ಕಲಕೇರಿ: ದೇವರಹಿಪ್ಪರಗಿ ತಾಲೂಕಿನ ಕಲಕೇರಿ ಸಮೀಪದ ಹುಣಶ್ಯಾಳ ಪಿ.ಟಿ ಗ್ರಾಮದ ರೈತರಾದ ದಸ್ತಗಿರಸಾಬ ಅಬ್ದುಲಘನಿ ಹಡಗಿನಾಳ ಅವರು ದ್ರಾಕ್ಷಿ ಹಚ್ಚಬೇಕು ಎನ್ನುವ ಉದ್ದೇಶದಿಂದ ಸಾಲಸೊಲ ಮಾಡಿ ಸುಮಾರು ೩ ಲಕ್ಷ ರೂಗಳ ಡ್ರಿಪ್ ಹಾಗೂ ಪಿ.ವಿ.ಸಿ ಪೈಪಗಳನ್ನು ತಂದು ಇಟ್ಟಿದ್ದರು, ಆದರೆ ಶನಿವಾರ ಮಧ್ಯರಾತ್ರಿ ಯಾರೋ ಕಿಡಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಈ ಘಟನೆಯಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿ ಆಗಿರುವ ನಷ್ಟವನ್ನು ಹೇಗೆ ಭರಿಸಬೇಕು ಎಂದು ಚಿಂತೆಗಿಡಾಗಿದ್ದಾರೆ, ಈ ಹಿಂದೆ ಕೂಡಾ ಕೃಷಿ ಚಟುವಟಿಕೆಗಾಗಿ ಸಾಲ ಮಾಡಿದ್ದರು, ಅದನ್ನು ಸರಿದುಗಿಸಿ ಶಾಶ್ವತ ಕೃಷಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಪುನಃ ೩ ಲಕ್ಷ ರೂಪಾಯಿಗಳ ಕೈಸಾಲ ಪಡೆದು ಡ್ರೀಪ್ ಹಾಗೂ ಪಿ.ವಿ.ಸಿ ಪೈಪ್‌ಗಳನ್ನು ತಂದು ಇನ್ನೆನು ದ್ರಾಕ್ಷಿ ಹಚ್ಚಬೇಕು ಎನ್ನುವಷ್ಟರಲ್ಲಿ ಕಿಡಿಗೇಡಿಗಳು ಈ ದೃಷ್ಕತ್ಯವನ್ನು ಎಸುಗಿರುತ್ತಾರೆ.
ಕಳೆದ ವರ್ಷದ ಬರಗಾಲದಿಂದಾಗಿ ಇಡೀ ರಾಜ್ಯವೇ ಕೈಸೋತು ಕುಳಿತ್ತಿರುವ ಹಿನ್ನೆಲೆಯಲ್ಲಿ, ಈ ಕುಟುಂಬವೂ ಅದಕ್ಕೆ ಹೊರತಾಗಿಲ್ಲ, ಕಳೆದ ವರ್ಷದ ಸಾಲ ಮತ್ತು ಈಗಿನ ಕೈಸಾಲ ಸೇರಿ ಬೆಟ್ಟದಷ್ಟು ಸಾಲವಾಗಿದೆ, ಹೇಗೆ ಸಾಲ ತಿರಿಸೋದು ಎಂದು ಚಿಂತೆಗಿಡಾದ ರೈತ ಕುಟುಂಬಕ್ಕೆ ಜನಪ್ರತಿನಿಧಿಗಳು, ದಾನಿಗಳು ಹಾಗೂ ಸಂಘ ಸಂಸ್ಥೆಗಳು ನೆರವಿಗೆ ದಾವಿಸಿ ಸಹಾಯ ಮಾಡಬೇಕು ಎನ್ನುವುದು ಕುಟುಂಬ ಆಶಯವಾಗಿದೆ.
ಸ್ಥಳಕ್ಕೆ ಆಗಮಿಸಿದ ಗ್ರಾಮಲೆಕ್ಕಾಧಿಕಾರಿಗಳಾದ ರಾಮನಗೌಡ ರಾಂಪೂರ ಅವರು ಸ್ಥಳ ಪರೀಶಿಲನೆ ಮಾಡಿ ವರದಿ ಪಡೆದಿರುತ್ತಾರೆ, ಈ ಕುರಿತು ಕಲಕೇರಿ ಪೋಲಿಸ ಠಾಣೆಯಲ್ಲಿ ದೂರು ದಾಖಲಾಗಿದೆ.
“ನಮ್ಮ ತಂದೆಯ ಹೆಗಲಿಗೆ ಹೆಗಲಾಗಿ ದುಡಿದು ಹಿಂದಿನ ಸಾಲ ಹಾಗೂ ಈಗಿನ ಡ್ರಿಪ್ ತರಲು ಮಾಡಿರುವ ಸಾಲ ತೀರಿಸಬೇಕು ಎನ್ನುವ ಮಹದಾಸೆ ಇಟ್ಟುಕೊಂಡಿರುವ ನಮಗೆ ಮಾತೆ ಹೊರಡತಂತಾಗಿದೆ, ನಿನ್ನೆ ರಾತ್ರಿ ಕಿಡಿಗೇಡಿಗಳು ಡ್ರೀಪ್ ಹಾಗೂ ಪಿ.ವಿ.ಸಿ ಪೈಪಗಳಿಗೆ ಬೆಂಕಿ ಹಚ್ಚಿರುವುದು ಮನಸ್ಸಿಗೆ ತುಂಬಾ ನೋವುಂಟಾಗಿ ಎನು ಮಾಡಬೇಕೆಂದು ದಿಕ್ಕು ತೋಚದಂತಾಗಿದೆ.”
– ಸದ್ದಾಂ ಹುಸೇನ ಹಡಗಿನಾಳ, ಸಂತ್ರಸ್ತ ರೈತನ ಮಗ
“ಹುಣಶ್ಯಾಳಗ್ರಾಮದಲ್ಲಿ ಇಂತಹ ಘಟನೆ ನಡೆಯಬಾರದಿತ್ತು, ನಡೆದಿದೆ, ಈ ಘಟನೆಯಿಂದ ನೊಂದ ರೈತ ಕುಟುಂಬಕ್ಕೆ ತಾಲೂಕಾ ಆಡಳಿತ, ತೋಟಗಾರಿಕಾ ಇಲಾಖೆ ಹಾಗೂ ಶಾಸಕರು ಸ್ಪಂದಿಸಿ ನೊಂದ ಕುಟುಂಬಕ್ಕೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು, ಹಾಗೂ ಆಗಿರುವ ನಷ್ಟವನ್ನು ತುಂಬಿಕೊಡಬೇಕು.”
– ಬಂಗಾರೆಮ್ಮ ದೊಡಮನಿ, , ಗ್ರಾ.ಪಂ. ಮಾಜಿ ಅಧ್ಯಕ್ಷರು

