯ ಗೆಹಲೊರ್ ಎಂಬ ಊರಿನಲ್ಲಿ ವಾಸವಾಗಿದ್ದ ಆ ವ್ಯಕ್ತಿಯ ಹೆಸರು ದಶರಥ ಮಾಂಜಿ. ಮುಷಾಯಿರ ಎಂಬ ಅತ್ಯಂತ ಕೆಳ ವರ್ಗದ ಜಾತಿಯಲ್ಲಿ ಜನಿಸಿದ ಅವರ ಮೂಲವೃತ್ತಿ ಇಲಿಗಳನ್ನು ಹಿಡಿಯುವುದು.ಪ್ರಾಪ್ತ ವಯಸ್ಸಿಗೆ ಬಂದಾಗ ಆತನಿಗೆ ಫಲ್ಗುಣಿ ದೇವಿ ಎಂಬ ಹೆಣ್ಣು ಮಗಳೊಂದಿಗೆ ವಿವಾಹವಾಯಿತು. ಮದುವೆಯಾದ ಮೊದಲ ಏಳು ವರ್ಷ ಇಂದಿನ ಝಾರ್ಕಂಡ್ ರಾಜ್ಯದ ಧನಭಾದ್ ನ ಕಲ್ಲಿದ್ದಲ ಗಣಿಗಳಲ್ಲಿ ದಿನಗೂಲಿ ನೌಕರನಾಗಿ ಕಾರ್ಯನಿರ್ವಹಿಸಿದ ದಶರಥ ಮಾಂಜಿ ಅಂತಿಮವಾಗಿ ಮನೆಗೆ ಬಂದು ಸಂಸಾರ ಹೂಡಿದನು. ಅವರಿಬ್ಬರ ಅನುರೂಪದ ದಾಂಪತ್ಯದ ಫಲವಾಗಿ ಈಗಾಗಲೇ ಒಬ್ಬಳು ಮಗಳನ್ನು ಪಡೆದಿದ್ದು ಪಲ್ಗುಣಿ ದೇವಿ ಮತ್ತೆ ಗರ್ಭಿಣಿಯಾಗಿದ್ದಳು.ಮಾಂಜಿ ವಾಸವಾಗಿದ್ದ ಗೆಹಲೋರಿನಲ್ಲಿ ಆರೋಗ್ಯ ಚಿಕಿತ್ಸಾ ಕೇಂದ್ರ ಇರಲಿಲ್ಲ. ಏನಾದರೂ ವೈದ್ಯಕೀಯ ನೆರವು ಪಡೆಯಬೇಕೆಂದರೆ ಸುಮಾರು 40 ನಾಲ್ಕು ಮೈಲಿ ದೂರ ಇರುವ ವಜೀರ್ ಗಂಜಿಗೆ ಪಯಣಿಸಬೇಕಿತ್ತು ಇಲ್ಲವೇ ಆತನ ಊರಿನ ಅಂಚಿನಲ್ಲಿದ್ದ ಕಡಿದಾದ ಗುಡ್ಡವನ್ನು ಹತ್ತಿ…

Read More

ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಣಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ | ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ಬೆಂಗಳೂರು: ಅಂಗನವಾಡಿ ಕೇಂದ್ರಗಳಲ್ಲೆ ಪೂರ್ವ ಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ಶಿಕ್ಷಣ ನೀಡುವುದಕ್ಕೆ ಮತ್ತು ಎಲ್ಲ ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಣಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.ವಿಧಾನಸೌಧದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಲ್ಯಾಣ ಕರ್ನಾಟಕ ಭಾಗ ಹೊರತುಪಡಿಸಿ, ಇನ್ನುಳಿದಂತೆ ಹೊಸದಾಗಿ ಅಂಗನವಾಡಿ ಕೇಂದ್ರಗಳಲ್ಲೆ ಎಲ್‌ಕೆಜಿ, ಯುಕೆಜಿ ಶಿಕ್ಷಣ ನೀಡುವ ಬಗ್ಗೆ ತಜ್ಞರ ಸಮಿತಿಯನ್ನು ರಚಿಸಲು ಸಿಎಂ ಸೂಚಿಸಿದ್ದಾರೆ” ಎಂದರು.“ಅಂಗನವಾಡಿ ಕೇಂದ್ರಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲು ತೀರ್ಮಾನಿಸಲಾಗಿದ್ದು, ಗುಣಮಟ್ಟದ ಶಿಕ್ಷಣ ಹಾಗೂ ಪೌಷ್ಠಿಕ ಆಹಾರ ನೀಡುವುದೇ ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿಯವರು ಸಹಮತ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಇಲಾಖೆ ಮೂಲಕವೇ ಸಮವಸ್ತ್ರ, ಪುಸ್ತಕ, ಬ್ಯಾಗ್ ನೀಡಲು ತೀರ್ಮಾನಿಸಲಾಗಿದೆ. ಜೊತೆಗೆ ಶಾಲೆಗಳ…

Read More

ವಿಜಯಪುರ: ನಗರದ ಸಮೀಪದ ಜುಮನಾಳ ಗ್ರಾಮದ ಪ್ರಗತಿಪರ ರೈತರಾದ ಮಹಾಂತೇಶ ಮಮದಾಪುರ ಅವರ ತೋಟದಲ್ಲಿ ಇತ್ತಿಚಿಗೆ ಸುರಿದ ಮಳೆಯಿಂದಾಗಿ ಚಿಕ್ಕ ಗಲಗಲಿ ಪುರ್ನವಸತಿಗಾಗಿ ನಿರ್ಮಿಸುತ್ತಿರುವ ಖಾಲಿ ಪ್ಲಾಟಗಳ ಮೂಲಕ ಎಲ್ಲಾ ನೀರು ವಿಳ್ಳೆದೆಲೆ ಹಾಗೂ ಬಾಳೆ ತೋಟದಲ್ಲಿ ಸಂಪೂರ್ಣ ನೀರಲ್ಲಿ ನಿಂತು ನಷ್ಟಗೊಂಡಿರುವ ರೈತರ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಅಪರ್ ಜಿಲ್ಲಾಧಿಕಾರಿಗಳಾದ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಲಾಯಿತು.ಚಿಕ್ಕ ಗಲಗಲಿ ಪುನರ್ ವಸತಿ ಕಲ್ಪಿಸುವುದಕ್ಕಾಗಿ ಮಾಡಿರುವ ಖಾಲಿ ಜಾಗ ಮಾಡುವಾಗ ಅಧಿಕಾರಿಗಳು ಮಾಡಿರುವ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಲ್ಲಿ ಬಿದ್ದಿರುವ ಮಳೆ ನೀರು ಸಂಪೂರ್ಣವಾಗಿ ಮಹಾಂತೇಶ ಮಮದಾಪುರ ಅವರ ತೋಟದಲ್ಲಿ ಬಂದು ನಿಲ್ಲುವುದರಿಂದ ಈ ರೀತಿಯ ನಷ್ಟ ಅನುಭವಿಸುವಂತಾಗಿದೆ, ವಿಳ್ಳೆದೆಲೆ ಹಾಗೂ ಬಾಳೆಯಿಂದಾಗಿ ಆಗಿರುವ ನಷ್ಟದಿಂದ ವರ್ಷದ ಆದಾಯವನ್ನೆ ನಂಬಿರುವ ಕುಟುಂಬಕ್ಕೆ ನುಂಗಲಾರದ ತುತ್ತಾಗಿದೆ, ಕೂಡಲೇ ಸಂಬಂಧಿಸಿದ ತೀಟಗಾರಿಕೆ ಇಲಾಖೆ ಹಾಗೂ ಪುರ್ನವಸತಿ ಕಲ್ಪಿಸಿರುವ ಅಧಿಕಾರಿಗಳಿಂದ ನಷ್ಟಗೊಂಡ ರೈತರಿಗೆ…

Read More

ಚಿಮ್ಮಡ: ರೈತರ ಹಬ್ಬವಾದ ಕಾರ ಹುಣ್ಣಿಮೆ ನಿಮಿತ್ಯ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರಿ ಹರಿಯುವ ಸ್ಪರ್ದೆಯಲ್ಲಿ ಕೆಂಪು ಎತ್ತು ಕರಿ ಹರಿಯುವ ಮೂಲಕ ವಿಜಯ ಸಾಧಿಸಿತು.ಶನಿವಾರ ಸಂಜೆ ಗ್ರಾಮದ ಪ್ರಮುಖ ಬೀದಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕರಿ ಹರಿಯುವ ಸ್ಪರ್ದೆಯಲ್ಲಿ ಕೆಂಪು ಎತ್ತು ಹಾಗೂ ಬಿಳಿ ಎತ್ತುಗಳನ್ನು ಸ್ಪರ್ದೆಗೆ ಅಣಿಗೊಳಿಸಲಾಗಿತ್ತು. ಗ್ರಾಮದ ಪ್ರಮುಖರಿಂದ ತೆಂಗಿನಕಾಯಿ ಒಡೆಯುವ ಮೂಲಕ ಸ್ಪರ್ದೆಗೆ ಚಾಲನೆ ನೀಡಲಾಯಿತು.ಮೊದಲು ಬಿಳಿ ಎತ್ತು ಪ್ರಥಮ ಸ್ಥಾನದಲ್ಲಿತ್ತಾದರೂ ಕೆಂಪು ಎತ್ತು ಅದನ್ನು ಹಿಂದಿಕ್ಕಿ ಮುನ್ನುಗ್ಗುವ ಮೂಲಕ ಕರಿ ಹರಿಯಿತು. ಕೆಂಪು ಎತ್ತು ಕರಿ ಹರಿದರೆ ಮುಂಗಾರು ಮಳೆ ಉತ್ತಮವಾಗಿ ಸುರಿದು ಬೆಳೆ ಫಲವತ್ತಾಗಿ ಬೆಳೆಯುವುದೆಂಬ ಪ್ರತೀತಿ ಇದ್ದು ಕರಿ ಹರಿಯುತ್ತಲೇ ಯುವಕರು, ರೈತರು ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದರು.ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಬಿ.ಎಸ್. ಪಾಟೀಲ, ಆರ್.ಎಂ.ಬಗನಾಳ, ಅಣ್ಣಪ್ಪಗೌಡ ಪಾಟೀಲ, ಪುಂಡಲಿಕಪ್ಪಾ ಪೂಜಾರಿ, ಬಾಳಪ್ಪಾ ಹಳಿಂಗಳಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪುಜಾರಿ, ಪಿಕೆಪಿಎಸ್ ಅಧ್ಯಕ್ಷ ಶಂಕರ ಬಟಕುರ್ಕಿ, ಪರಪ್ಪಾ ಪಾಲಭಾವಿ, ದುಂಡಪ್ಪಾ ಪಾಟೀಲ, ಅಶೋಕ…

Read More

ಕಲಕೇರಿ: ದೇವರಹಿಪ್ಪರಗಿ ತಾಲೂಕಿನ ಕಲಕೇರಿ ಸಮೀಪದ ಹುಣಶ್ಯಾಳ ಪಿ.ಟಿ ಗ್ರಾಮದ ರೈತರಾದ ದಸ್ತಗಿರಸಾಬ ಅಬ್ದುಲಘನಿ ಹಡಗಿನಾಳ ಅವರು ದ್ರಾಕ್ಷಿ ಹಚ್ಚಬೇಕು ಎನ್ನುವ ಉದ್ದೇಶದಿಂದ ಸಾಲಸೊಲ ಮಾಡಿ ಸುಮಾರು ೩ ಲಕ್ಷ ರೂಗಳ ಡ್ರಿಪ್ ಹಾಗೂ ಪಿ.ವಿ.ಸಿ ಪೈಪಗಳನ್ನು ತಂದು ಇಟ್ಟಿದ್ದರು, ಆದರೆ ಶನಿವಾರ ಮಧ್ಯರಾತ್ರಿ ಯಾರೋ ಕಿಡಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.ಈ ಘಟನೆಯಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿ ಆಗಿರುವ ನಷ್ಟವನ್ನು ಹೇಗೆ ಭರಿಸಬೇಕು ಎಂದು ಚಿಂತೆಗಿಡಾಗಿದ್ದಾರೆ, ಈ ಹಿಂದೆ ಕೂಡಾ ಕೃಷಿ ಚಟುವಟಿಕೆಗಾಗಿ ಸಾಲ ಮಾಡಿದ್ದರು, ಅದನ್ನು ಸರಿದುಗಿಸಿ ಶಾಶ್ವತ ಕೃಷಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಪುನಃ ೩ ಲಕ್ಷ ರೂಪಾಯಿಗಳ ಕೈಸಾಲ ಪಡೆದು ಡ್ರೀಪ್ ಹಾಗೂ ಪಿ.ವಿ.ಸಿ ಪೈಪ್‌ಗಳನ್ನು ತಂದು ಇನ್ನೆನು ದ್ರಾಕ್ಷಿ ಹಚ್ಚಬೇಕು ಎನ್ನುವಷ್ಟರಲ್ಲಿ ಕಿಡಿಗೇಡಿಗಳು ಈ ದೃಷ್ಕತ್ಯವನ್ನು ಎಸುಗಿರುತ್ತಾರೆ.ಕಳೆದ ವರ್ಷದ ಬರಗಾಲದಿಂದಾಗಿ ಇಡೀ ರಾಜ್ಯವೇ ಕೈಸೋತು ಕುಳಿತ್ತಿರುವ ಹಿನ್ನೆಲೆಯಲ್ಲಿ, ಈ ಕುಟುಂಬವೂ ಅದಕ್ಕೆ ಹೊರತಾಗಿಲ್ಲ, ಕಳೆದ ವರ್ಷದ ಸಾಲ ಮತ್ತು ಈಗಿನ ಕೈಸಾಲ ಸೇರಿ ಬೆಟ್ಟದಷ್ಟು…

Read More

ರೂ.5 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ವಿಜಯಪುರ: ಗ್ಯಾರಂಟಿ ಗ್ಯಾರಂಟಿ ಎನ್ನುತ್ತಿರುವ ಕಾಂಗ್ರೆಸ್ ಸರ್ಕಾರದ್ದೆ ಗ್ಯಾರಂಟಿಯೇ ಮುಗಿದಿದೆ. ಖಜಾನೆ ಖಾಲಿಯಾಗಿದ್ದು, ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಹೇಳಿದರು.ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತೊರವಿ ಗ್ರಾಮದ ಸಿದ್ದಾರ್ಥ ನಗರದ ಗಣಪತಿ ಗುಡಿ ಹತ್ತಿರ ಭಾನುವಾರ 2022-23 ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಮಂಜೂರಾದ 5 ಕೋಟಿ ರೂ. ಅನುದಾನದಲ್ಲಿ ಅಥಣಿ ಮುಖ್ಯ ರಸ್ತೆಯಿಂದ ಡಯಟ್ ಕಾಲೇಜು ವರೆಗೆ ಹಾಗೂ ಹಂಚನಾಳ ಕಾಲೋನಿ, ಸಿದ್ಧಾರ್ಥ ನಗರ, ಪೊಲೀಸ್ ಕಾಲೋನಿ, ಕಬಾಡೆ ಕಾಲೋನಿ, ಡಾ.ಬಿ.ಆರ್.ಅಂಬೇಡ್ಕರ್ ಕಾಲೋನಿ, ಸೈನಿಕ ಶಾಲೆ ಕಾಲೋನಿ, ಟೀಚರ್ಸ್ ಕಾಲೋನಿಯಲ್ಲಿಆಂತರಿಕ ರಸ್ತೆಗಳ ಸುಧಾರಣೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ನಮ್ಮ ಸರ್ಕಾರ ಇದ್ದಾಗ ದಿನಕ್ಕೆ ಎರಡ್ಮೂರು ಕೋಟಿ ಮೊತ್ತದ ಕಾಮಗಾರಿಗಳ ಭೂಮಿಪೂಜೆ ನಡೆಯುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷದ ಮೇಲೆ ಈಗ ರೂ. 5 ಕೋಟಿ ಭೂಮಿಪೂಜೆ ನಡೆಯುತ್ತಿದೆ. ನನಗೆ…

Read More